ಅದು ನನ್ನ ಹೈಸ್ಕೂಲು ದಿನಗಳು...!! ಜೀವನದಲ್ಲಿ ನನ್ನ ಪ್ರೀತಿಯ 'ಅವಳ' ಪರಿಚಯವಾಗಿದ್ದು ಆಗಲೇ..!!
ಅವಳೇ ನನ್ನ ಮುದ್ದಿನ ಗೆಳತಿ.. ಆಗ ಅವಳಷ್ಟು ಆಪ್ತೆ ನಂಗೆ ಬೇರ್ಯಾರು ಇರಲಿಲ್ಲ.. ಆಗಲೂ ಕೂಡ ನಾನು ಈಗಿನ ತರಹವೇ ನಾಚಿಕೆ ಸ್ವಭಾವದ ಅಮಾಯಕ ಮುಗ್ದ ಕಂದ..!!
ಆದರೂ ಅವಳೆಂದರೆ ಇಷ್ಟ.. ಅವಳಿಗೂ ಅಷ್ಟೇ ನಾನೆಂದರೆ ಪ್ರಾಣ..ನಾನು ಅವಳು ಬಹಳ ಕಡೆ ಸುತ್ತಾಡಿದ್ವಿ.. ನಾನು ತಿನ್ನೋದೆಲ್ಲ ಅವಳು ಕೂಡ ಬೇಕು ಬೇಕು ಅಂತ ಕಿತ್ಗೋತಾ ಇದ್ಲು.. ಆದರೂ ನಾನು ಸಿಟ್ಟಲ್ಲಿ ಬೈದಾಗ ಅವಳೆಂದೂ ಒಂದೂ ಮಾತನ್ನೂ ಆಡಿದವಳಲ್ಲ, ನನ್ನ ನೋಯಿಸಿದವಳಲ್ಲ.. ನಮ್ಮದು ಅಂತ ಗಾಢ ಸ್ನೇಹ.. ಒಂಥರಾ ಪ್ರೇಮ.. ನಮ್ಮ ಜಾತಿ, ಧರ್ಮ, ಆಚಾರ, ವಿಚಾರ ಎಲ್ಲಾ ಬೇರೆ ಬೇರೆ ಆಗಿದ್ದರೂ ಕೂಡ ಇದ್ಯಾವುದು ನಮ್ಮ ಸ್ನೇಹಕ್ಕೆ ಪ್ರೀತಿಗೆ ಅಡ್ಡ ಬಂದಿರಲಿಲ್ಲ.. ಬೇಜಾರಾದಾಗ ಅದೆಷ್ಟು ಸಲ ಅವಳನ್ನು ತಬ್ಬಿಕೊಂಡು ಅತ್ತಿದ್ದೇನೋ ಲೆಕ್ಕ ಇಲ್ಲ.. ಅವಳ ಸುಂದರ ಮುಕ, ಅವಳ ಮಾಡುತ್ತಿದ್ದ ಮುದ್ದು, ಅವಳ ಕಣ್ಣಿನ ಕಾಂತಿ ಇನ್ನೂ ನನ್ನ ಎದೆಯಲ್ಲಿ ಸಿಮೆಂಟ್ ಮೇಲಿನ ಪ್ಯಾರಾಗಾನ್ ಚಪ್ಪಲಿ ಗುರುತಿನಂತೆ ಅಚ್ಚೊತ್ತಿದೆ..!! ನಮ್ಮ ಬೀದಿಯವರೆಲ್ಲ ನಮ್ಮ ಸ್ನೇಹ ಓಡಾಟ ನೋಡಿ ಎಷ್ಟು ಜೆಲುಸಿಲ್ ಮಾತ್ರೆ ನುಂಗಿದ್ರೊ ಏನೋ...
ಯಾವ ನಾಯಿ ಕಣ್ಣು ಬಿತ್ತೋ ಏನೋ 'ಅವಳು' ನನ್ನ ಬಿಟ್ಟು ಹೋದಳು...:(
ಆದರೂ ಕೊನೆಯಲ್ಲಿ ಒಂದು ಮಾತನ್ನೂ ಹೇಳದೆ ನನ್ನ ಬಿಟ್ಟು ಹೋಗಿದ್ದು ವಿಧಿಯ ವಿಪರ್ಯಾಸ..
ಅವಳನ್ನು ಮರೆಯಲು ಆಗದೆ ಈಗಲೂ ಚಡಪಡಿಸುತ್ತಿರುವೆ..:'(
ಅವಳೊಂಥರ ನನ್ನ ಏಕಾಂಗಿತನವನ್ನ ಮರೆಸಿದ ದೇವತೆ..!!
ಅವಳಿಗೋಸ್ಕರ ಸತತ ಮೂರು ದಿನ ಹುಡುಕಿದೆ.. ಆದರೂ ಸುಳಿವೇ ಇಲ್ಲ..
ಅವಳು ನಮ್ಮನ್ನೆಲ್ಲ ಆಗಲಿ ಪರಲೋಕ ಸೇರಿಕೊಂಡಿರುವುದನ್ನ ಯಾರೋ ಮೂರನೇ ವ್ಯಕ್ತಿಯಿಂದ ತಿಳಿದು ಅವತ್ತು ಒಬ್ಬನೇ ಎಷ್ಟು ಅತ್ತಿದ್ದೆ ಅಂದರೆ ಕಣ್ಣೀರಿಂದ ಎಷ್ಟು ಬಕೆಟ್ ನೀರು ಸೋರಿ ಹೋಯಿತೋ ಗೊತ್ತಿಲ್ಲ..!!
ಈಗಲೂ ಅಷ್ಟೇ.. ಆಗಾಗ ಅವಳು ನೆನಪಾದಾಗ ಕಣ್ಣಂಚಿನ ಕಂಬನಿ ಒರೆಸುವುದೇ ಕಾಯಕವಾಗಿದೆ..
..
.
.
.
.
.
ಓಹ್ "ಅವಳು" ಯಾರು ಅಂತಾನೇ ಹೇಳಿಲ್ಲ ಅಲ್ವ..!!
.
.
.
.
ನಾವಳನ್ನ ಪ್ರೀತಿಯಿಂದ
"ಚುಬ್ಬಿ"
ಅಂತ ಕರಿತಿದ್ದೆ...
.
.
.
.
.
ಬೇರೆಯವರೆಲ್ಲರೂ ನೀನು ಕೇವಲ 'ನಾಯಿ' ಆಗಿದ್ದರೂ ನನಗೆ ಮಾತ್ರ ನೀನು ಮುದ್ದಿನ ಗೆಳತಿ..
ಮಿಸ್ ಯೂ "ಚುಬ್ಬಿ"
ಮುಂದಿನ ಜನ್ಮದಲ್ಲೂ ಕೂಡ ನನ್ನ ಪ್ರೀತಿಯ ಗೆಳತಿಯಾಗಿ ಮತ್ತೆ ಬಾ..
ವೈಟಿಂಗ್ ಫಾರ್ ಯೂ ವಿಥ್ ಲಾಟ್ ಆಫ್ ಅನ್ಲಿಮಿಟೆಡ್ ಲವ್... ♥ ♥ ♥
ಜಾಸ್ತಿ ತಲೆ ಕೆಡಿಸ್ಕೋಬೇಡಿ, ಸುಮ್ನೆ ಓದುತ್ತಾ ಹೋಗಿ. ಏನಾದ್ರು ಅನ್ಸಿದ್ರೆ ಹೇಳಿ, ಕೇಳೋಣ. ಲೈಫು ತುಂಬಾ ಸಿಂಪಲ್ ಇಲ್ಲ, ಜಾಸ್ತಿ ಕ್ಲಿಷ್ಟ ಕೂಡ ಅಲ್ಲ. ಇವೆರಡರ ಮಧ್ಯೆ ಬ್ಯಾಲೆನ್ಸ್ ಮಾಡೋದೇ ಮಜಾ. Floppy ಈಗ ಔಟ್ ಡೇಟೆಡ್, ಈಗ ಬರಿ ನೆನಪುಗಳು ಮಾತ್ರ ಆದರೆ ಆ ಕ್ಷಣ ಚಿತ್ತ ವರ್ಣಿಸಲು ಅಸಾಧ್ಯ. flop ಆದ ಈ ನಿಮ್ಮ ಹುಡುಗನ ನೆನಪಿನೊಂದಿಗೆ ಈ ಪಯಣ.. Floppy ಪುರಾಣ.. ಮನಸ್ಸಿನ ಎಲ್ಲಾ ತುಮುಲ ತೊಳಲಾಟ ಗಳನ್ನ ಸೆರೆ ಹಿಡಿಯುವ ಒಂದು ಪ್ರಯತ್ನವೇ.. Floppy ಬಾಯ್ ನ ಬರಹಗಳು..!! .....ಹಾಗೇ ಸುಮ್ಮನೆ, ತೋಚಿದ್ದು, ಬರೆದದ್ದು,ಓದ್ಕಳೀ, ತಲೆ ಕೆರ್ಕಳೀ
Monday, 21 January 2013
ಬಸ್ಸಲ್ಲಿ ಕಂಡ ಸಿದ್ದಿ ಹುಡುಗಿ..!!
ಬೆಳಗಿನ ಸಮಯ, ತುಂಬಿದ ಬಸ್ಸು ಹುಬ್ಬಳ್ಳಿಯಿಂದ ಶಿರಸಿ ಕಡೆ ಹೋಗುತ್ತಿತ್ತು.. ಸುತ್ತಲೂ ಹಸಿರು ಪರಿಸರ, ಮರದ ಮರೆಯಿಂದ ಇಣುಕುತಿದ್ದ ಸೂರ್ಯನ ಕಿರಣಗಳು, ಚಳಿ ಚಳಿ ಗಾಳಿ, ವಿಂಡೋ ಕ್ಲೋಸ್ ಮಾಡಿ ಜೋಕಾಲಿತರ ಹುಯ್ದಾಡುತಿದ್ದ ಬಸ್ಸಲ್ಲಿ ಇರೋ ಮೂರೂ ಘಂಟೆಗಳ ಸಮಯವನ್ನ ವೇಸ್ಟ್ ಮಾಡಬಾರದು ಅಂತ ಹಂಗೆ ನಿದ್ದೆಗೆ ಜಾರಿದೆ..!!
ಮಲಗಿ ಸುಮಾರು ಒಂದೊವರೆ ಘಂಟೆ ಆಗಿರಬಹುದಷ್ಟೇ.. ಬಸ್ಸಲ್ಲಿ ಶಾಲಾ ಮಕ್ಕಳ ಕಿಚಿಪಿಚಿಗೆ ಎಚ್ಚರವಾಯ್ತು.. ನೋಡಿದ್ರೆ ಬರೇ ಹೆನ್ಮಕ್ಲೇ ..( ಚಿಕ್ಕವು.. ಅಪಾರ್ಥ ಬೇಡಾ !!). ತುಂಡು ಲಂಗ ಹಾಕ್ಕೊಂಡು ಹರಕು ಬ್ಯಾಗು ಇಟ್ಗೊಂಡು.. ಕಚಿಪಿಚಿ ಮಾತಾಡ್ಕಂಡು. ಹತ್ತು ಕಿಲೋಮೀಟರು ದೂರದ ಸರ್ಕಾರಿ ಸ್ಕೂಲಿಗೆ ಹೊಂಟಿದ್ವು.. ಕಣ್ಮುಚ್ಚಿದ್ದಾಗ ಇದ್ದ ರಸ್ಶು ಕಣ್ಣು ತೆರೆದಾಗ ಇರಲಿಲ್ಲ.. ಸುಮಾರು ಐದು ಆರು ಕ್ಲಾಸಿನವರಂತೆ ಕಾಣುತ್ತಿದ್ದ ಅವರಲ್ಲಿ ನನ್ನನ್ನು ಬಹಳ ಆಕರ್ಷಿಸಿದ್ದು ಮಾತ್ರ ಆ ಕೃಷ್ಣಾ ಸುಂದರಿ ಸಿದ್ದಿ ಹುಡುಗಿ.. ಅವಳ ಕೂದಲೇ ಒಂಥರಾ ಜೇನುಗೂಡಿನ ತರಹ.. ಗುಂಗುರು ಗುಂಗುರು..!! ಮುಕದಲ್ಲಿ ಮುಗ್ದತೆ.. ಕಣ್ಣಲ್ಲಿ ಕಾಂತಿ.. ಮೇಲಾಗಿ ಅಷ್ಟು ಹುಡುಗಿಯರಲ್ಲಿ ಇವಳಲ್ಲಿ ಮಾತ್ರ ಕಂಡಂಥ ಆ ಮೌನ.. ಮುಖಭಾವ..!! ಹಾಗೆ ಸುಮ್ನೆ ಸ್ವಲ್ಪ ಹೊತ್ತು ಗಮನಿಸಿದೆ.. ಬಡಕಲು ಶರೀರ, ಒರಟು ಕೈಗಳು, ಮಾಸಿದ ಸಮವಸ್ತ್ರ.. ದೂರದ ಶಾಲೆ... ಪರಿಸ್ಥಿತಿಗೆ ದೂರಲಾಗದ ಅಸಹಾಯಕತೆ..!! ಕಷ್ಟದ ಜೀವನ..
ಅವಳನ್ನು ನೋಡಿ ನಮ್ಮ ನಗರದ ಅವಳ ವಾರಿಗೆಯ ಮಕ್ಕಳ ನೆನಪಾಯ್ತು.. ಕೇಳಿದ್ದು ಕೊಡಿಸುವ ಪಾಲಕರು, ಬ್ರಾಂಡೆಡ್ ಬಟ್ಟೆಗಳು, ಕಾಲಿಗೆ ಕೆಲಸವೇ ಇಲ್ಲದ ಹಾಗೆ ಸ್ವಂತ ವಾಹನ, ಬಾಯಲ್ಲಿ ಇಂಗ್ಲಿಷು ಸ್ಪಾನಿಶು ಭಾಷೆಗಳು, ಬೊಜ್ಜು ದೇಹಗಳು.. ಕುರುಕಲು ತಿಂಡಿಯ ಹಂಡೆಗಳು....
ಹೆಬ್ಬಾವಿಗೂ ಎರೆ ಹುಳಕ್ಕೂ ಇರುವಷ್ಟು ಅಂತರ..!!
ಆದರೆ ಆ ಕಾಡು ಸಿದ್ದಿ ಹುಡುಗಿಯಲ್ಲಿ ನನಗೆ ಇಷ್ಟವಾದದ್ದು ಅವಳ ಕಲಿವ ಹಂಬಲ.. ಇನ್ನೇನು ಮಾತನಾಡಿಸೋಣ ಅಂತ ಅನ್ನುವಷ್ಟರಲ್ಲಿ ಅವಳ ಇಳಿವ ಸ್ಟಾಪು ಬಂದೇ ಬಿಟ್ಟಿತ್ತು.. ಅವಳು ತಿರುಗಿಯೂ ನೋಡದೆ ಹೊರಟು ಹೋದಳು ನನ್ನ ತಲೆಯಲ್ಲಿ ನೂರಾರು ಆಲೋಚನೆಯ ಚೆಲ್ಲಿ..!! ಕಾಡು ಹುಡುಗಿಯ ಓದುವ ಛಲವು - ಅಸ್ಪಷ್ಯವಾಗಿರುವ ಬಲವನ್ನು ಮೆಟ್ಟಿ ನಿಲ್ಲುವುದೊ? ಪರಿಸ್ಥಿತಿಯ ಬೇಬಿ ಡಾಲ್ ಆಗಿ ಯಾವುದಾದರು ಮನೆಯ ಮೂಲೆ ಸೇರುವುದೋ?? ನಮ್ಮ ಇನ್-ಕ್ರೆಡೆಬಲ್ ಇಂಡಿಯಾದ ಕಾಲ ಅನ್ನೋ ಗ್ವಾಡಿಗೇ ಗೊತ್ತು..!!
(ಫೋಟೋ ಕೃಪೆ : ವಿಕಿಪಿಡಿಯಾ )

Subscribe to:
Posts (Atom)