Sunday 28 April 2013


ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…

ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾ
ಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. ವಿದ್ಯಾ ಗುರುಗಳನ್ನೂ ಅವನು ಇವನು ಅಂತಾ ಮಾತಾಡಿಸೋ ವಿಧ್ಯಾರ್ಥಿಗಳಿಗೇನು ನಮ್ಮಲ್ಲಿ ಬರವೇ?
ಸರಿ ಪದಗಳನ್ನೇನೋ ಗಬ್ಬೇಬ್ಬಿಸಿದ್ದಾಯು,,! ಇನ್ನು ಗುರುವಿನ ಅರ್ಥವಾದರೂ ಅರ್ಥಬದ್ಧವಾಗಿ ಅರ್ಥವಾಗೋತರ ಇದೆಯಾ ಅಂತ ನೋಡಿದರೆ ಅಲ್ಲೂ ಕೂಡಾ ಅರ್ಥ ಅನರ್ಥವಾಗಿ ಅಪಾರ್ಥದ ಪಾತ್ರದೊಳU, ಪತ್ತರದ ಏಟು ತಿಂದ ಪತಂಗದ ತರ ಪತಪತಾ ಅಂತ ಬಿದ್ದು ಒದ್ದಾಡುವುದ ನೋಡಿದ ಕಣ್ಣುಗುಡ್ಡೆಗಳೂ ಸಹ ಜಿಗುಪ್ಸೆಗೊಂಡು ದಯಾಮರಣಕ್ಕೆ ಅರ್ಜಿ ಗುರಾಯಿಸಿದಂತಹ ಅನುಭವವಾದರೆ ಅದರಲ್ಲೇನು ತಪ್ಪಿಲ್ಲ ಅನ್ನಿಸುತ್ತದೆ. ಯಾಕಂದ್ರೆ ಮೊದಲೆಲ್ಲಾ ಗುರು ಅಥವಾ ಧರ್ಮಗುರು ಅನ್ನಿಸಿಕೊಳ್ಳಬೇಕಾದರೆ ತುಂಬಾ ನಿಷ್ಟೆ, ಅನುಷ್ಟಾನ, ಅಪಾರ ಜ್ಞಾನ, ಅಷ್ಟೇ ಮನೋಹಿಡಿತ, ಎಲ್ಲಾ ಆಸೆ-ಆಕಾಂಕ್ಷೆಗಳನ್ನ ನಿಗ್ರಹಿಸಿ ದೀಕ್ಷೆ ಪಡೆಯಬೇಕಾಗಿತ್ತು, ಅದರಂತೆ ನಡೆಯಬೇಕಾಗಿತ್ತು ಕೂಡಾ. ಆದರೇ ಇಂದು????
ಅವನ್ಯಾವನೋ ಗುರು ಅಂತೆ..! ಅವನ ಬಾಲವಿರದ ಹಿಂಬಾಲಕರೆಲ್ಲಾ ಬಲ್ಗೇರಿಯನ್ ದೆವ್ವ ಮೆಟ್ಗೊಂಡ ತರ ಎಗರಿ ಎಗರಿ ಕೂರ್‍ತಾರೆ, ಫಾರಿನ್ ಪಿಗರ್‌ಗಳನ್ನೇಲ್ಲಾ ಶಿಷ್ಯೆ ಮಾಡಿಕೊಂಡು, ಬಾಯ್ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತಾಡ್ಕೊಂಡು, ನಮ್ಮ ಸನ್ನಿ ಲಿಯೋನಿಗೂ ಏನೂ ಕಮ್ಮಿ ಇಲ್ಲದತರ ತಮ್ಮ ಅಗಾಧ ಶ್ರಮವನ್ನೆಲ್ಲಾ ಧಾರೆ ಎರೆದಿದ್ದಾರೆ ಎನ್ನುವ ’ಗುರು’ತರ ಆರೋಪದಲ್ಲಿ ಸಿಕ್ಕಾಕ್ಕೊಂಡು, ಆಗಾಗ ಜೈಲಿಗೆ ಹೋಗಿ ಬರೋದ್ರಲ್ಲೇ, ಕೋರ್ಟು-ಸ್ಟೇಷನ್ನು ಅಂತಾ ಅಲೆಯೋದ್ರಲ್ಲೇ ತಮ್ಮ ಅಮೂಲ್ಯ ಜೀವನವನ್ನ ’ಗುರು’ ಎನ್ನುವ ಪದ ಹಾಗೂ ನಂಬಿಕೆಯ ಜೊತೆಯೇ ಕಳೆಯುತ್ತಿರುವ ಕಾಮಿಸ್ವಾಮಿ ನಮಗ್ಯಾರಿಗೂ ಅಪರಿಚಿತನೇನಲ್ಲಾ..!
ಮತ್ತೊಬ್ಬ, ಗುರುಜೀ ಅಂತಾ ಹೇಳ್ಕೊತಾನೆ. ತನ್ನ ಹೊಟ್ಟೆಯನ್ನೇ ಬ್ರಂಹ್ಮಾಡ ಮಾಡ್ಕೊಂಡಿದಾನೆ. ಇರೊ ಬರೋ ಹೆಣ್ಮಕ್ಳ ಬಗ್ಗೆ ಬಾಯ್ತುಂಬಾ ಒಳ್ಳೋಳ್ಳೆ ಕರ್ಣಕಠೋರ ಅಣಿಮುತ್ತುಗಳನ್ನ ತೂಕಡಿಸುತ್ತಾ ಉದುರಿಸುವುದು ಇವನ ಚಾಳಿ. ಆಗ್ಗಾಗ್ಗೆ ಆಗದಿರುವ ಬಗ್ಗೆ ಹೇಳ್ಕೋತಾ ಎಲ್ಲರನ್ನು ಭಯಬೀಳಿಸುತ್ತಾ ಭವಿಷ್ಯ ಹೇಳೋದೇ ಇವನ ಕಾಯಕ. ದೇವಿ ಇವನ ಕನಸಲ್ಲಿ ಬರುತ್ತಾಳಂತೇ, ಏನೇನೋ ಹೇಳ್ತಾಳಂತೆ. ಜನ ನೋಡದಿದ್ದರೂ ದೂರದರ್ಶನದಲ್ಲಿ ಮಕತೋರಿಸೋ ಅದಮ್ಯ ಆಸೆ ಹೊಂದಿದ್ದು ’ಪೊಳ್ಳು ಮಾತುಗಳೇ ಹೊಟ್ಟೆ ತುಂಬಿಸುತ್ತವೆ, ಅದನ್ನು ಕೇಳಲೆಂದೇ ಜನರಿದ್ದಾರೆ’ ಎಂಬುದು ಇವನ ಬಲವಾದ ನಂಬಿಕೆ. ಅದಕ್ಕೆಂದೇ ರಿಯಾಲಟಿ ಶೋ ದಲ್ಲಿಯೂ ಬಾಡಿ ಬ್ರಂಹ್ಮಾಡ ತೊರಿಸುತ್ತಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡ್ಕೋಂಡು ಅವಾಗಾವಾಗ ಹೀರೊಯಿನ್ನ್ ಕೈಯಿಂದ ಮಸಾಜ್ ಮಾಡಿಸಿಕೊಳ್ಳೋ ಇವನು ಸಾಮಾನ್ಯ ಮನುಷ್ಯನೇ ಅಲ್ಲಾ ಅನ್ನೋದು ಅವನ ಬಗ್ಗೆ ತಿಳಿದವರ ಆಂಬೋಣ.
ಇಷ್ಟಕ್ಕೇ ಮುಗಿಯುವುಯದಿಲ್ಲ ಕಳ್ಳಗುರುಗಳ ಕರುಮಕಾಂಡ. ಇಲ್ಲಿ ಮತ್ತೊಬ್ಬನನ್ನು ಉದಾಹರಿಸಲೇ ಬೇಕು. ಅವನು ಕೂಡಾ ಗುರುವಂತೆ, ಸವಾಮಿಯಂತೆ..! ಅವನಾಟ ನೋಡಲು ನಮಗೆ ಎಲ್ಡಲ್ಲ-ನಾಲ್ಕೆಂಟು ಕಣ್ಣುಗಳು ಇದ್ದಿದ್ದರೂ ಶಾರ್ಟೇಜ್ ಬಿದ್ದಿತೇನೋ ಅನ್ನುವ ಗುಮಾನಿ ಕಾಡತ್ತೆ. ಟೀವಿಯಲ್ಲಿ ಠೀವೀಯಿಂದ ನಾಚಿಕೆಬಿಟ್ಟು ನಡೆದುಕೊಳ್ಳೋ ಆವಯ್ಯ ಯಾವ ಟೀಕೆಗೂ ಜಗ್ಗದ ಭಲೇ ನಾಟಕಕಾರ. ಆ ಮನುಷ್ಯ ಕುಂತರೇ ಕಾಳಿ ಅಂತೆ, ನಿಂತರೇ ಭದ್ರ್ರಕಾಳಿಯಂತೆ, ಎದೇ ಮೇಲೇ ತಕದಿಮಿ ಎಂದು ಕಾಳಿಯನ್ನೇ ಕುಣಿಸುತ್ತಾನಂತೆ. ಅವನೇನು ಕಾಳಿ ಆಂತಂದ್ರೆ ಅವನು ಸಾಕಿರೋ ಕೋಳಿ ಎಂದುಕೊಂಡಿದ್ದಾನೋ ಹೇಗೇ? ಕಾಂಟ್ರವರ್ಸಿ **ಮಗ ಎಂದು ಬೇರೆಯವರು ಹೇಳುತ್ತಿದ್ದರೂ, ತಲೆಕೆಡಿಸಿಕೊಳ್ಳದೇ, ನಾಚಿಕೆಪಟ್ಟುಕೊಳ್ಳದೇ ತನ್ನ ಕಾರ್ಯದಲ್ಲಿ ಮುಳುಗೇಳುತ್ತಾ, ’ನಾನೂ ಸೂಪರ್ರೂ ರಂಗಾ….’ ಎಂದು ಹಾಡುತ್ತಾ, ಹುಡುಗಿಯರ ಕೈ ಹಿಡಿದು ಕುಣಿಯುವುದರಲ್ಲೇ ಇವನು ತಲ್ಲೀನ.
ಸುದ್ದಿವಾಹಿನಿಯೊಂದರಲ್ಲಿ ಮಕಕ್ಕೆ ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡು, ಗಳಗಳನೇ ಅತ್ತು ಕಾವಿ ಕಳಚುತ್ತೇನೆಂದು ಹೇಳಿಕೆ ಕೊಟ್ಟು ಕಳೆದುಹೋಗಿದ್ದ ಈ ಕೋಳೀ ಸ್ವಾಮಿ ಮತ್ತೆ ಗುರು ಹೆಸರಲ್ಲಿ ಮಕ ತೊರಿಸುತ್ತಿರುವುದು ನೋಡಿ ಬ್ಯಾಲೆನ್ಸ ಉಳಿದ ನಮ್ಮೆಲ್ಲರ ಜನ್ಮಗಳೆಲ್ಲಾ ಪಾವನವಾದವು. ಅವನು ಅವಕಾಶವಾದಿಯಂತೆ, ಕ್ಯಾಮರಾ ಮುಂದೆಯೇ ಆಟವಾಡುತ್ತಾನಂತೆ. ಮೊದಲಿನಂತೇ ನಾಟಕ, ನೃತ್ಯ ಮಾಡಿಕೊಂಡು ಇದ್ದ ಹೊಟ್ಟೆತುಂಬಿಸಿಕೊಲ್ಲುವುದ ಬಿಟ್ಟು ಗುರುವಾಗು ಎಂದು ಹೇಳಿದವರಾರೋ? ಇದಕ್ಕೆ ಸರಿಯಾಗಿ ಗುರು ಎಂದು ಹೇಳಿಸಿಕೊಂಡ ಮೇಲೂ ಆ ಸ್ಥಾನಕ್ಕೆ ಕಳಂಕ ತರುತ್ತಿರುವುದು ನಿಜಕ್ಕೂ ಖೇಧಕರ.  
ಗುರುವು ಸಮಾಜೋದ್ಧಾರಕ್ಕೆ ಆಶಾವಾದಿಯಾಗಿರಬೇಕೇ ಹೊರತು ಅವಕಾಶವಾದಿ ಖಂಡಿತ ಸಲ್ಲದು. ಚೋರ ’ಗುರು’ವಾಗಿದ್ದುಕೊಂಡು ಚಮಚಾಗಿರಿಯಲ್ಲಿಯೇ ಬಾಳು ಸವೆಸುವ ಇವರ ಬಿಕನಾಸಿ ಬಾಳಿಗೆ ಬತ್ತಿ ಇಟ್ಟು, ಕಷ್ಟಪಟ್ಟು ದುಡಿಯಲಿ. ಪೀಠ ರಾಜಕೀಯ ಎಲ್ಲಾ ಬದಿಗಿಟ್ಟು ಜನರ ಜೊತೆ ಸ್ವಂದಿಸುವ, ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಮಾಡಲಿ, ಎಲ್ಲಕ್ಕಿಂತ ಮೊದಲು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಿ. ಕರುಮಕಾಂಡದ ಕಳ್ಳಗುರುಗಳೇ ತುಂಬಿರುವ ಈ ನಮ್ಮ ಸಮಾಜದಲ್ಲಿ ನಿಜವಾಗಿಯೂ ಆದರ್ಶವಾಗಿರುವ ಗುರು ಇಲ್ಲವೆಂದಲ್ಲ. ಇದ್ದೇ ಇರುತ್ತಾರೆ. ಆದರೆ ಅವರು ಪಳಪಳ ಹೊಳೆವ ತಗಡಿನಂತಲ್ಲ. ಯಾವುದೇ ಮಿಶ್ರಣ ಮಾಡಿರದ ಶುದ್ದ ಚಿನ್ನದಂತೆ. ಅದೇನೇ ಇರಲಿ, ಕೆಲವು ಖದೀಮರಿಂದ, ಕಳ್ಳಗುರುಗಳಿಂದ ಎಲ್ಲಾ ಧಾರ್ಮಿಕ, ಸಾಮಾಜಿಕ ’ಗುರು’ ಪದವೇ ಸುಟ್ಟು ಕರಕಲಾಗುತ್ತಿರುವುದು ಮಾತ್ರ ವಿಪರ್ಯಾಸ, ಇದೇ ಸಧ್ಯದ ವಾಸ್ತವಿಕ.
-ಫ್ಲಾಪೀಬಾಯ್

No comments:

Post a Comment