Tuesday 27 October 2015

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ

***
ಫ್ಲಾಪಿಬಾಯ್- ಬಾಬಾ ನೀವ್ ಅಘೋರಿಯಾಗಿದ್ರೂ ಮಾಂಸ ತಿನ್ನೋದು ನೋಡೇ ಇಲ್ಲ..! ನೀವ್ ತಿನ್ನೊಲ್ವಾ ಮಾಂಸಾಹಾರಗಳನ್ನ? ಕುಡಿಯೊಲ್ಲವಾ ಸುರಾಪಾನವನ್ನಾ?
ಲಗೋರಿಬಾಬಾ- ಅಯ್ಯೋ ಹುಚ್ಚಾಪ್ಪಾ? ನನಗೆ ಅನಿವಾರ್ಯವಲ್ಲದಿರುವಾಗ ತಿನ್ನೋದಾದ್ರೂ ಏಕೆ? ಕುಡಿಯೋದಾದ್ರೂ ಏಕೆ? ಬದುಕಲು ಆಹಾರ ಬೇಕು. ಅದಕ್ಕಾಗಿಯೇ ಸಸ್ಯಗಳಿವೆ. ಅವುಗಳ ಕಡಿದ್ರೆ ಮತ್ತೆ ಚಿಗುರಿಸಬಹುದು. ತಿಂದರೂ ಮತ್ತೆ ನೆಟ್ಟು ಹುಟ್ಟಿಸಬಹುದು. ಆದ್ರೆ ಮಾಂಸ ತಿಂದು ಮತ್ತೆ ನಮಗೆ ಆ ಜೀವಿಗಳಿಗೆ ಜೀವ ಕೊಡಕ್ಕಾಗ್ತದಾ? ಅದ್ಕೆ ತಿನ್ನೋದ್ ಬಿಟ್ಟೆ!
ಫ್ಲಾಪಿಬಾಯ್- ಓಹ್ ತಡಿರಿ ಘಮ್ ಅಂತಾ ಮಸಾಲ ಸ್ಮೆಲ್ ಬರ್ತಿದೆ... ಆಮೇಲೆ ಬರ್ತೆ
***
ಬೆಳ್ಬೆಳಿಗ್ಗೆ ತಿಂಡಿತಿನ್ನೋಕೆ ಅಂತಾ ನಮ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಪಟಾಲಮ್ಮನ ಹಟ್ಟಿ ಹೋಟೆಲ್ ಕಡೆ ಹೋದ್ರು.
"ಪಟಾಲಮ್ಮ ತಿಂಡಿ ಏನಿದೆ? ಬೇಗ ತಾ.. ಹಸಿವಾಗ್ತಿದೆ" ಆತುರ ಪಡಿಸಿದ ಫ್ಲಾಪಿಬಾಯ್.
"ದೋಸೆ ಬಿಟ್ರೆ ಬೇರೇನಿಲ್ಲ.. ಹೇಳಿ ಯಾವ ದೋಸೆ ಬೇಕು? ಮಸಾಲೆ, ಪ್ಲೇನ್, ಖಾಲಿ, ಆನಿಯನ್...??" ಪಟಾಲಮ್ಮ ಕೈಯಲ್ಲಿದ್ದ ದೋಸೆ ಹಿಟ್ಟು ಸೌಟು ಅಲ್ಲಾಡಿಸ್ತಾ ಕೇಳಿದಳು.
"ನಂಗೆ ತೂತಿಲ್ಲದೇ ಇರೋ ಯಾವ ದೋಸೆಯಾದ್ರೂ ಸರಿ" ಅಂದ ಲಗೋರಿಬಾಬಾ.
"ಹಾಗಿದ್ರೆ ಅದು ನಮ್ಮಲ್ಲಿಲ್ಲ. ನಮ್ಮಲ್ಲಿರೋ ಎಲ್ಲಾ ದೋಸೆಗೂ ತೂತಿರ್ತದೆ. ಫ್ಲಾಪಿ ಅಣ್ಣಾ ದೋಸೆಗೆ ಯಾಕೆ ತೂತಿರ್ತದೆ ಅಂತ ಹೇಳು ನೊಡುವ? ಯಾವಾಗಲೂ ಏನಾದ್ರೂ ಸಂಸೋಧನೆ ಮಾಡ್ತಾ ಇರ್ತೀಯಲ್ಲ.. ಅದ್ಕೆ ಕೇಳಿದೆ!" ಕುತೂಹಲಿಯಾಗಿದ್ದಳು ಪಟಾಲಮ್ಮ.
"ಅಯ್ಯೋ ಪಟಾಲು ಅದಕ್ಕೆ ಕಾರಣ ಇಷ್ಟೇ, ನೀನು ಕಲಿಸಿ ಇಟ್ಟ ದೋಸೆ ಹಿಟ್ಟು ಈಸ್ಟ್ ಮತ್ತು ಬ್ಯಾಕ್ಟೀರಿಯಾದ ಸಹಾಯದಿಂದ ಹುಳಿಯಾಗಿರ್ತದೆ. ಅದನ್ನ ಕಾದ ಹೆಂಚಿನ ಮೇಲೆ ಹಾಕ್ದಾಗ ಅಂಗಾರಾಮ್ಲ ಅಥವಾ ಕಾರ್ಬನ್ ಡೈ ಆಕ್ಸೈಡ್ ಉಂಟಾಗ್ತದೆ. ಆ ಅನಿಲ ಹೊರಗೋಗುವಾಗ ಆ ಸ್ಥಳದಲ್ಲಿ ರಂಧ್ರಗಳುಂಟಾಗ್ತದೆ ಅಷ್ಟೇ!" ಉತ್ತರಿಸಿದ ಫ್ಲಾಪಿಬಾಯ್
"ಓಹ್ ಹಂಗಾ ವಿಷ್ಯ, ಗೊತ್ತಾತು ಬಿಡು, ನಿಂಗಿವತ್ತು ಒಂದು ದೋಸೆ ಫ್ರೀ.." ಎನ್ನುತ್ತಾ ಕಾದ ಹೆಂಚಿನ ಮೇಲೆ ಚೋರ್ ಎಂದು ನೀರಾಕಿದಳು ಪಟಾಲಮ್ಮ.
***
ಫ್ಲಾಪಿಬಾಯ್- ಉಪೇಂದ್ರ ನಾನು, ನೀನು ಅಂತೆಲ್ಲಾ ಕ್ಯಾರೆಕ್ಟರ್ ಸೃಷ್ಟಿ ಮಾಡಿ ಹಿಟ್ ಆದ.. ಅದೇ ತರ ದೇವ್ರು ಕೂಡಾ ಒಂದು ಸೂಪರ್ ಕ್ಯಾರೆಕ್ಟರ್ ನಮ್ಮಗಳ ಮಧ್ಯೆ ಸೃಷ್ಟಿ ಮಾಡವ್ನೆ ಯಾರು ಅಂತಾ ಗೊತ್ತಾ ಬಾಬಾ?
ಲಗೋರಿಬಾಬಾ- ಎಷ್ಟೋಂದ್ ಜನ ಇದಾರೆ, ಒಬ್ರುಗಿಂತ ಒಬ್ರು ಮಸ್ತುಕಲಂದರ್ ತರದವು. ಯಾರು ಅಂತಾ ಹೇಳಲಿ?
ಫ್ಲಾಪಿಬಾಯ್- ಇನ್ಯಾರು ನಮ್ಮ ಭಗವಾನು... ಕಾಂಟ್ರಾವರ್ಸಿ ಸ್ಟೇಟ್ಮೆಂಟ್ ಕೊಟ್ಟೆ ಸಖತ್ ಫೇಮಸ್ ಆಗೋದ್ರು ಅವ್ರೀಗ. ಕಲಿಯುಗದ ಕರ್ಮಕಾಂಡ ನೋಡಿ ನಮ್ಮ ಜನ ಸಾಮಾನ್ಯರು 'ಹೇ ಭಗವಾನ್' ಅನ್ನೋ ಹಾಗೂ ಇಲ್ಲ ಪರಿಸ್ಥಿತಿ.. ಪಾಪ ಅನ್ನಿಸ್ತಿದೆ. 
ಲಗೋರಿಬಾಬಾ- ಹೌದು ಫ್ಲಾಪಿ, ಧರ್ಮಗ್ರಂಥ ಸುಡ್ತೀನಿ ಅಂತಾ ಹೇಳಿ, ಅದಕ್ಕೆ ಸರಿಯಾದ ಸಮಜಾಯಿಷಿಯನ್ನೂ ಕೊಡದೇ ಜಾರಿಕೊಳ್ತಾ ಇರುವ ಭಗವಾನ್ ಪಕ್ಕಾ ನಾಸ್ತಿಕ, ಅದಕ್ಕೆ ಅವನ ಹೆಸರನ್ನ ಸೈತಾನ್ ಅಂತಾ ಬದಲಾಯಿಸಿಕೊಳ್ಳಬೇಕಂತ ಕೆಲವರು ಗಲಾಟೆ ಮಾಡ್ತಾ ಇದಾರಂತೆ ಹೌದಾ??
ಫ್ಲಾಪಿಬಾಯ್- ಬಾಬಾ ಮೆತ್ತಗೆ ಯಾರ್ಯಾದ್ರೂ ಕೇಳಿಸಿಕೊಂಡು ಬಿಟ್ಟಾರು ಕಂಡೋರ್ ವಿಷ್ಯ ನಮಗ್ಯಾಕೆ ಅಲ್ವಾ?
***
ಲಗೋರಿಬಾಬಾ- ಕೆಲವು ಮಕ್ಕಳು ಲಘು ಬುದ್ಧಿಮಾಂದ್ಯರು. ಇಂತವರು ಎಲ್ಲರಂತೆ ಕಲಿಯಲಾರರು. ಆದ್ರೆ ಕುಶಲತೆಯ ಕೆಲಸದ ತಂತ್ರಗಳನ್ನು ತಿಳಿಯಬಲ್ಲರು. ನಮ್ಮ ಪ್ರಾಚೀನ ಯೋಗ, ಆಯುರ್ವೇದ ಪದ್ಧತಿಯಿಂದ ಖಂಡಿತವಾಗಿ ಇವರೂ ಸ್ವಾವಲಂಭನೆ ಜೀವನ ನಡೆಸಬಹುದು ಅನ್ನೋದು ನನ್ನ ಬಲವಾದ ನಂಬಿಕೆ."
ಫ್ಲಾಪಿಬಾಯ್- "ಹೌದು ಬಾಬಾ ಐಕ್ಯೂ ಮಟ್ಟ 35 ಇರೋವ್ರಿಗೆ ಜೊತೆಗೊಬ್ರು ಇರಲೇಬೇಕು. ಅಂತವರಿಗಾಗಿ ಒಂದು ಆಶ್ರಮ ಕಟ್ಟಿಸಬೇಕು ಅನ್ನೋ ಆಸೆ ಇದೆ ನಂಗೆ!"
ಲಗೋರಿಬಾಬಾ- "ಸರ್ವ ಸಿದ್ಧಿ ಪ್ರಾಪ್ತಿರಸ್ತು"
***
"ಬಾಬಾ ನೀವು ಮಾನಸಿಕವಾಗಿ ಇಷ್ಟು ಕೂಲಾಗಿರ್ತಿರಲ್ಲಾ ಹೇಗೆ ಸಾಧ್ಯ ಅದು?" ಪ್ರಶ್ನೆ ಎಸೆದ ಫ್ಲಾಪಿಬಾಯ್
"ಭಾವನಾತ್ಮಕ ಬುದ್ಧಿಮತ್ತೆ ಅಥವಾ ನಿಮ್ ಭಾಷೆಲಿ ಎಮೊಶನಲ್ ಇಂಟೆಲಿಜೆನ್ಸ್ ಅಂತಾ ಏನಂತಾರೋ ಅದನ್ನು ನಾನು ಹಿಂಬಾಲಿಸುತ್ತಿದ್ದೇನೆ ಅಷ್ಟೆ. ವಿದುರ ನೀತಿಯಲ್ಲಿಯೂ ಅದೇ ಇದೆ. ಪರಿಪೂರ್ಣನಾಗಬೇಕೆಂದುಕೊಂಡವ ಆಪತ್ತಿಗೆ ದುಃಖಿಸದೇ, ಸಮಸ್ಯೆಗೆ ಪ್ರಶಾಂತವಾಗಿ ಆಲೋಚಿಸುತ್ತಾನೆ. ಮಾಡುವ ಕೆಲಸವನ್ನ ಎಚ್ಚರಿಕೆಯಿಂದ ಮಾಡಿ ಯಶಸ್ಸು ಸಾಧಿಸುತ್ತಾನೆ." ಅಂದ ಲಗೋರಿಬಾಬಾ.
ಫ್ಲಾಪಿಬಾಯ್- "ಲವ್ ಯು ಬಾಬಾ smile emoticon "

***
"ಛೆ..! ಅಗೇನ್ ಫ್ಲಾಪ್.. ಹೇಗಾದ್ರೂ ಮಾಡಿ ಕರ್ನಾಟಕವನ್ನ ಕತ್ತಲೆ ಭಾಗ್ಯದಿಂದ ಮುಕ್ತ ಮಾಡೋಣ ಅಂತ ಹೊಸ ಹೊಸ ಪ್ರಯೋಗ ಮಾಡ್ತಾ ಇದ್ರೆ ಎಲ್ಲವೂ ಕೈ ಕೊಡ್ತಾ ಇದ್ಯಲ್ಲಪ್ಪಾ..!" ಹಳಹಳಿಸುತ್ತಾ ಬೇಸರದಿಂದ ಕುಳಿತ ಫ್ಲಾಫಿಬಾಯ್.
"ಏಯ್ ಬಾರೋ ಇಲ್ಲಿ!" ಕರೆದ ಲಗೋರಿಬಾಬಾ
"ಏನು ಬಾಬಾ ಕರೆದದ್ದು?"
"ನೋಡಿಲ್ಲಿ ಏನು ಕಾಣಿಸ್ತಿದೆ ಹೇಳು?" ಇರುವೆಗಳ ಸಾಲನ್ನು ತೋರಿಸುತ್ತಾ ಹೇಳಿದ ಲಗೋರಿಬಾಬಾ.
"ಇರುವೆಗಳು ಮರಳಕಣವನ್ನ ಹೊತ್ತು ಸಾಗುತ್ತಿವೆ. ಇದರಿಂದ ಹುತ್ತ ಕಟ್ಟುತ್ತವೆ."
"ನೋಡು ಫ್ಲಾಪಿ, ಇಷ್ಟು ಚಿಕ್ಕ ಇರುವೆಗಳೇ ಗಟ್ಟಿ ಮುಟ್ಟಾದ ಮನೆ ನಿರ್ಮಿಸಿಕೊಳ್ತಾವೆ ಅಂದ್ಮೇಲೆ ನಾವು ಎಲ್ಲಾ ಇದ್ದೂ ಆಗೊಲ್ಲ ಅಂತ ಹೇಳೋದು ಸರಿಯೇ? ನಮ್ಮಲ್ಲಿ ಅಡಗಿರುವ ಶಕ್ತಿಯ ಬಗ್ಗೆ ನಮಗೇ ಗೊತ್ತಿರಲ್ಲ. ಆಗಲ್ಲ ಅನ್ನೋ ಭ್ರಮೆಯಿಂದ ಹೊರಗೆ ಬಾ. ಆಗ ಮಾತ್ರ ಅದ್ಭುತವಾದುದನ್ನು ಸಾಧಿಸಬಹುದು." ಕೂಲಾಗಿ ಹೇಳಿದ ಲಗೋರಿಬಾಬಾ.
"ಹೌದಲ್ವಾ ಬಾಬಾ, ಥಾಂಕ್ಯೂ ನನ್ನೊಳಗಿನ ಶಕ್ತಿಯನ್ನು ಆಕ್ಟಿವ್ ಮಾಡಿದ್ದಕ್ಕೆ! ನೋಡ್ತಾ ಇರಿ ನಾನು ಇನ್ನೂ ಏನೇನ್ ಮಾಡ್ತೀನಿ ಅಂತಾ!" ಅತ್ಯುತ್ಸಾಹದಿಂದ ಕೆಲಸದಲ್ಲಿ ನಿರತನಾದ ಫ್ಲಾಪಿಬಾಯ್.
***


Monday 26 October 2015

ಫ್ಲಾಪಿ ಕಥೆ
ಹೆಸರಾಂತ ಕಂಪನಿಯಲಿ ಕೆಲಸ ಸಿಕ್ಕ ಖುಷಿ ಅವನಿಗೆ. ಅವರು ಕೊಟ್ಟ ಐಡಿ ಕಾರ್ಡ್ ಕಂಪನಿ ಅವಧಿ ಮುಗಿದ ಮೇಲೂ ಧರಿಸಿರುತ್ತಿದ್ದ. ಕಂಪನಿ ಕೊಟ್ಟ ಟೀ ಶರ್ಟ್, ಬ್ಯಾಗು ಇತ್ಯಾದಿಯೇ ಧರಿಸಿರುತ್ತಿದ್ದ.. ಎಲ್ಲರಿಗೂ ತಿಳಿಯಲೆಂದು ಆಶಿಸಿದ್ದ..
ಪಾಪ ಅವನಿಗೆ ತಿಳಿದೇ ಇರಲಿಲ್ಲ, ಕಂಪನಿಯವರು ಅವನ ಪ್ರತಿಭೆಯ ಅತ್ಯಲ್ಪ ಹಣಕೊಟ್ಟು ಕೊಂಡಿದ್ದರು, ಜೊತೆಗೆ ಪುಕ್ಕಟೆಯಾಗಿ ಇಂತವರಿಂದ ಮಾರ್ಕೆಟಿಂಗ್ ಕೆಲಸವನ್ನೂ ಮಾಡಿಕೊಂಡಿದ್ದರು..!
ಫ್ಲಾಪಿ ಕಥೆ
ಆ ಮಹಿಳೆ ತನ್ನ ಹಮ್ಮುಬಿಮ್ಮಿನಿಂದ ಸಮಾಜದಲ್ಲಿ ಎಲ್ಲರ ಕಣ್ಣುಕುಕ್ಕುತ್ತಾ ಉದ್ರೇಕಿಸುತ್ತಿದ್ದಳು.. ತನ್ನನ್ನು ತಾನು ಸಂಭಾಳಿಸಿಕೊಳ್ಳಲಾಗದ ಕೆಲವರು ಆಕೆಯ ಬೆನ್ನು ಬಿದ್ದರು. ಉದ್ರೇಕ ತಣಿಸಿಕೊಳ್ಳಲು ಹವಣಿಸಹತ್ತಿದರು. ಆಕೆಯ ಮೇಲಾದ ದಾಳಿಗೆ ಅವಳು ಇಡೀ ಸಮಾಜವನ್ನೇ ದೂರಿದಳು.
ಅವಳ ಪರ - ವಿರೋಧಿ ಗುಂಪುಗಳು ಹುಟ್ಟಿಕೊಂಡವು. ಇದೀಗ ಸಮಾಜದೆಲ್ಲೆಡೆ ಬೇರೆ ಬೇರೆ ಪಂಗಡಗಳಾಗಿ ಅವರವರಲ್ಲೇ ಘರ್ಷಣೆ ನಡೆಯಹತ್ತಿದೆ..!
ಎಲ್ಲರೂ ಅಲ್ಲೀಗ ಕೆಲಸ ಮಾಡುವುದ ಬಿಟ್ಟು ಭಂಗಿ ನೆಡುತ್ತಿದ್ದಾರೆ..!

Wednesday 29 April 2015

ಫ್ಲಾಪಿ ಕಥೆಗಳು
ಮಂಚವೂ ಕಾಯುತಿದೆ
ಅವರಿಬ್ಬರ ಮುಲುಗಾಟಕೆ..
ಹೆಕ್ಟಿಕ್ ಜೀವನದಿ
ಅವರಿಬ್ಬರಿಗೂ ಪ್ರೀತಿ ಬತ್ತಿದೆ..!
******
ಹಗಲಿಡೀ ಕುರೂಪಿಯೆಂದು
ಹೆಂಡತಿಯ ಮೂದಲಿಸುತ್ತಿದ್ದ..!
ರಾತ್ರಿ ಮಾತ್ರ ಎಲ್ಲಾ ಮರೆತು
ಎಡೆಬಿಡದೇ ಚುಂಬಿಸುತ್ತಿದ್ದ..!
******
ಬಾವಿಯನ್ನೇ ನೋಡಿರದಿದ್ದ ಸಿಟಿಯ ಮಾಡ್ರನ್ ಬೆಡಗಿ,
ಹಳ್ಳಿಗೆ ಬಂದಾಗ ಬಗ್ಗಿ ಬಗ್ಗಿ ಬಾವಿಯನ್ನು ನೋಡುತ್ತಿದ್ದಳು..!
ಡೀಪ್ ನೆಕ್ಕಿನ ಅವಳ ಗಿಡ್ಡ ಉಡುಪನ್ನೇ ನೋಡಿರದ ಹಳ್ಳಿಯ ಪಡ್ಡೆಗಳು 
ಅವಳು ಬಾವಿಗೆ ಬಗ್ಗುವುದನ್ನೇ ಕಾಯುತ್ತಿದ್ದರು..!!
******
ಹಾಯ್ಕು ತಮ್ಮಾ ಕೊಂಯ್ಕು
ಬೆರಳತಾಕಿ
ರೋಮಾಂಚಿತವಾಯ್ತದು
ಅವಳ ತುಟಿ
ಚಚ್ಚಿ ಲೈನುಗಳು

ಆ ಸುಂದರಿಯ
ಗುಳಿ ಕೆನ್ನೆಗೆ
ಈ ನನ್ನ ತುಟಿ ತಾಕುತ್ತಿದ್ದಂತೆ,
ಆವರಿಸಿತು ಸುತ್ತಲೂ
ಗನಘೋರ ಕತ್ತಲು..!
******
ಆಕೆಯ ಹೊಕ್ಕುಳಲ್ಲಿ ಬಿದ್ದ
ದ್ರಾಕ್ಷಿಯ ಹಣ್ಣಿಗೂ ಈಗ
ಹೆಣ್ಣಾಗುವ ತವಕ..!
******
ಹುಡುಗರ ಲುಂಗಿನೋಡಿ
ಅಸೂಯೆ ಪಟ್ಟಿತೊಂದು
ಲೆಗ್ಗಿಂಗು..!
ನನಗೆ ಮಾತ್ರವೇ ಯಾಕಿಲ್ಲಿ
ಉಸಿರುಗಟ್ಟಿಸುವ
ಪನಿಶಿಂಗು..!!
******
ಆಗ್ರಾದ ಮಹಲಿಗೂ
ರೋಮಾಂಚಿತವಾಗದ
ಆತನ ಮನ ಕದಡಿದ್ದು-
ಆಕೆಯ ಗಾಗ್ರಾ ಮತ್ತು
ಉಬ್ಬು ತಗ್ಗುಗಳು..!
******
ನಾನವಳ ನೋಡುತ್ತಿದ್ದೆ,
ಬೈದಳವಳು
'ಕಮೀನೇ!'
ನಾನಂದೆ,
'ಹೌದು! ನಿನ್ನ ಡ್ರೆಸ್ಸು
ಯಾವಾಗಲೂ
ಮಂಡಿಗಿಂತಾ ಕಮ್ಮೀನೇ!'
******
ಆಕೆ ತರುಣಿ
ಈತ ಮುದುಕ
ಆಕೆಯೆದೆಯ ಒತ್ತಿ ತಿಕ್ಕಿದ,
ತುಟಿಗೆ ತುಟಿ ಒತ್ತಿದ್ದ
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
..
.
.
.
.
.
.
.
.
ಆದರೆ ಅವರ ಮನದಿ
ಕಲ್ಮಶವಿಲ್ಲ..
ನೀರಲ್ಲಿ ಬಿದ್ದ ಅವಳ
ಬದುಕಿಸಲು
ಅದು ಅನಿವಾರ್ಯ..!

Thursday 23 April 2015

ಫ್ಲಾಪಿ ಕಥೆ

ಮದುವೆಯ ಮನೆಯಲ್ಲಿ ದುಬಾರಿ ಪಟ್ಟೆಯನ್ನುಟ್ಟು ಚೆಂದವಾಗಿ ಕಾಣುತ್ತಿದ್ದ ಮಹಿಳೆಯರೆಲ್ಲಾ ತಮ್ಮ ಮನೆಯಲ್ಲಿ ಹಳೇ ನೈಟಿಯನ್ನುಟ್ಟು ಚಿಂದಿಯಾಗಿ ಇರುತ್ತಿದ್ದರು..!
ಆಡಂಬರದ ತೋರಿಕೆಯ ಜೀವನ ನಡೆಸುತ್ತಿದ್ದವರೆಲ್ಲಾ ಸರಳತೆಯನ್ನು ಕಡೆಗಣಿಸಿದ್ದರು..!
****

ಫ್ಲಾಪಿ ಕಥೆ
ಅಪ್ಪನೊಟ್ಟಿಗೆ ಹೋಗುವಾಗ ಬೈಕಿನ ಹಿಂದೆ ಮಾರುದ್ಧ ದೂರ ಕುಳಿತಿದ್ದ ಬಾಲಕಿ
ತಲೆ ತಗ್ಗಿಸಿ ಲೋಕದ ಪರಿವೆಯಿಲ್ಲದೆ ಮೊಬೈಲಿನಲ್ಲಿಯೇ ಮುಳುಗಿದ್ದಳು.!
ಇನಿಯನೊಟ್ಟಿಗೆ ಹೋಗುವಾಗ ಮಾತ್ರ ಅವನನಪ್ಪಿಕೊಂಡು ಮೊಬೈಲನ್ನೇ ಮರೆತಿದ್ದಳು..!!

****
Self ಇ
ನಾ ಮಾಡುವ
ಪ್ರತಿ ಹೊಸ
ಸಂಶೋಧನೆಗಳೂ,
ಅನ್ವೇಷಣೆಗಳೂ
ನನ್ನಾತ್ಮೀಯರಿಗೆ
ಹುಚ್ಚು ಸಾಹಸಗಳೇ!
ವಾದ ಮಾಡುವಂತಿಲ್ಲ..
ತಿಳಿಸಿ ಹೇಳುವಂತಿಲ್ಲ..
ನಾನೀಗ ಮೌನಿ..
ಕಾಲವೇ ಉತ್ತರಿಸಲಿ

*****

Self ಇ
ಕಲಿಕೆಯ ಜೀವನದಲಿ
ನೂರೆಂಟು ಪಾಠಗಳು
ಕಲಿಯುವ ಭರದಲ್ಲಿ
ಬರಗೆಟ್ಟ ಕನಸುಗಳು
ಕನಸುಗಳ ಬೆನ್ನತ್ತಿರುವಾಗ
ಸಾವಿರಾರು ಸಮಸ್ಯೆಗಳು
ಬಿಡಿಸುತಾ ಸಾಗುವುದೇ
ಜೀವನದ ಸತ್ಯಗಳು..!

*****
ಫ್ಲಾಪಿ ಕಥೆ
ಅಕ್ಷಯ ತೃತೀಯದ ದಿನದಂದು ಕೊಂಡಿದ್ದೆಲ್ಲಾ ಅಕ್ಷಯವಾಗುವುದೆಂದು ಆತ ಸಾಲ ಸೋಲ ಮಾಡಿ ಚಿನ್ನಗಳ ಕೊಂಡುಕೊಂಡ. ದಿನಗಳು ಉರುಳಿತು. ಸಾಲದ ಹೊರೆ ಹೆಚ್ಚಿ ಹೊಸ ಚಿನ್ನಗಳ ಜೊತೆ ಹಳೆ ಚಿನ್ನವೂ ಕ್ಷಯವಾಯ್ತು. ಅಕ್ಷಯವಾಗುತ್ತೆಂಬ ಸುಳ್ಳು ಸೃಷ್ಟಿ ಮಾಡಿದ ಮಾಡಿದ ವ್ಯಾಪಾರಿ ಮೀಸೆ ಅಡಿಯಲ್ಲಿ ನಗುತ್ತಿದ್ದ. ಅಕ್ಷಯ ತೃತೀಯ ದಿನದಂದು ದಾನ ಮಾಡಿ ಎಂಬ ಸಾರುತ್ತಿದ್ದ ವ್ಯಕ್ತಿ ನಿರ್ಲಕ್ಷಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ.


Monday 20 April 2015

ಮಿಸ್ಟರ್ ಎಕ್ಸ್ ಚಿತ್ರದ ಬಗ್ಗೆ ನನ್ನ ರಿವ್ಯೂನ ವ್ಯೂ ಮಾಡಲು http://sirsi.info/movies/mr-x-hindi-movie-review/ ಲಿಂಕ್ ಉಪಯೋಗಿಸಿ

ಖಾಲಿ ಪೀಲಿ ಲೈನು
ಸುಂದರ ಹಲ್ಲುಗಳ
ತರುಣಿಯ ನೋಡಿ
ಫಿದಾ ಆಯ್ತು ನನ್ನ ಮನ..
ದಾಳಿಂಬೆ ಸಾಲುಗಳಂತ ಅವಳ
ಬಿಳಿ ದಂತಪಂಕ್ತಿಯ ನೋಡುತ,
ಮರೆತೇ ಹೋದೆ ನಾ ಈ ಜಗವ..
ಹಲ್ಲು ನೋಡಿ ಮರುಳಾದೆ..
ಹಾರ್ಟು ಕೊಟ್ಟು ಕಳೆದೋದೆ..
ಜೀವನವೆಲ್ಲಾ ಅವಳ ಜೊತೆಯೇ ಕಳೆಯಬೇಕು,
ಅನ್ನುವಷ್ಟರಲ್ಲಿ ಗೊತ್ತಾಯ್ತು...
ಅವಳದು ಕಟ್ಟಿಸಿದಾ ಹಲ್ಲು..
ಹುಳುಕು ಹಲ್ಲುಗಳ ಮುಚ್ಚಿಟ್ಟ ಸೊಲ್ಲು..
ಹೃದಯ ಒಡೆದೋಯ್ತು..
ಆಸೆ ಕಮರೋಯ್ತು..
ಸುಂದರ ಹಲ್ಲಿನವರಿಗಿಂತ
ಹಲ್ಮುರುಕಿಯರೇ ಬೆಟರೆಂಬ
ಸತ್ಯ ಅಂದೇ ನನಗೆ ಅರಿವಾಯ್ತು..
ಅಂದಿನಿಂದ ಇಂದಿಗೂ
ಹಲ್ಮುರುಕಿಯರೇ ಚೆಂದ,
ಹೃದಯ ಮುರುಕಿಯರಿಗಿಂತ..!

ಚಚ್ಚಿ ರೋದನೆ
ಕನಸಿನಲ್ಲಿ ಕಂಡ ಸುಂದರ
ಚೈನೀಸ್ ಚೆಲುವೆಗಾಗಿ
ದಾಲಿ ಪಟ್ಟಣಕ್ಕೆ ದಾಳಿಯಿಟ್ಟೆ..
ಊರ ತುಂಬೆಲ್ಲಾ ಹುಡುಕಿದೆ..
ಗಲ್ಲಿಗಲ್ಲಿಯಲೂ ತಡಕಿದೆ..
ಕೊನೆಗೂ ಸಿಕ್ಕಳು ಆ ಚೆಲುವೆ,
ಕಾರ್ನರ್ ಅಂಗಡಿಯಲಿ ಜಿರಳೆ ತಿನ್ನುತ್ತಿದ್ದಳು..
ಇನ್ನೇನು ಆಲಿಂಗನವೊಂದೇ ಬಾಕಿ,
ಕಣ್ಣು ಕಣ್ಣು ಬೆರೆತಾಯ್ತು..
ಮೈ ಮನಗಳು ಸೇರಾಯ್ತು..
ಅಷ್ಟರಲ್ಲೊಂದು ಆಘಾತ..
ಆ ನನ್ನ ಚೆಲುವೆಗೆ ಹುಬ್ಬುಗಳೇ ಗೋತ..
ಹುಬ್ಬಿಲ್ಲದ ಹುಡುಗಿಯ
ಹಗ್ ಮಾಡಬೇಡೆಂದು
ಅಶರೀರವಾಣಿ ಕೂಗ್ತಿತ್ತು..
ಯಾಕೆ? ಏನೆಂದು ಕೇಳುವಷ್ಟರಲ್ಲಿ
ಮಂಚದಿಂದ ಬಿದ್ದಾಯ್ತು..
ಕನಸು ಎಲ್ಲಾ ಮರೆತೋಯ್ತು..!

Wednesday 15 April 2015

Selfಇ
ಸುಟ್ಟ ಮರದಂತಾ ಮನಸ್ಸಿಗೂ,
ಒಲವು ಚಿಗುರುತ್ತದೆ..
ಕಳೆದುಕೊಂಡ ಪ್ರೀತಿಗೂ ಪರ್ಯಾಯವಿರುತ್ತದೆ.!

ಶಿಸ್ತು ಶಿಸ್ತೆಂದು ಜಪಿಸುತ್ತಿದ್ದವನಿಗೂ
ಕರಾಳ ದುಃಖ ತುಂಬಿತ್ತು..
ಕಾಲು ಕಿಸಿದು ಮಲಗಿಕೊಂಡ
ಬಿಕನಾಸಿಯ ಕಣ್ಣಲ್ಲೂ
ರಂಗುರಂಗಿನ ಕನಸಿತ್ತು..!

ಚಚ್ಚಿ ಲೈನು
ಮದುವೆಯಲಿ ಆತ ಮೂರು ಗಂಟು
ಬಿಗಿದು ಬೀಗಿದ, ಆಕೆಯ ಕತ್ತಿಗೆ..;
ಅಂದಿನಿಂದಲೂ ಪಾಪ ಮಂಕಾಗಿದ್ದಾನೆ,
ಹೆಂಡತಿ ಎಂಬ ಮಾರುದ್ದದ 'ಕತ್ತಿ'ಗೆ..!!

ಫ್ಲಾಪಿ ಕಥೆ
ಬಸ್ ಸ್ಟ್ಯಾಂಡಿನಲ್ಲಿ ಆತ ಚಡ್ಡಿ ಫಿಗರ್ಸ್ ಗಳ ನೋಡುತ್ತಿದ್ದ..!
ಕಳ್ಳನೋರ್ವ ಆತನ ಪ್ಯಾಂಟಿನಿಂದ ಪರ್ಸ್ ಎಗರಿಸಿದ್ದ..!!

ಫ್ಲಾಪಿ ಕಥೆ
ಪ್ರೀತಿಯಿಂದ ಆತ ಬದುಕಕಂಡ
ಪ್ರೀತಿಯಿಂದಲೇ ಈತ ಸಾವು ಕಂಡ
.
.
.
.
.
.
.
.
.
.
'ಪ್ರೀತಿ' ಈಗ ಕಾಣೆಯಾಗಿದ್ದಾಳೆ,
ಪೊಲೀಸರು ಹುಡುಕುತ್ತಿದ್ದಾರೆ..!

Selfಇ
ಟೈಮ್ ಪಾಸ್ ನೊಳಗೂ
ವಿಶೇಷವಿರಬೇಕು..
ವ್ಯರ್ಥ ಸಮಯದಲೂ
ಕಲಿಕೆ ಸಿಗಬೇಕು..!

ಫ್ಲಾಪಿ ಕಥೆ
ಮೈ ಚಾಯ್ಸ್, ಮೈ ಚಾಯ್ಸ್
ಎಂದಾಕೆ ಬಟ್ಟೆ ಬಿಚ್ಚಿದಳು
ಯೆಸ್, ನೋ ಎಂದೆನ್ನುತಾ
ನೋಡುವವರೇ ಬೆತ್ತಲಾದರು..!

Selfಇ
ಕಲ್ಲಿನ ಮಂಟಪದೊಳು
ಹಕ್ಕಿಗೊಂದು ಮನೆ ಬೇಕು,
ಕಲ್ಲು ಹೃದಯಗಳ
ತಡೆಗೋಡೆಯಿಲ್ಲದೆ
ಅದು ಖುಷಿಯಾಗಿರಬೇಕು..!
ಹಕ್ಕಿಗೂ ಹಕ್ಕುಗಳಿರಬೇಕು,
ಅದಕ್ಕೂ ಬದುಕಲು ಬಿಡಬೇಕು..!!

Selfಇ
ಕುರಿ-ಕೋಳಿಯ
ಪ್ರೀತಿಯ ಕಂಡು,
ತುಂಡು ತುಂಡಾಗಿ
ಕತ್ತರಿಸಿದರು..!
ಪಾಕಶಾಲೆಯಲ್ಲೀಯೇ
ಲೆಗ್ ಪೀಸಿಗೂ- ತಲೆಮಾಂಸಕ್ಕೂ
ಮತ್ತೆ ಲವ್ವಾಗಿದೆ..!!

ಫ್ಲಾಪಿ ಕಥೆ
ಅವಳನ್ನು ಮೂರ್ಖಳನ್ನಾಗಿಸಲು
ಅವನು ಪ್ರೀತಿಮಾಡಿದ,
ಅವನನ್ನು ಮೂರ್ಖನನ್ನಾಗಿಸಲು
ಅವಳು ಮದುವೆಯಾದಳು..!

Selfಇ
ಮಾತುಗಳೇ ಶಕ್ತಿಶಾಲಿಯೆಂದು
ಪ್ರತಿಪಾದಿಸುತ್ತಿದ್ದ- ವಿಜ್ಞಾನಿ,
ಮೌನವಾಗಿಯೇ ಇದ್ದು
ಸಾಬೀತುಪಡಿಸಿದ- ಜ್ಞಾನಿ..!