ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು..ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!!ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!!ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!!ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು..
" ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",,
"ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!!
"ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!!
ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು..
ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು..
ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು...
.
.
.
.
.
.
.
.
.
.
.
.
.
.
.
" ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ"
ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!!
ಇದು ನನ್ನ ತುಂಬಾ ಪ್ರೀತ್ಸೋ ಹುಡುಗಿ ಬರೆದಿದ್ದ ಪತ್ರ..!! ಹಾಳಾದ್ದು ನನ್ ಕೈಗೆ ಸಿಕ್ಕಬೇಕಾ??ಲೋ ಚಚ್ಚಿ... ಥೂ ನಂಗೆ ಈ ಪತ್ರ ಗಿತ್ರ ಎಲ್ಲ ಗೊತ್ತಿಲ್ವೋ.. ಆದ್ರೂ ನಿನಗೆ ನನ್ನ ಭಾವನೆಗಳನ್ನ ಡೈರೆಕ್ಟ್ ಆಗಿ ಹೇಳೋಕೆ ಆಗ್ತಿಲ್ಲ.. ನೀನು ನಂಗೆ ತುಂಬಾ ಕಾಡಿದ ಹುಡುಗಾ... ನಂಗೆ ತುಂಬಾ ಹಿಡಿಸಿದ ಹುಡುಗಾ..ಫೇಸ್ ಬುಕ್ ಅಲ್ಲಿ ಆದ ಸ್ನೇಹ ಈ ಲೆವೆಲ್ ಗೆ ನನ್ ಲೈಫ್ ಫೆಸ್ ಮಾಡ್ಬೇಕು ಅಂತ ನಾನು ನಿಜವಾಗಲು ತಿಳ್ಕೊಂಡಿರ್ಲಿಲ್ಲಾ.. ಎಷ್ಟೊಂದು ಜನ ನಂಗೆ ಸ್ನೇಹಿತರು ಸ್ನೇಹಿತೆಯರು ಇದ್ರೂ ಕೂಡ ನೀನ್ಯಾಕೆ ಅವರನ್ನೆಲ್ಲ ಮೀರಿ ಏನೋ ಸ್ಪೆಷಲ್ ಆಗ್ಬಿಟ್ಟೆ.. ?? ನಿಜವಾಗ್ಲೂ ನನಗೆ ನನ್ನ ಮನಸ್ಸನ್ನ ಕಂಟ್ರೋಲ್ ಮಾಡೋದೇ ಒಂದು ತಪಸ್ಸು ಆಗೋಗಿದೆ.. ಆದ್ರೂ ಅದರಲ್ಲೇನೋ ಮಜಾ ಇದೆ..!!
ಎಲ್ಲಾ ಬಾಯ್ಸು ಒಂದೇ ಥರ.. ನೀವು ಹುಡುಗ್ರು ಯಾಕೆ ಹುಡುಗಿರನ್ನ ಅರ್ಥನೇ ಮಾಡ್ಕೊಳ್ಳಲ್ಲಾ.. ಮೊದಲ ಸಲ ತುಂಬಾ ಕೇರು ತೊಗೊಳೋ ನೀವು ಸ್ನೇಹ ಹಳೇದಾದಂಗೆ ನಾವು ಬೇಡದವರಾಗುತ್ತೀವಿ ಅಲ್ವ?? ಮೊದಮೊದಲು ಎಲ್ಲಾನು ಶೇರ್ ಮಾಡ್ಕೊಳ್ಳೋ ನೀವು ಕೊನೆಕೊನೆಗೆ ನಮ್ಮನ್ನ ಬೇರ್ ಮಾಡೋದು ನಿಮಗೆ ಕಷ್ಟ ಅಲ್ವ? ನಾವು ಮಾಡ್ಕೊಳೋ ಮೇಕಪ್ ಬಗ್ಗೆ ಕಮೆಂಟ್ ಕೊಡೊ ನೀವು ಮೇಕಪ್ ಇಲ್ದೆ ಇರೋ ಹುಡುಗಿಯರನ್ನ ಯಾಕ್ರೋ ನೋಡಲ್ಲಾ..?? ಎಲ್ಲಾ ಹುಡುಗರನ್ನು ಲೈನ್ ಆಗಿ ನಿಲ್ಲಿಸಿ ಪಟಾಪತಾ ಅಂತ ಹೊಡಿಬೇಕು ಅನ್ನಿಸತ್ತೆ..!! ಆದರೆ ಏನ್ ಮಾಡೋದು.. ಅದರಲ್ಲೂ ಮಜಾ ತೊಗೊಳ್ಳೋ ಕಮಂಗಿಗಳು ನೀವು..!!
ಇಷ್ಟಾದರೂ ನಾವು ನಿಮ್ಮಂಥ ಗೂಬೇಗಳನ್ನೇ ಯಾಕೆ ಇಷ್ಟ ಪಡ್ತೀವಿ..?? ನೋಯಿಸಿದ್ರೂ ಅದರಲ್ಲೇ ಕುಷಿ ಪಡ್ತೀವಿ..!! ನಿನಗೆ ಗೊತ್ತ ಸಚಿನಾ ನಂಗೆ ನಿನ್ನ ಮೆಲಿದ್ದಿದ್ದು ನೀನು ಹೇಳೋ ತರ affection ಆಗಲಿ attraction ಆಗಲಿ ಅಲ್ಲ ಕಣೋ.. ಅದು ಲವ್ ಅಂಡ್ ಲವ್ ಅಷ್ಟೇ..!! ನಿನಗೋಸ್ಕರ ನಾನು ಏನೆಲ್ಲಾ ಮಾಡಿಲ್ಲಾ ನಮ್ಮ ಅಮ್ಮನ ಹತ್ರಾನು ಸೂಕ್ಷ್ಮವಾಗಿ ಚರ್ಚಿಸಿದ್ದೆ.. ನಿನಗೆ ನೇರವಾಗಿ ಹೇಳಕ್ಕೆ ಆಗದೆ ಎಷ್ಟೊಂದು ಸಲ ವ್ಯರ್ಥ ಪ್ರಯತ್ನ ಮಾಡಿದ್ದೆ.. ಆಗ್ಲೂ ನಿಂಗೆ ಗೊತ್ತಾಗಿರಲಿಲ್ವ ಅಥವಾ ಗೊತ್ತಿದ್ದೂ ನಾಟಕ ಮಾಡ್ತಾ ಇದ್ದೀಯ ಅನ್ನೋದು ನಂಗೆ ಈಗಲೂ ಪ್ರಶ್ನೆ ಆಗಿಯೇ ಉಳಿದಿದೆ..!! ಕೊನೆಗೆ ನಿನಗೆ ಡೈರೆಕ್ಟ್ ಆಗಿ ನಾನೇ ಪ್ರೊಪೋಸ್ ಮಾಡಿದ್ರು ಕೂಡ ಯಾಕೆ ನೀನು ಸಿರಿಯಸ್ ಆಗಿ ತೊಗೊಂಡೆ ಇಲ್ಲಾ??
ನಮ್ಮಂಥ ಹುಡುಗಿಯರ ಹಾರ್ಟು ಗಾಜಿನ ಮನೆ ತರ ನೋಡೋವ್ರಿಗೆಲ್ಲ ಚೆನ್ನಾಗೆ ಕಾಣ್ಸತ್ತೆ... ಅದರ ಮೈಂಟೈನ್ ಕಷ್ಟ ನಮಗೆ ಗೊತ್ತು..!! ಕಲ್ಲು ಹೊಡ್ಯೋಕೆ ಎಲ್ಲಾ ಕಾಯ್ಕೊಂಡು ಇದ್ರೂ ಕಾಪಾಡಕ್ಕೆ ಇರೋರತರ ಕೆಲವರ ಪೋಸು ಬೇರೆ..!! ನನ್ನ ಬಗ್ಗೆ ನಾನು ಯೋಚಿಸಲ್ಲ ನಂದು ಹೆಂಗೋ ಹಾಳಾಗೋಗ್ಲಿ.. ಬಹುತೇಕ ಎಲ್ಲಾ ಹುಡುಗಿಯರ ಪರಿಸ್ಥಿತಿ ಇದಕ್ಕಿಂತ ಏನು ಭಿನ್ನ ಇಲ್ಲ.. ನಾವು ಇಷ್ಟ ಪಟ್ಟಿದ್ದು ಕೊನೆಗೂ ಸಿಗೋದೆ ಇಲ್ಲಾ.. ಬೇರೆಯವರ ಸಂತೋಷದಲ್ಲೇ ಕುಷಿಪಡುವ ಅನಿವಾರ್ಯತೆ..!!
ರಾತ್ರಿ ಏಕಾಂಗಿಯಾಗಿ ಅತ್ತು ಅತ್ತು ತೋಯಿಸಿದ ದಿಂಬುಗಳನ್ನ ಕೇಳಿ.. ಕಣ್ಣಿರಲ್ಲೇ ಒದ್ದೆ ಆದ ಕೆನ್ನೆ ಮೇಲಿನ ಪೌಡರ್ ನ ಕೇಳಿ ಇಲ್ಲಾ ಕಪ್ಪು ಕಾಡಿಗೆಯನ್ನ ಕೇಳಿ.. ಒಡೆದ ಬಳೆನ ಕೇಳಿ.. ಸಿಟ್ಟಲ್ಲಿ ಬಿಸಾಡಿದ ಹಳೆಯ ವಸ್ತುಗಳನ್ನ ಕೇಳಿ..!!ಇವು ಎಲ್ಲಾ ಹುಡುಗಿಯರ ಕರ್ಮ ಕಾಂಡಗಳನ್ನ ಅಳು ಅಳುತ್ತ ಹೇಳ್ತಾವೆ..!! ನಿಮಗಿಂತ ನಾವು ಹುಡುಗಿಯರೇ ಎಷ್ಟೋ ಧೈರ್ಯಶಾಲಿಗಳು.. ಅದು ಎಷ್ಟೋ ಕೇಸ್ ಅಲ್ಲಿ ಪ್ರೊವ್
ಕೂಡ ಆಗಿದೆ.. ಆದ್ರೂ ನೀವು ಹುಡುಗಿಯರ ಮನಸ್ಸನ್ನ ಅರ್ಥ ಮಾಡ್ಕೋಳೋದೇ ಇಲ್ಲ ಅಲ್ವ?? ಹೋಗ್ಲಿ ಇದ್ರಲ್ಲಿ ನಿಮ್ಮದು ತಪ್ಪು ಅಂತಾನು ಹೇಳೋಕೆ ಆಗೋಲ್ಲ ನಾವೇ ಹುಡುಗಿಯರು ಸರಿ ಇಲ್ಲದೆ ಇರಬಹುದು..!!
ಲೋ ನಿಂಗೆ ಬೈಬೇಕು ಹೊಡಿಬೇಕು ಎಲ್ಲಾ ಅನ್ಸತ್ತೆ ಆದ್ರೂ ನೀನ್ ಎದುರಿಗೆ ಬಂದ್ರೆ ಎಲ್ಲಾ ಮರೆತು ಹೋಗತ್ತೆ.. ನೀನ್ ನನ್ನ ಲವ್ ಮಾಡಲ್ಲ ಅಂತ ಹೇಳಿದ್ದಕ್ಕೆ ನನಗೇನು ಬೇಜಾರಿಲ್ಲ ಕಣೋ ಆದ್ರೂ ನಂದು ಲವ್ ಅಲ್ಲಾ ಅಂದ್ಯಲ್ಲ ಅದು ತುಂಬಾನೇ ಬೇಜಾರಾಗಿದ್ದು..!! ನಿನ್ ಲೈಫು ನಿನ್ನ ಗುರಿ ನೀನ್ ಚೆನ್ನಾಗಿರು.. ಆದ್ರೂ ನೀನು ನನ್ನ ಪ್ರೀತಿಯ ಹುಡುಗಾ ಅಷ್ಟೇ..!!
ಮುಂದೆ ನಿಂದೆ ಬೇರೆ ಲೈಫು ನಂದೇ ಬೇರೆ ಲೈಫು..ಇಬ್ರೂ ಒಂದಾಗೋದು ಬಹುತೇಕ ಅನುಮಾನ ಆದರು ಸರೀನೆ.. ಇಷ್ಟು ದಿನ ನೀನು ನನ್ನ ಒಳ್ಳೆ ಗೆಳೆಯ ನನ್ನ ಅಪ್ಪ ಅಮ್ಮನಿಗಿಂತ ನೀನೆ ಎಷ್ಟೊಂದ್ ಸಲ ಮೇಲು ಅಂತ ಅನ್ನಿಸಿದ್ದು ಇದೆ.. ಹಾಗಂತ ಇದೆ ಸರಿಯಂತಲ್ಲ..!! ಮುಂದೆ ಎಂದಾದರೂ ನೀನು ನಿನ್ನ ಹೆಂಡತಿ ಮಕ್ಕಳ ಜೊತೆ ನಾನು ನನ್ನ ಫ್ಯಾಮಿಲಿ ಜೊತೆ ಇದ್ದಾಗ ನೋಡಿದರು, ಯಾರೋ ಇವಳು ಗೊತ್ತೇ ಇಲ್ಲ ಅನ್ನೋ ತರ ಮಾತ್ರ ಇರಬೇಡ್ವೋ.. atleast ಒಂದುಸಲ ಆದ್ರೂ ಹೇಗಿದ್ದೀಯ ಅಂತ ಮಾತಾಡ್ಸೋ ಪ್ಲೀಸ್...
Anyhow I LOVE U always ಕಣೋ..
I Really Miss U so much ..!!
ಇದು ನನ್ನ ಲವ್ ಸ್ಟೋರಿ.. ಇದು ಫೇಕ್ ಅಲ್ಲಾ ಆದ್ರೆ ಸ್ವಲ್ಪ ವೀಕ್ ಅಷ್ಟೇ..!!ಎಲ್ಲರೂ ಅವರವರ ಲವ್ ಸ್ಟೋರಿಲಿ ಅವರೇ ನಾಯಕ.. ನಂದು ಸ್ವಲ್ಪ ಡಿಫರೆಂಟ್ ಇಲ್ಲಿ ನಾನೇ ಖಳ ನಾಯಕ..!!ಥೂ ಏನ್ age ಅಪ್ಪಾ ಇದು.. ತಲೆ ಏನೇನೋ ಮಾಡತ್ತೆ, ಕಣ್ಣು ಎಲ್ಲೆಲ್ಲೋ ನೋಡತ್ತೆ, ಹಾರ್ಟು ಹೇಗೇಗೋ ಓಡತ್ತೆ.. !! ಅದು ಯಾವ ಕೆಟ್ಟ ಗಳಿಗೆನೋ ಏನೋ ನಮ್ ಹುಡುಗಿಗೆ ಅನ್ಯಾಯವಾಗಿ ನನ್ ಮೇಲೆ ಲವ್ವಾಗೊಯ್ತಂತೆ..!! "ಸರಿ ಓಕೆ ಅದ್ಕೆ ನಾನ್ ಏನ್ ಮಾಡ್ಲಿ??" ಅಂತಾ ನಾನ್ ಕೇಳಿದೆ.. ಪಾಪ answer ಇಲ್ದೆ "ಏನು ಇಲ್ಲ" ಅಂತ ಸುಮ್ನಾಗಿದ್ಲು..!!
ನಂದೂ ಅವಳದ್ದು ಸುಮಾರು ಮೂರುವರೆ ವರ್ಷಗಳ ಪರಿಚಯ.. ಬೇಕಿದ್ರೆ ಸ್ನೇಹ ಅಂತನಾದ್ರೂ ಅಂದ್ಕೊಳಿ.. ಅವಳಿಗೆ ನನ್ ಮೇಲೆ ಏನು ಆಗಬಾರದಿತ್ತೋ ಅದು ಆಗೋಯ್ತು.. "ಹೆಂಗೆ? ಏನು? ಯಾಕೆ ?" ನಾನೇ ಕೇಳಿದೆ ಅವಳಿಗೆ.. ಅವಳ ಉತ್ತರ ಗೊತ್ತಿಲ್ಲಾ..!!
ನನಗೆ ಗೊತ್ತು ಇಲ್ಲಿ ಬರೆದಿರೋದನ್ನ ಅವಳು ಓದೇ ಓದುತ್ತಾಳೆ..!! ಆದರೆ ಗೊತ್ತಿಲ್ದೆ ಇರುವವಳ ಹಾಗೆ ಇದ್ದು ಬಿಡ್ತಾಳೆ.. ನಿಜಾ ಹೇಳ್ತಿದೀನಿ.. ನಾನು ಬಹಳಷ್ಟು ಹುಡುಗೀರಿಗೆ ♥ symbol ಕಳ್ಸಿದಿನಿ.. Dear ಅಂದಿದೀನಿ..ಡಾರ್ಲಿಂಗ್ ಅಂತಾನೂ ಹೇಳಿದೀನಿ.. ಮುಂದೇನೂ ಹೇಳ್ತೀನಿ..!! ಆದರೆ ಅವಳಿಗೆ ಅದು ಹೆಂಗಾಯ್ತೋ ನನಗಂತೂ ಗೊತ್ತಾಗ್ತಿಲ್ಲಾ.. ಹಾಗಂತ ನಾನೇನು ಅವಳತ್ರ ಸಲುಗೆ ತಗೊಂಡಿಲ್ಲಾ.. ಜಾಸ್ತಿ Care ಕೂಡ ತೋರ್ಸಿಲ್ಲಾ..!! ಅವಳಾಗೇ ಫೋನ್ ಮಾಡೋಳು ಮೆಸೇಜು ಕಳಿಸೋಳು.. ನಾನ್ ಮಾಡದೆ ಇದ್ರೆ.. "ಪ್ಲೀಸ್ ದಿನಕ್ಕೆ ಒಂದಾದರು ಮೆಸೇಜು ಮಾಡು" ಅಂತ ಗೊಗರಿಯೋಳು..!! "ಯಪ್ಪಾ ಇವಳಿಗೆನಾಯ್ತು " ಅಂತಾ ನಾನು ಸರಿ ಅಂತ ನೆನಪಾದಾಗೆಲ್ಲ ಕಳಿಸ್ತಿದ್ದೆ..!! ಅವಳು ನನ್ನ ಮದುವೆ ಆಗ್ತಿಯಾ ಅಂತ ಕೇಳಿದಾಗಲೇ ನಂಗೆ ಗೊತ್ತಾಗಿದ್ದು ... ಇದು 'ಅದು' ಅಂತಾ.. ಆಮೇಲೆ ಮಲಕ್ಕೊಂಡ್ ಯೋಚನೆ ಮಾಡಿದೆ ಅವಳ ಮೆಸೇಜು ಅದರ ಅರ್ಥಗಳು.. ಅವಳ ಮಾತು..ಎಲ್ಲಾ ನೋಡಿ ಓದಿ Conform ಆಯ್ತು ಇದು Love ಕೇಸೇ ಅಂತಾ..ಆದರೆ ಏನು ಮಾಡೋದು ನನ್ ಮನಸ್ಸಲ್ಲಿ ಯಾವತ್ತು ಹಾಗೆ ಯೋಚನೇನೆ ಬಂದಿರಲಿಲ್ಲಾ.. ಅಷ್ಟರಲ್ಲಾಗಲೇ ಮೂರು ಸಲ ಮಾಲಲ್ಲಿ..,ಎಂಟು ಸಲ ಪಾರ್ಕಲ್ಲಿ.., ಎರಡು ಸಲ ಹೋಟೆಲಲ್ಲಿ.., ನಾಕು ಸಲ ಮೆಜೆಸ್ಟಿಕ್ಕಲ್ಲಿ.. ಒಂದು ಸಲ ಶಂಕರ ಮಠದಲ್ಲಿ ಇನ್ನು ಒಂದೆರಡು ಸಲ ನವರಂಗ್ ಸುತ್ತಮುತ್ತ ರಾಮಕೃಷ್ಣ ಆಶ್ರಮದ ಹತ್ರ ಮತ್ತೆ ಎಲ್ಲೆಲ್ಲೋ ಸುತ್ತಿಬಿಟ್ಟಿದ್ದೆ.. ಅವಳು ನನ್ನ Birthday ಗೆ ಕೊಟ್ಟಿದ್ದ Love -birds ನ ನಮ್ಮನೆ showcase ಒಳಗೆ ಇಟ್ಟಿದ್ರು ಗೊತ್ತಾಗಿರಲಿಲ್ಲ...!!
ಒಂದು ಮಾತಿದೆ 'ಹುಡುಗಿಯರ ಮೆಚ್ಚುಗೆ ಸ್ನೇಹ ಆಗಿರತ್ತೆ.. ಅದೇ ಹುಡುಗರಲ್ಲಿ ಪ್ರೇಮ ಆಗಿರುತ್ತೆ' ಅಂತ ನಂದಿಲ್ಲಿ Reverse -case ಆಗೋಯ್ತು.. ಅವಳು Direct ಆಗಿ ಹಿಂಗೆ ಕೇಳಿದಾಗ..
ಇರೋ ಬರೋರ್ದೆಲ್ಲ ಕಾಲು ಎಳ್ಕೊಂಡು.. ಅವರಿವರ್ನ ಉರಿಸ್ತಾ 'ಚುಮ್ಮಾ ಅದುರುದಿಲ್ಲಾ' ಅಂತ ತಮಿಳ್ ಡೈಲಾಗು ಹೊಡ್ಕಂಡು.. ಕೈಲಿ ಕಾಳು ಹಿಡ್ಕೊಂಡು.. ಏನೇನೋ ಹೇಳ್ಕೊಂಡು ಹೇಗೇಗೋ ಆಡ್ತಾ ಇದ್ದ ನನ್ ಹಾರ್ಟು ಕಪ್ಪೆ ತರ ಬಾಯಿಗೆ ಬಂದು.. ಎಮ್ಮೆ ತರ ಕೂಗಾಡ್ಕೊಂಡು.. ಎಲ್ಲೋ ಹೊಂಟೋಯ್ತು..!!
ನಾನು ಅವಳಿಗೆ ಹೇಳ್ದೆ ಆಗಲ್ಲ..!! ನನ್ನ ಮುಂದೆ ದೊಡ್ಡ ಗುರಿ ಇದೆ..ಆದರೆ ಹಾಳಾದ್ದು ತುಂಬಾನೇ ದೂರ ಇದೆ..!! ಹತ್ರ ಹೋಗಕ್ಕೆ ದಾರಿನು ಕಳ್ದೊಗಿದೆ..!! ಸಧ್ಯಕ್ಕೆ ಏಕಾಂಗಿ ಜೀವನಾನೆ ನಂಗೆ ಪಾವನ..!! ಇದೆಲ್ಲ ಹೇಳಿದ್ರೆ ಅವಳಿಗೆ ಅರ್ಥ ಆಗಿಲ್ಲ.. ಅನ್ಸತ್ತೆ.. ಕಾಯ್ತೀನಿ ಅಂತಾಳೆ.. ಏನಂತ ಹೇಳೋದು ಅವಳಿಗೆ..ನಾನ್ ಯಾವತ್ತು ಅವಳನ್ನ ಆ ತರ Treat ಮಾಡೇ ಇಲ್ಲಾ.. ಮಾಡೋದು ಇಲ್ಲಾ.. ಅವಳು ಒಳ್ಳೆ ಗೆಳತಿ.. ಆದ್ರೆ ನಂಗೆ ಅವಳ ಮೇಲೆ ಅಂತ Special ಭಾವನೆಗಳೇನು ಬಂದಿಲ್ಲ.. ನಾನು ಅವಳ Life ಅಲ್ಲಿ ಇರ್ತೀನಿ.. ಆದ್ರೆ partner ಆಗಿ ಸಾಧ್ಯ ಇಲ್ಲಾ..!! ಅವಳು ಮಾಡಿದ್ದು ತಪ್ಪು... ಹೇಳಿದ್ದು ತಪ್ಪು ಅಂತ ಅರ್ಥ ಅಲ್ಲಾ.. ಅವಳ Selection ಬೇಡಾ ಅಂದ್ರೂ ನಾನು Appreciate ಮಾಡಲೇ ಬೇಕಾದ ಅನಿವಾರ್ಯತೆ ಇದೆ ಈಗ..!! ಅವಳಿಗೆ ಪ್ರೀತಿ ಅಂದ್ರೆ ಗೊತ್ತು.. ನನಗೆ ಜೀವನ ಅಂದ್ರೆ ಗೊತ್ತು.. ಮೊದ್ಲೇ ನಂಗೆ Seriousness ಇಲ್ಲ.. ಬಚಾವಾಗಿಬಿಟ್ಟಳು...!!
ನಾನಿವತ್ತು ಅವಳ ಹೆಸರು ಹೇಳಲ್ಲಾ.. ಯಾಕಂದ್ರೆ ಇದು ನನ್ನ ಅವಳ ಮಧ್ಯೆ ಇದ್ದಿದ್ದನ್ನ ನಿಮ್ಮೆದುರು ಇಡ್ತಾ ಇದ್ದೀನಿ..ಅವಳಿಗೆ ನಾನು Friend ಆಗಿ ಬೇಡಾ ಅಂದ್ಲು..ಸರಿ ಅಂತ ದೂರ ಇದೀನಿ..!!
ದೂರ ಇದ್ರೂ ಚೆನ್ನಾಗಿರಲಿ.. ಅವಳ ಬಾಳಲ್ಲೂ ಇವತ್ತಲ್ಲ ನಾಳೆ.. ರಾಕೇಟು ಹಚ್ಚೋನು ಬಂದೆ ಬರ್ತಾನೆ.. ಈಗ ಅವಳ ಹೆಸರು ಹೇಳಿ ಬತ್ತಿ ಕೀಳೋ ಕೆಲಸ ನಾನ್ ಮಾಡಲ್ಲಾ..!! ನೂರು ಜನರನ್ನ ಒಂದೇ ತರ ಪ್ರೀತ್ಸೋದಕ್ಕಿಂತ ಒಬ್ಬೋಬ್ರನ್ನು ನೂರು ನೂರು ತರ ಪ್ರೀತ್ಸೋದು Better ಆಲ್ವಾ?? ನನ್ನಿಂದ ಅವಳಿಗೆ ನೋವಾಗಿದೆ.. ಬೇಜಾರಾಗಿದೆ.. ಹಾಗಂತ ಕನಿಕರ ತೋರ್ಸಿ ಲವ್ ಮಾಡೋಕಾಗಲ್ಲಾ.. ಅವಳ ಜೊತೆ ಆಟ ಆಡಿ ಸುತ್ತಾಡಿ ಮರೆತು ಬಿಡಕ್ಕೆ..ಅವಳ heart ಏನು playground ಕೂಡ ಅಲ್ಲಾ..!!
ಸಧ್ಯಕ್ಕೆ ನಮ್ಮಿಬ್ರ ಮಧ್ಯೆ ಒಂದು ಗ್ಯಾಪ್ ಇದೆ ಅಷ್ಟೇ ಈ ಗ್ಯಾಪ್ ನ ಹೇಗೆ ಮುಚ್ಚತ್ತೆ ಅಂತ ಕಾಲಾನೇ ಹೇಳ್ಬೇಕು..!!
ನಾನೇನಾದ್ರು ಈ ವಿಷಯದಲ್ಲಿ ತಪ್ಪು ಮಾಡಿದ್ನ?? ಅದ್ನ ನೀವು ಹೇಳ್ಬೇಕು..!!ನನಗನಿಸಿರೋ ಹಾಗೆ ನಾನು ನಡ್ಕೊಂಡಿದೀನಿ.. ತಪ್ಪಿದ್ದರೆ ತಿಳಿ ಹೇಳಿ..!!
ಮಿಡ್ ನೈಟ್ ಅಲ್ಲಿ ಟ್ರಿನ್ ಟ್ರಿನ್ ಅಂತ ನನ್ ಮೊಬೈಲು ಒಂದೇ ಸಮನೆ ನೆನ್ನೆ ರಾತ್ರಿ..ಅದ್ಯಾವ್ದೋ ಸೈಬಿರಿಯನ್ ದೆವ್ವ ಮೆಟ್ಕೊಂಡಿದ್ದ ತರ ಕೂಗೋಕೆ ಸ್ಟಾರ್ಟ್ ಮಾಡ್ತು..!! ಏನೋ ಅಧ್ಬುತ ಕನಸು ಕಾಣ್ತಾ ಮಲಗಿರಬೇಕಾದ್ರೆ ಇದೊಂದು ಹೆಂಡತಿ ತರ ನಂಗೆ ಈಗಲೇ ಗಂಟು ಬಿದ್ದಿದೆ ಕಾಟ ಕೊಡಕ್ಕೆ.. ಯಾವನಪ್ಪಾ ಗುಬಾಳ್ ಫೋನ್ ಮಾಡಿರೋನು ಅಂತ ನೋಡಿದ್ರೆ ನಮ್ಮ ಹಳೇ ಹುಡ್ಗ.. ಚಡ್ಡಿ ಹಾಕೊಳೋಕು ಮೊದ್ಲೇ ಇದ್ದ ದೋಸ್ತು, ಅಮೇರಿಕದಿಂದ ಕಾಲ್ ಹಾಕಿದ್ದ..!!" ಏನೋ ಶಿಷ್ಯ ತುಂಬಾ ದಿನ ಆದ್ಮೇಲೆ ನೆನಪಾದ್ನಾ" ಅಂತ ಕೇಳಿದ್ರೆ,
" ಮಗಾ ಎಂಗ್-ಏಜು-ಮೆಂಟು ಆಗಿದೆ ಇಲ್ಲೇ ಅಮೇರಿಕಾದ ಹುಡುಗಿ ಮುಂದಿನ ತಿಂಗಳೇ ಮದುವೆ, ಅದ್ಕೆ ಎಲ್ರಿಗೂ ಹೇಳ್ತಾ ಇದೀನಿ ಆಮೇಲೆ ಒಂದು ಮಾತು ಹೇಳಿಲ್ಲ ಅಂತ ಬೈಕೊಬೇಡ್ರೋ.. ಫೋಟಾನ ಫೇಸ್ ಬುಕ್ ಅಲ್ಲಿ ಹಾಕ್ತೀನಿ ನೋಡ್ಕೊಳಿ " ಅಂದ ಬಡ್ಡಿ ಹೈದ..!!
ನಾನ್ ಫುಲ್ ಶಾಕು , ಮಗಾ ನಮ್ಕಿಂತ ಮೊದ್ಲೇ ಹಾಳಗ್ತಾ ಇದಾನಲ್ಲ ಅಂತ " ಲೇಯ್ ಓದೋಕೆ ಅಂತ ಹೋಗಿ ಅಲ್ಲೇ ಅಲ್ಲೇ ಹುದುಗಿನು ಪಟಾಯ್ಸಿದ್ಯ? ಹೆಂಗೋ ಮಗ ? ಏನೋ ಅವಳ ಹೆಸರು ? " ಕೇಳಿದ್ರೆ "ಕೆಂಪವ್ವ" ಅಂದ ನಾಚಿಕೆಯಿಂದ..!! " ಲೋ ನಮ್ ಮಂಡ್ಯ ಕಡೆ ಹುಡ್ಗಿನ ಅಮೇರಿಕ ಹುಡುಗಿ ಅಂತ ಇದಿಯೇನೋ ಲೋಫ್ಹರ್ ? " ಅಂತ ಅವಾಜ್ ಹಾಕಿದ್ದಕ್ಕೆ " ಥೂ ಕೆಂಪವ್ವ ಅಲ್ವೋ ಕೆಂಪ್ ವಾ ( kemp waugh ) ಅಂತ ಅವಳ ಹೆಸರು " ಅಂದ ಸ್ಪೆಲ್ಲಿಂಗು ಸೇರ್ಸಿ..!!
ಅಮೇರಿಕ ಕಡೆ ಅಲ್ಲೆಲ್ಲೋ ಮುದ್ದಿನ ಪಾರ್ಟಿ (cuddles party) ಅಂತ ಮಾಡ್ತಾರಂತೆ.. ಅಂದ್ರೆ ಸುಮ್ನೆ ಗುರುತು ಪರಿಚಯ ಇಲ್ದೆ ಇರೋ ಅಪರಿಚಿತರು ಫೇಸ್ ಬುಕ್ ಗೆಳೆಯರು ಹೀಗೆ ಯಾರ್ಯಾರೋ ಅಂದಿನ ದಿನ ಒಂದ್ಕಡೆ ಸೇರ್ಕಂಡು ಪರಿಚಯ ಮಾಡ್ಕಂಡು, ತಬ್ಬಿಕೊಂಡು, ಅಪ್ಪಿಕೊಂಡು, ಮುದ್ದಾಡಿ..............
ಅಷ್ಟೇ..!! (ಅದನ್ನ ಬಿಟ್ಟು ಬೇರೆಯದರ ಬಗ್ಗೆ ನನಗೆ ಮಾಹಿತಿ ಇಲ್ಲ )
ಆ ಮುದ್ದಿನ ಪಾರ್ಟಿ ಅಲ್ಲೇ ನಮ್ ಕೆಂಪವ್ವ ಸಾರಿ ಕೆಂಪ್ ವಾ ನಮ್ ಹುಡ್ಗಂಗೆ ಸಿಕ್ಕಿದ್ದಂತೆ..!! ಇಷ್ಟು ಹೇಳಿ ನನ್ ತಲೇಲಿ ಹುಳ ಬಿಟ್ಟು ಇನ್ನು ಇರೋ ಬಾರೋ ನಮ್ ಬೇರೆ ಹುಡುಗರಿಗೆಲ್ಲ ನಿದ್ದೆ ಹಾಳು ಮಾಡಕ್ಕೆ ಸ್ಕೆಚ್ ಹಾಕ್ಕೊಂಡು ಫೋನ್ ಕುಕ್ಕಿದ...!!
ಬೆಳಿಗ್ಗೆ ಅಡ್ಡಾ ದಲ್ಲಿ ಸಿಕ್ಕಿದ ಎಲ್ಲ ಹುಡ್ರು ಇವನ ಬಗ್ಗೆನೇ ಯೋಚಿಸ್ತಾ ನಾವು ಆ ತರ ಏನಾರ ಮಾಡ್ಬೇಕು ನಮಗೂ ಯಾರಾದ್ರೂ ಸಿಕ್ತಾರೆನೋ ಅಂತ ಪಿಲಾನು ಮಾಡ್ತಾ ಇದ್ರೆ , ನಮ್ ದೇಶದ ಹುಡ್ಗೀರು ಅಮೇರಿಕ ಹುಡುಗಿಯರಿಗಿಂತ ಬಹಳ ಮುಂದಿದ್ದಾರೆ.. ಅವೆಲ್ಲ ಇಲ್ಲಿ ನಡೆಯೋಲ್ಲ ಅನ್ನೋ ತೀರ್ಮಾನದೊಂದಿಗೆ ಅಡ್ಡ ಕ್ಲೋಸ್ ಮಾಡಿದ್ವಿ..!!
ನನ್ನ ಮೊದಮೊದಲ ಪ್ರೀತಿ.. ಮೊದಮೊದಲ ಅಕ್ಕರೆ.. ಆರೈಕೆ.. ಸಲುಗೆ..ಮಾತು-ಕತೆ... ಹರಟೆ.. ಬೈಗುಳ.. ನಿನ್ನಿಂದ ಪಡೆದ.. ಏಟು.. ಯಾವುದನ್ನೂ ಮರಿಯೂಕ್ಕೆ ಆಗ್ತಿಲ್ಲಾ ಈ ಹಾಳಾದ್ ಹಾರ್ಟಿಗೆ...ಈಗಲೂ ಒಂದೊಂದ್ ಸಲ ತುಂಬಾ ನೆ ಬೇಜಾರ್ ಆಗ್ತಿದೆ ಬೆಳ್ಳಿ ನಿನ್ನ ತುಂಬಾನೇ ಮಿಸ್ ಮಾಡ್ಕೋತಾ ಇದೀನಿ..ನಿನಗೆ ತುಂಬಾನೇ ಕಾಡಿಸ್ತಿದ್ದೆ.. ಕೂಗಿಸ್ತಾ ಇದ್ದೆ.... ತುಂಬಾ ರೋಸಿದ್ದೆ.. ಆದ್ರೂ ನೀನು ಯಾವತ್ತೂ ನನ್ ಮೇಲೆ ಬೇಜಾರಾಗ್ತಾ ಇರ್ಲಿಲ್ಲಾ.. ಮೇಲೆ ಬಯ್ಯ್ತಿದ್ದೆ .... ಆದ್ರೆ ನಾನಿಲ್ದೆ ತುಂಬಾ ಪರಿತಪಿಸ್ತಾ ಇದ್ದೆ . ನಾವಿಬ್ರೂ ಎಸ್ಟೋ ದಿನ ಮನೇಲಿ ಒಳ್ಳೆ ಲವರ್ ತರ ಹರಟಿದೀವಿ.. ಒಟ್ಟಿಗೆ ಮನೆ ಕೆಲಸ ಎಲ್ಲಾ ಮಾಡಿದೀವಿ.. ನನ್ನ ಸಂಬಳದಲ್ಲಿ ನಾನು ನಿನಗೋಸ್ಕರ ತಂದ ಸೀರೆ ನೋಡಿ.. ನಿನ್ನ ಮನದಲ್ಲಾದ ಸಂತೋಷನ ನಿನ್ನ ಕಣ್ಣಲ್ಲೇ ಗುರುತಿಸಿದ್ದೆ.. ಅದೊಂದು ಅಧ್ಬುತ ಕ್ಷಣ.. ನೀನು ನನಗೋಸ್ಕರ ಎಷ್ಟೊಂದು ಜನರತ್ರ ಜಗಳ ಮಾಡಿದ್ದೆ.. ಅದು ಚಿಕ್ಕ ಚಿಕ್ಕ ವಿಷಯಕ್ಕೆ.. ನೆನಸ್ಕೊಂಡ್ರೆ ಈಗಲೂ ನಗು ಬರತ್ತೆ..
ನೀನಿಲ್ಲದೆ ಮುಂದಿನ ವಾರ ಎರಡು ವರ್ಷ ಆಗತ್ತೆ.. :( :(
ತುಂಬಾನೇ ಬೇಜಾರಾಗ್ತಿದೆ.. ಬೆಳ್ಳಿ..!!
ನಾನು ನಿಂಗೆ ರೆಗ್ಸಿದ್ದು.., ನಿಂಗೆ ಗೋವಾಗೆ ಕರ್ಕೊಂಡು ಹೋಗಿ ಫಾರಿನ್ ಪಿಗರ್ಸು ನಾಚೋತರ ಡ್ರೆಸ್ ಮಾಡಿಸ್ತೀನಿ ಅಂತ ಹೇಳಿದ್ದು.. ನಿನ್ನ ಎಲ್ಲರ ಎದಿರಿಗೂ ಡಾರ್ಲಿಂಗ್ ಅಂತ ಹೇಳಿ ಮುಜುಗರ ಉಂಟು ಮಾಡಿದ್ದು..
ನಿನ್ನತ್ರ ಅವಾಗವಾಗ ದುಡ್ಡು ತಗೋತಾ ಇದ್ದಿದ್ದು.. ನೀನು ಬೈದು ಬೈದು ಕೊಡ್ತಾ ಇದ್ದಿದ್ದು..
ಕೊನೆಗೆ.. ಒಂದು ಮಾತು ಹೇಳದೆ ಸಣ್ಣ ಸೂಚನೇನು ಕೊಡದೆ ಶಿವಾ ಅಂತ ಶಿವನ ಪಾದ ಸೇರಿದ್ದು.. ಥೂ..!!ನಿಜವಾಗಲೂ ಬೆಳ್ಳಿ ನೀನು ಮತ್ತೆ ಬಾ..
ನಿನ್ನ ನಾನು ಅಜ್ಜಿ ಅನ್ನೋದಕ್ಕಿಂತ ಬೆಳ್ಳಿ ಅಂತಾನೆ ಕರಿತಿದ್ದೆ.. ನಿನ್ನ ಅಜ್ಜಿ ಅನ್ನೋದ್ಕಿಂತ ಒಳ್ಳೆ ಗೆಳತಿ ಆಗಿ ನೋಡಿದೆ.. ನೀನು ಅಷ್ಟೇ ಒಳ್ಳೆ ಲವರ್ ತರಾನೆ ನೋಡ್ಕೊಂಡೆ .. ಸಾಕು ನಿನ್ನಂತಹ ಅಜ್ಜಿ ಪಡೆದಿದ್ದಕ್ಕೆ
ನನಗೆ ಸಂತೋಷ ಇದೆ.. ಪ್ರೀತಿ ಇದೆ.. ಕುಷಿ ಇದೆ.. ಅಷ್ಟು ಸಾಕು.. ಆದ್ರೂ ಇಷ್ಟು ಬೇಗ ನನ್ನನ್ನ ಬಿಟ್ಟು ಹೋಗಿದ್ದಕ್ಕೆ ವಿಷಾದ ಇದೆ..ಇದಕ್ಕಿಂತ ಹೆಚ್ಚಿಗೆ ಹೇಳಕ್ಕೆ ಬರಿಯಕ್ಕೆ.. ಈ ಹಾಳಾದ್ ಕಣ್ಣೀರು ಅಡ್ಡಡ್ಡ ಬರ್ತಿದೆ...
I LOVE YOU BELLI... ♥ ♥
i MISS YOU SO MUCH ♥ ♥
ಸುಮ್ನೆ ಬೊರಾಯ್ತು ಫ್ರೆಂಡ್ ಮನೆಗೆ ಹೋಗಾಣ ಅಂತ ಹೋದೆ..!! ಹಾಳಾದವನು ಅವನ ಡವ್ ಮೀಟ್ ಮಾಡಕ್ಕೆ ಹೋಗಿದ್ದ..!! ಅನ್ಯಾಯವಾಗಿ ಅವನ ತಂಗಿ ಕೈಲಿ ಸಿಕ್ಕಾಕ್ಕಂಡು ಬಿಟ್ಟೆ.. ಅವಳೋ ಚೆಸ್ ಚಾಂಪಿಯನ್ನು..ಯಾರು ಸಿಗದೇ ಇದ್ರೆ ಒಬ್ಬೋಬ್ಲೆ ಚೆಸ್ ಆಡ್ತಾ ಇರ್ತಾಳೆ..!! "ಅಣ್ಣ ಬಾ ಚೆಸ್ ಆಡೋಣ, ನೀನ್ ಇವತ್ತು ತಪ್ಪಿಸ್ಕೊಂದ್ರೆ ಅಷ್ಟೇ" ಅಂತ ಧಮಕಿ ಬೇರೆ ಹಾಕಿದ್ಲು..!!ನಾನೂ ಚೆಸ್ ಅಲ್ಲಿ ಪಂಟ.. ಕೊನೆರು ಹಂಪಿಗೆ ಕೋಚು.. ಅನಂದುಗೆ ದೋಸ್ತು.. ಅವರೆಲ್ಲ ಗೆಲ್ಲಲಿ ಅಂತ ನಾನು ಆ ಫೀಲ್ಡ್ ಗೆ ಎಂಟ್ರಿ ಕೊಟ್ಟಿರ್ಲಿಲ್ಲಾ ಅಷ್ಟೇ ...( ಆ ವಿಷಯ ಅವಳಿಗೂ ಗೊತ್ತಿತ್ತು ಅನ್ಸತ್ತೆ ಅದ್ಕೆ ಆ ರೇಂಜ್ ಅಲ್ಲಿ ನನ್ನ ಕರೆದು ಆಡಕ್ಕೆ ಕೂರಿಸ್ಕೊಂದಿದ್ದಳು )
ಆ ಕಿಂಗು ಕ್ವೀನು ಭಿಷಪ್ಪು ರಾಕು ನೈಟು ಪಾನು ಕ್ಯಾಸಲಿಂಗು ಡ್ರಾ.. ಅದು ಇದು ಏನೇನೋ ಮಾಡಿ ಲಾಸ್ಟ್ ಗೆ "ಚೆಕ್ ಮೆಟ್" ಅಂದ್ಳು.. ಸಧ್ಯ ಮುಗಿತಲಾ ಕಳಚಿಕೊಳ್ಳೋಣ ಅಂತ ಏಳಕ್ಕೆ ರೆಡಿ ಆದೆ..
"ಅಣ್ಣಾ ಬಾ ಏನು ಹೊರಟೇಬಿಟ್ಟೆ ಏನೋ ತುಂಬಾ ತುಂಬಾ ಡೈಲಾಗು ಹೊಡಿತಾ ಇರ್ತಿಯಾ ನನ್ನ ಚೆಕ್ ಮೆಟ್ ಮಾಡು ಆಮೇಲೆ ಇಲ್ಲಿಂದ ಹೊರಡು" ಅನ್ನೊದ..!!
ಸುರು ಆಯ್ತು ಇವಳ ರೋಧನೆ convince ಮಾಡಕ್ಕಾಗಲ್ಲ ಇವಳನ್ನ confuse ಮಾಡಣ ಅಂತ ನಾನು ಶುರು ಮಾಡಿದೆ...
"ಈ ಚೆಕ್ ಮೆಟ್ ಅಲ್ಲಿ ಮಜಾ ಇಲ್ಲಾ ನಿಜವಾದ ಚೆಕ್ ಮೆಟ್ ಅಂದ್ರೆ .........
* ಇಬ್ಬರು ಪ್ರೇಮಿಗಳು ಕೂತಿರ್ತಾರೆ ಎದುರುಗಡೆ ಒಂದು ಸೂಪೆರ್ ಡ್ರೆಸ್ ಅಲ್ಲಿ S3*Y ಹುಡುಗಿ ಹಂಗೆ ಹಾದು ಹೋಗ್ತಾಳೆ.. ಆಗ ಅವಳನ್ನೇ ಕದ್ದು ಕದ್ದು ನೋಡ್ತಾ ಇದ್ದ ಹುಡುಗನ್ನ ಅವನ ಲವ್ವರ್ ಕೇಳ್ತಾಳೆ "ನಮ್ಮಿಬ್ಬರಲ್ಲಿ ಯಾರು ತುಂಬಾ ಹಾಟ್ " ಅಂತ ಅದು ಚೆಕ್ ಮೆಟ್..!!
* ಮದುವೆ ಆಗೋ ಹುಡುಗಿನ ಮೊದಲ ಸಲ ಮನೆಗೆ ಕರ್ಕೊಂಡು ಹೋಗಿರ್ತಿರ..ನಿಮ್ಮ ಅಮ್ಮನ ಮುಂದೆಯೇ ಕೇಳ್ತಾಳೆ "ರೀ ನಾನು ನಿಮಗೆ ತುಂಬಾ ಇಷ್ಟಾನ? ನಿಮ್ಮ ಅಮ್ಮನಾ?" ಅಂತ.. ಅದು ಚೆಕ್ ಮೆಟ್ ..!!
* ಕಾವೇರಿ ಗಲಾಟೆಲ್ಲಿ ಸಿಕ್ಕಾಕ್ಕಂದಿರೋ ಮಂತ್ರಿಗಳ ಪರಿಸ್ಥಿತಿ ಇದ್ಯಲ್ಲ ಅದು ಚೆಕ್ ಮೆಟ್ ..!!
* ಮೊನ್ನೆ ಮ್ಯಾಚಲ್ಲಿ ಗೆದ್ರೂ ಮನೆಗೆ ಬಂದ್ರಲ್ಲ ನಮ್ಮ ಹೀರೋಗಳು ಅವರದ್ದು ಚೆಕ್ ಮೆಟ್..!!
* ಕಾಲೇಜಲ್ಲಿ ಮಿಸ್ಸು ಪಾಠ ಮಾಡ್ತಾ ಕೇಳಿರೋ ಪ್ರಶ್ನೆಗೆ ಉತ್ತರ ಗೊತ್ತಿಲ್ದಿರೋ ನಮಗೆ ಬೈಮಿಸ್ಟೇಕ್ ನಿಮ್ಮ ಮತ್ತು ಅವರ ಕಣ್ಣು ಕಣ್ಣು ಮೀಟ್ ಆದ್ರೆ.. ಅದು ಚೆಕ್ ಮೆಟ್ ..!!
* ನಿಮ್ಮ ಬಾಸ್ ಹತ್ರ ಹೆಂಡತಿಗೆ ಹುಷಾರಿಲ್ಲ ಅಂತ ರಜಾ ತೊಗೊಂಡು ಥಿಯೇಟರ್ ಅಲ್ಲಿ ಅವರ ಕೈ ಯಲ್ಲಿ ಸಿಕ್ಕಿ ಬಿದ್ರೆ ಅದು ಚೆಕ್ ಮೆಟ್ ..!!
ಬಾಯ್ ಫ್ರೆಂಡು ಇಲ್ಲದೆ ಇರೋ ಸುಂದರ ಹುಡುಗಿಯರಿಗೆ ನನ್ನದೊಂದು ಕೊನೆ ಮಾತು...
ಉಮ್ಮಾ ಉಮ್ಮಾ ಉಮ್ಮಾ ♥ ♥ ♥ ... ಎಲ್ಲರಿಗೂ ಫ್ಲಯಿಂಗ್ ಕಿಸ್ ಕೊಟ್ಟಿದೀನಿ.. ಯಾರ್ಯಾರಿಗೆ ಬೇಡಾ ದಯವಿಟ್ಟು ನಾನ್ ಕೊಟ್ಟಿದ್ದನ್ನ ನನಗೇ ವಾಪಸ್ ಕೊಡಿ.... ಕೊಡದೆ ತಮ್ಮಲ್ಲೇ ಉಳಿಸಿಕೊಂಡವರಿಗೂ ಧನ್ಯವಾದಗಳು..!!
ಇದು ಕಣ್ರೀ ' ಚೆಕ್ ಮೆಟ್ ' ಅಂದ್ರೆ..!!
ತುಂಬಾ ಬೇಜಾರಲ್ಲಿದೀನಿ..ಜಾಸ್ತಿ ಬರಿಯಲ್ಲ ಹೆಚ್ಚಿಗೆ ಕೊರಿಯಲ್ಲಾ..!!ಅದು ಕಾರಣ ಏನಪ್ಪಾ ಅಂತಂತಂತಂತಂತಂತ್......ದರೆ, ಇವತ್ತು ಬಸ್ಸಲ್ಲಿ ಒಂದು ಸುಂದರ ಹುಡುಗಿನ ನೋಡಿದೆ.!!ಅವಳದ್ದು ಎಲ್ಲಾನು ಸೂಪರಾಗಿತ್ತು ( ಮುಕದ ಬಗ್ಗೆ ಹೇಳ್ತಾ ಇದ್ದೀನಿ )..! ಆದ್ರೆ ಅವಳ ಸುಂದರ ಮುಕದ ಮೇಲಿನ ಮೂಗಿನ ಮೇಲೆ ಒಂದೇ ಒಂದು ದಪ್ಪ ಮೊಡವೆ ಆಗೋಗಿತ್ತು..!! ಅದನ್ನ ನೋಡಿದಾಗಿಂದಾ ಇನ್ನೂ ಕೂಡ ನನ್ ಹಾರ್ಟು ಗೊಳೋ ಗೊಳೋ ಅಂತ ಅಳ್ತಾ ಇದೆ ಕಣ್ರೀ..!!ಹುಡುಗಿಯರಿಗೆ ಮೊಡವೆ ಆದ್ರೆ ಎಷ್ಟು ನೊಂದುಕೊಳ್ತಾರೆ ಅಂತ ಹುಡುಗರಿಗೆ ತಾನೇ ಜಾಸ್ತಿ ಗೊತ್ತಾಗೋದು..!! ಮುಕದ ಮೇಲೆ ಗುಳ್ಳೆ ಆದ್ರೆ... ಮೊಡವೆ ಅಂತೆ ಅದೇ ಬೇರೆ ಕಡೆ ಆದ್ರೆ ಅದನ್ನೇ ಕಜ್ಜಿ ಅಂತಾರೆ.. ಈ ತರ ಮೊಡವೆಗಳಿಗೂ ಬೇಧ-ಭಾವ..!! ಆದರೂ ಮೊಡವೆಗಳನ್ನ ಕೀಳೋದ್ರಲ್ಲಿ ಏನೋ ಒಂಥರಾ ಮಜಾ.. ಅದನ್ನ ಮುಕದ ಮೇಲೆ ಕಲೆ ಮಾಡ್ಕೊಂಡವರ ಹತ್ರಾನೆ ಕೇಳಬೇಕು..!! ಪ್ರಾಯದಲ್ಲಿರೋ ಎಲ್ಲಾ ಮುದುಕ ಮುದುಕಿ ಆಂಟಿ ಅಂಕಲ್ಲು ಇನ್ನು ಯಾರ್ಯಾರು ಇದ್ದಾರೋ ಏಲ್ಲರಿಗೂ ಇದು ಕಾಮನ್ನು..!! ಅದು ಬಂದ್ರೇನೆ ದೊಡ್ಡೋರು ಆದಂಗೆ ಅಂತ ನಮ್ಮಜ್ಜಿ ಹೇಳ್ತಾ ಇದ್ರು..!!
ಪ್ರಪಂಚದ 80 % ಟೀನೆಜರ್ಸು ಮೊಡವೆ ಇಂದ ಮೆಂಟಲ್ ತರ ಅಡ್ತಾರಂತೆ..!! ಮೊಡವೆನೇ ಆಗದೆ ಇರೋ ಮುದುಕೀಗೆ ಮುತ್ತು ಕೊಟ್ರೆ ಸಾವೇ ಬರಲ್ಲ ಅಂತ ನಮ್ ಸ್ವಾಮಿಗಳು ಹೇಳ್ತಾ ಇದ್ರು..!! ಎಷ್ಟೊಂದು ಜನ ಮೊಡವೆನೇ ಒಡವೆ ಮಾಡ್ಕೊಂಡು ನಮ್ಮ ನಡುವೆ ಇದಾರೆ,, ಅವರ ಗೊಡವೆ ನಮಗೀಗ ಬೇಡವೇ ಬೇಡ..!!
ನಮ್ಮಮ್ಮ ಹೇಳ್ತಿದ್ರು ಯಾರಾದ್ರೂ ಹುಡುಗಿ ಕಣ್ಣು ಹಾಕಿದ್ರೆ ನಮ್ಮಂತ ಒಳ್ಳೆ ಹುಡುಗರಿಗೆ ಮೊಡವೆ ಆಗತ್ತಂತೆ.. ನನಗೂ ನಾಲ್ಕೈದು ಮೊಡವೆ ಆಗಿದೆ... ಯಪ್ಪಾ ಅದಿಕ್ಕೆ ಮೊದ್ಲು ಮನೆಗೋಗಿ ನಮ್ಮಜ್ಜಿ ಹತ್ರ ದೃಷ್ಟಿ ತೆಗಿಸ್ಕೋಬೇಕು..!! bye..!!