ಇದು ಕಥೆ ಅಲ್ಲ ಕಟ್ಟುಕಥೆ.. ಪಟ್ಟ ವ್ಯಥೆ..ಜೀವನದ ಮಿಥ್ಯೆ .. ನನ್ ಲವ್ ಕಥೆ. ಕಿವಿ ಇಂದ ನೋಡಿ ಕಣ್ಣಿಂದ ಕೇಳಿ..!!
ಫಸ್ಟ್ ಟೈಮ್ ಲೈಫ್ ಅಲ್ಲಿ ಮೀಸೆ ಬಂದಿತ್ತು ... ಎಲ್ಲಾ ಹುಡುಗರ ತರ ನಾನು ಲೈನ್ ಹೊಡೆದು ಯಾವ್ದಾದ್ರು ಸುಂದರಿನ ಪಟಾಯ್ಸಿ ಜೀವನದ ಕಷ್ಟ ಹಿಂಸೆ ನೋವು ಅನುಬವಿಸಬೇಕು ಅಂತ ನಿರ್ಧಾರ ಮಾಡಿದ ಕಾಲ ಅದು...!!
ಚೆನ್ನಾಗೇನೋ ಮೀಸೆ ಬಿಟ್ಟೆ ಕಂಡ ಕಂಡ ಹುಡುಗಿಯರಿಗೆಲ್ಲ ಸಿಕ್ಕ ಸಿಕ್ಕ ಕಡೆ ಎಲ್ಲಾ ಲೈನ್ ಹೊಡೆದು ಲಾಸ್ಟ್ ಒಂದು ಫಿಗೂರ್ ಗೆ ಪ್ರೊಪೋಸ್ ಮಾಡಣ ಅಂದ್ಕೊಂಡೆ..!! ಅವ್ಳುನು ನಂಗೆ ತುಂಬಾನೇ ಕ್ಲೋಸ್ ಆಗಿದ್ಲು ಇರೋ ಬರೋದನ್ನೆಲ್ಲಾ ನನ್ನತ್ರ ಒದರ್ತಾ ಇದ್ಲು..!!
ಸುಮ್ನೆ ಟೈಮ್ ಪಾಸ್ ಗೆ ಅಂತ ಸುರು ಹಚ್ಹ್ಕೊಂಡಿದ್ದು ರಿಯಲ್ ಆಗಿ ಲವ್ವಲ್ಲಿ ಬಿದ್ದು ಒದ್ದೆ ಆಗೋದೆ..!! ಅದ್ರು ಹೇಳಕ್ಕೆ ಭಯ ಅವಳು ಎಲ್ಲಿ ಬೇಜಾರ್ ಮಾಡ್ಕೊಂಡು ದೂರ ತಳ್ಳಿ ಬಿಡ್ತಾಳೆನೋ ಅಂತಾ..!! ಕೊನೆಗಾಲದಲ್ಲಿ ನಮ್ ಹುಡುಗರೆ ಬೇಕು ಅನ್ನೋಹಾಗೆ ಅವರ ಹತ್ರ ಎಲ್ಲಾ ಹೇಳ್ದೆ.. ಬಿಟ್ಟಿ ಸಲಹೆಗಳು ಸ್ವಲ್ಪ ಕಾಸು ಎಲ್ಲಾನು ಕೊಟ್ಟು ಹಾಳಗೋಕೆ ಕೈಲಾದ ಸಹಾಯ ಮಾಡಿದ್ರು.. !
ಅವರ ಸಲಹೆಯಂತೆ ನಮ್ ಹುಡುಗಿಯ ಅಪ್ಪ ಅಮ್ಮನ್ನು ಪಟಾಯ್ಸಿ ಒಳ್ಳೆ ಹುಡುಗ ಅಂತ ಮನವರಿಕೆ ಮಾಡಿ ಕೊಟ್ಟೆ ಒಳ್ಳೆ ಕೆಲ್ಸನು ಸಿಕ್ತು " ಗಾಡ್ ಇಸ್ ಗ್ರೇಟ್ " ಅಂತ ದೇವಸ್ತಾನದಲ್ಲಿ ತಿಪಟೂರು ತೆಂಗಿನ ಕಾಯಿನೂ ಓಡ್ಸಿದೆ..!!
ಎಲ್ಲ ಆಯಿತು ನಾಳೆ ಅವಳ ಹುಟ್ಟಿದ ದಿನ ಹೆಂಗಾರು ಮಾಡಿ ಪ್ರಪೋಸು ಮಾಡಬೇಕು ಅಂತ ಡಿಸೈಡ್ ಮಾಡಿ ಚಾಕಲೇಟು ಟೆಡ್ಡಿ ಕರಡಿ ಗೊಂಬೆ ಇನ್ನು ಏನೇನೋ ಹಾಳು ಮೂಳು ಎಲ್ಲ ತೊಗೊಂಡು ಅವಳ ಮನೆಗೆ ಹೋಗಿ ಅವರ ಅಪ್ಪನ್ನ ಕೇಳಿದ್ರೆ ರೂಮಲ್ಲಿ ಇರ್ಬೇಕು.. ಅಂದ್ರು.. ಹೋದ್ರೆ ಅವಳು ಇಲ್ಲ.. ಬದಲು ಒಂದು ಲೆಟರ್ .. ನೋಡಿದಮೇಲೆ ಗೊತ್ತಾಯ್ತು ಅವ್ಳು ಪಿ ಟಿ ಉಷಾ ಆಗಬೇಕಂತ ಓದಿ ಹೋಗಿದ್ಲು ಆದ್ರೆ ಯಾವ್ದೋ ಹುಡುಗನ ಜೊತೆ.. !!
ಅವರಪ್ಪ ಎದೆ ಎದೆ ಹೊಡ್ಕೊಂದ್ರು..ನಂಗಂತೂ ಎಲ್ಲಿ ಏನು ತಗೊಂಡು ಹೊಡ್ಕೊಬೇಕು ಅಂತ ಗೊತ್ತಾಗದೆ ಸುಮ್ನೆ ನಿಂತಿದ್ದೆ.. !!
ಅವತ್ತೇ ಗೊತ್ತಾಗಿದ್ದು ಹುಡುಗಿಯರು ಅಮಾಯಕರಲ್ಲ ಅಂತ.. ನಮ್ ದೇಶದಲ್ಲಿ gayism ಗೆ ಯಾಕೆ ಮಾನ್ಯತೆ ಸಿಕ್ತು ಅಂತಾ..!! ಆದರು ಬಿಟ್ಟಿಲ್ಲಾ ಹುಡುಕಿದ್ವಿ ಹುಡುಕಿದ್ವಿ ವರ್ಷಾನುಗಟ್ಟಲೆ ಹುದುಕಿದ್ವಿ ಕೊನೆಗೂ ಒಂದು ದಿನ ಸಿಕ್ಕೆ ಬಿಟ್ಟಳು ಶವವಾಗಿ..! ಪೇಪರ್ ಅಲ್ಲಿ ಇತ್ತು ದೊಡ್ದಕ್ಷರದಲ್ಲಿ "ಕೈ ಕೊಟ್ಟ ಪ್ರೇಮಿ, ಜೀವ ಬಿಟ್ಟ ಪ್ರೇಯಸಿ" ಅಂತ..!!
ಅವಳು ಪ್ರಾಣ ಬಿಟ್ಲು ನಾನು ಗಡ್ಡ ಬಿಟ್ಟೆ..!! ಅವಳು ಬರದ ನಾಡಿಗೆ ಹೋದಳು ನಾನು ಈಗಲೂ ಬಾರ್ ಗೆ ಹೋಗಿ ಬಂದು ಮಾಡ್ತೀನಿ..!! ನಾನು ಭಗ್ನ ಪ್ರೇಮಿಯಲ್ಲ ನಗ್ನ ಕರ್ಮಿ..!!
(ಕಥೆ ಯಾರ್ದೋ ಗೊತ್ತಿಲ್ಲ ಬರೆದಿದ್ದು ಮಾತ್ರ "ನಾನು" ತಪ್ಪಿದರೆ ಬುದ್ದಿ ಹೇಳಿ.. )
ಜಾಸ್ತಿ ತಲೆ ಕೆಡಿಸ್ಕೋಬೇಡಿ, ಸುಮ್ನೆ ಓದುತ್ತಾ ಹೋಗಿ. ಏನಾದ್ರು ಅನ್ಸಿದ್ರೆ ಹೇಳಿ, ಕೇಳೋಣ. ಲೈಫು ತುಂಬಾ ಸಿಂಪಲ್ ಇಲ್ಲ, ಜಾಸ್ತಿ ಕ್ಲಿಷ್ಟ ಕೂಡ ಅಲ್ಲ. ಇವೆರಡರ ಮಧ್ಯೆ ಬ್ಯಾಲೆನ್ಸ್ ಮಾಡೋದೇ ಮಜಾ. Floppy ಈಗ ಔಟ್ ಡೇಟೆಡ್, ಈಗ ಬರಿ ನೆನಪುಗಳು ಮಾತ್ರ ಆದರೆ ಆ ಕ್ಷಣ ಚಿತ್ತ ವರ್ಣಿಸಲು ಅಸಾಧ್ಯ. flop ಆದ ಈ ನಿಮ್ಮ ಹುಡುಗನ ನೆನಪಿನೊಂದಿಗೆ ಈ ಪಯಣ.. Floppy ಪುರಾಣ.. ಮನಸ್ಸಿನ ಎಲ್ಲಾ ತುಮುಲ ತೊಳಲಾಟ ಗಳನ್ನ ಸೆರೆ ಹಿಡಿಯುವ ಒಂದು ಪ್ರಯತ್ನವೇ.. Floppy ಬಾಯ್ ನ ಬರಹಗಳು..!! .....ಹಾಗೇ ಸುಮ್ಮನೆ, ತೋಚಿದ್ದು, ಬರೆದದ್ದು,ಓದ್ಕಳೀ, ತಲೆ ಕೆರ್ಕಳೀ
Monday, 21 January 2013
ನಾನು ಮತ್ತು ಗಾಡು ...!!
ಥೂ
ಓ ಮೈ ಗ್ವಾಡ್ ನನ್ನ ಯಾಕೆ ಹಿಂಗೆ ಮಾಡಿದೆ?? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು..?? ಉತ್ತರ ಯಾಕೆ ಯಾರು ಕೊಡ್ತಾ ಇಲ್ಲ??
ಏನಾದರಾಗಲಿ ದೇವರನ್ನೇ ಕೇಳೋಣ ಅಂತ ಘೋರ ತಪಸ್ಸನ್ನ ಮಾಡಕ್ಕೆ ಅಂತ ನಮ್ ಓನರ್ ಮನೆ ಟೆರೆಸ್ ಅಲ್ಲಿ ವಾಟರ್ ಟ್ಯಾಂಕ್ ಪಕ್ಕ ಕುಂತೇ ಬಿಟ್ಟೆ..!! ಎಷ್ಟೊತ್ತಾಗಿತ್ತೋ ಏನೋ ಯಾರೋ ಕರೆದಂತಾಗಿ ಕಣ್ಬಿಟ್ಟು ನೋಡಿದ್ರೆ ಎದ್ರಿಗೆ ಸಾಕ್ಷಾತ್ ಪರಮಾತ್ಮ ಭಗವಂತ ..!!
" ಭಕ್ತ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಸುಮ್ಮನೆ ಅರೆಕ್ಷಣವು ಕೂರಲಾರದ ನೀನು ಇಂದು ಬರೋಬ್ಬರಿ ಇಪ್ಪತ್ತೆರಡು ನಿಮಿಷ ತಪಸ್ಸು ಮಾಡಿದ್ರಿಂತ ಸ್ವಯಂ ನಾನೇ ಪ್ರತ್ಯಕ್ಷನಾಗಿದ್ದೇನೆ. ನನ್ನ ಕರೆದ ಕಾರಣ ತಿಲಿಸುವನ್ತವನಗು " ಎನ್ನಲು ನಾನು
" ಓ ಮೈ ಡಿಯರ್ ಲವ್ಲೀ ಗ್ವಾಡ್ ಹೆಂಗಿದೀಯ??" ಅಂದೇ ಆಗ " ಮಗಾ ಡೈರೆಕ್ಟ್ ಆಗಿ ಮ್ಯಾಟರ್ಗೆ ಬಾ ಜಾಸ್ತಿ ಕೊರಿಬ್ಯಾಡ" ಅಂದ.
"ಷೇರಿ ನನ್ನ ಕೆಲವು ಸಂದೇಹಗಳಿಗೆ ನಿವಾರಣೆ ಉಪಾಯ ತಿಳಿಸು" ಎಂದು ಶ್ರುರು ಹಚ್ಹ್ಕಂಡೆ....
" ಗ್ವಾಡ್ ನಾವೆಲ್ಲಾ ಈ ಪ್ರಪಂಚದಲ್ಲಿ ಯಾಕಿದೀವಿ? ಇಲ್ಲಿ ಇರ್ಲಿಲ್ಲಾ ಅಂದ್ರೆ ಎಲ್ಲಿರ್ತಿದ್ವಿ?" ಆಗ ದೇವ್ರು ಹೇಳಿದ "ಇವಲ್ಲೇ ನಮ್ಮ ರಹಸ್ಯ ಇಂತ ಪ್ರಶ್ನೆ ಕೇಳಿ ಶಾಪಗ್ರಸ್ತ ಆಗಬ್ಯಾದ ಬೇರೆ ಏನಾರ ಇದ್ರೆ ಕೇಳು" ಯಾಕೋ ಗ್ವಾಡ್ ಸಿರಿಯಸ್ ಆಗವ್ನೆ ಅಂತ "ಸರಿ ಅದು ಬ್ಯಾಡ ನಂಗೆ ಬಾಲವಾಡಿ ಇದ್ದಗಿಂದ್ಲು ಒಂದು ಡವಟು, ನಮ್ ಬಾಯಮ್ಮ ಹಲಗೆ ಮೇಲೆ ಬರೆದ ಅಕ್ಷರ ವರಸಿದ ಕೂಡಲೇ ಆ ಅಕ್ಷರಗಳೆಲ್ಲ ಎಲ್ಲಿ ಹೋಗ್ತಾ ಇದ್ವು?"
ಗ್ವಾಡ್ ಸಿಟ್ಟಿನಿಂದ " ಮಗಾ ಚೈಲ್ದು ಪ್ರಶ್ನೆ ಬೇಡ "
ನಾನು " ಓಕೆ ಓಕೆ ಅದು ಬೇಡ.. ಗ್ವಾಡ್ ನಾವ್ ಹಾಕ್ಕೊಳೋ ಪ್ಯಾಂಟು ಶರ್ಟು ಹುಡ್ಗೀರ್ ಹಕ್ಕೊಂದ್ರೆ ಸೂಪರ್ ಆಗಿ ಕಾಣಿಸ್ತಾರೆ , ಆದ್ರೆ ಅವ್ರು ಹಾಕಿಕೊಳ್ಳೋ ಚೂಡಿ ಸಾರಿ ನೈಟಿ ಹುಡುಗ್ರು ಹಾಕಿಕೊಂಡರೆ ಯಾಕೆ ಚೆನ್ನಾಗಿ ಕಾಣಲ್ಲ??" ಗ್ವಾಡ್ ಈಗ ತಲೆ ಮೇಲಿರೋ ಕಿರೀಟ ತೆಗೆದು ಒಂದ್ಸಲ ತಲೆ ಕೆರೆದುಕೊಂಡ ಹಾಗೆ ಅನ್ನಿಸ್ತು ,
"ದೇವ್ರೇ ಕೋಲ್ಡ್ ಕಾಪಿ ಸಿಗತ್ತೆ ಬಿಸಿ ಬಿಸಿ ಐಸ್ ಕ್ರೀಂ ಯಾಕೆ ಸಿಗಲ್ಲ?? ಯಾವಾಗ್ಲೂ like poles ಯಾಕೆ attract ಆಗೋಲ್ಲ ?? ಕರೆಂಟು ಯಾಕೆ ಕಣ್ಣಿಗೆ ಕಾಣಲ್ಲ ?? ನಮ್ಮ ರಾಜಕಾರಣಿ ಗಳು ದುಡ್ಡು ತಿನ್ನಬೇಕಾದ್ರೆ ಯಾಕೆ ಕಣಿ ಕೇಳಲ್ಲ?? ಸಾಯೋರಿಗ್ಯಾಕೆ ಲೈಸೆನ್ಸ ಕೊಡಲ್ಲ?? " ಹೀಗೆ ಕೇಳ್ತಾ ಹೋದೆ ಗ್ವಾಡ್ ಯಾಕೋ ಗುರಾಯಿಸ್ತ ಇದ್ದ ಯಾಕೋ ಕೆಲಸ ಕೆಡ್ತಾ ಇದೆ ಅಂದ್ಕೊಂಡು " ಗ್ವಾಡ್ ಜನ ಷೇರಿ ಇಲ್ವಾ ನಾನು ಷೇರಿ ಇಲ್ವಾ?? ಇದೊಂದಕ್ಕಾದ್ರು ಅನ್ಸ್ವೆರ್ ಮಾಡಪ್ಪ..!! ದೇವ್ರು ಪ್ರಸನ್ನ ವದನದಿಂದ "ಮಗಾ ಇಂಥ ಪ್ರಶ್ನೆಗಳಿಗೊಸ್ಕರ ನನ್ನ ಅಷ್ಟು ದೂರದಿಂದ ಕರೆದೆಯ?? ಆದರು ನಾನು ದೇವ್ರು ನೀನು ಹುಲುಮಾನವ ಅದ್ದರಿಂದ ಕ್ಷಮಿಸಿದ್ದೀನಿ. ನಿನಗೆ ಒಳ್ಳೆಯದಾಗಲಿ ನಂಗೆ ಸ್ವಲ್ಪ ಕ್ಯಾಮೆ ಇದೆ ಬರ್ಲಾ" ಅಂದ. " ಮತ್ತೆ ನನ್ನ ಪ್ರಶ್ನೆಗಳಿಗೆ ಉತ್ತರ ????" ಅಂದಾಗ " ನಿನ್ನ ಪ್ರಶ್ನೆಗಳಿಗೂ ಉತ್ತರ ತಿಳಿಯುವ ಕಾಲ ಇನ್ನು ಬಂದಿಲ್ಲ" " ನಂಗೆ ಮಾತ್ರ ಯಾಕೆ ಇಂತ ದವತು ಅಂದಾಗ " ನೀನು 'god s special edition ' ಹೋಗಿ ಬಾ ಒಳ್ಳೆದಾಗಲಿ " ಅನ್ನುತ್ತಾ ಇರುವಾಗಲೇ ನಾನು " ಗ್ವಾಡ್ ಗ್ವಾಡ್ ಲಾಸ್ಟ್ ಒನ್ ಮಿನಿಟ್ " ಅನ್ನುವಷ್ಟರಲ್ಲಿ ನಮ್ಮಕ್ಕ " ಏಯ್ಯ್ ಸಾಕು ಏಳೋ ಬೇಗ ಆಪಿಸ್ ಗೆ ಹೋಗಲ್ವ ಅಂದಾಗಲೇ ನಿಜ ಸ್ತಿತಿ ಅರಿವಾಗಿ ಯಪ್ಪಾ ಇವತ್ತು ಬಾಸ್ ಹತ್ರ ಬೇರೆ ಬೈಯಿಸ್ಕೊಬೇಕು ಅಂತ ಗೊಣಗುತ್ತ ಬಾತ್ ರೂಂ ಒಳಗೆ ಹೋದೆ..!!

ನಮ್ ಲೈಫು ಹಿಂಗೇನೆ...!!
ಸ್ವಲ್ಪ ನಗು ಜಾಸ್ತಿನೇ ಅಳು.. ಸ್ವಲ್ಪ ದುಖ ಸ್ವಲ್ಪ ನಲಿವು.. ಅನಿರೀಕ್ಷಿತ ತಿರುವುಗಳು.. ದಿನದಿನ ಕಲಿಯೋ ಪಾಠಗಳು .. ಜೀವನ ತೋರಿಸೋ ದಾರಿಗಳು .. ಜಾಸ್ತಿನೇ ಅನ್ನಿಸುವ ತೊಂದರೆಗಳು .. ಜೊತೆಗೆ ಒಂದಷ್ಟು ಗೆಳೆಯರು ಹೀಗಳೆದರೂ ಕೈ ಹಿಡಿಯುವ ಗೆಳತಿಯರು.. ಮರೆಯಲಾರದ ನೆನಪುಗಳು.. ಕಹಿ ನೆನಪುಗಳು.. ಯಾರಿಗೂ ಕಾಯದ.. ಹಾಳಾದ ಟೈಮುಗಳು .. ಸಿಗದ ಕೆಲಸಗಳು.. ಆಗದ ಕೆಲಸಗಳು.. ಇಲ್ಲದ ಮನಸುಗಳು.. ಸಾಕಪ್ಪಾ ಸಾಕು ಅನ್ನಿಸುವ ಪ್ರಸಂಗಗಳು .. ಆದರು ಸಾಯದೆ ಬದುಕಿರುವ ನಾವುಗಳು ನೀವುಗಳು..
ಇದನ್ನೆಲ್ಲಾ ನಾನ್ಯಾಕೆ ಬರಿತಿದಿನಿ ನೀವ್ಯಾಕೆ ಓದಬೇಕು ಏನು ಗೊತ್ತಿಲ್ಲಾ.. ಆದರು ಬರೆದೆ ನೀವು ನೋಡಿದಿರಿ..
ಥೂ ಹೋಗ್ರಪ್ಪಾ.. ನಂಗೆ ಬೇಜಾರಾಗಿಲ್ದೆ ಇದ್ರೂ ಏನೋ ಒಂಥರಾ .. ಹಾಗಂತ ಲವ್ವು ಗಿವ್ವು ಲೊಟ್ಟೆ ಪುಷ್ಕಿ ಅಂತೆಲ್ಲ ಥಿಂಕ್ ಮಾಡ್ಬ್ಯಾಡಿ.. ಹುಚ್ಚ ಅನ್ನಿ.. ನಿಮ್ ಮಕಾ ಕುಟ್ಟುತೀನಿ..
ತುಂಬಾನೇ ಕೆಲಸ ಇದೆ ಮಾಡಕ್ಕೆ ಮನಸ್ಸಿಲ್ಲಾ.. ಕೊರೆಯಕ್ಕೆ ಆಸೆ ಇದೆ ಕೊರೆಸಿ'ಕೊಲ್ಲೋರು' ಯಾರು ಸಿಕ್ತಿಲ್ಲಾ..
ಈ ಹಾಳಾದ ಜಿಂದಗಿನೆ ಷೇರಿ ಇಲ್ಲಾ..!! ಒಂದು ಕಡೆ ಸುನಾಮಿ..ಇನ್ನೊಂದ್ಕಡೆ ಬರಗಾಲ.... ಒಂದು ಕಡೆ ಬಿಳಿಜನ.. ಇನ್ನೊಂದ್ಕಡೆ ಕರಿಜನ .. ಹೆಣ್ಣನ್ನ ಭೋಗದ ವಸ್ತು ತರ ನೋಡೋ ಕೆಲವು ಜನಗಳು.. ಬರಿ ಚರ್ಮದ ಹೊದಿಕೆ ಅಂತ ಭಾವಿಸೋ ಸಂತರು .. ಮಾಂಸದ ತುಂಡಿನಂತೆ ಕಾಣೋ ನಾಯಿಗಳು.... ಬಾಯಿಗೆ ಬರ್ತಾವೆ ಮಾತುಗಳೆಲ್ಲಾ ..ಯಾಕೋ ಏನೋ ಗೊತ್ತಿಲ್ಲಾ.. ನಾವು ದುಡ್ಡು ಅಂತ ಪೂಜಿಸೋ ಪೇಪರುಗಳು ಇನ್ನುವರೆಗೂ ಕಸದಡಬ್ಬಿನ ನೋಡೇ ಇಲ್ವಂತೆ...
ಇನ್ನೂ ತುಂಬಾ ಇದೆ ಹೇಳಕ್ಕೆ ನಂಗೆ ನಾಚ್ಕೆ ಆಯ್ತದೆ.. ಹೇಳಿದ್ರು ನಿಮಗೆ ಅರ್ಥ ಆಗಲ್ಲಾ ಬಿಡಿ..ಸಾಕು ಇನ್ನು ಬರೆಯಲ್ಲಾ.. ಅನ್ಯಾಯವಾಗಿ ಏನೇನೋ ಆಗ್ಬಿಡ್ತೀನಿ.. ಎಲ್ಲಾ ಚೆನ್ನಗಿರ್ರಪ್ಪಾ..ಹಾಳಾಗೋಗಿ.. . ಸರಿ ಇದ್ದೇನು ಪ್ರಯೋಜನ ಇಲ್ಲಾ..
( ಮೇಲೆ ಬರೆದಿರಕ್ಕು ನಾನು ಹೇಳೋದಕ್ಕೂ ಇಲ್ಲಿರೋ ಚಿತ್ರಕ್ಕೂ ನೇರ ಸಂಬಂದ ಇಲ್ಲಾ.. ಜಾಸ್ತಿ ತಲೆ ಕೆಡಿಸ್ಕೋಬೇಡಿ.. ನಿಮ್ಮ ಕ್ಯಾಮೆ ನೀವೇ ನೋಡ್ಕಳಿ..!! )
ಇದನ್ನೆಲ್ಲಾ ನಾನ್ಯಾಕೆ ಬರಿತಿದಿನಿ ನೀವ್ಯಾಕೆ ಓದಬೇಕು ಏನು ಗೊತ್ತಿಲ್ಲಾ.. ಆದರು ಬರೆದೆ ನೀವು ನೋಡಿದಿರಿ..
ಥೂ ಹೋಗ್ರಪ್ಪಾ.. ನಂಗೆ ಬೇಜಾರಾಗಿಲ್ದೆ ಇದ್ರೂ ಏನೋ ಒಂಥರಾ .. ಹಾಗಂತ ಲವ್ವು ಗಿವ್ವು ಲೊಟ್ಟೆ ಪುಷ್ಕಿ ಅಂತೆಲ್ಲ ಥಿಂಕ್ ಮಾಡ್ಬ್ಯಾಡಿ.. ಹುಚ್ಚ ಅನ್ನಿ.. ನಿಮ್ ಮಕಾ ಕುಟ್ಟುತೀನಿ..
ತುಂಬಾನೇ ಕೆಲಸ ಇದೆ ಮಾಡಕ್ಕೆ ಮನಸ್ಸಿಲ್ಲಾ.. ಕೊರೆಯಕ್ಕೆ ಆಸೆ ಇದೆ ಕೊರೆಸಿ'ಕೊಲ್ಲೋರು' ಯಾರು ಸಿಕ್ತಿಲ್ಲಾ..
ಈ ಹಾಳಾದ ಜಿಂದಗಿನೆ ಷೇರಿ ಇಲ್ಲಾ..!! ಒಂದು ಕಡೆ ಸುನಾಮಿ..ಇನ್ನೊಂದ್ಕಡೆ ಬರಗಾಲ.... ಒಂದು ಕಡೆ ಬಿಳಿಜನ.. ಇನ್ನೊಂದ್ಕಡೆ ಕರಿಜನ .. ಹೆಣ್ಣನ್ನ ಭೋಗದ ವಸ್ತು ತರ ನೋಡೋ ಕೆಲವು ಜನಗಳು.. ಬರಿ ಚರ್ಮದ ಹೊದಿಕೆ ಅಂತ ಭಾವಿಸೋ ಸಂತರು .. ಮಾಂಸದ ತುಂಡಿನಂತೆ ಕಾಣೋ ನಾಯಿಗಳು.... ಬಾಯಿಗೆ ಬರ್ತಾವೆ ಮಾತುಗಳೆಲ್ಲಾ ..ಯಾಕೋ ಏನೋ ಗೊತ್ತಿಲ್ಲಾ.. ನಾವು ದುಡ್ಡು ಅಂತ ಪೂಜಿಸೋ ಪೇಪರುಗಳು ಇನ್ನುವರೆಗೂ ಕಸದಡಬ್ಬಿನ ನೋಡೇ ಇಲ್ವಂತೆ...
ಇನ್ನೂ ತುಂಬಾ ಇದೆ ಹೇಳಕ್ಕೆ ನಂಗೆ ನಾಚ್ಕೆ ಆಯ್ತದೆ.. ಹೇಳಿದ್ರು ನಿಮಗೆ ಅರ್ಥ ಆಗಲ್ಲಾ ಬಿಡಿ..ಸಾಕು ಇನ್ನು ಬರೆಯಲ್ಲಾ.. ಅನ್ಯಾಯವಾಗಿ ಏನೇನೋ ಆಗ್ಬಿಡ್ತೀನಿ.. ಎಲ್ಲಾ ಚೆನ್ನಗಿರ್ರಪ್ಪಾ..ಹಾಳಾಗೋಗಿ..
( ಮೇಲೆ ಬರೆದಿರಕ್ಕು ನಾನು ಹೇಳೋದಕ್ಕೂ ಇಲ್ಲಿರೋ ಚಿತ್ರಕ್ಕೂ ನೇರ ಸಂಬಂದ ಇಲ್ಲಾ.. ಜಾಸ್ತಿ ತಲೆ ಕೆಡಿಸ್ಕೋಬೇಡಿ.. ನಿಮ್ಮ ಕ್ಯಾಮೆ ನೀವೇ ನೋಡ್ಕಳಿ..!! )
ಈ ನನ್ನ ಲೇಖನ Dedicated ಟು ದೊಡ್ಡ ಜನ..!!
Usually ನಾವೆಲ್ಲಾ ದೊಡ್ಡ ದೊಡ್ಡದೇ ನೋಡ್ತೀವಿ... ದೊಡ್ಡ ದೊಡ್ಡದೇ ಮಾಡ್ತೀವಿ...ದೊಡ್ಡ ದೊಡ್ಡದೇ ಬಯಸುತ್ತೀವಿ....
ಆದರೂ ನಮಗೆ ಈ ನಮ್ಮ ದೇಹ ಬ್ಹೊಜ್ಜು ತುಂಬಿಸ್ಕೊಂದು ದೊಡ್ಡ ಆದ್ರೆ ಮಾತ್ರ ಒಂಥರಾ ಬೇಜಾರು... ದೊಡ್ಡ ದೇಹ ನೋಡಿ ಎಲ್ಲಾರು ಹಿಂದೆ ಬಯ್ಯೋರೆ ಅನ್ನಿಸಿ ಬಿಡ್ತಾವೆ.. ಯಾಕೋ ಅಡ್ಕೋಳೋರ ಬಗ್ಗೆ ತುಂಬಾನೇ ಬೇಜಾರಾಗಿ. ಕೊನೆಕೊನೆಗೆ ನಮ್ಮ ಮೇಲೆ ನಮಗೆ ಕೀಳರಿಮೆ ಶುರುವಾಗಿ.. ಥೂ ಯಾರು ಏನಾದ್ರು ಹೇಳ್ಕೊಳ್ಳಿ ನಾನಂತೂ ಸಣ್ಣ ಆಗೋದೇ ಇಲ್ಲಾ ಅಂತ ಮನಸ್ಸು ಕೂಡ ಮೊಂಡು ಬಿದ್ದಿರುತ್ತೆ..!!
ಶಾಪಿಂಗ್ ಹೋದ್ರೆ ಬಟ್ಟೆ ಹುಡ್ಕೋದೆ ಒಂದು ಪ್ರಾಬ್ಲಮ್ಮು.. ನಡಿಯೋದಂತೂ ಸಾಧ್ಯಾನೆ ಇಲ್ಲ ಅನ್ನೋ ಪ್ರಾಬ್ಲಮ್ಮು..ಕಮ್ಮಿ ತಿಂದರೂ ಎಲ್ಲಾ ನಾನೊಬ್ನೇ ತಿಂದಿದ್ದು ಅನ್ನೋ ತರ ನೋಡೋ ಗೂಬೆ ಕಣ್ಣಿನ ಜನಗಳು.. ದನಗಳ ಜೊತೆ compare ಮಾಡೋ ಪ್ರಾಣಿಗಳು.. ನಮ್ ಬಾಡಿನೇ ನಮಗೆ ಕಷ್ಟ ಅಂಥದ್ರಲ್ಲಿ ಶಕ್ತಿ ಜಾಸ್ತಿ ಅಂತ ತಿಳ್ಕೊಂಡು ಜಾಸ್ತಿ ಕೆಲಸ ಕೊಡೊ ಗುಬಾಲ್ಗಳು... ಯಾರಿಗೆ ಹೇಳೋಣ ನಮ್ಮ ಇಂಥ ತಾಪತ್ರಯಗಳು..!!
ಈ ಮನಸ್ಸು ಹೇಳಿದ ಮಾತು ಕೇಳಲ್ಲ... ನಾಲಿಗೆ ಸಿಕ್ಸಿಕ್ಕಿದ್ದು ತಿನ್ನೋದು ಬಿಡೋಲ್ಲಾ.. ಕೆಲವು ಮಾತ್ರ ಹೆರಿಡಿಟಿ.. ಉಳಿದವು ಜಾಸ್ತಿ ಒಬೆಸಿಟಿ...!!
ದಪ್ಪ ದೇಹನ ಕರಗಿಸೋದು ಸುಲಭ ಅಲ್ಲ ಹಾಗಿದ್ದೂ ಅಸಾಧ್ಯವೂ ಅಲ್ಲಾ.. ದಪ್ಪ ಇರೋರಿಗೂ ಒಂದೇ ಹಾರ್ಟು ಎರಡೇ ಕಿಡ್ನಿ.. ಆದರೂ ಎಲ್ಲರಿಂದಲೂ ಡುಮ್ಮ ಡುಮ್ಮಿ ದಡಿಯ ಆನೆ ಅಂತೆಲ್ಲಾ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿ..!! ನನ್ನ ಸುತ್ತಲೂ ತುಂಬಾನೇ ಜನ ಇದ್ದಾರೆ ದೊಡ್ಡ ಮನಸ್ಸಿನ ದೊಡ್ಡ ದೆಹಿಗಳು..ನಾನು ಸಣ್ಣ ಕಾಣಿಸಿಕೊಳ್ಳೋಕೆ ಅವರೇ ಕಾರಣ..!! ಅವರ ದೈತ್ಯ ದೇಹದ ಬಗ್ಗೆ ಎಷ್ಟೇ ಹೀಯಾಳಿಸಿ ಕಾಲೆಳೆದರೂ ಬೀಳದ ಅವರ ಮನವೇ ಒಂದು ಸುಂದರ ತಾಣ..!! ಅದ್ಕೆ ಬಹಳಷ್ಟು ಜನರಿಗೆ ದಪ್ಪ ಇರೋರನ್ನ ಕಂಡರೆ ಸ್ವಲ್ಪ ♥ ಜಾಸ್ತಿ..!! I TOO ♥ FAT PEOPLE ..!! ಆದ್ರೆ ಲೈನ್ ಹೊಡೆಯೋ ಹುಡುಗಿ ಮಾತ್ರ ದಪ್ಪ ಇರೋದು ಬೇಡಾ ಅನ್ನೋದು ನಮ್ಮ ತುಂಡು ಹೈಕಳ ಅಭಿಪ್ರಾಯ..ಯಾಕ್ರಲಾ ಅಂತ ಕೇಳಿದ್ರೆ ಮದ್ವೆ ಆಗಿ ಆಂಟಿ ಆದ್ಮೇಲೆ ದಪ್ಪ ಆಗೇ ಆಗ್ತಾರೆ ಅನ್ನೋದು ಅವರ ಅನಿಸಿಕೆ..!!
ಏನಾದ್ರು ಇರಲಿ ದಪ್ಪ ಇದ್ರೂ ಕುಶಿಪಡಿ.. ಸಣ್ಣ ಆದ್ರೂ ಹ್ಯಾಪಿ ಆಗಿರಿ..
HEALTH AND HAPPINESS ಅದೇ ಮುಖ್ಯ ಅಲ್ವ.....ನಮ್ ದುನಿಯಾದಲ್ಲಿ..!!
Be Lazy... Go Crazy.....!!

ದೀಪ..!!
ಕತ್ತಲೆಯ ಬಾಳಲ್ಲಿ ನೀನಾಗುವೆಯ ದೀಪ..
ಅರಸುತಿದೆ ಮನವು ಮುಗ್ದತೆಯ ಪಾಪಾ..
ಹಳೆಯ ನೋವೆಲ್ಲವು ಘನಘೋರ ಪಾಪ..
ಬೇಡ ನನಗಾವುದೇ ಅನುಕಂಪದ ತಾಪ...
ದೀಪದ ಬುಡದಲ್ಲಿ ಕತ್ತಲೆ.. ಕತ್ತಲೆಯ ಮೇಲೊಂದು ದೀಪ..
ನನ್ನ ಬಾಳಿನ ಕತ್ತಲೆಗೆ ನೀನಾಗುವೆಯ ದೀಪ.. ನಂದದಾ ದೀಪ..
ಹುಡುಕುತಿದೆ ಮನವು ಬೆಳಕು ಕರೆದ ಎಡೆಗೆ..
ಕಿಡಿಗೇಡಿ ಬುದ್ದಿಗೆ ನನಬಾಳು ಒಡೆದ ಗಡಿಗೆ..
ದುಡುಕಿದ ಮನಕೆ ಬೇಕೊಂದು ಭಾವ
ಮಡಿದ ಮನಸಿಗೆ ಕೊಡುವೆಯಾ ಜೀವ..!!
ಹಾಳಾದ ಮನಸು ಈ ಲೆವೆಲ್ ಗೆ ಕವನ ಗೀಚ್ಕೊಂಡು, ಬದಬಡಾಯಿಸಿಕೊಂಡು ಬಿದ್ದಿದೆ ಅಂದ್ರೆ ಯಾವ್ ರೇಂಜ್ ಅಲ್ಲಿ ದು:ಖ ಆಗಿರಬಹುದು ಅಂತ ನಿಮಗ್ಯಾರಿಗೂ ಊಹೆಗೂ ಮೀರದ ಅಂಶ ಅದರಲ್ಲಿ ಅಡಕವಾಗಿದೆ..!! ಹೀಗೆ ಬೀದೀಲಿ ಬಿದ್ದಿದ್ದು ಯಾವುದೋ ಲವ್ ಫೇಲ್ಯೂರ್ ಯುವಕನಲ್ಲ.. ಜಿಗುಪ್ಸೆಗೊಂಡ ಕುಡುಕನೂ ಅಲ್ಲಾ.. ಹುಚ್ಚನೂ ಅಲ್ಲ... ಗ್ರಾಜುಯೇಟ್ ಭಿಕ್ಷುಕನೂ ಅಲ್ಲ...!!
ಸಮಾಜದಿಂದ ತಿರಸ್ಕೃತಗೊಂಡ ಒಂದು ಹೆಣ್ಣು ಮಗಳು ಅಂದ್ರೆ ನಂಬೋದು ತುಸು ಕಷ್ಟವೇ..!! ಆಕೆ ಹುಚ್ಚಿಯಲ್ಲ.. ಆದರೆ ಸಮಾಜದ ಕೆಲವು ಕಾಮುಕರಿಂದ ಸಾಮೂಹಿಕ ಅತ್ಯಾಚಾರಗೊಂಡು, ಮರ್ಯಾದೆಗೆ ಹೆದರಿ ಮನೆಯವರ ಸಾಮೂಹಿಕ ಆತ್ಮಹತ್ಯೆ ಕಂಡು, ಅತ್ತ ಸಾಯಲು ಆಗದ ಬದುಕಲು ಬಾರದ ಪರಿಸ್ಥಿತಿಯಲ್ಲಿರುವ ಒಬ್ಬ ಅಮಾಯಕಳ ಕೂಗು ಯಾರಿಗೂ ಕೆಳದಿದ್ದದ್ದು, ಸಮಾಜದ ದುರಂತ..!!
ಹುಚ್ಚಿ-ಅರೆಹುಚ್ಚಿ ಎಂದು ನಾಮಪಟ್ಟಿ ಅಂಟಿಸಿಕೊಂಡು ನಿರಂತರ ಶೋಷಣೆಗೆ ಒಳಗಾಗುತ್ತಿರುವ ಅವಳ ಬಾಳಿನಲ್ಲಿ ದೀಪ ಹಚ್ಚೋರು ಬಂದೆ ಇಲ್ಲಾ... ಬಂದೋರೆಲ್ಲ ಬೆಂಕಿ ಇಟ್ಟು ಹೊಂಟೋದರು.. ಮಾಧ್ಯಮದವರಿಂದ ಹಿಡಿದು ರಾಜಕಾರಣಿಗಳ ವರೆಗೂ ಎಲ್ಲರೂ ಅವಳ ಹೆಸರಿಡಿದು ತಮ್ಮ ಬೆಲೆ ಹೆಚ್ಚಿಸಿಕೊಂಡರು ಅಷ್ಟೇ..!! ಯಾವೊಬ್ಬನ ಅನುಕಂಪದ ಅಲೆಯು ಅವಳ ಬಾಳಲ್ಲಿ ನವಿರಾಗಿ ಬರಲಿಲ್ಲ..ಮುಂದೊಂದು ದಿನ ಡಾಕ್ಟರ್ ಆಗಬೇಕೆನ್ನುವ ಅವಳ ಹಂಬಲ ಬರಿ ಡೈರಿಯಲ್ಲೇ ಉಳಿದಿತ್ತು... !!
ಹೀಗೆ ನಿರಂತರ ಶೋಷಣೆಗೆ ಒಳಗಾದ ಅವಳ ಜೀವ ಕೂಡ ಅವಳಿದ್ದ ಹುಚ್ಚಾಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಕೊನೆಯಾದದ್ದು ಮಾತ್ರ ಸಮಾಜದ ವ್ಯಂಗ್ಯಕ್ಕೆ ಹಿಡಿದ ಕತ್ತಲೆ..!!
ಅತ್ತ ಪ್ರತಿಭಟನೆಯ ಕಾವು ಜೋರಾಗಿತ್ತು ಇತ್ತ ಅವಳ ಶವವು ನಗುತಿತ್ತು..!! ಸತ್ತವಳಿಗಾಗಿ ಕೈಯಲ್ಲಿ ಮೊಂಬತ್ತಿ ಹಿಡಿದು ಸಾಗುತಿತ್ತು ಜನರ ಮೆರವಣಿಗೆ.. ಮೋಂಬತ್ತಿಯ ದೀಪದ ಕಾವಿಗೆ ಕರಗುತ್ತಿತ್ತು ಮೇಣದ ಹಣತೆ..!! ದೀಪದ ಬುಡದಲ್ಲಿ ಕತ್ತಲೆ... ಸಾಬೀತಾಯಿತು ಮತ್ತದೇ ಮತ್ತಲ್ಲೇ ..!! ಇದ್ದಾಗ ನಕ್ಕರು.. ಸತ್ತಾಗ ಅತ್ತರು.. ಅವರಿಗೆ ಕಾಣಲೇ ಇಲ್ಲ ಸುರಿಯುತಿದ್ದ ಅವಳ ಕೆಂಪು ನೆತ್ತರು.. !!

ಚುಮ್ಚುಮ್ನೆ ಒಂದು ಖಾಲಿ ವೇದಾಂತ...!!
ಒಂದೊಂದ್ಸಲ ಸುಮ್ನೆ ಕೂತಿರ್ತೀವಿ..ಏಕಾಂಗಿತನವೇ ಬೆಷ್ಟು ಅನ್ಸತ್ತೆ..!!
ಎದ್ದೆಳಕ್ಕೂ ಬೇಜಾರು..
ಜೀವನಾನೆ ಬೋರು...
ಎಲ್ಲಾ ಇರತ್ತೆ ಏನು ಇರಲ್ಲ.. ಏನೆಲ್ಲಾ ಕಳ್ಕೊಂದ್ರು ಎಸ್ಟೆಲ್ಲ ಇರತ್ತೆ..!!
ಮನಸು ಯೋಚಿಸತ್ತೆ ದುನಿಯಾ ಇಷ್ಟೇ.. ಇನ್ನೊಂದ್ಸಲ ಅನ್ಸತ್ತೆ ಇದು ಇಷ್ಟಲ್ಲ.. ಎಷ್ಟೆಷ್ಟೋ.. ಸ್ವಲ್ಪ ಅರ್ಥ ಆಗತ್ತೆ.. ಆದಂಗೆ ಅನ್ಸತ್ತೆ.. ಅರ್ಥ ಆಗಿರಲ್ಲ ತಿಳ್ಕೋಳೋಕೆ ಮನಸಿರಲ್ಲ.. ತಲೆ ಕೆರಿಯತ್ತೆ.. ಕೆರ್ಕೊತೀವಿ.. ಬಟ್ಟೆ ಹರಿಯತ್ತೆ ಹರ್ಕೊಳಲ್ಲ.. ಹೋಲಿದುಕೊಳ್ತೀವಿ..
ಹಾರ್ಟ್ ಅಂತೆ ಫೀಲಿಂಗ್ ಅಂತೆ ಲವ್ ಅಂತೆ ಲಫಡಾ ಅಂತೆ.. ಒಂದಕ್ಕೊಂದು ಇರೋದು ಕನೆಕ್ಷನ್ನು ಅಥವಾ ಲೂಸು ಕನೆಕ್ಷನ್ನು..!!
ಕಲೆ ಅಂತೆ ಅರ್ಥ ಆದ್ರೆ ಚಿತ್ರ ಕಲೆ ಅಂತೆ ಅರ್ಥ ಆಗದೆ ಇದ್ರೆ ನವ್ಯ ಕಲೆ ಅಂತೆ.. ಯಾರೋ ಹೇಳಿದ್ದು... ಬರೀ ಅಂತೆ ಕಂತೆಗಳ ಸಂತೆ.. ಚಿಂತನೆಗೆ ಅವಕಾಶ ಉಂಟೆ?
ತಲೆ ನೋಯ್ತಿದೆ.. ಆ ನೋವಲ್ಲೂ ಎಂಥದೋ ಕುಷಿ.. ತಲೆ ಇದೆ ಅಂತ ಕುಷಿಪಡೋದೋ ಅಥವಾ ನೋಯ್ತ ಇದೆ ಅಂತ ಅಳ್ತಾ ಕೂರೋದೋ ಗೊತ್ತಾಗಲ್ಲ.!!
ಒಂದು ಡಾಟ್ ಇಟ್ರೆ ಅಂತ್ಯ.
ಅದೇ ಎಲ್ಡು ಇಟ್ರೆ ಅನಂತ ಇಲ್ಲವೇ ಇಲ್ಲ ಅಂತ್ಯ..
ಇಷ್ಟೆಯ ಅನ್ಸೋ ಲೈಫು, ಎಲ್ಲ ಇದ್ರೂ ಒಂದು ದಿನ ಹೋಗಲೇ ಬೇಕು... ಹೋಗೆ ಆಗಲೇ ಬೇಕು..
ಸುಮ್ನೆ ಕ್ಯಾಮೆ ಇಲ್ದಾಗ ಗೀಚಿದ್ದು.. ನೀವು ಓದೋದು ವೇಸ್ಟು.. ಜೀವನವು ಇಷ್ಟೇ ಅನ್ಸತ್ತೆ.. ನೋ ಮೆಸೇಜ್ ನಥಿಂಗ್... ಈ ಕಿತ್ತೋದ ಲೇಖನದ ಹಾಗೆ..!!
ಇದೊಂದು ಖಾಲಿ ವೇದಾಂತ.. ಮನಸಿಗೆ ಹಚ್ಕೊಂಡು.. ಯೋಚನೆ ಮಾಡ್ಕೊಂಡು ಕಾಮೆಂಟ್ ಹಾಕೋ ವ್ಯರ್ಥ ಪ್ರಯತ್ನ ಬಿಟ್ಟು .. ಇರೋದ್ರಲ್ಲೇ ನೆಮ್ಮದಿ ಕಾಣಿ..
ಬೇಜಾರು ಮಾಡ್ಕೊಳಕ್ಕೆ ಜಾಸ್ತಿ ವಿಷಯ ಇದೆ...!!
ಆದರೆ ಹೇಳೋಕೆ ಮತ್ತದೇ ಬೇಜಾರು... ಬೋರು..!!
ಇದ್ಯಾಕೆ ಹಿಂಗೆ???
ನೆನ್ನೆ ಇವಿನಿಂಗ್ ಫ್ರೆಂಡ್ಸ್ ಫೋನ್ ಮಾಡಿ
"ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲ ಅಡ್ಡ ಹತ್ರ ಬಂದು ಬಿಡು ಫುಲ್ಲು ಕುಡಿದು ಕುಣಿದು ಕ್ರಾಂತಿ ಮಾಡಣ, ಹೊಸವರ್ಷದಲ್ಲಿ ಭಾರೀ ಬದಲಾವಣೆ ತರೋಣ.. 2013 ನ್ಯೂ ಇಯರ್ ಸೆಲೆಬ್ರೇಶನ್ ಗ್ರಾಂಡ್ ಆಗಿ ಮಾಡೋಣ" ಅಂದ್ರು
"ಸರಿ ಕಣ್ರೋ, ಹಂಗೆ ಮಾಡಣ"
ಅಂತ ಹೇಳಿ ಫೋನ್ ಕಾಲ್ ಕಟ್ ಮಾಡಿದೆ..
ರಾತ್ರಿ ಹನ್ನೊಂದು ಮೂವತ್ತು ಆಯಿತು.. ಹೋಗೋಕೆ ಭಾರಿ ಬೋರು.. ಯಾಕೋ ಮನದೊಳಗಿದ್ದ ನಾಗವಲ್ಲಿ ತರದ ಡ್ಯುಯಲ್ ಪರ್ಸನಾಲಿಟಿ ಮೈಂಡು...
"ಹೋಗಬೇಡ ಕಣೋ ಚಚೀನ" ಅಂದಂಗಾಯ್ತು.
ಏನೋ ಅಕೆಷನ್ನು, ಟೈಟ್ ಆಗಿ ಕುಡಿಯೋಣ, ಲೈಟ್ ಆಗಿ ಕುಣಿಯೋಣ ಇರೋಬರೋ ಹುಡುಗ್ರು ಹುಡುಗೀರು ಎಲ್ಲಾರ್ನು ಸಮಾನ ರೀತೀಲಿ ತಬ್ಕಂಡು ವಿಶ್ ಮಾಡಿ ಜೀವನಾನ ಪಾವನ ಮಾಡ್ಕೊಂಡು ಬರೋಣಾ ಅಂದ್ಕೊಂಡೆ...!!
ಅಷ್ಟರಲ್ಲಿ ಅಶರೀರವಾಣಿಯೊಂದು ಕಿವೀಲಿ ನಿಂತು " ಲೋ ನೀನು ಜವಾಬುದಾರಿಯುತ ನಾಗರಿಕ ಆಗೋ, ಬೇರೆಯವರ ಚಿಂತೆ ಮಾಡಬೇಡಾ, ಎಲ್ಲೂ ಹೋಗಬೇಡಾ,ಸ್ವಾರ್ಥಿ ಆಗು, ಪಕ್ಕದ ಮನೇಲಿ ಬೆಂಕಿ ಬಿದ್ರೆ ಕಿಟಕಿಯಲ್ಲಿ ನೋಡು,, ಅದೇ ಬೆಂಕಿ ನಿಮ್ಮನೆಗೆ ಬಿದ್ರೆ ಬಾಯಿಬಾಯಿ ಬಡ್ಕೊಂಡು ಅಳು, ಯಾರೂ ಸಹಾಯಕ್ಕೆ ಬಂದಿಲ್ಲ ಅಂತ ದೂರು.. ಇದೆ ನಿನ್ನ ಹೊಸ ವರ್ಷದ ಅಜೆಂಡಾ ಆಗಿರಲಿ... ಎಲ್ರೂ ಹೇಗಿದಾರೋ ನೀನು ಹಾಗೇ ಬದುಕೋದ ಕಲಿ.. ಮತ್ತೇನು ಬದಲಾವಣೇ ಆಗೋಲ್ಲ " ಅಂತ ಹೇಳಿ ತಲೆ ಮೇಲೆ ಕುಟ್ಟಿ ಮಲಗಿಸಿ ಬಿಡ್ತು..
ಕಣ್ಣು ಬಿಟ್ಟಾಗ ಬೆಳಿಗ್ಗೆ ಆಗೋಗಿತ್ತು.... ಓ ಮೈ ಗ್ವಾಡ್.. ಅಂತ ಸೀದಾ ಬಾಗಿಲು ತೆಗೆದು ಹೊರಗೆ ಹೋಗಿ ಆಕಾಶ ನೋಡಿದೆ, ಏನು ಬದಲಾವಣೆ ಕಾಣಿಸಲಿಲ್ಲ, ಹಕ್ಕಿಯ ಚಿಲಿಪಿಲಿಲು ವ್ಯತ್ಯಾಸ ಇರಲಿಲ್ಲ.. ಮನೆ ಪಕ್ಕದ ದೇವಸ್ಥಾನದಲ್ಲಿ ಜನ ಇದ್ರೂ,,ಅಲ್ಲಿ ಮುಂದೆ ಹೂ ಮಾರುತಿದ್ದ ಅಜ್ಜಿ ಮುಕದಲ್ಲಿ ಬದಲಾವಣೆ ಇರಲಿಲ್ಲ.. ಯಾಕೋ ಬೇಜಾರಾಯ್ತು ನಮ್ ಹುಡುಗರ ಮೇಲೆ ನೆನ್ನೆ ಏನೂ ಬದಲಾವಣೆ ತರಲಿಲ್ಲಾ... ಅಂತ ಅಲ್ಲೇ ಪಕ್ಕದಲ್ಲಿ ಮಲಗಿದ್ದ ನಾಯಿಗೆ ಕಲ್ಲು ಹೊಡೆದೆ.. ಅದು ಕೂಡ ಕಚ್ಚೋಕೆ ಬಂದಿಲ್ಲ.. ಪಾಪಾ ಕುಯ್ಯ್ ಕುಯ್ಯ್... ಅಂತ ಓಡಿ ಹೋಯ್ತು..
ಪುಚ್.. ಇದು ಕೂಡ ಮಾಮೂಲಿ ದಿನ ಏನೂ ಪವಾಡ ನಡೀಲಿಲ್ಲ.. ಯಾಕೋ ಈ ಜಿಂದಗಿಲೇ ಮಜಾ ಇಲ್ಲಾ.. ನಾನಾದರೂ ಬದಲಾಗೋಣ ಅಂದ್ರೆ.. ಹೇಗೆ? ಅನ್ನೋ ಪ್ರಶ್ನೆ ಭೂತರೂಪದಲ್ಲಿ ಬೆಳೆಯತೊಡಗಿತು....
ಸುಮ್ನೆ ಮನೆ ಒಳಗೆ ಬಂದು ನೋಡಿದೆ... ಅಲ್ಲಿ ಗೋಡೆ ಮೇಲಿದ್ದ ಹೊಸ ಕ್ಯಾಲೆಂಡರ್ 'ನಾನು ಬದಲಾಗಿದೀನೋ' ಅಂತ ಅಣಕಿಸಿದಂತಾಯ್ತು..
ಹಳೇ ಕ್ಯಾಲೆಂಡರ್ ಎಲ್ಲೋಯ್ತು ಅಂತ ಹುಡುಕ್ತಾ ಇದ್ದೆ ಅಷ್ಟರಲ್ಲಿ ನಮ್ಮಜ್ಜಿ....
"ಹೊರಗೆ ತುಂಬಾ ಚಳಿ ಇದ್ದು ಮಗಾ,, ಬಿಸೀ ಬಿಸೀ ನೀರು ಕಾಜು.. ಸ್ನಾನ ಮಾಡಾ ತಮಾ..."
ಅಂತ ಹೇಳಿದ್ದು ಕೇಳಿಸಿತು!! ಅವರ ಕೈಯಲ್ಲಿ ಕೈಯಲ್ಲಿ ಅರ್ದ ಹರಿದ ಕ್ಯಾಲೆಂಡರ್ ಇತ್ತು..
ಇನ್ನರ್ಧ ನನ್ನ ಸ್ನಾನದ ಬಿಸೀ ನೀರಿಗೆ ಒಲೆಯಲ್ಲಿ ಸುಡ್ತಾ ಇತ್ತು...!!

Subscribe to:
Posts (Atom)