Wednesday 30 January 2013

ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು..
ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!!
ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!!
ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!!
ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು..
" ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",,
"ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!!
"ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!!
ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು..
ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು..
ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು...
.
.
.
.
.
.
.
.
.
.
.
.
.
.
.
" ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ"
ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!!

Monday 21 January 2013

ಪ್ರೇಮ ಪತ್ರ

ಇದು ನನ್ನ ತುಂಬಾ ಪ್ರೀತ್ಸೋ ಹುಡುಗಿ ಬರೆದಿದ್ದ ಪತ್ರ..!! ಹಾಳಾದ್ದು ನನ್ ಕೈಗೆ ಸಿಕ್ಕಬೇಕಾ??

ಲೋ ಚಚ್ಚಿ... 
ಥೂ ನಂಗೆ ಈ ಪತ್ರ ಗಿತ್ರ ಎಲ್ಲ ಗೊತ್ತಿಲ್ವೋ.. ಆದ್ರೂ ನಿನಗೆ ನನ್ನ ಭಾವನೆಗಳನ್ನ ಡೈರೆಕ್ಟ್ ಆಗಿ ಹೇಳೋಕೆ ಆಗ್ತಿಲ್ಲ.. ನೀನು ನಂಗೆ ತುಂಬಾ ಕಾಡಿದ ಹುಡುಗಾ... ನಂಗೆ ತುಂಬಾ ಹಿಡಿಸಿದ ಹುಡುಗಾ..ಫೇಸ್ ಬುಕ್ ಅಲ್ಲಿ ಆದ ಸ್ನೇಹ ಈ ಲೆವೆಲ್ ಗೆ ನನ್ ಲೈಫ್ ಫೆಸ್ ಮಾಡ್ಬೇಕು ಅಂತ ನಾನು ನಿಜವಾಗಲು ತಿಳ್ಕೊಂಡಿರ್ಲಿಲ್ಲಾ.. ಎಷ್ಟೊಂದು ಜನ ನಂಗೆ ಸ್ನೇಹಿತರು ಸ್ನೇಹಿತೆಯರು ಇದ್ರೂ ಕೂಡ ನೀನ್ಯಾಕೆ ಅವರನ್ನೆಲ್ಲ ಮೀರಿ ಏನೋ ಸ್ಪೆಷಲ್ ಆಗ್ಬಿಟ್ಟೆ.. ?? ನಿಜವಾಗ್ಲೂ ನನಗೆ ನನ್ನ ಮನಸ್ಸನ್ನ ಕಂಟ್ರೋಲ್ ಮಾಡೋದೇ ಒಂದು ತಪಸ್ಸು ಆಗೋಗಿದೆ.. ಆದ್ರೂ ಅದರಲ್ಲೇನೋ ಮಜಾ ಇದೆ..!!
ಎಲ್ಲಾ ಬಾಯ್ಸು ಒಂದೇ ಥರ.. ನೀವು ಹುಡುಗ್ರು ಯಾಕೆ ಹುಡುಗಿರನ್ನ ಅರ್ಥನೇ ಮಾಡ್ಕೊಳ್ಳಲ್ಲಾ.. ಮೊದಲ ಸಲ ತುಂಬಾ ಕೇರು ತೊಗೊಳೋ ನೀವು ಸ್ನೇಹ ಹಳೇದಾದಂಗೆ ನಾವು ಬೇಡದವರಾಗುತ್ತೀವಿ ಅಲ್ವ?? ಮೊದಮೊದಲು ಎಲ್ಲಾನು ಶೇರ್ ಮಾಡ್ಕೊಳ್ಳೋ ನೀವು ಕೊನೆಕೊನೆಗೆ ನಮ್ಮನ್ನ ಬೇರ್ ಮಾಡೋದು ನಿಮಗೆ ಕಷ್ಟ ಅಲ್ವ? ನಾವು ಮಾಡ್ಕೊಳೋ ಮೇಕಪ್ ಬಗ್ಗೆ ಕಮೆಂಟ್ ಕೊಡೊ ನೀವು ಮೇಕಪ್ ಇಲ್ದೆ ಇರೋ ಹುಡುಗಿಯರನ್ನ ಯಾಕ್ರೋ ನೋಡಲ್ಲಾ..?? ಎಲ್ಲಾ ಹುಡುಗರನ್ನು ಲೈನ್ ಆಗಿ ನಿಲ್ಲಿಸಿ ಪಟಾಪತಾ ಅಂತ ಹೊಡಿಬೇಕು ಅನ್ನಿಸತ್ತೆ..!! ಆದರೆ ಏನ್ ಮಾಡೋದು.. ಅದರಲ್ಲೂ ಮಜಾ ತೊಗೊಳ್ಳೋ ಕಮಂಗಿಗಳು ನೀವು..!!
ಇಷ್ಟಾದರೂ ನಾವು ನಿಮ್ಮಂಥ ಗೂಬೇಗಳನ್ನೇ ಯಾಕೆ ಇಷ್ಟ ಪಡ್ತೀವಿ..?? ನೋಯಿಸಿದ್ರೂ ಅದರಲ್ಲೇ ಕುಷಿ ಪಡ್ತೀವಿ..!! ನಿನಗೆ ಗೊತ್ತ ಸಚಿನಾ ನಂಗೆ ನಿನ್ನ ಮೆಲಿದ್ದಿದ್ದು ನೀನು ಹೇಳೋ ತರ affection ಆಗಲಿ attraction ಆಗಲಿ ಅಲ್ಲ ಕಣೋ.. ಅದು ಲವ್ ಅಂಡ್ ಲವ್ ಅಷ್ಟೇ..!! ನಿನಗೋಸ್ಕರ ನಾನು ಏನೆಲ್ಲಾ ಮಾಡಿಲ್ಲಾ ನಮ್ಮ ಅಮ್ಮನ ಹತ್ರಾನು ಸೂಕ್ಷ್ಮವಾಗಿ ಚರ್ಚಿಸಿದ್ದೆ.. ನಿನಗೆ ನೇರವಾಗಿ ಹೇಳಕ್ಕೆ ಆಗದೆ ಎಷ್ಟೊಂದು ಸಲ ವ್ಯರ್ಥ ಪ್ರಯತ್ನ ಮಾಡಿದ್ದೆ.. ಆಗ್ಲೂ ನಿಂಗೆ ಗೊತ್ತಾಗಿರಲಿಲ್ವ ಅಥವಾ ಗೊತ್ತಿದ್ದೂ ನಾಟಕ ಮಾಡ್ತಾ ಇದ್ದೀಯ ಅನ್ನೋದು ನಂಗೆ ಈಗಲೂ ಪ್ರಶ್ನೆ ಆಗಿಯೇ ಉಳಿದಿದೆ..!! ಕೊನೆಗೆ ನಿನಗೆ ಡೈರೆಕ್ಟ್ ಆಗಿ ನಾನೇ ಪ್ರೊಪೋಸ್ ಮಾಡಿದ್ರು ಕೂಡ ಯಾಕೆ ನೀನು ಸಿರಿಯಸ್ ಆಗಿ ತೊಗೊಂಡೆ ಇಲ್ಲಾ??
ನಮ್ಮಂಥ ಹುಡುಗಿಯರ ಹಾರ್ಟು ಗಾಜಿನ ಮನೆ ತರ ನೋಡೋವ್ರಿಗೆಲ್ಲ ಚೆನ್ನಾಗೆ ಕಾಣ್ಸತ್ತೆ... ಅದರ ಮೈಂಟೈನ್ ಕಷ್ಟ ನಮಗೆ ಗೊತ್ತು..!! ಕಲ್ಲು ಹೊಡ್ಯೋಕೆ ಎಲ್ಲಾ ಕಾಯ್ಕೊಂಡು ಇದ್ರೂ ಕಾಪಾಡಕ್ಕೆ ಇರೋರತರ ಕೆಲವರ ಪೋಸು ಬೇರೆ..!! ನನ್ನ ಬಗ್ಗೆ ನಾನು ಯೋಚಿಸಲ್ಲ ನಂದು ಹೆಂಗೋ ಹಾಳಾಗೋಗ್ಲಿ.. ಬಹುತೇಕ ಎಲ್ಲಾ ಹುಡುಗಿಯರ ಪರಿಸ್ಥಿತಿ ಇದಕ್ಕಿಂತ ಏನು ಭಿನ್ನ ಇಲ್ಲ.. ನಾವು ಇಷ್ಟ ಪಟ್ಟಿದ್ದು ಕೊನೆಗೂ ಸಿಗೋದೆ ಇಲ್ಲಾ.. ಬೇರೆಯವರ ಸಂತೋಷದಲ್ಲೇ ಕುಷಿಪಡುವ ಅನಿವಾರ್ಯತೆ..!!
ರಾತ್ರಿ ಏಕಾಂಗಿಯಾಗಿ ಅತ್ತು ಅತ್ತು ತೋಯಿಸಿದ ದಿಂಬುಗಳನ್ನ ಕೇಳಿ.. ಕಣ್ಣಿರಲ್ಲೇ ಒದ್ದೆ ಆದ ಕೆನ್ನೆ ಮೇಲಿನ ಪೌಡರ್ ನ ಕೇಳಿ ಇಲ್ಲಾ ಕಪ್ಪು ಕಾಡಿಗೆಯನ್ನ ಕೇಳಿ.. ಒಡೆದ ಬಳೆನ ಕೇಳಿ.. ಸಿಟ್ಟಲ್ಲಿ ಬಿಸಾಡಿದ ಹಳೆಯ ವಸ್ತುಗಳನ್ನ ಕೇಳಿ..!!ಇವು ಎಲ್ಲಾ ಹುಡುಗಿಯರ ಕರ್ಮ ಕಾಂಡಗಳನ್ನ ಅಳು ಅಳುತ್ತ ಹೇಳ್ತಾವೆ..!! ನಿಮಗಿಂತ ನಾವು ಹುಡುಗಿಯರೇ ಎಷ್ಟೋ ಧೈರ್ಯಶಾಲಿಗಳು.. ಅದು ಎಷ್ಟೋ ಕೇಸ್ ಅಲ್ಲಿ ಪ್ರೊವ್
ಕೂಡ ಆಗಿದೆ.. ಆದ್ರೂ ನೀವು ಹುಡುಗಿಯರ ಮನಸ್ಸನ್ನ ಅರ್ಥ ಮಾಡ್ಕೋಳೋದೇ ಇಲ್ಲ ಅಲ್ವ?? ಹೋಗ್ಲಿ ಇದ್ರಲ್ಲಿ ನಿಮ್ಮದು ತಪ್ಪು ಅಂತಾನು ಹೇಳೋಕೆ ಆಗೋಲ್ಲ ನಾವೇ ಹುಡುಗಿಯರು ಸರಿ ಇಲ್ಲದೆ ಇರಬಹುದು..!!
ಲೋ ನಿಂಗೆ ಬೈಬೇಕು ಹೊಡಿಬೇಕು ಎಲ್ಲಾ ಅನ್ಸತ್ತೆ ಆದ್ರೂ ನೀನ್ ಎದುರಿಗೆ ಬಂದ್ರೆ ಎಲ್ಲಾ ಮರೆತು ಹೋಗತ್ತೆ.. ನೀನ್ ನನ್ನ ಲವ್ ಮಾಡಲ್ಲ ಅಂತ ಹೇಳಿದ್ದಕ್ಕೆ ನನಗೇನು ಬೇಜಾರಿಲ್ಲ ಕಣೋ ಆದ್ರೂ ನಂದು ಲವ್ ಅಲ್ಲಾ ಅಂದ್ಯಲ್ಲ ಅದು ತುಂಬಾನೇ ಬೇಜಾರಾಗಿದ್ದು..!! ನಿನ್ ಲೈಫು ನಿನ್ನ ಗುರಿ ನೀನ್ ಚೆನ್ನಾಗಿರು.. ಆದ್ರೂ ನೀನು ನನ್ನ ಪ್ರೀತಿಯ ಹುಡುಗಾ ಅಷ್ಟೇ..!!
ಮುಂದೆ ನಿಂದೆ ಬೇರೆ ಲೈಫು ನಂದೇ ಬೇರೆ ಲೈಫು..ಇಬ್ರೂ ಒಂದಾಗೋದು ಬಹುತೇಕ ಅನುಮಾನ ಆದರು ಸರೀನೆ.. ಇಷ್ಟು ದಿನ ನೀನು ನನ್ನ ಒಳ್ಳೆ ಗೆಳೆಯ ನನ್ನ ಅಪ್ಪ ಅಮ್ಮನಿಗಿಂತ ನೀನೆ ಎಷ್ಟೊಂದ್ ಸಲ ಮೇಲು ಅಂತ ಅನ್ನಿಸಿದ್ದು ಇದೆ.. ಹಾಗಂತ ಇದೆ ಸರಿಯಂತಲ್ಲ..!! ಮುಂದೆ ಎಂದಾದರೂ ನೀನು ನಿನ್ನ ಹೆಂಡತಿ ಮಕ್ಕಳ ಜೊತೆ ನಾನು ನನ್ನ ಫ್ಯಾಮಿಲಿ ಜೊತೆ ಇದ್ದಾಗ ನೋಡಿದರು, ಯಾರೋ ಇವಳು ಗೊತ್ತೇ ಇಲ್ಲ ಅನ್ನೋ ತರ ಮಾತ್ರ ಇರಬೇಡ್ವೋ.. atleast ಒಂದುಸಲ ಆದ್ರೂ ಹೇಗಿದ್ದೀಯ ಅಂತ ಮಾತಾಡ್ಸೋ ಪ್ಲೀಸ್...
Anyhow I LOVE U always ಕಣೋ..
I Really Miss U so much ..!!

ಇದು ನನ್ನ ಲವ್ ಸ್ಟೋರಿ..

ಇದು ನನ್ನ ಲವ್ ಸ್ಟೋರಿ.. 
ಇದು ಫೇಕ್ ಅಲ್ಲಾ ಆದ್ರೆ ಸ್ವಲ್ಪ ವೀಕ್ ಅಷ್ಟೇ..!!
ಎಲ್ಲರೂ ಅವರವರ ಲವ್ ಸ್ಟೋರಿಲಿ ಅವರೇ ನಾಯಕ.. ನಂದು ಸ್ವಲ್ಪ ಡಿಫರೆಂಟ್ ಇಲ್ಲಿ ನಾನೇ ಖಳ ನಾಯಕ..!!
ಥೂ ಏನ್ age ಅಪ್ಪಾ ಇದು.. ತಲೆ ಏನೇನೋ ಮಾಡತ್ತೆ, ಕಣ್ಣು ಎಲ್ಲೆಲ್ಲೋ ನೋಡತ್ತೆ, ಹಾರ್ಟು ಹೇಗೇಗೋ ಓಡತ್ತೆ.. !! ಅದು ಯಾವ ಕೆಟ್ಟ ಗಳಿಗೆನೋ ಏನೋ ನಮ್ ಹುಡುಗಿಗೆ ಅನ್ಯಾಯವಾಗಿ ನನ್ ಮೇಲೆ ಲವ್ವಾಗೊಯ್ತಂತೆ..!! "ಸರಿ ಓಕೆ ಅದ್ಕೆ ನಾನ್ ಏನ್ ಮಾಡ್ಲಿ??" ಅಂತಾ ನಾನ್ ಕೇಳಿದೆ.. ಪಾಪ answer ಇಲ್ದೆ "ಏನು ಇಲ್ಲ" ಅಂತ ಸುಮ್ನಾಗಿದ್ಲು..!!
ನಂದೂ ಅವಳದ್ದು ಸುಮಾರು ಮೂರುವರೆ ವರ್ಷಗಳ ಪರಿಚಯ.. ಬೇಕಿದ್ರೆ ಸ್ನೇಹ ಅಂತನಾದ್ರೂ ಅಂದ್ಕೊಳಿ.. ಅವಳಿಗೆ ನನ್ ಮೇಲೆ ಏನು ಆಗಬಾರದಿತ್ತೋ ಅದು ಆಗೋಯ್ತು.. "ಹೆಂಗೆ? ಏನು? ಯಾಕೆ ?" ನಾನೇ ಕೇಳಿದೆ ಅವಳಿಗೆ.. ಅವಳ ಉತ್ತರ ಗೊತ್ತಿಲ್ಲಾ..!!
ನನಗೆ ಗೊತ್ತು ಇಲ್ಲಿ ಬರೆದಿರೋದನ್ನ ಅವಳು ಓದೇ ಓದುತ್ತಾಳೆ..!! ಆದರೆ ಗೊತ್ತಿಲ್ದೆ ಇರುವವಳ ಹಾಗೆ ಇದ್ದು ಬಿಡ್ತಾಳೆ.. ನಿಜಾ ಹೇಳ್ತಿದೀನಿ.. ನಾನು ಬಹಳಷ್ಟು ಹುಡುಗೀರಿಗೆ ♥ symbol ಕಳ್ಸಿದಿನಿ.. Dear ಅಂದಿದೀನಿ..ಡಾರ್ಲಿಂಗ್ ಅಂತಾನೂ ಹೇಳಿದೀನಿ.. ಮುಂದೇನೂ ಹೇಳ್ತೀನಿ..!! ಆದರೆ ಅವಳಿಗೆ ಅದು ಹೆಂಗಾಯ್ತೋ ನನಗಂತೂ ಗೊತ್ತಾಗ್ತಿಲ್ಲಾ.. ಹಾಗಂತ ನಾನೇನು ಅವಳತ್ರ ಸಲುಗೆ ತಗೊಂಡಿಲ್ಲಾ.. ಜಾಸ್ತಿ Care ಕೂಡ ತೋರ್ಸಿಲ್ಲಾ..!! ಅವಳಾಗೇ ಫೋನ್ ಮಾಡೋಳು ಮೆಸೇಜು ಕಳಿಸೋಳು.. ನಾನ್ ಮಾಡದೆ ಇದ್ರೆ.. "ಪ್ಲೀಸ್ ದಿನಕ್ಕೆ ಒಂದಾದರು ಮೆಸೇಜು ಮಾಡು" ಅಂತ ಗೊಗರಿಯೋಳು..!! "ಯಪ್ಪಾ ಇವಳಿಗೆನಾಯ್ತು " ಅಂತಾ ನಾನು ಸರಿ ಅಂತ ನೆನಪಾದಾಗೆಲ್ಲ ಕಳಿಸ್ತಿದ್ದೆ..!! ಅವಳು ನನ್ನ ಮದುವೆ ಆಗ್ತಿಯಾ ಅಂತ ಕೇಳಿದಾಗಲೇ ನಂಗೆ ಗೊತ್ತಾಗಿದ್ದು ... ಇದು 'ಅದು' ಅಂತಾ.. ಆಮೇಲೆ ಮಲಕ್ಕೊಂಡ್ ಯೋಚನೆ ಮಾಡಿದೆ ಅವಳ ಮೆಸೇಜು ಅದರ ಅರ್ಥಗಳು.. ಅವಳ ಮಾತು..ಎಲ್ಲಾ ನೋಡಿ ಓದಿ Conform ಆಯ್ತು ಇದು Love ಕೇಸೇ ಅಂತಾ..ಆದರೆ ಏನು ಮಾಡೋದು ನನ್ ಮನಸ್ಸಲ್ಲಿ ಯಾವತ್ತು ಹಾಗೆ ಯೋಚನೇನೆ ಬಂದಿರಲಿಲ್ಲಾ.. ಅಷ್ಟರಲ್ಲಾಗಲೇ ಮೂರು ಸಲ ಮಾಲಲ್ಲಿ..,ಎಂಟು ಸಲ ಪಾರ್ಕಲ್ಲಿ.., ಎರಡು ಸಲ ಹೋಟೆಲಲ್ಲಿ.., ನಾಕು ಸಲ ಮೆಜೆಸ್ಟಿಕ್ಕಲ್ಲಿ.. ಒಂದು ಸಲ ಶಂಕರ ಮಠದಲ್ಲಿ ಇನ್ನು ಒಂದೆರಡು ಸಲ ನವರಂಗ್ ಸುತ್ತಮುತ್ತ ರಾಮಕೃಷ್ಣ ಆಶ್ರಮದ ಹತ್ರ ಮತ್ತೆ ಎಲ್ಲೆಲ್ಲೋ ಸುತ್ತಿಬಿಟ್ಟಿದ್ದೆ.. ಅವಳು ನನ್ನ Birthday ಗೆ ಕೊಟ್ಟಿದ್ದ Love -birds ನ ನಮ್ಮನೆ showcase ಒಳಗೆ ಇಟ್ಟಿದ್ರು ಗೊತ್ತಾಗಿರಲಿಲ್ಲ...!!
ಒಂದು ಮಾತಿದೆ 'ಹುಡುಗಿಯರ ಮೆಚ್ಚುಗೆ ಸ್ನೇಹ ಆಗಿರತ್ತೆ.. ಅದೇ ಹುಡುಗರಲ್ಲಿ ಪ್ರೇಮ ಆಗಿರುತ್ತೆ' ಅಂತ ನಂದಿಲ್ಲಿ Reverse -case ಆಗೋಯ್ತು.. ಅವಳು Direct ಆಗಿ ಹಿಂಗೆ ಕೇಳಿದಾಗ..
ಇರೋ ಬರೋರ್ದೆಲ್ಲ ಕಾಲು ಎಳ್ಕೊಂಡು.. ಅವರಿವರ್ನ ಉರಿಸ್ತಾ 'ಚುಮ್ಮಾ ಅದುರುದಿಲ್ಲಾ' ಅಂತ ತಮಿಳ್ ಡೈಲಾಗು ಹೊಡ್ಕಂಡು.. ಕೈಲಿ ಕಾಳು ಹಿಡ್ಕೊಂಡು.. ಏನೇನೋ ಹೇಳ್ಕೊಂಡು ಹೇಗೇಗೋ ಆಡ್ತಾ ಇದ್ದ ನನ್ ಹಾರ್ಟು ಕಪ್ಪೆ ತರ ಬಾಯಿಗೆ ಬಂದು.. ಎಮ್ಮೆ ತರ ಕೂಗಾಡ್ಕೊಂಡು.. ಎಲ್ಲೋ ಹೊಂಟೋಯ್ತು..!!
ನಾನು ಅವಳಿಗೆ ಹೇಳ್ದೆ ಆಗಲ್ಲ..!! ನನ್ನ ಮುಂದೆ ದೊಡ್ಡ ಗುರಿ ಇದೆ..ಆದರೆ ಹಾಳಾದ್ದು ತುಂಬಾನೇ ದೂರ ಇದೆ..!! ಹತ್ರ ಹೋಗಕ್ಕೆ ದಾರಿನು ಕಳ್ದೊಗಿದೆ..!! ಸಧ್ಯಕ್ಕೆ ಏಕಾಂಗಿ ಜೀವನಾನೆ ನಂಗೆ ಪಾವನ..!! ಇದೆಲ್ಲ ಹೇಳಿದ್ರೆ ಅವಳಿಗೆ ಅರ್ಥ ಆಗಿಲ್ಲ.. ಅನ್ಸತ್ತೆ.. ಕಾಯ್ತೀನಿ ಅಂತಾಳೆ.. ಏನಂತ ಹೇಳೋದು ಅವಳಿಗೆ..ನಾನ್ ಯಾವತ್ತು ಅವಳನ್ನ ಆ ತರ Treat ಮಾಡೇ ಇಲ್ಲಾ.. ಮಾಡೋದು ಇಲ್ಲಾ.. ಅವಳು ಒಳ್ಳೆ ಗೆಳತಿ.. ಆದ್ರೆ ನಂಗೆ ಅವಳ ಮೇಲೆ ಅಂತ Special ಭಾವನೆಗಳೇನು ಬಂದಿಲ್ಲ.. ನಾನು ಅವಳ Life ಅಲ್ಲಿ ಇರ್ತೀನಿ.. ಆದ್ರೆ partner ಆಗಿ ಸಾಧ್ಯ ಇಲ್ಲಾ..!! ಅವಳು ಮಾಡಿದ್ದು ತಪ್ಪು... ಹೇಳಿದ್ದು ತಪ್ಪು ಅಂತ ಅರ್ಥ ಅಲ್ಲಾ.. ಅವಳ Selection ಬೇಡಾ ಅಂದ್ರೂ ನಾನು Appreciate ಮಾಡಲೇ ಬೇಕಾದ ಅನಿವಾರ್ಯತೆ ಇದೆ ಈಗ..!! ಅವಳಿಗೆ ಪ್ರೀತಿ ಅಂದ್ರೆ ಗೊತ್ತು.. ನನಗೆ ಜೀವನ ಅಂದ್ರೆ ಗೊತ್ತು.. ಮೊದ್ಲೇ ನಂಗೆ Seriousness ಇಲ್ಲ.. ಬಚಾವಾಗಿಬಿಟ್ಟಳು...!!
ನಾನಿವತ್ತು ಅವಳ ಹೆಸರು ಹೇಳಲ್ಲಾ.. ಯಾಕಂದ್ರೆ ಇದು ನನ್ನ ಅವಳ ಮಧ್ಯೆ ಇದ್ದಿದ್ದನ್ನ ನಿಮ್ಮೆದುರು ಇಡ್ತಾ ಇದ್ದೀನಿ..ಅವಳಿಗೆ ನಾನು Friend ಆಗಿ ಬೇಡಾ ಅಂದ್ಲು..ಸರಿ ಅಂತ ದೂರ ಇದೀನಿ..!!
ದೂರ ಇದ್ರೂ ಚೆನ್ನಾಗಿರಲಿ.. ಅವಳ ಬಾಳಲ್ಲೂ ಇವತ್ತಲ್ಲ ನಾಳೆ.. ರಾಕೇಟು ಹಚ್ಚೋನು ಬಂದೆ ಬರ್ತಾನೆ.. ಈಗ ಅವಳ ಹೆಸರು ಹೇಳಿ ಬತ್ತಿ ಕೀಳೋ ಕೆಲಸ ನಾನ್ ಮಾಡಲ್ಲಾ..!! ನೂರು ಜನರನ್ನ ಒಂದೇ ತರ ಪ್ರೀತ್ಸೋದಕ್ಕಿಂತ ಒಬ್ಬೋಬ್ರನ್ನು ನೂರು ನೂರು ತರ ಪ್ರೀತ್ಸೋದು Better ಆಲ್ವಾ?? ನನ್ನಿಂದ ಅವಳಿಗೆ ನೋವಾಗಿದೆ.. ಬೇಜಾರಾಗಿದೆ.. ಹಾಗಂತ ಕನಿಕರ ತೋರ್ಸಿ ಲವ್ ಮಾಡೋಕಾಗಲ್ಲಾ.. ಅವಳ ಜೊತೆ ಆಟ ಆಡಿ ಸುತ್ತಾಡಿ ಮರೆತು ಬಿಡಕ್ಕೆ..ಅವಳ heart ಏನು playground ಕೂಡ ಅಲ್ಲಾ..!!
ಸಧ್ಯಕ್ಕೆ ನಮ್ಮಿಬ್ರ ಮಧ್ಯೆ ಒಂದು ಗ್ಯಾಪ್ ಇದೆ ಅಷ್ಟೇ ಈ ಗ್ಯಾಪ್ ನ ಹೇಗೆ ಮುಚ್ಚತ್ತೆ ಅಂತ ಕಾಲಾನೇ ಹೇಳ್ಬೇಕು..!!
ನಾನೇನಾದ್ರು ಈ ವಿಷಯದಲ್ಲಿ ತಪ್ಪು ಮಾಡಿದ್ನ?? ಅದ್ನ ನೀವು ಹೇಳ್ಬೇಕು..!!ನನಗನಿಸಿರೋ ಹಾಗೆ ನಾನು ನಡ್ಕೊಂಡಿದೀನಿ.. ತಪ್ಪಿದ್ದರೆ ತಿಳಿ ಹೇಳಿ..!!

ಅಡ್ಡಾ - ದಿಡ್ಡಿ

ಮಿಡ್ ನೈಟ್ ಅಲ್ಲಿ ಟ್ರಿನ್ ಟ್ರಿನ್ ಅಂತ ನನ್ ಮೊಬೈಲು ಒಂದೇ ಸಮನೆ ನೆನ್ನೆ ರಾತ್ರಿ..ಅದ್ಯಾವ್ದೋ ಸೈಬಿರಿಯನ್ ದೆವ್ವ ಮೆಟ್ಕೊಂಡಿದ್ದ ತರ ಕೂಗೋಕೆ ಸ್ಟಾರ್ಟ್ ಮಾಡ್ತು..!! ಏನೋ ಅಧ್ಬುತ ಕನಸು ಕಾಣ್ತಾ ಮಲಗಿರಬೇಕಾದ್ರೆ ಇದೊಂದು ಹೆಂಡತಿ ತರ ನಂಗೆ ಈಗಲೇ ಗಂಟು ಬಿದ್ದಿದೆ ಕಾಟ ಕೊಡಕ್ಕೆ.. ಯಾವನಪ್ಪಾ ಗುಬಾಳ್ ಫೋನ್ ಮಾಡಿರೋನು ಅಂತ ನೋಡಿದ್ರೆ ನಮ್ಮ ಹಳೇ ಹುಡ್ಗ.. ಚಡ್ಡಿ ಹಾಕೊಳೋಕು ಮೊದ್ಲೇ ಇದ್ದ ದೋಸ್ತು, ಅಮೇರಿಕದಿಂದ ಕಾಲ್ ಹಾಕಿದ್ದ..!!
" ಏನೋ ಶಿಷ್ಯ ತುಂಬಾ ದಿನ ಆದ್ಮೇಲೆ ನೆನಪಾದ್ನಾ" ಅಂತ ಕೇಳಿದ್ರೆ,
" ಮಗಾ ಎಂಗ್-ಏಜು-ಮೆಂಟು ಆಗಿದೆ ಇಲ್ಲೇ ಅಮೇರಿಕಾದ ಹುಡುಗಿ ಮುಂದಿನ ತಿಂಗಳೇ ಮದುವೆ, ಅದ್ಕೆ ಎಲ್ರಿಗೂ ಹೇಳ್ತಾ ಇದೀನಿ ಆಮೇಲೆ ಒಂದು ಮಾತು ಹೇಳಿಲ್ಲ ಅಂತ ಬೈಕೊಬೇಡ್ರೋ.. ಫೋಟಾನ ಫೇಸ್ ಬುಕ್ ಅಲ್ಲಿ ಹಾಕ್ತೀನಿ ನೋಡ್ಕೊಳಿ " ಅಂದ ಬಡ್ಡಿ ಹೈದ..!!
ನಾನ್ ಫುಲ್ ಶಾಕು , ಮಗಾ ನಮ್ಕಿಂತ ಮೊದ್ಲೇ ಹಾಳಗ್ತಾ ಇದಾನಲ್ಲ ಅಂತ " ಲೇಯ್ ಓದೋಕೆ ಅಂತ ಹೋಗಿ ಅಲ್ಲೇ ಅಲ್ಲೇ ಹುದುಗಿನು ಪಟಾಯ್ಸಿದ್ಯ? ಹೆಂಗೋ ಮಗ ? ಏನೋ ಅವಳ ಹೆಸರು ? " ಕೇಳಿದ್ರೆ "ಕೆಂಪವ್ವ" ಅಂದ ನಾಚಿಕೆಯಿಂದ..!! " ಲೋ ನಮ್ ಮಂಡ್ಯ ಕಡೆ ಹುಡ್ಗಿನ ಅಮೇರಿಕ ಹುಡುಗಿ ಅಂತ ಇದಿಯೇನೋ ಲೋಫ್ಹರ್ ? " ಅಂತ ಅವಾಜ್ ಹಾಕಿದ್ದಕ್ಕೆ " ಥೂ ಕೆಂಪವ್ವ ಅಲ್ವೋ ಕೆಂಪ್ ವಾ ( kemp waugh ) ಅಂತ ಅವಳ ಹೆಸರು " ಅಂದ ಸ್ಪೆಲ್ಲಿಂಗು ಸೇರ್ಸಿ..!!
ಅಮೇರಿಕ ಕಡೆ ಅಲ್ಲೆಲ್ಲೋ ಮುದ್ದಿನ ಪಾರ್ಟಿ (cuddles party) ಅಂತ ಮಾಡ್ತಾರಂತೆ.. ಅಂದ್ರೆ ಸುಮ್ನೆ ಗುರುತು ಪರಿಚಯ ಇಲ್ದೆ ಇರೋ ಅಪರಿಚಿತರು ಫೇಸ್ ಬುಕ್ ಗೆಳೆಯರು ಹೀಗೆ ಯಾರ್ಯಾರೋ ಅಂದಿನ ದಿನ ಒಂದ್ಕಡೆ ಸೇರ್ಕಂಡು ಪರಿಚಯ ಮಾಡ್ಕಂಡು, ತಬ್ಬಿಕೊಂಡು, ಅಪ್ಪಿಕೊಂಡು, ಮುದ್ದಾಡಿ..............
ಅಷ್ಟೇ..!! (ಅದನ್ನ ಬಿಟ್ಟು ಬೇರೆಯದರ ಬಗ್ಗೆ ನನಗೆ ಮಾಹಿತಿ ಇಲ್ಲ )
ಆ ಮುದ್ದಿನ ಪಾರ್ಟಿ ಅಲ್ಲೇ ನಮ್ ಕೆಂಪವ್ವ ಸಾರಿ ಕೆಂಪ್ ವಾ ನಮ್ ಹುಡ್ಗಂಗೆ ಸಿಕ್ಕಿದ್ದಂತೆ..!! ಇಷ್ಟು ಹೇಳಿ ನನ್ ತಲೇಲಿ ಹುಳ ಬಿಟ್ಟು ಇನ್ನು ಇರೋ ಬಾರೋ ನಮ್ ಬೇರೆ ಹುಡುಗರಿಗೆಲ್ಲ ನಿದ್ದೆ ಹಾಳು ಮಾಡಕ್ಕೆ ಸ್ಕೆಚ್ ಹಾಕ್ಕೊಂಡು ಫೋನ್ ಕುಕ್ಕಿದ...!!
ಬೆಳಿಗ್ಗೆ ಅಡ್ಡಾ ದಲ್ಲಿ ಸಿಕ್ಕಿದ ಎಲ್ಲ ಹುಡ್ರು ಇವನ ಬಗ್ಗೆನೇ ಯೋಚಿಸ್ತಾ ನಾವು ಆ ತರ ಏನಾರ ಮಾಡ್ಬೇಕು ನಮಗೂ ಯಾರಾದ್ರೂ ಸಿಕ್ತಾರೆನೋ ಅಂತ ಪಿಲಾನು ಮಾಡ್ತಾ ಇದ್ರೆ , ನಮ್ ದೇಶದ ಹುಡ್ಗೀರು ಅಮೇರಿಕ ಹುಡುಗಿಯರಿಗಿಂತ ಬಹಳ ಮುಂದಿದ್ದಾರೆ.. ಅವೆಲ್ಲ ಇಲ್ಲಿ ನಡೆಯೋಲ್ಲ ಅನ್ನೋ ತೀರ್ಮಾನದೊಂದಿಗೆ ಅಡ್ಡ ಕ್ಲೋಸ್ ಮಾಡಿದ್ವಿ..!!

ನನ್ನ ಪ್ರೀತಿಯ ಬೆಳ್ಳಿ..!!

ನನ್ನ ಮೊದಮೊದಲ ಪ್ರೀತಿ.. ಮೊದಮೊದಲ ಅಕ್ಕರೆ.. ಆರೈಕೆ.. ಸಲುಗೆ..
ಮಾತು-ಕತೆ... ಹರಟೆ.. ಬೈಗುಳ.. ನಿನ್ನಿಂದ ಪಡೆದ.. ಏಟು.. ಯಾವುದನ್ನೂ ಮರಿಯೂಕ್ಕೆ ಆಗ್ತಿಲ್ಲಾ ಈ ಹಾಳಾದ್ ಹಾರ್ಟಿಗೆ...
ಈಗಲೂ ಒಂದೊಂದ್ ಸಲ ತುಂಬಾ ನೆ ಬೇಜಾರ್ ಆಗ್ತಿದೆ ಬೆಳ್ಳಿ ನಿನ್ನ ತುಂಬಾನೇ ಮಿಸ್ ಮಾಡ್ಕೋತಾ ಇದೀನಿ..
ನಿನಗೆ ತುಂಬಾನೇ ಕಾಡಿಸ್ತಿದ್ದೆ.. ಕೂಗಿಸ್ತಾ ಇದ್ದೆ.... ತುಂಬಾ ರೋಸಿದ್ದೆ.. ಆದ್ರೂ ನೀನು ಯಾವತ್ತೂ ನನ್ ಮೇಲೆ ಬೇಜಾರಾಗ್ತಾ ಇರ್ಲಿಲ್ಲಾ.. ಮೇಲೆ ಬಯ್ಯ್ತಿದ್ದೆ .... ಆದ್ರೆ ನಾನಿಲ್ದೆ ತುಂಬಾ ಪರಿತಪಿಸ್ತಾ ಇದ್ದೆ . ನಾವಿಬ್ರೂ ಎಸ್ಟೋ ದಿನ ಮನೇಲಿ ಒಳ್ಳೆ ಲವರ್ ತರ ಹರಟಿದೀವಿ.. ಒಟ್ಟಿಗೆ ಮನೆ ಕೆಲಸ ಎಲ್ಲಾ ಮಾಡಿದೀವಿ.. ನನ್ನ ಸಂಬಳದಲ್ಲಿ ನಾನು ನಿನಗೋಸ್ಕರ ತಂದ ಸೀರೆ ನೋಡಿ.. ನಿನ್ನ ಮನದಲ್ಲಾದ ಸಂತೋಷನ ನಿನ್ನ ಕಣ್ಣಲ್ಲೇ ಗುರುತಿಸಿದ್ದೆ.. ಅದೊಂದು ಅಧ್ಬುತ ಕ್ಷಣ.. ನೀನು ನನಗೋಸ್ಕರ ಎಷ್ಟೊಂದು ಜನರತ್ರ ಜಗಳ ಮಾಡಿದ್ದೆ.. ಅದು ಚಿಕ್ಕ ಚಿಕ್ಕ ವಿಷಯಕ್ಕೆ.. ನೆನಸ್ಕೊಂಡ್ರೆ ಈಗಲೂ ನಗು ಬರತ್ತೆ..
ನೀನಿಲ್ಲದೆ ಮುಂದಿನ ವಾರ ಎರಡು ವರ್ಷ ಆಗತ್ತೆ.. :( :(
ತುಂಬಾನೇ ಬೇಜಾರಾಗ್ತಿದೆ.. ಬೆಳ್ಳಿ..!!
ನಾನು ನಿಂಗೆ ರೆಗ್ಸಿದ್ದು.., ನಿಂಗೆ ಗೋವಾಗೆ ಕರ್ಕೊಂಡು ಹೋಗಿ ಫಾರಿನ್ ಪಿಗರ್ಸು ನಾಚೋತರ ಡ್ರೆಸ್ ಮಾಡಿಸ್ತೀನಿ ಅಂತ ಹೇಳಿದ್ದು.. ನಿನ್ನ ಎಲ್ಲರ ಎದಿರಿಗೂ ಡಾರ್ಲಿಂಗ್ ಅಂತ ಹೇಳಿ ಮುಜುಗರ ಉಂಟು ಮಾಡಿದ್ದು..
ನಿನ್ನತ್ರ ಅವಾಗವಾಗ ದುಡ್ಡು ತಗೋತಾ ಇದ್ದಿದ್ದು.. ನೀನು ಬೈದು ಬೈದು ಕೊಡ್ತಾ ಇದ್ದಿದ್ದು..
ಕೊನೆಗೆ.. ಒಂದು ಮಾತು ಹೇಳದೆ ಸಣ್ಣ ಸೂಚನೇನು ಕೊಡದೆ ಶಿವಾ ಅಂತ ಶಿವನ ಪಾದ ಸೇರಿದ್ದು.. ಥೂ..!!ನಿಜವಾಗಲೂ ಬೆಳ್ಳಿ ನೀನು ಮತ್ತೆ ಬಾ..
ನಿನ್ನ ನಾನು ಅಜ್ಜಿ ಅನ್ನೋದಕ್ಕಿಂತ ಬೆಳ್ಳಿ ಅಂತಾನೆ ಕರಿತಿದ್ದೆ.. ನಿನ್ನ ಅಜ್ಜಿ ಅನ್ನೋದ್ಕಿಂತ ಒಳ್ಳೆ ಗೆಳತಿ ಆಗಿ ನೋಡಿದೆ.. ನೀನು ಅಷ್ಟೇ ಒಳ್ಳೆ ಲವರ್ ತರಾನೆ ನೋಡ್ಕೊಂಡೆ .. ಸಾಕು ನಿನ್ನಂತಹ ಅಜ್ಜಿ ಪಡೆದಿದ್ದಕ್ಕೆ
ನನಗೆ ಸಂತೋಷ ಇದೆ.. ಪ್ರೀತಿ ಇದೆ.. ಕುಷಿ ಇದೆ.. ಅಷ್ಟು ಸಾಕು.. ಆದ್ರೂ ಇಷ್ಟು ಬೇಗ ನನ್ನನ್ನ ಬಿಟ್ಟು ಹೋಗಿದ್ದಕ್ಕೆ ವಿಷಾದ ಇದೆ..ಇದಕ್ಕಿಂತ ಹೆಚ್ಚಿಗೆ ಹೇಳಕ್ಕೆ ಬರಿಯಕ್ಕೆ.. ಈ ಹಾಳಾದ್ ಕಣ್ಣೀರು ಅಡ್ಡಡ್ಡ ಬರ್ತಿದೆ...
I LOVE YOU BELLI... ♥ ♥
i MISS YOU SO MUCH ♥ ♥

ಚೆಕ್ ಮೇಟ್

ಸುಮ್ನೆ ಬೊರಾಯ್ತು ಫ್ರೆಂಡ್ ಮನೆಗೆ ಹೋಗಾಣ ಅಂತ ಹೋದೆ..!! ಹಾಳಾದವನು ಅವನ ಡವ್ ಮೀಟ್ ಮಾಡಕ್ಕೆ ಹೋಗಿದ್ದ..!! ಅನ್ಯಾಯವಾಗಿ ಅವನ ತಂಗಿ ಕೈಲಿ ಸಿಕ್ಕಾಕ್ಕಂಡು ಬಿಟ್ಟೆ.. ಅವಳೋ ಚೆಸ್ ಚಾಂಪಿಯನ್ನು..ಯಾರು ಸಿಗದೇ ಇದ್ರೆ ಒಬ್ಬೋಬ್ಲೆ ಚೆಸ್ ಆಡ್ತಾ ಇರ್ತಾಳೆ..!! "ಅಣ್ಣ ಬಾ ಚೆಸ್ ಆಡೋಣ, ನೀನ್ ಇವತ್ತು ತಪ್ಪಿಸ್ಕೊಂದ್ರೆ ಅಷ್ಟೇ" ಅಂತ ಧಮಕಿ ಬೇರೆ ಹಾಕಿದ್ಲು..!!
ನಾನೂ ಚೆಸ್ ಅಲ್ಲಿ ಪಂಟ.. ಕೊನೆರು ಹಂಪಿಗೆ ಕೋಚು.. ಅನಂದುಗೆ ದೋಸ್ತು.. ಅವರೆಲ್ಲ ಗೆಲ್ಲಲಿ ಅಂತ ನಾನು ಆ ಫೀಲ್ಡ್ ಗೆ ಎಂಟ್ರಿ ಕೊಟ್ಟಿರ್ಲಿಲ್ಲಾ ಅಷ್ಟೇ ...( ಆ ವಿಷಯ ಅವಳಿಗೂ ಗೊತ್ತಿತ್ತು ಅನ್ಸತ್ತೆ ಅದ್ಕೆ ಆ ರೇಂಜ್ ಅಲ್ಲಿ ನನ್ನ ಕರೆದು ಆಡಕ್ಕೆ ಕೂರಿಸ್ಕೊಂದಿದ್ದಳು )
ಆ ಕಿಂಗು ಕ್ವೀನು ಭಿಷಪ್ಪು ರಾಕು ನೈಟು ಪಾನು ಕ್ಯಾಸಲಿಂಗು ಡ್ರಾ.. ಅದು ಇದು ಏನೇನೋ ಮಾಡಿ ಲಾಸ್ಟ್ ಗೆ "ಚೆಕ್ ಮೆಟ್" ಅಂದ್ಳು.. ಸಧ್ಯ ಮುಗಿತಲಾ ಕಳಚಿಕೊಳ್ಳೋಣ ಅಂತ ಏಳಕ್ಕೆ ರೆಡಿ ಆದೆ..
"ಅಣ್ಣಾ ಬಾ ಏನು ಹೊರಟೇಬಿಟ್ಟೆ ಏನೋ ತುಂಬಾ ತುಂಬಾ ಡೈಲಾಗು ಹೊಡಿತಾ ಇರ್ತಿಯಾ ನನ್ನ ಚೆಕ್ ಮೆಟ್ ಮಾಡು ಆಮೇಲೆ ಇಲ್ಲಿಂದ ಹೊರಡು" ಅನ್ನೊದ..!!
ಸುರು ಆಯ್ತು ಇವಳ ರೋಧನೆ convince ಮಾಡಕ್ಕಾಗಲ್ಲ ಇವಳನ್ನ confuse ಮಾಡಣ ಅಂತ ನಾನು ಶುರು ಮಾಡಿದೆ...
"ಈ ಚೆಕ್ ಮೆಟ್ ಅಲ್ಲಿ ಮಜಾ ಇಲ್ಲಾ ನಿಜವಾದ ಚೆಕ್ ಮೆಟ್ ಅಂದ್ರೆ .........
* ಇಬ್ಬರು ಪ್ರೇಮಿಗಳು ಕೂತಿರ್ತಾರೆ ಎದುರುಗಡೆ ಒಂದು ಸೂಪೆರ್ ಡ್ರೆಸ್ ಅಲ್ಲಿ S3*Y ಹುಡುಗಿ ಹಂಗೆ ಹಾದು ಹೋಗ್ತಾಳೆ.. ಆಗ ಅವಳನ್ನೇ ಕದ್ದು ಕದ್ದು ನೋಡ್ತಾ ಇದ್ದ ಹುಡುಗನ್ನ ಅವನ ಲವ್ವರ್ ಕೇಳ್ತಾಳೆ "ನಮ್ಮಿಬ್ಬರಲ್ಲಿ ಯಾರು ತುಂಬಾ ಹಾಟ್ " ಅಂತ ಅದು ಚೆಕ್ ಮೆಟ್..!!
* ಮದುವೆ ಆಗೋ ಹುಡುಗಿನ ಮೊದಲ ಸಲ ಮನೆಗೆ ಕರ್ಕೊಂಡು ಹೋಗಿರ್ತಿರ..ನಿಮ್ಮ ಅಮ್ಮನ ಮುಂದೆಯೇ ಕೇಳ್ತಾಳೆ "ರೀ ನಾನು ನಿಮಗೆ ತುಂಬಾ ಇಷ್ಟಾನ? ನಿಮ್ಮ ಅಮ್ಮನಾ?" ಅಂತ.. ಅದು ಚೆಕ್ ಮೆಟ್ ..!!
* ಕಾವೇರಿ ಗಲಾಟೆಲ್ಲಿ ಸಿಕ್ಕಾಕ್ಕಂದಿರೋ ಮಂತ್ರಿಗಳ ಪರಿಸ್ಥಿತಿ ಇದ್ಯಲ್ಲ ಅದು ಚೆಕ್ ಮೆಟ್ ..!!
* ಮೊನ್ನೆ ಮ್ಯಾಚಲ್ಲಿ ಗೆದ್ರೂ ಮನೆಗೆ ಬಂದ್ರಲ್ಲ ನಮ್ಮ ಹೀರೋಗಳು ಅವರದ್ದು ಚೆಕ್ ಮೆಟ್..!!
* ಕಾಲೇಜಲ್ಲಿ ಮಿಸ್ಸು ಪಾಠ ಮಾಡ್ತಾ ಕೇಳಿರೋ ಪ್ರಶ್ನೆಗೆ ಉತ್ತರ ಗೊತ್ತಿಲ್ದಿರೋ ನಮಗೆ ಬೈಮಿಸ್ಟೇಕ್ ನಿಮ್ಮ ಮತ್ತು ಅವರ ಕಣ್ಣು ಕಣ್ಣು ಮೀಟ್ ಆದ್ರೆ.. ಅದು ಚೆಕ್ ಮೆಟ್ ..!!
* ನಿಮ್ಮ ಬಾಸ್ ಹತ್ರ ಹೆಂಡತಿಗೆ ಹುಷಾರಿಲ್ಲ ಅಂತ ರಜಾ ತೊಗೊಂಡು ಥಿಯೇಟರ್ ಅಲ್ಲಿ ಅವರ ಕೈ ಯಲ್ಲಿ ಸಿಕ್ಕಿ ಬಿದ್ರೆ ಅದು ಚೆಕ್ ಮೆಟ್ ..!!
ಬಾಯ್ ಫ್ರೆಂಡು ಇಲ್ಲದೆ ಇರೋ ಸುಂದರ ಹುಡುಗಿಯರಿಗೆ ನನ್ನದೊಂದು ಕೊನೆ ಮಾತು...
ಉಮ್ಮಾ ಉಮ್ಮಾ ಉಮ್ಮಾ ♥ ♥ ♥ ... ಎಲ್ಲರಿಗೂ ಫ್ಲಯಿಂಗ್ ಕಿಸ್ ಕೊಟ್ಟಿದೀನಿ.. ಯಾರ್ಯಾರಿಗೆ ಬೇಡಾ ದಯವಿಟ್ಟು ನಾನ್ ಕೊಟ್ಟಿದ್ದನ್ನ ನನಗೇ ವಾಪಸ್ ಕೊಡಿ.... ಕೊಡದೆ ತಮ್ಮಲ್ಲೇ ಉಳಿಸಿಕೊಂಡವರಿಗೂ ಧನ್ಯವಾದಗಳು..!!
ಇದು ಕಣ್ರೀ ' ಚೆಕ್ ಮೆಟ್ ' ಅಂದ್ರೆ..!!

ಮೊಡವೆ ರಾದ್ದಾಂತ..!!

ತುಂಬಾ ಬೇಜಾರಲ್ಲಿದೀನಿ..
ಜಾಸ್ತಿ ಬರಿಯಲ್ಲ ಹೆಚ್ಚಿಗೆ ಕೊರಿಯಲ್ಲಾ..!!
ಅದು ಕಾರಣ ಏನಪ್ಪಾ ಅಂತಂತಂತಂತಂತಂತ್......ದರೆ, ಇವತ್ತು ಬಸ್ಸಲ್ಲಿ ಒಂದು ಸುಂದರ ಹುಡುಗಿನ ನೋಡಿದೆ.!!
ಅವಳದ್ದು ಎಲ್ಲಾನು ಸೂಪರಾಗಿತ್ತು ( ಮುಕದ ಬಗ್ಗೆ ಹೇಳ್ತಾ ಇದ್ದೀನಿ )..! ಆದ್ರೆ ಅವಳ ಸುಂದರ ಮುಕದ ಮೇಲಿನ ಮೂಗಿನ ಮೇಲೆ ಒಂದೇ ಒಂದು ದಪ್ಪ ಮೊಡವೆ ಆಗೋಗಿತ್ತು..!! ಅದನ್ನ ನೋಡಿದಾಗಿಂದಾ ಇನ್ನೂ ಕೂಡ ನನ್ ಹಾರ್ಟು ಗೊಳೋ ಗೊಳೋ ಅಂತ ಅಳ್ತಾ ಇದೆ ಕಣ್ರೀ..!!
ಹುಡುಗಿಯರಿಗೆ ಮೊಡವೆ ಆದ್ರೆ ಎಷ್ಟು ನೊಂದುಕೊಳ್ತಾರೆ ಅಂತ ಹುಡುಗರಿಗೆ ತಾನೇ ಜಾಸ್ತಿ ಗೊತ್ತಾಗೋದು..!! ಮುಕದ ಮೇಲೆ ಗುಳ್ಳೆ ಆದ್ರೆ... ಮೊಡವೆ ಅಂತೆ ಅದೇ ಬೇರೆ ಕಡೆ ಆದ್ರೆ ಅದನ್ನೇ ಕಜ್ಜಿ ಅಂತಾರೆ.. ಈ ತರ ಮೊಡವೆಗಳಿಗೂ ಬೇಧ-ಭಾವ..!! ಆದರೂ ಮೊಡವೆಗಳನ್ನ ಕೀಳೋದ್ರಲ್ಲಿ ಏನೋ ಒಂಥರಾ ಮಜಾ.. ಅದನ್ನ ಮುಕದ ಮೇಲೆ ಕಲೆ ಮಾಡ್ಕೊಂಡವರ ಹತ್ರಾನೆ ಕೇಳಬೇಕು..!! ಪ್ರಾಯದಲ್ಲಿರೋ ಎಲ್ಲಾ ಮುದುಕ ಮುದುಕಿ ಆಂಟಿ ಅಂಕಲ್ಲು ಇನ್ನು ಯಾರ್ಯಾರು ಇದ್ದಾರೋ ಏಲ್ಲರಿಗೂ ಇದು ಕಾಮನ್ನು..!! ಅದು ಬಂದ್ರೇನೆ ದೊಡ್ಡೋರು ಆದಂಗೆ ಅಂತ ನಮ್ಮಜ್ಜಿ ಹೇಳ್ತಾ ಇದ್ರು..!!
ಪ್ರಪಂಚದ 80 % ಟೀನೆಜರ್ಸು ಮೊಡವೆ ಇಂದ ಮೆಂಟಲ್ ತರ ಅಡ್ತಾರಂತೆ..!! ಮೊಡವೆನೇ ಆಗದೆ ಇರೋ ಮುದುಕೀಗೆ ಮುತ್ತು ಕೊಟ್ರೆ ಸಾವೇ ಬರಲ್ಲ ಅಂತ ನಮ್ ಸ್ವಾಮಿಗಳು ಹೇಳ್ತಾ ಇದ್ರು..!! ಎಷ್ಟೊಂದು ಜನ ಮೊಡವೆನೇ ಒಡವೆ ಮಾಡ್ಕೊಂಡು ನಮ್ಮ ನಡುವೆ ಇದಾರೆ,, ಅವರ ಗೊಡವೆ ನಮಗೀಗ ಬೇಡವೇ ಬೇಡ..!!
ನಮ್ಮಮ್ಮ ಹೇಳ್ತಿದ್ರು ಯಾರಾದ್ರೂ ಹುಡುಗಿ ಕಣ್ಣು ಹಾಕಿದ್ರೆ ನಮ್ಮಂತ ಒಳ್ಳೆ ಹುಡುಗರಿಗೆ ಮೊಡವೆ ಆಗತ್ತಂತೆ.. ನನಗೂ ನಾಲ್ಕೈದು ಮೊಡವೆ ಆಗಿದೆ... ಯಪ್ಪಾ ಅದಿಕ್ಕೆ ಮೊದ್ಲು ಮನೆಗೋಗಿ ನಮ್ಮಜ್ಜಿ ಹತ್ರ ದೃಷ್ಟಿ ತೆಗಿಸ್ಕೋಬೇಕು..!! bye..!!

ಓದಿ.. ನಿಮ್ಮದು ಇಂಪ್ರೂವ್ ಆಗ್ತದೆ..

ತುಂಬಾ ಬೋರು ಅದ್ಕೆ ಹಂಗೆ ಬರೀತಿದೀನಿ..!! ಇದನ್ನು ಯಾರು ಓದಿ ನಿಮ್ಮ ಅಮೂಲ್ಯ ಟೈಮ್ ನ ನಿಮ್ ಅದನ್ನ....!! ಅದೇ ಕಣ್ರೀ.. ತಾಳ್ಮೆನ, ಕ್ಯಾಮೆನ, ಇರೋಬರೋ ಪಟಾಯ್ಸಿದ ಪಿಗರುಗಳನ್ನ ಇತ್ಯಾದಿ ಇತ್ಯಾದಿ.. ಕಳ್ಕೊಬೇಡಿ..!!
* ಹಂದಿಗೆ ಆಕಾಶ ನೋಡೋಕಾಗಲ್ಲ.. ಒಳ್ಳೆ ಹುಡುಗೀರು ನಮಗೆ ಕಾಣಲ್ಲಾ..!!
* ಮೊಲಗಳಿಗೆ ವಾಂತಿ ಬರಲ್ಲಾ.. ಹೊಲಗಳಿಗೆ ಬಿಡಕ್ಕೆ ನೀರಿಲ್ಲ...!!
* ಬಾತುಕೋಳಿ ವಾಯ್ಸು ಎಕೋ ಆಗಲ್ಲಾ.. ಹೆಂಗಸರ ಬಾಯಿಗೆ ಬೀಗಾನೆ ಇಲ್ಲಾ...!!
* ನಿಮ್ಮ ಕೆನ್ನೆ ಒರೆಂಜ್ ಆಗ್ಬೇಕಂದ್ರೆ ಕ್ಯಾರೆಟ್ ತಿನ್ನಿ... ಕೆಂಪಗಾಗ್ಬೇಕು ಅಂದ್ರೆ ಯಾವ್ದಾದ್ರು ಹುಡುಗಿ ಹತ್ರ ಏಟು ತಿನ್ನಿ..!!
* ಪಿಸಾ ವಾಲುಗೋಪುರ ನೋಡಿ 250 ಜನ ಬಿದ್ದೊಗಿದಾರಂತೆ.. ದಿನಾ ಲವ್ವಲ್ಲಿ ಬಿಳೋರನ್ನ ತಡಿಯೋದು ಹೆಂಗೆ??
* ನಮ್ಮ ಕಣ್ಣಿನ ಬಾಲು ಅದೇರೀ (ಐ ಬಾಲ್) ತೂಕ ಕೇವಲ ಒಂದು ಒನ್ಸ್ ಅಂತೆ.. ಅದು ನೋಡ್ಬಾರದ್ದನ್ನೇ ಜಾಸ್ತಿ ನೋಡತ್ತಲ್ಲ ಅದನ್ನ ತೂಕ ಮಾಡಕ್ಕಾಗತ್ತ ??
* ನಮ್ ಬಾಡಿಲಿ ಎಲ್ಲಕ್ಕಿಂತ ಸ್ಟ್ರಾಂಗ್ ಮಸಲ್ ಅಂದ್ರೆ ನಾಲಿಗೆ.. ಈಗ ಹೇಳಿ ಮನುಷ್ಯರಲ್ಲಿ ತುಂಬಾ ಸ್ಟ್ರಾಂಗ್ ರಾಜಕಾರಣಿ ತಾನೇ?
* ನಕ್ಷತ್ರ ಮೀನಿಗೆ ಮೆದುಳೇ ಇಲ್ವಂತೆ ಆದರೂ ಅದು ಸ್ಟಾರ್.. ಮತ್ತೆ ನಾವ್ಯಾಕೆ ಮೆದುಳಿದ್ದು ಕೊರಗಬೇಕು?
* ಎಲ್ಲಾ ಹಿಮ ಕರಡಿಗಳು ಎಡಗೈ ಪ್ರಾಣಿಗಳು.. ಇದರ ಬಗ್ಗೆ ನನ್ನದೇನು ತಕರಾರಿಲ್ಲ ನಿಮ್ಮದೆನಾದ್ರು ಇದ್ರೆ ಯೋಚಿಸಿ ಮರೆತುಬಿಡಿ..!! ಯಾಕಂದ್ರೆ ನಾವು ನೀವು ಏನು ಮಾಡಕ್ಕಾಗಲ್ಲ..!!
* ಹವಾಯಿ ಬಾಷೆಲಿ ಇರೋದೇ ಹನ್ನೆರಡು ಅಕ್ಷರಗಳು.. ಅದೇನು ಮಹಾ ಮೂಕಿ ಬಾಷೆಲಿ ಅಷ್ಟೂ ಇರಲ್ವಲ್ಲಾ..!!
* ಎಸ್ಕಿಮೋ ಭಾಷೇಲಿ 'ಹಿಮಾ' ಅನ್ನೋಕೆ ನೂರು ಪದಗಳಿವೆಯಂತೆ ಆದರೆ 'ಹಲೋ' ಅನ್ನೋಕೆ ಒಂದು ಪದ ಇಲ್ವಂತೆ.. ಇದೊಳ್ಳೆ ಹುಡುಗಿಯೇ ಹುಡುಗನ್ನ ಪ್ರಪೋಸ್ ಮಾಡಿದಾಗ,, ರಿಯಾಕ್ಷನ್ ಕೊಡಕ್ಕೆ ಆಗದೆ ಇರೋ ಹುಡುಗನ ಮಕಾ ತರ ಇದೆ..!!
* ಪ್ರಪಂಚದಲ್ಲಿ ಸುಮಾರು 6800 ಗುರುತಿಸಿರೋ ಭಾಷೆಗಳಿವೆಯಂತೆ.. ಹಾಳಾದ್ದು ಸಮಯಕ್ಕೆ ಸರಿಯಾಗಿ ಯಾವ ಒಳ್ಳೆ ಭಾಷೆನು ಬರಲ್ಲ ನಮ್ ಬಾಯಲ್ಲಿ..!!
* ನಮ್ಮ ಎಲುಬು ಸ್ಟೀಲ್ ಗಿಂತ ಐದು ಪಟ್ಟು ಗಟ್ಟಿ ಇದೆ.. ಇದನ್ನ ನಂಬೋದು ಕಷ್ಟ..ಯಾಕಂದ್ರೆ ಮೂಳೆ ಯಾಕೆ ರಷ್ಟ್ ಹಿಡಿದಿರೋ ಸ್ಟೀಲ್ ಗಿಂತ ಬೇಗ ಮುರಿಯತ್ತೆ?
* ಬೆಕ್ಕಿನ ಮೂತ್ರ ಬೆಳಕಲ್ಲಿ ಹೊಳೆಯುತ್ತಂತೆ... ಇದನ್ನ ಕಂಡು ಹಿಡಿದವನನ್ನೂ ವಿಜ್ಞಾನಿ ಅನ್ನಬಹುದೇ??
* ಜಿರಾಫೆ ಗೆ ಈಜಕ್ಕಾಗಲ್ಲ ಆನೆಗೆ ಜಂಪ್ ಮಾಡಕ್ಕಾಗಲ್ಲ.. ನಮಗೆ ಎಲ್ಲ ಆಗತ್ತೆ ಆದ್ರೆ ಹಾಳಾದ್ದು ಬೇಜಾರು ಹೋಗಲ್ಲ.. ಮನಸು ಒಪ್ಪಲ್ಲಾ..!!

ಸಾಕು ಜಾಸ್ತಿ ಉದ್ದ ಬರೆದ್ರೆ ಜನ ಓದಲ್ಲಾ,,
ಓದಿದವರಿಗೆ ಅರ್ಥ ಆಗಿರಲ್ಲ ,,
ಅರ್ಥ ಆದವರು ಬಾಯಿ ಬಿಡಲ್ಲಾ..
ಮತ್ಯಾಕೆ ಬೇಕು ಮದ್ಯೆ ನಂಗೆ ಇವೆಲ್ಲಾ ..!!

ಜೈ ಕನ್ನಡ

ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)..!! ಪಕ್ಕದಲ್ಲಿ ಮೂವರು ಬುದ್ದಿಜೀವಿಗಳು ( ಯಾಕಂದ್ರೆ ಅವರಿಗೆ ಬಿಳಿ ಗಡ್ಡ ಇತ್ತು ) ಮಾತಾಡ್ತಾ ನಿಂತಿದ್ರು..!! ಅಷ್ಟರಲ್ಲಿ ಯಾರೋ ಸುಂದರ ಯುವತಿ ನನ್ನತ್ರ ಅಡ್ರೆಸ್ಸು ಕೇಳಿದ್ಳಪ್ಪಾ.. !!ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು.. ಸರಿ, ನಾನು ಒಬ್ಬ ಕನ್ನಡಿಗ ಆದ್ದರಿಂದ ಅವಳ ವಿಳಾಸನ ತೆಲುಗಲ್ಲೇ ಹೇಳಿದೆ..!!
ಇದು ನಮ್ಮ ಕನ್ನಡ ಬುದ್ಧಿ ಜೀವಿಗಳಿಗೆ ರೇಗಿಸಿತು ಅನ್ಸತ್ತೆ..!! "ತಮ್ಮ ಬಾ" ಅಂದ್ರು ಹತ್ರ ಹೋದೆ.. "ನಿನ್ ಯಾವೂರು? ನಿಮ್ ಭಾಷೆ ಯಾವ್ದು" ಅಂದ್ರು..!! "ಸಾರ್ ನಾನು ಇಲ್ಲೇ ಇರೋದು ಕನ್ನಡಿಗಾ" ಅಂದೇ..!! "ಮತ್ಯಾಕೆ ಅವಳಿಗೆ ತೆಲುಗಲ್ಲಿ ಉತ್ತರ ಕೊಟ್ಟೆ.. ಬೇರೆ ಭಾಷೆ ಅವರಿಗೆ ಅವರ ಭಾಷೆ ಬಗ್ಗೆ ಎಷ್ಟು ಪ್ರೀತಿ ಹೆಮ್ಮೆ ಗೌರವ,, ನಿಮ್ಮಂಥಅವರಿಂದಾನೆ ನಮ್ ಕನ್ನಡಕ್ಕೆ ಇಂಥ ಸ್ಥಿತಿ" ಅಂದ್ರು..!!
ನನಗೆ ಉರಿದೊಯ್ತು .. ಆದ್ರೆ ಏನ್ ಮಾಡೋದು ಬುದ್ಧಿಜೀವಿಗಳು ಮೇಲಾಗಿ ಹಿರಿಯರು.. ಏನು ಹೆಚ್ಚು ಕಮ್ಮಿ ಮಾತಾಡೋ ಹಾಗಿಲ್ಲ... "ಸಾರ್ ಕ್ಷಮಿಸಿ ಗೊತ್ತಾಗಿಲ್ಲಾ.., ಆದ್ರೆ ನನಗೊಂದು ಸಂದೇಹ ಕನ್ನಡದಲ್ಲಿ ಮಾತಾಡ್ಬೇಕು ಅಂದ್ರಲ್ಲ ಯಾವ್ ಕನ್ನಡದಲ್ಲಿ ಸಾರ್ ?? ಇದು ನಂಗಂತೂ ತುಂಬಾ ಗಲಿಬಿಲಿ ವಿಷಯಾ ಅಂತ ಅಂದೇ??"
" ಏನಯ್ಯ ಹಿಂಗಂತಿದೀಯ ? ಇರೋದೊಂದೇ ಕನ್ನಡ ಅದರಲ್ಲೇ ಹೇಳು ಅಂದ್ರು .!!"
ನಾನಂದೆ "ಸಾರ್ ನಾನೀಗ ಹೋಗೋ ಬಸ್ ಕಂಡಕ್ಟರ್ ಹಾಸನದವರು ಅವ್ರು 'ಎಲ್ಲಾ ಬೇಗಾ ಅತ್ಗಳೀ ಇಂದಕ್ಕೆ ಓಗಿ ' ಅಂತಾರೆ ಅದು ಕನ್ನಡ.. ಅಮೇಲೆ ಮಂಡ್ಯ ಹೋಗ್ಬೇಕು ಅಲ್ಲಿ 'ಬಾರೋ ಸಂದಾಕಿದಿಯಾ ಮಗಾ, ಬಾರ್ಲಾ ಮುದ್ದೆ ಉಣ್ಣು ' ಅಂತಾರೆ ಅದು ಕನ್ನಡ.. ಸರಿ ನೆಕ್ಷ್ಟು ಮೈಸೂರು ಅಲ್ಲಿ ನಯ ನಾಜೂಕಿನ ಅಚ್ಚ ಸ್ವಚ್ಛ ಕನ್ನಡ.. ಮುಂದೆ ಮಂಗಳೂರಿಗೆ ಹೋದ್ರೆ ' ಹೊಯ್ ಇದು ನಮ್ಮ ಕುಡ್ಲ ತುಂಬಾ ಚಂದ ಉಂಟು ಬನ್ನಿ ಸುತ್ತುವ ' ಅಂತಾರೆ ಅದು ಕನ್ನಡ..ವಾಕೆ ಅಂತ ಹುಬ್ಳಿಗೆ ಹೋದೆ 'ಅಲಾಲಾಲಾಲಾ.. ಏನ್ ಕಲರ್ ಆಗಿಯೋ ತಮಾ ಬೆಂಗಳೂರ್ ಹವಾ ಬೇಶ್ ಆಗಿ ಒಗ್ಗಯ್ತಿ ಬಿಡ್ಪಾ ಬಾ ಹಂಗಾ ಸುತ್ತಾಕೆ ' ಅಂತಾರೆ ಅದು ಕನ್ನಡ.. ಬೆಳಗಾವಿಗೆ ಹೋದ್ರೆ ಮರಾಟಿ ಮಿಕ್ಸ ಕನ್ನಡ.. ಬಳ್ಲಾರಿಲಿ 'ಅದಿರು'ವಂತ ಕನ್ನಡ.. ಕಲಬುರ್ಗಿ ರಾಯಚೂರು ಗಂಗಾವತಿ ಕಡೆ ಕಡಕ್ ಕನ್ನಡ.. ಬೀದರ್ ಬಿಜಾಪುರದಲ್ಲಿ ಬಹಮನಿ ಆದಿಲ್ ಸುಲ್ತಾನರ ಕನ್ನಡ.. ಸರಿ ಅಂತ ದುರ್ಗಾಕ್ಕೆ ಬಂದ್ರೆ ಸಂಗೊಳ್ಳಿ ರಾಯಣ್ಣನ ಓಬವ್ವಳ ವಿರಾವೇಶದ ಕನ್ನಡ.. ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಕನ್ನಡ.. ಕೋಲಾರದಲ್ಲಿ ತೆಲುಗು ತಟಕಿಟ ಕನ್ನಡ.. ಕೊಳ್ಳೆಗಾಲಕ್ಕೆ ತಮಿಳು ಪುಳಿಯೋಗರೆ ಕನ್ನಡ..ಯಾವ್ದು ಬೇಡಪ್ಪ ಅಂತ ನಮ್ಮ ಮನೆಗೆ ಹೋದ್ರೆ 'ತಮಾ ಈಗ ಬಂದ್ಯಾ ಬಾ ಆಸರಿ ಕುಡಿಲಕ್ಕು.. ಮಗೆ ಕಾಯಿ ದೋಸೆ ಮಾಡ್ತಿ ತಿನ್ಲಕ್ಕು.. ಮತ್ತೆಂತ ವಿಶೇಷಾ ?? ಹೆಂಗಾತು ತಿರುಗಾಟ..' ಉಫ್ಫ್..... ಇದು ಕನ್ನಡಾನೇ ಕಣ್ರೀ..ಮಲೆನಾಡು ಚಿಕ್ಕಮಗಳೂರು ಅಲ್ಲಿದೆ ಮಳೆ ಕನ್ನಡ.. ಕೊಡಗಿನದು ಸುಳಿಗನ್ನಡ... ಯಾವ್ದು ಬೇಡಾ ಅಂತ ಮತ್ತೆ ಬೆಂಗಳೂರಿಗೆ ಬಂದ್ರೆ ಇಲ್ಲಿದು ಕುಳಿಗನ್ನಡ.. ಯಾಕಂದ್ರೆ ಯಾರ್ ಬಾಯಲ್ಲೂ ಸರ್ಯಾಗಿ ಕಡೆ ಕೂರಲ್ಲ ನಿಲ್ಲಲ್ಲಾ..!!
ನಮ್ ರಾಜ್ಯದಲ್ಲಿ ಪ್ರತಿ ಇಪ್ಪತ್ತು ಕಿಲೋಮೀಟರು ಗೆ ಭಾಷೆ ಪರಿಸರ ಜನರ ಮನಸ್ಥಿತಿ ವೇಷ ಭೂಷಣ ಎಲ್ಲ ಬದಲಾಗತ್ತಂತೆ..!! ಅದೇನೋ ಗೊತ್ತಿಲ್ಲಾ ಈ ದೋಸೆ ತು (ದೋಸೆ ಅಲ್ಲಾ ) ಭಾಷೆ ಮಾತ್ರ ಚೇಂಜ್ ಆಗತಾನೆ ಇದೆ.. ನೆಲಮಂಗಲದ ರಕ್ತ ಸಿಕ್ತ ಕನ್ನಡ ಇಂದ ಮೆಜೆಸ್ಟಿಕ್ ನ ಮಿಕ್ಸಡ್ ಮಸಾಲ .. ಶಿವಾಜಿ ನಗರದ ' ನಮ್ದುಕೆ ಕನ್ನಡ ನಿಮ್ದುಕೆ ಮಾಲುಮು' ಇಂದ ಎಂಜಿ ರೋಡಿನ ಅಲ್ಪಸಂಖ್ಯಾತ ಭಾಷೆನೂ ಕನ್ನಡಾನೇ..!! ಇತ್ಲಾಗೆ ರಿಂಗ್ ರೋದಲ್ಲೇ ರಿಂಗ್ ರಿಂಗ್ ರಂಗು ರಂಗು ಭಾಷೆ... ಎಲ್ಲಾನು ಕನ್ನಡಾನೇ..!!
ಸಾರ್ ಈಗ ಹೇಳಿ ನಾನು ಯಾವ್ ಕನ್ನಡದಲ್ಲಿ ಕನ್ನಡ ಬಾರದವರಿಗೆ ಉತ್ತರಿಸಬೇಕು ಅಂತ??"
ಮುಂದೆ ಏನಾಯ್ತು ಎಲ್ಲ ಇಲ್ಲಿ ಬೇಡಾ..ಯಾಕಂದ್ರೆ ನಾನು.... ನಮ್ ಹಿರಿಯರು.. ತುಂಬಾ ಗೊಂದಲದಲ್ಲಿದ್ದೇವೆ..!!
ಎಲ್ರು ನಿಮ್ ನಿಮ್ ಕೆಲಸ ನೋಡ್ಕಳಿ....!!!
ಕನ್ನಡಮ್ಮ ಶರಣು ತಾಯೆ..!!
ಕನ್ನಡ ನಮ್ಮದು ಕಾವೇರಿನೂ ನಮ್ಮದೇ..!!

"ಅಭಿಯಂತರ ದಿನದ ಶುಭಾಶಯಗಳು.."

"ಅಭಿಯಂತರ ದಿನದ ಶುಭಾಶಯಗಳು.."
ಗೊತ್ತಾಗೋಯ್ತು ಬಿಡ್ರೀ.. ಅರ್ಥ ಆಗದೆ ಬಾಯ್ ಬಾಯ್ ಬಿಟ್ಟಿದ್ದು ಸಾಕು....!!
ಕನ್ನಡಿಗರೆಲ್ಲರಿಗೂ ಕನ್ನಡಲ್ಲೇ ಹೇಳಬೇಕಲ್ವಾ? 
"ಹ್ಯಾಪಿ ಇಂಜಿನಿಯರ್ಸ್ ಡೇ" ಇವಾಗ ಅರ್ಥ ಆಗಿರ್ಬೇಕಲ್ಲಾ.. ಈಗಲೂ ಅರ್ಥ ಆಗಿಲ್ಲ ಅಂದ್ರೆ ಯಾವ್ದಾದ್ರು ಬಾಳೇ ಗಿಡಕ್ಕೆ ನೇಣು ಹಾಕ್ಕೊಳ್ಳಿ..!!
ಇಂಜಿನಿಯರ್ ಅಂದ್ರೆ 'ಬುದ್ದಿವಂತ' 'ಅಸಾಮಾನ್ಯ' ಅಂತ ಅರ್ಥ.. ಲಾಟಿನ್ ಅಮೇರಿಕನ್ ಭಾಷೆ ಇಂದ ಸಾಲ ತೊಗೊಂಡಿದ್ದು ಇವತ್ತು ಎಲ್ಲಾರೂ ಅದಾಗಕ್ಕೆ ತಲೆ ತಲೆ ಕೆಡಿಸ್ಕೋತಿದಾರೆ..!!
ಇಂಥ ಬುದ್ದಿವಂತರ ಪ್ರೊಫೆಶನ್ ಬಗ್ಗೆ ಜಾಸ್ತಿ ಹೇಳೋದ್ರಲ್ಲೇನು ಮಜಾ ಇಲ್ಲ,, ಆದ್ರೆ ಕೆಲವು ವಿಷಯಗಳು ಬೇರೆಯವರು ಹೇಳಿದ್ದು, ನಾನು ನನ್ನ ಕಿವಿಯಿಂದ ಕೇಳಿದ್ದು, ನೋಡಿದ್ದು, ಮಾಡಿದ್ದು ಎಲ್ಲಾ ಇಲ್ಲಿ ಉದುರಿಸ್ತೀನಿ.. ಇಷ್ಟ ಇದ್ದವರು ಆಯಿಕೊಂಡು ಓದಿಕೊಳ್ಳಿ..!!
* ಟೀ ಶರ್ಟುಗಳು ಮತ್ತು ಜೀನ್ಸೆ ಅವರಿಗೆ ಫಾರ್ಮಲ್ಸು ಅಂತೆ..!
* ಇಂಜಿನಿಯರ್ಸು ಅವರ ಬೈಕು ಕಾರನ್ನ ಅವರ ಹುಡುಗಿಯರಿಗಿಂತ ಜಾಸ್ತಿ ಮುಟ್ಟುತ್ತಾರಂತೆ..!
* ಅವರಿಗೆ ಗಣಿತ ಅರ್ಥ ಆಗುತ್ತೋ ಬಿಡತ್ತೋ ಯುಸ್ ಅಂತು ಮಾಡೇ ಮಾಡ್ತಾರೆ..!
* ಪೆಟ್ರೋಲ್ ರೇಟ್ ಜಾಸ್ತಿ ಆದ್ರೂ ತಲೆ ಕೆದಿಸ್ಕೊಳ್ಳದೆ ಇರೋ ಅವರು ವೆಕ್ಟರ್ ಗ್ರಾಪ್ಹ್ ಸರಿ ಆಗಿಲ್ಲ ಅಂದ್ರೆ ತಲೆ ಕೆಟ್ಟು ಸಿಕ್ ಸಿಕ್ಕಿದವರಿಗೆಲ್ಲ ಕಚ್ಚುತ್ತಾರಂತೆ..!
* ಅವರಿಗೆ ಚಿತ್ರ ಬರಿಯಕ್ಕೆ ಬರದೇ ಇದ್ದರು ಸಹಾ ಫಿಗರ್ ಅಂದ್ರೆ ತುಂಬಾನೇ ಇಷ್ಟ ಅಂತೆ..!!
* ಇಂಜಿನಿಯರ್ಸ್ ಗೆ ಕಾರು ಬಸ್ಸು ಮನೆ ಕರೆಂಟು ಎಲ್ಲ ಮಾಡಕ್ಕೆ ಗೊತ್ತಿದ್ರೂ ರಿಲೇಶನ್ ಶಿಪ್ ಮೆಂಟೈನ್ ಮಾಡಕ್ಕೆ ಗೊತ್ತಿಲ್ಲ ಅನ್ನೋ ಅಪವಾದವಿದೆ.!!
* ಅವರನ್ನು ಆಧುನಿಕ ಸನ್ಯಾಸಿಗಳೇ ಎಂದೂ ಬಣ್ಣಿಸಲಾಗುತ್ತಿದೆ..!!
* ಮಜಾ ಅಂದ್ರೆ ಇಂಜಿನಿಯರ್ಸು ಡಾಕ್ಟಾರೆಟು ತೊಗೊಂಡು ಡಾಕ್ಟರ್ ಆಗಬಹುದು..ಡಾಕ್ಟರ್ ಗೆ ಇಂಜಿನಿಯರ್ ಆಗಕ್ಕಾಗಲ್ಲಾ..!!
* ಇಂಜಿನಿಯರ್ಸು ಪ್ರಾಬ್ಲೆಮ್ ನ ಸಾಲ್ವ್ ಮಾದೊದಿಕ್ಕಿಂತ ಜಾಸ್ತಿ ಹೊಸಾ ಪ್ರಾಬ್ಲಂನ ಕ್ರಿಯೇಟ್ ಮಾಡ್ತಾರಂತೆ..!!
* ಆದ್ರೂ ಇಂಜಿನಿಯರ್ಗೆ ಹೊಳಿಯುವಷ್ಟು ಬೇರೆ ಯಾರಿಗೂ ಹೊಳಿಯೋಕೆ ಸಾಧ್ಯಾನೆ ಇಲ್ಲ ಅಂಥ ವೈಜ್ಞಾನಿಕವಾಗಿ ಪ್ರೂವೆ ಆಗಿದೆ ದಯವಿಟ್ಟು ಏನು ಅದು ಅಂತ ಮಾತ್ರ ಕೇಳಬೇಡಿ..!!

ಸಾಕಪ್ಪಾ ಸಾಕು ಇಂಜಿನಿಯರ್ ಆಗಿ ನನ್ನದೊಂದು ಕೊನೆ ಮಾತು, ಇಂಜಿನಿಯರ್ ಹತ್ರ ಹೋಗಿ "ಇಂಜಿನ್ ರಿಪೇರಿ ಮಾಡ್ಕೋಡಿ" ಅಂತ ಆಗ್ಲಿ, ಲಾಸ್ಟ್ ಅಲ್ಲಿ "ನೀವ್ ಯಾರು ?" ಅಂತ ಕೇಳೋದಾಗ್ಲಿ ಮಾಡಬೇಡಿ ಯಾಕಂದ್ರೆ ಅವ್ರು ಯಾರು ಅಂತ ಅವ್ರಿಗೆ ಗೊತ್ತಿರಲ್ಲಾ..!! ಆದ್ರೂ ಅವರಿಂದಾನೆ ಈ ಪ್ರಪಂಚ ಇಷ್ಟು ಸುಂದರ ಅನ್ನೋದು ನನ್ನ ಭಾವನೆ..!!

Dedicated to All Engineers..
Engineers Rockz.. ♥ ♥

Ganesh Chaturthi

ಗಣೇಶ... ಅದೇ ನಮ್ ಗಾಡ್ ಗಣೇಶಾ ಇವತ್ತು ಹಬ್ಬಾ ಅಂತ ಸಡನ್ ಪ್ರತ್ಯಕ್ಷ ಆಗಿ ಸರಪ್ರೈಜ್ ಕೊಟ್ರೆ ಹೆಂಗಿರತ್ತೆ? ಯಾರ್ಯಾರು ಹೆಂಗೆಂಗೆ ರಿಯಾಕ್ಟ್ ಮಾಡ್ತಾರೆ?? 
ಅಂತ ಹಂಗೆ ಯೋಚನೆ ಬಂತು.. ಮಜಾ ಅನ್ನಿಸ್ತು..!!ನೀವು ಸ್ವಲ್ಪ ಹಂಗೆ ಥಿಂಕ್ ಮಾಡಿ ಮಜಾ ನೋಡಿ..!! 
ಈಗ ನಮ್ ಗಾಡ್ ಬಂದು "ಚಚಿನಾ ಹಬ್ಬ ಹೆಂಗೆ ನಡಿಸ್ತಾ ಇದಾರೆ ನಮ್ ಫ್ಯಾನ್ಸು" ಅಂತ ಕೇಳಿದ್ರೆ ಏನ್ ಅಂತಾ ಹೇಳ್ಬೇಕು ? ನಾನ್ ನಿಜಾನೆ ಹೇಳ್ತೀನಿಪ್ಪ.. ಯಾಕಂದ್ರೆ ನಾನು ಕೂಡ ಆ ಸತ್ಯ ಹರಿಶ್ಚಂದ್ರ ಎಂಡ್ ಧರ್ಮರಾಯ ಇವರ ಫಾಲೋವರ್ ಆಗಿರೋದ್ರಿಂದ ಸುಳ್ಳು ಹೇಳಿದ್ರೆ ಚೆನ್ನಾಗಿರೊಲ್ಲ..!! ( ಯಾರೂ ಹೊಟ್ಟೆಉರಿ, ಅಸೂಯೆ ಪಟ್ಟುಕೊಳ್ಳಬಾರದಾಗಿ ವಿನಂತಿ )
"ಗಾಡ್ ಇವತ್ತಿನ ನಿನ್ ಡೇ,, ಅದು ನಿನ್ನ ಬರ್ತಡೇನಾ ಯಾವ್ ಡೇ ಅಂತ ಗೊತ್ತಿಲ್ದಿದ್ರೂ ಸುಪರಾಗಿ ಸೆಲೆಬ್ರೇಟ್ ಮಾಡ್ತಾ ಇದೀವಿ .. ಗಲ್ಲಿ ಗಲ್ಲಿಲೂ ನಿನ್ನ ಮೂರ್ತಿ ಇಟ್ಟು ಚೆನ್ನಾಗಿಯೇ ಚಂದಾ ವಸೂಲಿ ಬೇರೆ ಮಾಡಿದೀವಿ..! ಕೆಲವರಂತೂ ಇದು ನೀನೇನಾ ಅಂತ ಆಶ್ಚರ್ಯ ಪಡೋತರ ವೆರೈಟಿ ಡ್ರೆಸ್ ಹಾಕ್ಸಿದಾರೆ.. ಪ್ಯಾಂಟು, ಶರ್ಟು, ಗನ್ನು, ಪಿನ್ನು, ಪೆನ್ನು, ಸ್ಪೈಡೆರ್ ಮ್ಯಾನು ಇನ್ನೂ ಏನೇನೋ ಕೊಟ್ಟಿದಾರೆ..!! ತಿಂಗಳು ಪೂರ್ತಿ 'ನಿಂದೇ' ಧ್ಯಾನ, ಅಕ್ಕಿ, ಬೇಳೆ, ಧಾನ್ಯದ ರೇಟು ಜಾಸ್ತಿ ಆದರು ನಿನಗೇನೂ ಕಮ್ಮಿ ಮಾಡಿಲ್ಲಾ ನಾವು,, ಗಾಡು..!! ನಿನ್ನ ವೆಹಿಕಲ್ ನಾ ನಾವು ದಿನಾಲು ಮುಟ್ಟಿನೆ ಕೆಲಸ ಮಾಡೋದು.. ಆ ಪರಿ ರೆಸ್ಪೆಕ್ಟು ಗ್ವಾಡು ನಿನ್ನ ಮೇಲೆ ನಮಗೆ..!!
ಎಷ್ಟೇ ಆದ್ರೂ ನೀನು ನಮ್ಮ ಪ್ರೀತಿಯ ದೇವರಲ್ವ ನಿನ್ನನ್ನು ಕಳಿಸಬೇಕಾದರೂ ಅಷ್ಟೇ ದುಖ ಹೆಚ್ಚಾಗಿ ಅದನ್ನ ಮರಿಯಕ್ಕೆ ಅಂತ ಹಾಡು ಹಚ್ಕೊಂಡು, ಎಣ್ಣೆ ಹೊಡ್ಕಂಡು, ಕುಣಿದು ಕುಣಿದು ಸುಸ್ತಾಗ್ತೀವಿ ಗೊತ್ತಾ? ಯಾರು ಮಾಡ್ತಾರೆ ಹೇಳು ಈಗಿನ ಕಾಲದಲ್ಲೂ ಇಂಥ ಸೆಲೆಬ್ರೆಷನ್ನು..!!??
ಆಮೇಲೆ ಕೆರೆಲೋ, ಸಮುದ್ರದಲ್ಲೋ ಬಿಡೋ ನಿನ್ನ ಮೂರ್ತೀನ ನೀನೆ ಕಾಪಾಡ್ಕೊಬೇಕು.. ಯಾಕಂದ್ರೆ ನಮ್ ದುನಿಯಾದಲ್ಲಿ ಅದಕ್ಕೆಲ್ಲ ಟೈಮ್ ಇಲ್ಲಾ.. ನಮ್ ಪ್ರಪಂಚ ಏನೂ ಮಾಲಿನ್ಯ ಆಗಬಾರದು ಗಾಡ್.. ನೀನೆ ನೋಡ್ಕೋಬೇಕು ಅದನ್ನು ಕೂಡ..!! "
ಜೈ ಗಣೇಶಾ..!! ಎಲ್ಲಾರ್ಗೂ ಒಳ್ಳೆ ಬುದ್ದಿ ಕೊಡಪ್ಪಾ (ನನ್ನನ್ನೂ ಸೇರಸಿ).. ಎಲ್ಲಾರ್ನು ಚೆನ್ನಾಗಿಡು,, ನೀನು ಚೆನ್ನಾಗಿರಪ್ಪಾ..!!
I wish u Happy Ganesh Chaturthi and
I pray to God for your prosperous life.
May you find all the delights of life,
May Lord Ganesh bring you good luck and prosperity!
May your all dreams come true...!! ♥ ♥


ಈ ಪೋಸ್ಟು ಕೇವಲ ಬೆಕ್ಕನ್ನ ಇಷ್ಟ ಪಡೋ ಹುಡುಗಿಯರಿಗೆ... ಬೇರೆಯವರು ಯಾರೂ ಓದಬೇಡಿ..!!

ನನಗಂತೂ ಆ ಬೆಕ್ಕನ್ನ ಕಂಡ್ರೆ ಆಗೋಲ್ಲ..!! ಮಿಯಾವ್ ಮಿಯಾವ್ ಅಂತ ಯಾವಗಂದ್ರೆ ಅಲ್ಲಿ ಕಾಲ್ ಕಾಲಿಗೆ ಸಿಗತ್ತೆ..!! ಅದ್ರುದ್ದು ಒಂದು ಮೀಸೇನ ತುಪುಕ್..!!
ಯಾಕೆ ಈ ಹುಡ್ಗಿರೆಲ್ಲ ಬೆಕ್ಕನ್ನ ಅಷ್ಟು ಇಷ್ಟ ಪಡೋದು? ಅದು ಹೇಳಿದ ಮಾತಂತೂ ಒಂದೂ ಕೇಳಲ್ಲ.. ಯಾವಾಗ್ಲೂ ತಿಂದು ನಿದ್ದೆ ಮಾಡ್ಕಂಡೆ ಬಿದ್ದಿರ್ತದೆ..!! ಕರೆದರೂ ಬರಲ್ಲಾ.. ಬಂದ್ರು ಮಕ ಅಂತು ನೆಕ್ಕಲ್ಲಾ.. ಮರ ಹತ್ತತ್ತೆ ಆದ್ರೆ ಇಳಿಯಕ್ಕೆ ಬರಲ್ಲ .. ಕ್ಲೀನ್ ಅಂತು ಇರೋದೇ ಇಲ್ಲಾ.. ಎಷ್ಟು ಸಲ ನಿಮ್ ಬೆಡ್ ಮೇಲೆ ಸೂಸು ಮಾಡಿಲ್ಲ ಹೇಳಿ ನೋಡೋಣ? ಅದರ ಎದೆಬಡಿತ ಮನುಷ್ಯರಿಗಿಂತ ಎರಡು ಪಟ್ಟು ಹೆಚ್ಚು ಬಡ್ಕೊಳತ್ತೆ.. ಅದ್ಕೆ ಇಷ್ಟಾನ ಅಥವಾ ಅದರ ಬಾಡಿ ಟೆಂಪರೆಚರು ನೂರು ಡಿಗ್ರೀ ಹಾಟ್ ಹಾಟ್ ಅಂತಾನ ? ಚೆನ್ನಾಗಿ ಮೇಲೆ ಎಗರತ್ತೆ ಅಂತಾನ?
ನೋಡಕ್ಕೆ ಮುಟ್ಟಕ್ಕೆ ಮೆತ್ತಮೆತ್ತಗಿರತ್ತೆ ಅನ್ನೋ ಒಂದೇ ಕಾರಣಕ್ಕೆ ಅದನ್ನ ಲೈಕ್ ಮಾಡೊದ? ಅದನ್ನ ಹಂಗೆ ಎತ್ಕೊಂಡು ಮುದ್ದು ಮಾಡೊದ? ಬೆಕ್ಕೆನು ನಿಮಗೆ ಬೈಕ್ ಅಲ್ಲಿ ಸುತ್ತಾಡಿಸುತ್ತದ ? ನೀವ್ ಕೆಳ್ಕೆಲಿದ್ದು ಕೊಡಿಸ್ತದ ಇಲ್ಲಾ ನಿಮ್ ಕಾಟ ತಡ್ಕೊಂಡು ಸುಮ್ನಿರತ್ತ? ನಿಮ್ ಕಣ್ಣಿರ್ಗೆ ಕರಗಿ ಕಮಂಗಿ ಆಗತ್ತಾ ? ಆದರು ಯಾಕೆ ಈ ತಾರತಮ್ಯ? ಇದನ್ನ ನಾವು ಖಂಡಿಸುತ್ತೀವಿ..!!

ಅಂತ ಕೆಲವು ಹುಡುಗರು ಗ್ಯಾಂಗ್ ಕಟ್ಕೊಂಡು ಪ್ರತಿಭಟನೆ ಮಾಡಕ್ಕೆ ಸ್ಕೆಚ್ ಹಾಕಿದಾರಂತೆ...!! ನನ್ ಕಿವಿಗೆ ಬಿದ್ದ ಸುದ್ದಿನ ನಿಮಗೆ ಹೇಳ್ತಾ ಇದೀನಿ.. ನೀವ್ ಏನಾರ ಮಾಡ್ಕಳಿ...!!

ಹುಳಾ ಬಿಡೋ ಲೇಖನ..

ಮೊನ್ನೆ ಮಾಡಕ್ಕೆ ಕ್ಯಾಮೆ ಇಲ್ದೆ - ನಾನು ನಮ್ ಹುಡುಗ ಸಾಯಂಕಾಲದ ಟೈಮ್ ಅಲ್ಲಿ ಮರಿಯಪ್ಪನ್ ಪಾಳ್ಯದ ಪಾರ್ಕ್ ಅಲ್ಲಿ ವಾಕಿಂಗ್ ಮಾಡ್ತಾ ಇದ್ವಿ..!! ಯಪ್ಪಾ ಯಪ್ಪಾ ನನ್ನ ಎರಡೂ ಕಣ್ಣುಗಳು ಅಂಥದ್ದೇನೂ ಅಲ್ಲಿ ನೋಡಿ ನಾವು ಹುತಾತ್ಮರಾಗುತ್ತೀವಿ " ನಮ್ಮನ್ನ ಬಿಟ್ಟು ಬಿಡಿ ಬಾಸ್ಸ್ " ಅಂತ ಸಾಯೋಕೆ ಹೊಂಟ್ ಬಿಟ್ಟಿದ್ವು....!! ಆಮೇಲೆ ಹೆಂಗೋ ಕಷ್ಟ ಪಟ್ಟು ನಮ್ ಅತೃಪ್ತ ಶಾಸಕರ ಮನ ಒಲಿಸೋ ತರ ಅದ್ಕೆ ಸಮಾಧಾನ ಮಾಡಿ ನನ್ನತ್ರನೆ ಇನ್ನೂ ಇಟ್ಟುಕೊಳ್ಳುವಲ್ಲಿ ಯಶಸ್ಹ್ವಿಯಾದೆ....!! 
ಅಂಥದ್ದು ಏನು ನೋಡಿದವು ನನ್ನ ಕಣ್ಣುಗಳು ಅಂತ ಕೇಳಿದ್ರೆ ನನ್ನ ಬಾಯಿ ಕೂಡ ಹೇಳಲ್ಲ ಅಂತ ಪ್ರೊಟೆಸ್ಟ್ ಮಾಡ್ತಾ ಇದೆ.. ಅದರ ಬಾಯಿಗೆ ರಸಗುಲ್ಲ ಹಾಕಾ..!!
ಹೋಗ್ಲಿ ಬಿಡಿ.. ನಮಗ್ಯಾಕೆ ಅದರ ವಿಷ್ಯ ಅಲ್ವ? ಕತ್ತಲೆಯಲ್ಲಿ ಪೊದೆಗಳು ಅಲ್ಲಾಡುತ್ತವೆ.. ಗಿಡಮರದ ಶಬ್ದಗಳು ತಂಗಾಳಿಲಿ ತೇಲಿ ಬರುತ್ತವೆ.. ಎಲ್ಲೋ ನಾಯಿಗಳು ನರಿಗಳ ತರ ಕೂಗುತ್ತವೆ.. ಚಿತ್ರ ವಿಚಿತ್ರ ಶಬ್ದಗಳು... ಗಿಜಾ ಪಿರಮಿಡ್ ನೆರಳುಗಳು.. ಐಫೆಲ್ ಟವರ್ ನ ಪ್ರತಿಬಿಂಬಗಳು..!! ಮಂಗಳ ಗ್ರಹದಲ್ಲಿ ಉಪಗ್ರಹವೂ ಗುರುತಿಸಲಾಗದ ನೀರಿನ ಕಣಗಳು.. ವ್ಯೂಮ ಯಾನಿಗಳ ಭಾಹ್ಯಾಕಾಶ ನಡಿಗೆಯೂ... ಕಿಲಿಪಿಲಿ ಚಿವಚಿವ ಅನ್ನುವ ಚಿಟ್ಟೆಯೋ..ಅಥವಾ ಹಾವುರಾಣಿ ಮೊಟ್ಟೆಯೋ ಏನು ಗೊತ್ತಾಗದ ದಟ್ಟ ಕತ್ತಲು...!!
ನಮ್ಮದು ಮುಕ್ತ ಪ್ರಪಂಚ..!! ಇಲ್ಲಿ ಎಲ್ಲವೂ ದುಡ್ಡು ಅನ್ನೋ ಪೇಪರ್ ಕೊಟ್ರೆ ಸಿಗುತ್ತಂತೆ... ಯಾರ್ ಬೇಕಿದ್ರೂ ಏನ್ ಬೇಕಾದರು ತೊಗೊಬಹುದಂತೆ.. ಅದರೂ ಜನರಿಗೆ ಜಿಗುಪ್ಸೆ ಯಾಕಾಗತ್ತೆ ಅಂತ ಕಾರಣ ಹುಡುಕುತ್ತ ಹುಡುಕುತ್ತ ಹುಚ್ಚರಾದ ಪ್ರೊಫೆಸರ್ ಏಕೋ ಇತ್ತೀಚಿಗೆ ಕಾಣಿಸ್ತಿಲ್ಲ..!! ಹುಡುಕೋಕೆ ನಮಗೆ ನಿಮಗೆ ಸಮಯವಾದರೂ ಎಲ್ಲಿದೆ ಸ್ವಾಮಿ.. ಎಲ್ಲರೂ ಅವರವರ ಅದು-ಇದು ಮಾಡೋದರಲ್ಲಿ ಬ್ಯುಸಿ ಅಲ್ವ? ಈ ಹಾಳಾದ ತಲೆಲ್ಲಿ ಯೋಚನೆ ಏಕೆ ಬರುತ್ತೋ? ಓಪನ್ ದುನಿಯಾ.. ಹಾಗಂತ ಎಲ್ಲಾನು ಎಲ್ಲ ಕಡೆ ಓಪನ್ ಮಾಡಬಾರದು ಅಂತ ಗೊತ್ತಾಗಲ್ವ ನಮ್ ಜನ'ಗೋಳಿ'ಗೆ ? ಇಂಥ ಪ್ರಶ್ನೆ ಕೇಳೋ ಅಮಾಯಕ ಮುಗ್ದ ಬಾಲಕನಿಗೆ ಯಾರಾದ್ರೂ ಹಿರಿಯರು ಬುದ್ದಿ ಜೀವಿಗಳು ಉತ್ತರ ಕೊಟ್ಟು ಪುಣ್ಯ ಕಟ್ಗಲ್ರಪ್ಪಾ..!!

ಹುಮ್ಮ್...

ನಾವು ಬೆಳೆಯಲೇಬಾರದು.. ಮಕ್ಕಳಾಗೆ ಇರಬೇಕಿತ್ತು..!! ಕೊನೆಪಕ್ಷ ಮಾನಸಿಕವಾಗಿ ಆದರೂ ..!!
ತೋರಿಕೆಯ ಪ್ರಪಂಚ ಆಡಂಬರದ ಜೀವನ.., ನಮ್ಮೋ ಳಗೆ ನಾವೇ ನಾಶವಾಗಿ ಬಿಟ್ಟಿದಿವೇನೋ ಅನ್ನಿಸುವಷ್ಟು ಬದಲಾವಣೆ..!! 
ಈ ಹಾಸ್ಯ ಪ್ರಪಂಚದಲ್ಲೂ ಕೂಡ ಭಾವುಕತೆಯ ಬೇಡಿ... ಕಣ್ಣೀರ ಕೊಡಿ..!! ಒಂದು ಸಣ್ಣ ಖುಷಿಗಾಗಿ ಹುದುಕುತ್ತಿರುತ್ತೀವಿ ಮೊಟುದ್ದದ ಹಳೆ ಬ್ರಾಂಡ್ ಗಣೇಶ ಬೀಡಿ..!!
ಈ ಕಾಲದಲ್ಲಿ.. ನಮ್ಮ ಭಾವಿ ವೈದ್ಯರು ಕೂಡ ಕಾಪಿ ಮಾಡಿ ಪರೀಕ್ಷೆ ಬರಿತಾರೆ.. ದುಡ್ಡಿನ ಮೇಲೆ ರೋಗಾನ ಅಳಿತಾರೆ..
ನಾನು ನೋಡಿರೋ ಹಾಗೆ ಬನಶಂಕರಿ ಬಿ ಡಿ ಎ ಕಾಂಪ್ಲೆಕ್ಷ್ ಹತ್ರ ಬಿಳೀಕೋಟನ್ನ ಹಾಕ್ಕೊಂಡು ರೋಡಲ್ಲಿ ಅಲಿಯೋ ಇವರಿಗೆ ಕಾಫಿ ಡೇ ಕ್ಲಬ್ಬು ಪಬ್ಬು ತಿರುಗೋ ಇವರಿಗೆ ಅಲ್ಲೇ ಅದೇ ಬೀದಿಯಲ್ಲಿ ಹಸಿವಿನಿಂದ ನರಳುತ್ತಿರುವ ಬಡ ಮಕ್ಕಳು ಕಾಣಿಸೋದೆ ಇಲ್ವಾ?? ಇದ್ಕೆ ನಾವು ನೀವು ಏನು ಮಾಡಕ್ಕಗೊಲ್ಲಾ ಅಂತ ಸುಮ್ನೆ ಇರಬೇಕಾ? ofcourse ನಮಗೆ ಎಲ್ಲಾನು ಸರಿ ಮಾಡೋಕೆ ಆಗೋಲ್ಲಾ ಆದ್ರೆ ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿದೆ..!!

ನಂಗು ಒಂದು ಆಸೆ ಇದೆ..
" Atleast ಒಂದು ಚಿಕ್ಕ ಅನಾಥ ಹುಡುಗಿನ ದೇಶವೇ ಹೆಮ್ಮೆ ಪಡುವತರ
ಬೆಳೆಸಬೇಕು...!! "

ಬದಲಾವಣೆ ಮಾಡಕ್ಕೆ ಆಗೋಲ್ಲಾ ಅಂತ ಸುಮ್ನಿರೋದಕ್ಕಿಂತ ನಾವೇ ಬದಲಾಗೋದು ಒಳ್ಳೇದಲ್ವೆ?
ಸುಡಾನ್ , ಉಗಾಂಡ ದಂಥ ದೇಶದಲ್ಲೂ ಸುಖವಿದೆ.. ಅಮೇರಿಕಾ ಇಂಗ್ಲೆಂಡ್ ಅಲ್ಲೂ ಕಷ್ಟ ಇದೆ..!! ಹಾಗಂತ ಅದರ ಬಗ್ಗೆ ಯೋಚಿಸೋದಕ್ಕಿಂಥ ನಾವೆಷ್ಟು ಕುಷೀಯಾಗಿದಿವಿ ನಮ್ಮಿಂದ ಎಷ್ಟು ಜನ ಸುಖದಿಂದ ಇದ್ದಾರೆ ಅಂತ ಒಮ್ಮೆ ಯೋಚಿಸಿದರೆ,, ನಮ್ಮ ಪ್ರಪಂಚ ಸುನಾಮಿ ಇಂದ ಮುಳುಗುತಾ ಇದ್ರೂ ಇಜು ಹೊಡ್ಕೊಂಡು, ಅಲ್ಲೇ ಕಾಲು ಎಳ್ಕೊಂಡು ನೆಮ್ಮದಿಯಿಂದ ಸಾಯೋದು ಮೇಲಲ್ಲವೇ??


ನಮ್ ಹುಡುಗಿ ಹೇಳಿದ್ದು ( ಓದಬೇಡ್ರೋ )

ನೆನ್ನೆ ನಾನು ನನ್ ಗರ್ಲ್ ಫ್ರೆಂಡು ಹಂಗೆ ಮಾತಾಡ್ತಾ ಹೋಗ್ತಾ ಇರುವಾಗ ಅವಳಿಗೆ ಏನನ್ನಿಸ್ತೋ ಏನೋ ದಬುಕ್ಕಂತ ಒಂದು ಪ್ರಶ್ನೆನ ಹಂಗೆ ಕೇಳುದ್ಲು .. !! " ಚಚಿನು ನಿನ್ನಗಿರೋ ಸಾವಿರ ಕನಸಿನಲ್ಲಿ ಯಾವ್ದಾದ್ರು ಒಂದು ಡ್ರೀಮ್ ಏನು ಹೇಳು ಅಂದ್ಲು..!!" 
ನಾನಂದೆ " ಸ್ವಾತಂತ್ರ ಹಬ್ಬದ ದಿನ ಕೆಂಪು ಕೋಟೆ ಮೇಲೆ ಪ್ರದಾನ ಮಂತ್ರಿ ಪಕ್ಕ ನಿಂತ್ಕಂಡು ಅವರು ಬಾವುಟ ಹಾರಿಸಿದಾ ಮರುಕ್ಷಣವೇ ನಾನು ಅಲ್ಲಿಂದಾನೆ ಗಾಳಿಪಟ ಹಾರಿಸಬೇಕು ಅಂತ ಆಸೆ....!! ಭಾರತೀಯ ಪ್ರಜೆಯಾಗಿ ನಂಗೆ ಅಷ್ಟೂ ಸ್ವಾತಂತ್ರ ಇಲ್ವಾ??" ಅಂದೆ...!!
ಒಂದ್ಸಲಾ ಮಕ ಮಕಾ ನೋಡಿದ್ಲು ಮನಸಲ್ಲಿ ಏನು ಬೈಕೊಂಡ್ಲೋ ಗೊತ್ತಿಲ್ಲಾ ಬಾಯಲ್ಲಿ ಮಾತ್ರ " ಲೂಸು " ಅಂದ್ಲು..!! ಆವಾಗ ನನಗೇನೋ ಅನ್ನಿಸ್ತು ಸುಮ್ನೆ ಹಾಗೆ ಒಂದು ಸ್ಮೈಲ್ ಬಿಸಾಕ್ದೆ..!!
" ಯಾಕೆ ಕಿಸಿತಿರೋದು " ಅಂದ್ಲು..!!
" ಏನಿಲ್ಲಾ ಹಾಗೆ ಸುಮ್ಮನೆ " ಅಂತಂದೆ..!! "
ಹೇಳ್ತಿಯೋ ಇಲ್ವೋ ಹೇಳಿಲ್ಲಾಂದ್ರೆ ನನ್ಮೇಲೆ ಆಣೆ " ಅನ್ನೊದ ,
ನಾನಂದೆ " ನಾನು ಯೋಚಿಸ್ತಾ ಇದ್ದೆ ಗಂಡಸರೆಲ್ಲಾ ಲೂಸು ಆಗಿರೋದಕ್ಕೆ ರಾತ್ರಿ ಟೈಟ್ ಆಗೋದು ಆದರೆ ಹೆಂಗಸರು ಬೆಳಿಗ್ಗೆ ಎಲ್ಲಾ ಮೇಕಪ್ ಅಲ್ಲಿ ಟೈಟ್ ಆಗಿದ್ದು ನೈಟು ಮಾತ್ರ ನೈಟಿ ಹಾಕ್ಕೊಂಡು ಲೂಸಾಗಿ ಇರ್ತಾರಲ್ಲ ಯಾಕೆ ?? " ಅಂತ ಕೇಳಿದೆ..!!
" ಲೇಯ್ ಬಾರೋ ಸುಮ್ನೆ " ಅಂತ ಟೈಟ್ ಆಗಿ ಕೈ ಹಿಡ್ಕೊಂದ್ಲು ಆಗ ಮೈ ಬಿಸಿ ಆಗಿ ಬಾಡಿ ಶೇಕ್ ಆಗಿ ನರ ನಾಡಿಗಲೆಲ್ಲ ಜುಮ್ ಅಂದು ಮೆದುಳು ಹೃದಯ ಶ್ವಾಸಕೋಶ ಸಣ್ಣ ಕರುಳು ದೊಡ್ದಕರುಳು ಎಲ್ಲಾ ಕೆಲ ಕ್ಷಣ ಕೆಲಸ ನಿಲ್ಸಿ ಟಪ್ಪ0ಗುಚ್ಚಿ ಡಾನ್ಸ್ ಆಡಿದಾಗೆ ಆಗಿದ್ದು ಮಾತ್ರ ಸುಳ್ಳಲ್ಲಾ..!!!
ಯಾಕೋ ನಾನೇನಾದ್ರು ಹಾಳಾಗ್ತಾ ಇದ್ರೆ ಎಲ್ಲಾ ಮಹನೀಯರು ಮಹಿಳೆಯರು ಮಕ್ಕಳು ಮಂಗಗಳು ಇನ್ನು ಯಾರ್ಯಾರು ಇದಿರೋ ಎಲ್ಲರು ನನ್ನ ಕಾಪಾಡ್ರಪ್ಪಾ .!!

ಭಾರತಾಂಬೆಗೆ ನಮೋ ನಮಃ

ನಿನ್ನೆ ಅಷ್ಟೇ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಸ್ವಾತಂತ್ರ ದಿನಾನ (???) ಅದ್ದೂರಿಯಾಗಿ ಆಚರಿಸಿದ ಎಲ್ಲಾ ಭಾರತೀಯರಿಗೂ ನಾನು ಅಂದ್ರೆ ಭಾರತ ಮಾತೆಯ ಧನ್ಯವಾದಗಳು..!!! 
ವರ್ಷದಿಂದ ವರ್ಷಕ್ಕೆ ತುಂಬಾನೇ ಚೆನ್ನಾಗಿ ಆಚರಿಸ್ತಾ ಇದ್ದೀರಾ ಮಕ್ಕಳೇ.. ಇದಕ್ಕೆ ನನ್ನ ಕಣ್ಣುಗಳಿಂದ ಸುರಿಯುತ್ತಿರುವಾ ಕಣ್ಣಿರೆ ಸಾಕ್ಷಿ..!! 
ಯಾಕೋ ಏನೋ ದಿನದಿಂದ ದಿನಕ್ಕೆ ನನ್ನ ದೇಹದ ಒಂದೊಂದೇ ಅಂಗವನ್ನು ಇರಿದು ಕಡಿಯುತ್ತಿರುವ ಅನುಭವ..!! ಆದ್ರೆ ಗೊತ್ತು ನೀವು ನನ್ನ ಮಕ್ಕಳು ಹಾಗೆಲ್ಲ ಮಾಡೋರಲ್ಲಾ ಅಂತಾ.. ನಂದೇ ಭ್ರಮೆ ಅನ್ಸತ್ತೆ..!! ನೆನ್ನೆ ದಿನ ಎಲ್ಲಾ ಕಡೆ ನನ್ನ ಸೇರಗನ್ನೇ ಅಂದ್ರೆ ನಿಮ್ ಭಾಷೆಯಲ್ಲಿ ರಾಷ್ಟ್ರ ಧ್ವಜ ನೋಡಿದಾಗ ಆದ ಸಂತೋಷ ಅಷ್ಟಿಷ್ಟಲ್ಲ..!! ನನಗೆ ಆದ್ರೆ ಇಂದು ಅದು ಬೀದಿ ಬದಿಯ ತಿಪ್ಪೆಯಲ್ಲಿ ಕಂಡ ಪ್ಲಾಸ್ಟಿಕ್ ಬಾವುಟ ನಮ್ಮದಲ್ಲ ಆಲ್ವಾ? ಯಾಕಂದ್ರೆ ನೀವು ನನ್ನ ಮಕ್ಕಳು ಹಾಗೆ ಮಾಡೋರಲ್ಲಾ..!!
ನಿಮ್ಮಲ್ಲಿ ಒಂದು ದಿನದ ಸ್ವತಂತ್ರದ ಸಂತೋಷ ನೋಡಿ ನನಗಾದ ಆನಂದ ಹೇಳಲಸಾಧ್ಯ ..!! ಯಾವಾಗ್ಲೂ ನಿಮ್ಮಲ್ಲಿ ಸಂತೋಷ ಬಯಸೋದು ನಂದೇ ತಪ್ಪು ಅನ್ನಿಸತ್ತೆ..!! ಆದರು ನಿಮ್ಮ ಪ್ರೇಮ ನೋಡಿ ನಂಗೆ ಮಾತೆ ಬರ್ತಾ ಇಲ್ಲಾ..!! ನಾನು ನನ್ನ ಕೊನೆ ಉಸಿರಿರೋವರ್ಗು ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ..!! ನೀವು ನನ್ನ ಚೆನ್ನಾಗಿ ನೋಡಿಕೊಳ್ತಿರ ಅಂತ ನನಗೆ ಗೊತ್ತು ಮಕ್ಕಳೇ..!! ಎಲ್ಲ ಮಕ್ಕಳಿಗೂ ಶುಭವಾಗಲಿ..!! ನನ್ನ ಪ್ರೀತಿ ವಾತ್ಸಲ್ಯ ಯಾವಾಗ್ಲೂ ನಿಮ್ಮ ಮೇಲಿರತ್ತೆ..!! ನನಗೂ ಗೊತ್ತು ನಿಮಗೂ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತಾ..!! ಶುಭವಾಗಲಿ..!! ♥ ♥ ♥

ಗಡ್ಡ ಪುರಾಣ..!!

ಈ ಹಾಳಾದ ಗಡ್ಡ ನಮ್ಮಂಥ ಹುಡುಗರಿಗೆ ಯಾಕೆ ಬರ್ತದೋ? ಮೊದ್ಲೇ ನಾವು ಈ ವಯಸ್ಸಲ್ಲಿ ತುಂಬಾನೇ ಬ್ಯುಸಿ ಅಂಥದ್ರಲ್ಲಿ ಅದ್ನ ಬೇರೆ ಕೆರೆದು ಕೆರೆದು ಕಿತ್ತಾಕೋ ಎಕ್ಷ್ತ್ರಾ ಕ್ಯಾಮೆ ಬೇರೆ..!! ಕಿತ್ತಾಕಿದಷ್ಟು ಮತ್ತೆ ಮತ್ತೆ ಬೆಳಿತಾನೆ
ಇರತ್ತೆ ಅದರ ಮಕ ಕಿತ್ತ..!! ನಮ್ ಬದ್ಲು ಈಗಿನ ಕಾಲದ ಹುದುಗಿಯರಿಗದ್ರು ಇದ್ದಿದ್ರೆ ತುಂಬಾ ಕುಷೀ ಪಡ್ತಿದ್ರು ಅನ್ಸತ್ತೆ ಯಾಕಂದ್ರೆ ಅವರಿಗೇನು ಬ್ಯೂಟಿ ಪಾರ್ಲರ್ ಗೆ ಹೋಗಿ ಎಷ್ಟು ಕೆಲಸ ಮಾಡಿಸ್ಕೊಂದ್ರು ಸಾಕಾಗಲ್ಲ ಕೆಲವರಂತೂ ದಿನಾ ಹೋಗ್ತಾರೆ,, ಏನು ಸಿಕ್ಕಿಲ್ಲ ಅಂತ ಇರೋ ಬಾರೋ ಹುಬ್ಬು. ಕಣ್ಣು-ರೆಪ್ಪೆ ಏನೆಲ್ಲಾ ತೆಗಿಸ್ಕೊತಾರೆ ಕರುಮ ಕರುಮ..!!
ಅದೇ ಹುಡುಗರಿಗಾದ್ರೆ ಇಷ್ಟ ಇಲ್ಲ ಅಂದ್ರು ಕೆಲವು ಒತ್ತಡ ಗಳಿಂದ ತೆಗಿಯಲೇ ಬೇಕಾದ ಪರಿಸ್ಥಿತಿ..!! ಇಲ್ಲಾಂದ್ರೆ ಸುಮ್ಸುಮ್ನೆ ಕತೆ ಕಟ್ಟಿ ಮೃತ ಸಮುದ್ರದಲ್ಲೂ ಮುಳುಗೋ ಲೆವೆಲ್ ಗೆ ಕಷ್ಟ ಕೊಡ್ತಾರೆ..!!ಬುದ್ದಿಜೀವಿಗಳ ಬುದ್ದಿ ಗಡ್ಡದ ಒಳಗಿರುತ್ತೇನೋ ಅನ್ನೋ ಅನುಮಾನ ಇನ್ನು ಇದೆ ನಂಗೆ..ಯಾಕಂದ್ರೆ ಎಲ್ಲ ಬುದ್ದಿಜೀವಿಗಳು ಗಡ್ಡ ಬಿಟ್ಟಿದಾರಲ್ಲಾ..!! ಅದನ್ನ ಕೆರಕೊಂಡಾಗಲೇ ಏನೋ ಲಿಂಕ್ ಸಿಕ್ಕುತ್ತೇನೋ ಅವರಿಗೆ..!!
ಆದ್ರೂ ಎಲ್ಲ ಬುದ್ದಿ ಜೀವಿಗಳು ಚಿಂತಕರು ಮೇಧಾವಿಗಳು ಗಡ್ಡ ಬಿತ್ತಿಡ್ನ ನೋಡಿ ನಾನು ಬಿಡೋಣ ಆಗಳದ್ರು ಸ್ವಲ್ಪ ಹವಾ ಮೇನ್ ಟೆನ್ ಮಾಡಣ ಅಂತ ಟ್ರೈ ಮಾಡಿದ್ರೆ ಚೈನೀಸ್ ತೈಪೆಯ ಜಿರಳೆ ತಿನ್ನೋ ಗುಡ್ಡಗಾಡು ಜನರ ತರ ಒಂದೇ ಕಡೆ ಬೆಳಿಯಕ್ಕೆ ಶುರು ಆಯ್ತು ಹಾಳಾದ್ದು..!! ಅದ್ಕೆ ತೆಗೆದು ಬಿಟ್ಟೆ.. ಕೆಲವರ ಗಡ್ಡ ಬಿಟ್ಟು ಮೀಸೆ ತೆಗಿತಾರೆ ಒಂದು ತರಾ ಚೆಂಗೂಲಿ ತರ ಚೆನ್ನಾಗೆ ಕಾಣಿಸ್ತಾರೆ..!! ಕೆಲವರದು ಮೇಕೆ ಗಡ್ಡ ಆದ್ರೂ ಮೀಸೆ ಕಂಬಳಿ ಹುಳದ ತರ ಚೆನ್ನಾಗಿರತ್ತೆ..!! ಇನ್ನು ಕೆಲವರದು ಕಳೆ ಕಿತ್ತ ಹಾಕಿ ಗ್ರೌಂಡ್ ತರ ಇದ್ರೆ ಮತ್ತೆ ಕೆಲವರದು ತಲೆ ಎಲ್ಲಿ ಮಕ ಎಲ್ಲಿ ಅಂತಾನೆ ಅನುಮಾನ ಬರತ್ತೆ..!! ಅದರಲ್ಲೂ ಎಂಥೆಂತ ಡಿಜೈನು ಸ್ಟೈಲು ಇದೆ ಆದರೆ ಇದು ಕೇವಲ ಹುಡುಗರ ಆಸ್ತಿ.. ಹುಡುಗಿಯರು ಇದರಲ್ಲಿ ಕಾಂಪಿಟೇಷನ್ನು ಕೊಡೋಹಾಗಿಲ್ಲ..!!
ಆಯ್ಯೋ ಈಗ ನೆನಪಾಯ್ತು ನಾಳೆ ನನ್ನ ಗಡ್ಡ ತೆಗಿಲಿಲ್ಲ ಅಂದ್ರೆ ಬಾಸು ಉಗಿದು ಅಗಿದು ಹಾಕ್ತಾರೆ ಅದ್ಕೆ ನಾಳೆ ಶೇವಿಂಗ್ ಗೆ ಬ್ಲೇಡ್ ತರಬೇಕು ಈಗ..!! ಸಾಕಪ್ಪ ಸಾಕು ಈ ಗಡ್ಡದ ಕಿರಿಕಿರಿ..!!

ಬಂತಪ್ಪ ಬಂತು ರಾಖಿ ಹಬ್ಬ..!!

ಬಂತಪ್ಪ ಬಂತು ರಾಖಿ ಹಬ್ಬ..!! 
ಇದು ಸಹೋದರ ಸಹೋದರಿಯರ ಪ್ರೀತಿಯ ಸಂಕೇತ,, 
ಭಾಂದವ್ಯದ ಹಿಮಪಾತ.. 
ಶ್ರೀರಕ್ಷೆಯ ಧೂಮಕೆತಾ... 
ಹಿಂಗೆಲ್ಲ ಪ್ರಾಸಬದ್ದವಾಗಿ.. ನವಿರು ನಿರೂಪಣೆಯಿಂದ ಹೃನ್ಮನಗಳಿಗೆ ಆನಂದವಾಗಿ ಖುಷಿ ಪಡುವತರ ಬರಿಯಕ್ಕೆ ನಿಮ್ಮ ಉದುರುತ್ತಿರುವ ತಲೆ ಕೂದಲುಗಳ ಮೇಲೆ ಮತ್ತು ನಾಳಿನ ನಿಮ್ಮ ಬೊಚ್ಚು ಬಾಯಿಯಮೇಲೆ ಹಾಗೂ ಮೊಂಡು ಮೂಗಿನ ಮೇಲೆ ಆಣೆ ಮಾಡಿ ಹೇಳ್ತಾ ಇದ್ದೀನಿ ನಂಗಂತೂ ಬರಲ್ಲಾ..!! ತುಂಬಾ ಉದ್ದ ಬರಿದ್ರೆ ಯಾರು ಓದಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರಾನೆ ಅಲ್ವ?? ಆದ್ರೂ ನನ್ನತ್ರ ಸಮಯ ಇದೆ ಅದಕ್ಕೆ ಚಿತ್ರ ಹಿಂಸೆ ಕೊಟ್ಟು ಕೊಲ್ಲೋ ಮನಸಿದೆ.. ಹೆಚ್ಚಾಗಿ ನಿಮ್ ತಲೆ ತಿನ್ಬೇಕು ಅನ್ನಿಸ್ತಿದೆ ಅದಕ್ಕೆ ಈ ಪೋಸ್ಟು..!!
ದಯವಿಟ್ಟು ಸಹಿಸಿಕೊಳ್ಳಿ..!!
ನಾಳೆ ದಿನ ಹೇಗೋ ಏನೋ ಗೊತ್ತಿಲ್ಲಾ.. ಏನೋ ವಿಶೇಷತೆ ಇದೆ ಅಂತಾನು ನಂಗೆ ಅನ್ನಿಸ್ತಿಲ್ಲಾ..!! ಯಾಕಂದ್ರೆ ಇಂಥ ಹಬ್ಬದ ಆಚರಣೆ ಒಂದು ದಿನನೇ ಇರಬಹುದು ಆದ್ರೆ ಅದರ ಮಹತ್ವ ಒಂದು ದಿನಕ್ಕೆ ಸೀಮಿತಾನಾ?? ಕೇವಲ ಒಬ್ಬ ಹುಡುಗ ಕಾಡಿಸ್ತಾನೆ ಅವನ ನೋಟ ಸರಿ ಇಲ್ಲ ಅನ್ನೋ ಕಾರಣಕ್ಕೆ ರಾಖಿ ಕಟ್ಟೋ ಹುಡುಗಿಯರು ಎಷ್ಟು ಜನ ಇಲ್ಲ ನಮ್ಮಲ್ಲಿ..?? ಒಬ್ಬ ಹುಡುಗನಿಂದ ಏನಾದರು ಕೆಲಸ ಆಗುತ್ತೆ ಅನ್ನೋ ಸ್ವಾರ್ಥದಿಂದ ರಾಖಿ ಕಟ್ಟೋರೇನು ಕಡಿಮೆ ಇದಾರ ನಮ್ಮಲ್ಲಿ?? ಅದು ಏನೇ ಇದ್ರೂ ಅವರವರ ವಯಕ್ತಿಕ ವಿಚಾರ ನಾವು ನೀವು ಮಾತಾಡೋದು ತಪ್ಪಾಗತ್ತೆ ಬಿಡಿ..!!
ಅದ್ಕೆ ನಾನು ಇಂಥ ಗಂಬೀರ ವಿಚಾರದ ಬಗ್ಗೆ ಯೋಚನೆ ಕೂಡ ಮಾಡಲ್ಲ.. ! ಏನೇ ಇರಲಿ ನಾಳೆ ರಾಖಿ ಅಂತ ಇರೋ ಬರೋ ಹುಡುಗಿಯರೆಲ್ಲ ಇವತ್ತೇ ರಾಖಿ ತೊಗೊಳಕ್ಕೆ ಅಂಗಡಿ ಮುಂದೆ ಜಮಾಯಿಸಿ ಬಿಟ್ಟಿದಾರೆ..!! ಅದ್ಕೆ ನಮ್ಮ ಕೆಲವು ಹುಡುಗರು ಟ್ರಿಪ್ ಅಂತ ಕೆಲವರು ಕೆಲಸ ಅಂತ ಎಲ್ಲೆಲ್ಲೋ ಎಸ್ಕೇಪ್ ಆಗೊಗಿದಾರೆ..!! ಫೋನ್ ಮಾಡಿದ್ರೆ ಶನಿವಾರ ಬರ್ತೀನಿ ಮಗಾ ಫ್ರೆಂಡ್ ಶಿಪ್ ಡೇ ಗೆ ಅಂತಾರೆ..!! ಆ ಲೆವೆಲ್ ಗೆ ಭಯ ಪಟ್ಟಿದಾರೆ ಕೆಲವರು ನಾಳೆ ದಿನಕ್ಕೆ..!!
ಹೇಗೆ ಇರಲಿ ಹುಡುಗಿಯರು ಇಷ್ಟ ಬಂದವರಿಗೆ ರಾಖಿ ಕಟ್ಟಿ ಮಕ ಕುಟ್ಟಿ..!! ಹುಡುಗರು ಈಗಲೇ ಗಂಟು ಮೂಟೆ ಕಟ್ಟಿ ಇಲ್ಲಾ ನಾಳೆ ಮಕ ಮುಚ್ಕೊಂಡು ಓಡಾಡಿ..!! ಒಟ್ಟಿನಲ್ಲಿ 'ಹುಡುಗಿಯರಿಗೆ ಅಣ್ಣ ಆಗಿ ಬಿಟ್ಕೊಂಡೆ ರಮ್ಮು' ಅಂತ ಬಾರ್ ಗೆ ಹೋಗಿ ಬೀರ್ ಮಾತ್ರ ಕುಡಿಬೇಡಿ..!!
ನಾನು ನಾಳೆ ಫ್ರೀ ಇದ್ದೀನಿ ಹಾಗಂತ ಮಾರಾಟ ಮಾಡ್ಬೇಡಿ ಬೇಕಿದ್ರೆ ರಾಖಿ ಕಟ್ಟಿ..!! ಇಲ್ಲಾಂದ್ರೆ ಸಂಡೇ ನಮ್ಮದೇ ದಿನ ಮತ್ತೆ ಸಿಗೋಣಾ..!!

HAPPY RAKSHABHANDAN...!! TAKE CARE ♥ ♥

ದೇವೀ ಕಾಪಾದಮ್ಮಾ..!!

ನೆನ್ನೆ ಅಷ್ಟೇ ಭರ್ಜರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಯ್ತು..!! ನನ್ ಜೀವನದಲ್ಲೇ ಮೊದಲ ಸಲ ಇಷ್ಟು ಅದ್ದೂರಿಯಾಗಿ ಅದು ಬೆಂಗಳೂರಿನಲ್ಲಿ ಮಹಿಳೆಯರ ಹಬ್ಬ ಅಂತಾನೆ ನಾನು ತಿಳ್ಕೊಂಡಿದ್ದ ವರಮಹಾಲಕ್ಷ್ಮಿ ಪೂಜೆನೂ ಮಾಡ್ತಾರೆ ಅಂತ ಗೊತ್ತಾಗಿದ್ದು..!!!
ಯಾವಾಗ್ಲೂ ಜೀನ್ಸು ಟಿಶರ್ಟು ಹಾಕಿಕೊಲ್ಲೋ ನಮ್ ಬೆಂಗಳೂರು ಬಾಲೆಯರು ಸೀರೆ ಲಂಗ ಇತ್ಯಾದಿ ಇತ್ಯಾದಿ ಹಾಕಿಕೊಂಡು ನನ್ ಕಣ್ಣುಗಳನ್ನ ಪಾವನ ಮಾಡಿ ಬಿಟ್ರು ..!! ರೋಡಿನ ಎಲ್ಲಾ ಕಡೆ ಗಲಗಲ ಶಬ್ದಗಳು.. ಹೆಣ್ಣುಮಕ್ಕಳ ಗೆಜ್ಜೆ ಶಬ್ದ ಕಣ್ರೀ ಅದು.. ನನ್ನ ಕಿವಿಗಳಿಗೂ ಅಲ್ಪ ಸ್ವಲ್ಪ ಪುಣ್ಯ ಬಂತು ಅನ್ನಿ..!! ದಿನಾನು ಹೀಗೆ ಯಾವದಾದ್ರು ಮಹಿಳಾ ಪ್ರದಾನ ಹಬ್ಬನೋ ಪೂಜೇನೋ ಇದ್ರೆ ವರ್ಣಿಸಕ್ಕೆ ಆಗೋಲ್ಲ ಬಿಡಿ ಆ ವೈಭವಾನ..!! ಆದ್ರೂ ದಿನಾ ಒಂದೇ ತಾರಾ ಇದ್ರೆ ಮಜಾ ಇರೋಲ್ಲ ಅಲ್ವಾ??
ಇಷ್ಟೆಲ್ಲಾ ಪೂಜೆ - ದಾನ ಕೇವಲ ಒಂದೇ ದಿನಕ್ಕೆ ಸೀಮಿತಾನ?? ಸ್ವಾರ್ಥಕ್ಕೊಸ್ಕರನೆ ಪೂಜೆನಾ ಲಕ್ಷ್ಮಿ ಇನ್ನು ಜಾಸ್ತಿ ಜಾಸ್ತಿ ಕೊಡ್ಲಿ ಅಂತ? ಗೊತ್ತಿರೋ ಅಕ್ಕಪಕ್ಕದ ಮನೆ ಅವ್ರಿಗೆ ಕೊಡೊ ದವಸ ಧಾನ್ಯ, ಬ್ಲೌಸ್ ಪೀಸ್ , ಕೋಸಂಬರಿ ಇತ್ಯಾದಿ ಇತ್ಯಾದಿಗಳನ್ನ ನಮ್ಮ ದೇಶದ ಬಹುಸಂಖ್ಯಾತ ಬಡವರಿಗೆ ಯಾಕೆ ದಾನದ ಹೆಸರಲ್ಲಿ ಸೇರತಾ ಇಲ್ಲ?
ಪ್ರಪಂಚದ ಶ್ರೀಮಂತರು ಎಲ್ಲಾರು ಲಕ್ಷ್ಮಿ ಪೂಜೆ ಮಾಡಿನೇ ಕೊಟ್ಯಾಧಿಶರು ಆಗಿದ್ದ???? ಬೆಂಗಳೂರಿನ ಶಿರಸಿ ಸರ್ಕಲ್ ಹತ್ರ ಇರೋ ದೇವಸ್ಥಾನದ ಮುಂದೆ ೧೩ ವರ್ಷದಿಂದ ಭಿಕ್ಷೆ ಬೇಡ್ತಾ ಇರೋ ಲಕ್ಷ್ಮಿ ಅಜ್ಜಿ ಹತ್ರ ಯಾಕೆ ದುಡ್ಡಿಲ್ಲ? ೪೦ ವರ್ಷಗಳಿಂದ ದೇವಿಯ ಮೂರ್ತಿಗೆ ಹೂವಿನ ಹಾರ ಕಟ್ಟುತ್ತ ಇರುವ ಕಮಲಜ್ಜಿ ಯಾಕೆ ಚಿನ್ನದ ನೆಕ್ಲೇಸು ಡಾಬು ಹಾಕಿಕೊಲ್ಲೋಕೆ ಆಗಿಲ್ಲ?
ಏನೋ ಅನ್ನಿಸ್ತು ಕೇಳಿದೆ..!! ಜೀವನ ಯಾವಾಗ್ಲೂ ಒಂದೇ ತರ ಇರೋಲ್ಲ ಅಲ್ವಾ? ನಿಮಗೂ ಏನಾದ್ರು ಇದರ ಬಗ್ಗೆ ಹೇಳ್ಬೇಕು ಅನ್ನಿಸಿದ್ರೆ ನನ್ನ ಪ್ರಶ್ನೆಗಳಿಗೆಲ್ಲ ದಯವಿಟ್ಟು ತೋಚಿದ್ದನ್ನ ಇಲ್ಲಿ ಗೀಚಿ..!!

ನಾನೂ ಮತ್ತು ಬಾತುಕೊಳಿಗಳೂ......!!

ಥೂ..ಸಾಕಾಗೋಗಿದೆ ನನ್ನ ಜನ್ಮ... ಈ ಹಾಳಾದ ಕಣ್ಣಲ್ಲಿ ಇನ್ನು ಏನೇನು ನೋಡಬೇಕೋ..!!?? ಕಣ್ಣನ್ನ ದಾನ ಮಾಡಿದಿನಿ ತೊಗೊಳಿ ಅಂತ ಹೇಳಿದ್ರು ಆ ನರಸಮ್ಮ ನೀವ್ ಸತ್ತ ಮೇಲೇನೆ ಕಣ್ಣು ಕೀಳೋದು ಅಂತಾರೆ..!! ಅದಕ್ಕೋಸ್ಕರ ನಂಗೆ ಸಾಯೋಕೆನು ಈಗ ಸಮಯ ಇಲ್ಲಾ..!!
ಏನರ ಅಣ್ಣ ಹಜಾರೆ ಬಗ್ಗೆನೋ ಹುತಾತ್ಮ ಮಹಾತ್ಮರ ಬಗ್ಗೆನೋ ಬರೆದು ಬರೆಯೋ ಹಸಿವು ನೀಗಿಸಿಕೊಳ್ಳೋಣ ಅಂದ್ರೆ ಅದನ್ನ ಯಾರು ಮೂಸೋದು ಇಲ್ಲಾ.... ಬಯ್ಯೋರು ಇಲ್ಲಾ.. ಸುಮ್ನೆ ಬರ್ದು ಬರ್ದು ಬೆರಳು ನೋವು ಅಷ್ಟೇ..!!
ಅದ್ಕೆ ಮತ್ತೆ ಹಳೇ ಹೆಂಡ್ತಿನೇ ಗಟ್ಟಿ ಅನ್ನೋ ಹಾಗೆ ಮತ್ತೆ ಬಾತುಕೋಳಿ ಬಗ್ಗೆನೇ ಒಂದೆರಡು ಲೈನು ಗೀಚೋನಾ ಅಂತ..!! ನಾನ್ ನಿಮ್ ಹುಡ್ಗ ತಪ್ಪಿದರೆ ಹೊಟ್ಟೆಗೆ ಹಾಕ್ಕೊಳಿ ಪಿಲಿಜು..!!

ಸುಮಾರು ಆರು ವರ್ಷಗಳಾರಿರಬಹುದು.. ನಾನು ಬಾತು ಕೋಳಿಗಳನ್ನ ಗಮನಿಸಕ್ಕೆ ಶುರು ಮಾಡಿ..!! ಅಲ್ಲಿಂದ ಇಲ್ಲಿಯವರೆಗೆ ಎಸ್ಟೊಂದು ಬದಲಾವಣೆ ನಿಜಕ್ಕೂ ನಮ್ಮ ಭಾರತ ಪ್ರಕಾಶಿಸುತ್ತಿದೆ..!!
ಎಂಥೆಂಥಾ ಬಾತುಕೊಳಿಗಳು ನಮ್ ಬೆಂಗಳೂರಿನಲ್ಲಿ..ಯಪ್ಪಾ ಯಪ್ಪಾ..!! ನಾಮ್ಮಂಥ ಹುಡುಗ್ರು ಕಾಳು ಹಾಕೋಣ ಅಂತ ಹೋದ್ರೆ ಕಾಳಿನ ಜೊತೆ ನಮ್ಮ ಕೈ ಕಾಲನ್ನೇ ತಿಂದು ಹಾಕ್ತಾವೆ (ಪರ್ಸು ಸಮೇತ)..!! ಉಫಫ್.. ಅವತ್ತೇ ನಿರ್ಧಾರ ಮಾಡ್ಬಿಟ್ಟೆ.. ಬಾತುಕೊಳಿನಾ ಸುಮ್ನೆ ನೋಡಿ ಮರೆತು ಬಿಡಬೇಕು ಅಂತಾ..!! ಅಂದಿನಿಂದ ಇಂದಿನವರೆಗೂ ಸುಖಿ ಜೀವನ ನಡಿಸ್ತಾ ಇದೀನಿ..!! ಕೆಲವು ಹುಡುಗ್ರು ಈಗಲೂ ನನ್ನ ನೋಡಿ ಹೊಟ್ಟೆ ಉರ್ಕೊತಾ ಇದಾರೆ.. ಅವರ ಮಕ ಬಾತುಕೋಳಿ ನೆಕ್ಕಾ..!!

ಬೆಳ್ಬೆಲ್ಗೆ ಬ್ಯಾಡ ಬ್ಯಾಡ ಅಂದ್ರು ಕಾಲೇಜು ಬಾತುಕೊಳಿಗಳು ಕಣ್ಣಿಗೆ ಬಿಳ್ತಾವೆ.. ತ್ಹುಥರಿಕಿ ಅಂತ ಕಣ್ಣು ಮುಚ್ಕೊಂದ್ರೆ ಕಿಚ ಪಿಚ ಅಂತ ಮಾತಾಡಿ ಕಿಸ ಕಿಸ ಅಂತ ಕಿಸಿತಿರ್ತಾವೆ..!! ಅವುಗಳ ಮುಕನದ್ರು ನೋಡೋಹಂಗೆ ಇರ್ತಾವ? ಮುಕಕ್ಕೆಲ್ಲಾ..ಏನೇನೋ ಬಳ್ಕೊಂಡು ಚಪಾತಿ ಹಿಟ್ಟಿನ ತರ ಮಾಡ್ಕೊಂಡಿರುತ್ತವೆ..!! ಥೂ ಮೇಕಪ್ ಮಾಡ್ಕೊಂಡಿರೋ ಬಾತುಕೋಳಿ ಮಕಾನ ಡ್ರಾಕುಲಾ ನೆಕ್ಕಾ..!!
ಬಾಯ್ ಕಟ್ ಅಂತೆ ಸ್ಕ್ಯಾರ್ಲಿ ಅಂತೆ..!! ಅವರ ತಲೆ ಮೇಲೆಲ್ಲಾ ಬೆಂಕಿ ಕೋಳಿ ಮೊಟ್ಟೆ ಇಡಾ..!! ಟೀ ಶರ್ಟು ಅಂತೆ..ಏನೇನು ಕಾಣಿಸಬಾರದೋ ಅದ್ನ ತೋರಿಸ್ಕೊಂಡು ಕೈಗೆ, ಕೆಲವು ಮಕಕ್ಕೆ ತಾಲಿಬಾನಿ ಮಾದರೀಲಿ ಬಟ್ಟೆ ಕಟ್ಕೊಂಡು ಪಿತಾಜಿ ಕೊಡ್ಸಿರೋ ಗಾಡಿಲಿ ಓಡಾಡ್ಕಂಡು ಬಕರ ಸಿಗುತ್ತಾ ಅಂತ ಹೊಂಚು ಹಾಕ್ತಾ ಇರ್ತಾವೆ..!! ಕಾಲಿಗೆ ಲೆಗ್ಗಿಂಗು ಅನ್ನೋ ಏನೋ ಸಿಗಿಸ್ಕಂದು ಹಳೇ ಶಿಲಾಯುಗದ ಕಾಡು ಮಹಿಳೆಯರನ್ನ ನೆನಪಿಗೆ ತರ್ತಾರೆ..!! ಕೈಲಿ ಮುಟ್ಟಿದರೆ ಮಾತಾಡುವಂತಹ ಜಂಗಮವಾಣಿ ಹಿಡ್ಕಂಡು ಬಾಯಲ್ಲಿ ಇಂಗ್ಲೀಸು, ಪ್ರೆಂಚು, ಜರಮನ್ನು, ಇತ್ಯಾದಿ ಇತ್ಯಾದಿ ಏನೇನೋ ಹೇಳುತ್ತಾ ಕಣ್ಣಲ್ಲೇ ಎಲ್ಲಾ ನೋಡುತ್ತಾ ತಲೇಲಿ ಏನೇನು ಯೋಚನೆ ಮಾಡುತ್ತಾ ಓಡಾಡೋ ಬಾತು ಕೋಳಿಗಳ ಬಗ್ಗೆ ನಾನಂತೂ ಬರಿಯಲ್ಲ ಕಣ್ರೀ..!! ಯಾವನಿಗೆ ಬೇಕು ಶಾಪ ಹಾಕಿಸ್ಕೊಲ್ಲೋ ಕರುಮ..!!

ಬಾತುಕೋಳಿ ಅಂದ್ರೆ ಒಂದು ಪಕ್ಷಿ..ಸುಂದರ ಪಕ್ಷಿ.. ನೀರಲ್ಲಿ ಚೆನ್ನಾಗಿ ತೇಲುತ್ತ ಹೋಗುವ ಅದು ನೀರಿನ ಕೆಳಗಡೆ ಎಷ್ಟು ಕಷ್ಟ ಪಟ್ಟು ಪೆಡಲ್ ಮಾಡ್ತಾ ಇರುತ್ತವೆ ಅಂತ ಯಾರಾದ್ರೂ ಯೋಚನೆ ಮಾಡಿದಿರಾ?? ಅದರ ಕಷ್ಟನ ಯಾರಾದ್ರೂ ತಿಳ್ಕೊಂಡಿದ್ರೆ ಅದು ಇವತ್ತು ನಮ್ಮ ರಾಷ್ಟ್ರ ಪಕ್ಷಿ ಆಗಬೇಕಿತ್ತು..!! ಅಲ್ಲೂ ಅದಕ್ಕೆ ಅನ್ಯಾಯ ಆಗಿದೆ..!!
ಪಾಪಾ ಬಾತುಕೊಳಿಗಳು.. ನಾನ್ ನಮ್ ಹುಡುಗರಿ ಹೇಳೋದು ಇಷ್ಟೇ ಬಾತುಕೊಳಿನ ನೋಡಿ ಸಂತೋಷ ಪಡಿ ಕಾಳು ಹಾಕಿ ಆದ್ರೆ ಸಾಕಕ್ಕೆ ಮಾತ್ರ ಹೋಗಬೇಡಿ.. ಅದು ದೂರ ಇದ್ರೇನೆ ಚಂದ..!! ಸಾಕಕ್ಕೆ ಅಂತ ಮನೇಲಿ ಯಾವ್ದಾದ್ರು ಪಾರಿವಾಳನ ತಂದು ಕೊಡ್ತಾರೆ..ಅದನ್ನೇ ಸಾಕಿ..!!

I love ducks ♥ ♥ ♥ ummaaa....!!

ನಾನು ಬರೀಬೇಕು...!!!!

ಎಲ್ಲರು ಎಷ್ಟೆಷ್ಟೋ ಭಾಷೇಲಿ ಏನೇನೋ ಬರಿತಾರೆ.. ನಾನು ಬರೀಬೇಕು.. ಆದ್ರೆ ಏನ್ ಬರೀಲಿ?? ನಂಗೆ ಬರೋಲ್ವೆ..!! ನಂಗೆ ಯಾಕೆ ಬರ್ತಾ ಇಲ್ಲಾ?? ನಿಗೂಢ ಪ್ರಶ್ನೆ... ಹೋಗ್ಲಿ, ಯಾವದರ ಬಗ್ಗೆ ಏನಂತ ಬರೀಲಿ? ಹಾಳಾದ ತಲೇಲಿ ಏನು ಹೊಳಿತಾ ಇಲ್ಲಾ.. ಮ್ಯಾಟರ್ರೆ ಇಲ್ಲದೆ ಬರೆಯೋದು ಒಂದು ಬರವಣಿಗೆನ...? ತುಪುಕ್ ಅಂತ ನಂಗೆ ನಾನು ಉಗಿದುಕೊಳ್ಳ ಬೇಕಾ?? ಪಿಲಿಜು ನಿಮ್ಮ ಹುಡುಗ ಅಂತ ನನ್ ತಪ್ಪನ್ನ ನಿಮ್ ಹೊಟ್ಟೆಗೆಹಾಕೊಳ್ಳಿ..!!
ಮ್ಯಾಟರ್ರೆ ಇಲ್ಲದ ರೈಟರು ಅಂತ ಉಗಿಬೇಡಿ ... ನೀವೇ ಏನಾದ್ರು ಹೇಳಿ ಯಾವದರ ಬಗ್ಗೆ ಹೇಗೆ ಬರಿಯೋದು ಜಾಸ್ತಿ ಕೊರಿಯೋದು ಅಂತ.. ಹಂಗೆ ಓಡಿಸ್ಕೊಂಡು ಹೋಗ್ತಾ ಇರಬೇಕು.. ನಂಗೆ ಯಾವ ಭಾಷೆನು ಬರಲ್ಲಾ ಇದ್ದಿದ್ರಲ್ಲಿ ಕನ್ನಡ ಮಾತ್ರ ಅಲ್ಪ ಸ್ವಲ್ಪ ಗೊತ್ತು ಅದಿಕ್ಕೆ ಅದರಲ್ಲೇ ಬರಿತೀನಿ ಕನ್ನಡಾಭಿಮಾನಿಗಳೇ ಬಯ್ಯಬೇಡಿ ಪಿಲಿಜು..
ಯಪ್ಪಾ ಯಾವ ಕನ್ನಡದಲ್ಲಿ ಬರಿಯೋದು ? ಸುರು ಆಯ್ತು ಇನ್ನೊಂದು ರೋಧನೆ ನಮ್ ಕನ್ನಡ ದೇಶದಲ್ಲಿ ಪ್ರತಿ ೨೦ ಕಿಲೋಮೀಟೆರ್ ಗು ಭಾಷೆ ಬದಲಾಗತ್ತಲ್ಲಪ್ಪಾ..!! ಯಾವದದ್ರು ಒಂದು ಭಾಷೇಲಿ ಬರೆಯೋಣ ಅಂದ್ರೆ ಬೇಧ-ಭಾವ ಬದನೆಕಾಯಿ ಎಲ್ಲಾ ಅನ್ನಿಸತ್ತೆ. ಯಾರಾದ್ರೂ ಹೇಳಿಕೊಡಿಪಾ...!! ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಬರಿಯಕ್ಕೆ ಬರ್ತಾ ಇಲ್ಲ.. ಇದು ಒಂದು ಕಲೇನ? ನಾನ್ ಮಾಡ್ತಾ ಇರೋ ಕನ್ನಡದ ಕೊಲೆನ????


ಥೂ ನಂಗೆ ಆಗ್ತಾ ಇಲ್ಲಾ ನಾನೇನು ಬರಿಯಲ್ಲ ಕಣ್ರೀ..!
.

.

.

.
.

ಹಿಂಗಂತ ಸುಮ್ನೆ ಕೂಡೋ ಜಾಯಮಾನ ನಂದಲ್ಲ ಜಮಾನಾನು ಅಲ್ಲ ಜನಾನು ಬಿಡಲ್ಲ..!!
ಮಾಡನ ಏನರ..!!
ಯಾರ್ಯಾರೋ ಹೆಂಗೆಗೋ ಸಮಯ ಕೊಲ್ಲುತಾರೆ ನಾನು ಸಮಯದ ಜೊತೆ ಓದುವವರ ತಲೆನು ಕೊರಿತೀನಿ ಅಂತ ನಿಮ್ಮಗಳ ಉದುರಿ ಹೋಗ್ತಾ ಇರೋ ಕೂದಲ ಮೇಲೆ ಆಣೆ ಮಾಡಿ ಹೇಳ್ತಿದೀನಿ..!!

ಆದರು ಕೊನೆಗೆ ಅದೇ ಪ್ರಶ್ನೆ ......" ಏನ್ ಬರೀಲಿ??? "

ಎಲ್ಲರು ಎಷ್ಟೆಷ್ಟೋ ಭಾಷೇಲಿ ಏನೇನೋ ಬರಿತಾರೆ.. ನಾನು ಬರೀಬೇಕು.. ಆದ್ರೆ ಏನ್ ಬರೀಲಿ?? ನಂಗೆ ಬರೋಲ್ವೆ..!! ನಂಗೆ ಯಾಕೆ ಬರ್ತಾ ಇಲ್ಲಾ?? ನಿಗೂಢ ಪ್ರಶ್ನೆ... ಹೋಗ್ಲಿ, ಯಾವದರ ಬಗ್ಗೆ ಏನಂತ ಬರೀಲಿ? ಹಾಳಾದ ತಲೇಲಿ ಏನು ಹೊಳಿತಾ ಇಲ್ಲಾ.. ಮ್ಯಾಟರ್ರೆ ಇಲ್ಲದೆ ಬರೆಯೋದು ಒಂದು ಬರವಣಿಗೆನ...? ತುಪುಕ್ ಅಂತ ನಂಗೆ ನಾನು ಉಗಿದುಕೊಳ್ಳ ಬೇಕಾ?? ಪಿಲಿಜು ನಿಮ್ಮ ಹುಡುಗ ಅಂತ ನನ್ ತಪ್ಪನ್ನ ನಿಮ್ ಹೊಟ್ಟೆಗೆಹಾಕೊಳ್ಳಿ..!!
ಮ್ಯಾಟರ್ರೆ ಇಲ್ಲದ ರೈಟರು ಅಂತ ಉಗಿಬೇಡಿ ... ನೀವೇ ಏನಾದ್ರು ಹೇಳಿ ಯಾವದರ ಬಗ್ಗೆ ಹೇಗೆ ಬರಿಯೋದು ಜಾಸ್ತಿ ಕೊರಿಯೋದು ಅಂತ.. ಹಂಗೆ ಓಡಿಸ್ಕೊಂಡು ಹೋಗ್ತಾ ಇರಬೇಕು.. ನಂಗೆ ಯಾವ ಭಾಷೆನು ಬರಲ್ಲಾ ಇದ್ದಿದ್ರಲ್ಲಿ ಕನ್ನಡ ಮಾತ್ರ ಅಲ್ಪ ಸ್ವಲ್ಪ ಗೊತ್ತು ಅದಿಕ್ಕೆ ಅದರಲ್ಲೇ ಬರಿತೀನಿ ಕನ್ನಡಾಭಿಮಾನಿಗಳೇ ಬಯ್ಯಬೇಡಿ ಪಿಲಿಜು..
ಯಪ್ಪಾ ಯಾವ ಕನ್ನಡದಲ್ಲಿ ಬರಿಯೋದು ? ಸುರು ಆಯ್ತು ಇನ್ನೊಂದು ರೋಧನೆ ನಮ್ ಕನ್ನಡ ದೇಶದಲ್ಲಿ ಪ್ರತಿ ೨೦ ಕಿಲೋಮೀಟೆರ್ ಗು ಭಾಷೆ ಬದಲಾಗತ್ತಲ್ಲಪ್ಪಾ..!! ಯಾವದದ್ರು ಒಂದು ಭಾಷೇಲಿ ಬರೆಯೋಣ ಅಂದ್ರೆ ಬೇಧ-ಭಾವ ಬದನೆಕಾಯಿ ಎಲ್ಲಾ ಅನ್ನಿಸತ್ತೆ. ಯಾರಾದ್ರೂ ಹೇಳಿಕೊಡಿಪಾ...!! ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಬರಿಯಕ್ಕೆ ಬರ್ತಾ ಇಲ್ಲ.. ಇದು ಒಂದು ಕಲೇನ? ನಾನ್ ಮಾಡ್ತಾ ಇರೋ ಕನ್ನಡದ ಕೊಲೆನ????


ಥೂ ನಂಗೆ ಆಗ್ತಾ ಇಲ್ಲಾ ನಾನೇನು ಬರಿಯಲ್ಲ ಕಣ್ರೀ..!
.

.

.

.
.

ಹಿಂಗಂತ ಸುಮ್ನೆ ಕೂಡೋ ಜಾಯಮಾನ ನಂದಲ್ಲ ಜಮಾನಾನು ಅಲ್ಲ ಜನಾನು ಬಿಡಲ್ಲ..!!
ಮಾಡನ ಏನರ..!!
ಯಾರ್ಯಾರೋ ಹೆಂಗೆಗೋ ಸಮಯ ಕೊಲ್ಲುತಾರೆ ನಾನು ಸಮಯದ ಜೊತೆ ಓದುವವರ ತಲೆನು ಕೊರಿತೀನಿ ಅಂತ ನಿಮ್ಮಗಳ ಉದುರಿ ಹೋಗ್ತಾ ಇರೋ ಕೂದಲ ಮೇಲೆ ಆಣೆ ಮಾಡಿ ಹೇಳ್ತಿದೀನಿ..!!

ಆದರು ಕೊನೆಗೆ ಅದೇ ಪ್ರಶ್ನೆ ......" ಏನ್ ಬರೀಲಿ??? "

ಮೋಹಿನೀ ಅಯ್ ಲವ್ ಯು..!!


ಕೆಲವು ವರ್ಷಗಳ ಹಿಂದೆ ನಂಗೆ ಒಂದು ಆಸೆ ಇತ್ತು.. (ಈಗಿಲ್ಲ ಬಿಡಿ).. ನಾನು ಮೊದಲಿಂದಾನು ದೆವ್ವ ಭೂತ ಪಿಚಾಚಿನ ಇಷ್ಟ ಪಟ್ಟವನು.. ಒಂದು ಸಲನಾದ್ರು ಮೀಟ್ ಮಾಡಿ ಹಗ್ ಮಾಡ್ಬೇಕಂತ ಅಂದುಕೊಂಡಿದ್ದೆ..!! ಎಲ್ಲಾರ್ನು ಎಷ್ಟು ಚೆನ್ನಾಗಿ ಹೆದರಿಸತ್ತೆ ಅದು.. ಅದಕ್ಕೆ ದಯೆ ಕರುಣೆ ಹ್ರದಯ ಕಿಡ್ನಿ ಕಲಿಜ ಅದು ಇದು ಸುಡುಗಾಡು ಸುಂಟಿ ಏನು ಇಲ್ಲ ಅಂತಾರೆ. ಅದಕ್ಕೊಸ್ಕರನಾದ್ರು ನೋಡೋಣ ಆಮೇಲೆ ಮುಂದಿನದ್ದು ಬಂದಂಗೆ ಎದುರಿಸಿದ್ರಾಯ್ತು ಅಂತ ಯೋಚನೆ ಮಾಡ್ತಾ ಇದ್ದೆ... ಯಾಕಂದ್ರೆ ಅದು ಅದರಾಗೆ ಇರತ್ತೆ ಅದರ ಕೆಲಸನ ಅದೇ ಮಾಡತ್ತೆ ಅದಕ್ಕೆ ಒಳಗೊಂದು ಹೊರಗೊಂದು ಗೊತ್ತಿಲ್ಲಾ ಹಾಲಿನಂತ ಮನಸ್ಸು ಅದರದ್ದು.. ಮನುಷ್ಯರ ತರ ಮೇಲೆ ಕುರಿಮುಕದ ಹೆಬ್ಬಾವು ಅಲ್ಲಾ ಅದು..!! ಪ್ರಾಮಾಣಿಕವಾಗಿ ಕಾಟ ಕೊಡತ್ತೆ.. ಪೀಡಿಸತ್ತೆ..!!
ಅದರಲ್ಲೂ ಮೋಹಿನಿ ಆದ್ರೆ ಏನೋ ಒಂತರ ಸೆಳೆತ ಇಂಗ್ಲಿಷ್ ಅಲ್ಲಿ ಕ್ರಶ್ ಅಂತಾರಲ್ಲಾ ಅದು ಇತ್ತು.. ಎಸ್ಟೋ ಸಲ ಹಳ್ಳಿಗೆ ಹೋದಾಗ ರಾತ್ರೋ ರಾತ್ರಿ ಅದನ್ನ ಹುಡುಕಿಕೊಂಡು ಹೋಗಿದ್ದು ಇದೆ..ಯಾಕಂದ್ರೆ ಮಾಡ್ರನ್ನು ಮೊಹಿನಿಗು ಸಿಟಿಲಿ ಇರೋ ಹುಡುಗಿಯರಿಗೂ ನಂಗೆ ವ್ಯತ್ಯಾಸನೆ ಗೊತ್ತಾಗಲ್ಲ.. ಇನ್ನೊಂದೆನು ಅದರ ಮೇಲೆ 'ಅದು' ಬರಕ್ಕೆ ಕಾರಣ ಅಂದ್ರೆ ಮೋಹಿನಿ ಹುಡುಗಿಯರ ತರ ಚೇಂಜ್ ಆಗೋಲ್ಲ ಅದೇ ಹಳೆ ಬಿಳಿ ಸೀರೆನ ಇನ್ನು ಬಿಟ್ಟಿಲ್ಲ ಅಂತ ನಮ್ಮಜ್ಜಿ ಹೇಳ್ತಾ ಇದ್ರು.. ಬಟ್ಟೆನ ಬದಲಿಸದವಳು ಬಾಯ್ ಫ್ರೆಂಡು ನ ಬದಲಿಸಲ್ಲ ಅನ್ನೋ ನಂಬಿಕೆ ನನ್ನದು..!!

ಅದಿಕ್ಕೆ ನಾನು ನಮ್ಮ ಹುಡುಗರಿಗೆ ಹೇಳೋದಿಷ್ಟೇ ... ಹುಡುಗಿಯರಿಗಿಂತ ಮೊಹಿನಿನೆ ಬೆಷ್ಟು.. ಯಾಕಂದ್ರೆ ಅದು ಬದಲಾಗೊಲ್ಲಾ.. ನಿಮ್ಮನ್ನ ಬದಲಾಯಿಸೋಲ್ಲ... ಕಾಟ ಕೊಡೋದು ಎಲ್ಲಾ ಹುಡುಗಿಯರ ಕೆಲಸ ಅದನ್ನ ಪ್ರಾಮಾಣಿಕವಾಗಿ ಮಾಡುತ್ತೆ..!! ಯೋಚನೆ ಮಾಡಿ ಹುಡುಗರೆ..!!
ಯಪ್ಪಾ ನನ್ ಮೋಹಿನಿ ನಂಗೆ ಕಾಲ್ ಮಾಡ್ತಾ ಇದಾಳೆ.. ಬರ್ತೀನಿ ಬಾಯ್..!!

ಜೀವನ ಸುಂದರ..!!

ಇದು ಕಥೆ ಅಲ್ಲ ಕಟ್ಟುಕಥೆ.. ಪಟ್ಟ ವ್ಯಥೆ..ಜೀವನದ ಮಿಥ್ಯೆ .. ನನ್ ಲವ್ ಕಥೆ. ಕಿವಿ ಇಂದ ನೋಡಿ ಕಣ್ಣಿಂದ ಕೇಳಿ..!!
ಫಸ್ಟ್ ಟೈಮ್ ಲೈಫ್ ಅಲ್ಲಿ ಮೀಸೆ ಬಂದಿತ್ತು ... ಎಲ್ಲಾ ಹುಡುಗರ ತರ ನಾನು ಲೈನ್ ಹೊಡೆದು ಯಾವ್ದಾದ್ರು ಸುಂದರಿನ ಪಟಾಯ್ಸಿ ಜೀವನದ ಕಷ್ಟ ಹಿಂಸೆ ನೋವು ಅನುಬವಿಸಬೇಕು ಅಂತ ನಿರ್ಧಾರ ಮಾಡಿದ ಕಾಲ ಅದು...!!
ಚೆನ್ನಾಗೇನೋ ಮೀಸೆ ಬಿಟ್ಟೆ ಕಂಡ ಕಂಡ ಹುಡುಗಿಯರಿಗೆಲ್ಲ ಸಿಕ್ಕ ಸಿಕ್ಕ ಕಡೆ ಎಲ್ಲಾ ಲೈನ್ ಹೊಡೆದು ಲಾಸ್ಟ್ ಒಂದು ಫಿಗೂರ್ ಗೆ ಪ್ರೊಪೋಸ್ ಮಾಡಣ ಅಂದ್ಕೊಂಡೆ..!! ಅವ್ಳುನು ನಂಗೆ ತುಂಬಾನೇ ಕ್ಲೋಸ್ ಆಗಿದ್ಲು ಇರೋ ಬರೋದನ್ನೆಲ್ಲಾ ನನ್ನತ್ರ ಒದರ್ತಾ ಇದ್ಲು..!!
ಸುಮ್ನೆ ಟೈಮ್ ಪಾಸ್ ಗೆ ಅಂತ ಸುರು ಹಚ್ಹ್ಕೊಂಡಿದ್ದು ರಿಯಲ್ ಆಗಿ ಲವ್ವಲ್ಲಿ ಬಿದ್ದು ಒದ್ದೆ ಆಗೋದೆ..!! ಅದ್ರು ಹೇಳಕ್ಕೆ ಭಯ ಅವಳು ಎಲ್ಲಿ ಬೇಜಾರ್ ಮಾಡ್ಕೊಂಡು ದೂರ ತಳ್ಳಿ ಬಿಡ್ತಾಳೆನೋ ಅಂತಾ..!! ಕೊನೆಗಾಲದಲ್ಲಿ ನಮ್ ಹುಡುಗರೆ ಬೇಕು ಅನ್ನೋಹಾಗೆ ಅವರ ಹತ್ರ ಎಲ್ಲಾ ಹೇಳ್ದೆ.. ಬಿಟ್ಟಿ ಸಲಹೆಗಳು ಸ್ವಲ್ಪ ಕಾಸು ಎಲ್ಲಾನು ಕೊಟ್ಟು ಹಾಳಗೋಕೆ ಕೈಲಾದ ಸಹಾಯ ಮಾಡಿದ್ರು.. !
ಅವರ ಸಲಹೆಯಂತೆ ನಮ್ ಹುಡುಗಿಯ ಅಪ್ಪ ಅಮ್ಮನ್ನು ಪಟಾಯ್ಸಿ ಒಳ್ಳೆ ಹುಡುಗ ಅಂತ ಮನವರಿಕೆ ಮಾಡಿ ಕೊಟ್ಟೆ ಒಳ್ಳೆ ಕೆಲ್ಸನು ಸಿಕ್ತು " ಗಾಡ್ ಇಸ್ ಗ್ರೇಟ್ " ಅಂತ ದೇವಸ್ತಾನದಲ್ಲಿ ತಿಪಟೂರು ತೆಂಗಿನ ಕಾಯಿನೂ ಓಡ್ಸಿದೆ..!!
ಎಲ್ಲ ಆಯಿತು ನಾಳೆ ಅವಳ ಹುಟ್ಟಿದ ದಿನ ಹೆಂಗಾರು ಮಾಡಿ ಪ್ರಪೋಸು ಮಾಡಬೇಕು ಅಂತ ಡಿಸೈಡ್ ಮಾಡಿ ಚಾಕಲೇಟು ಟೆಡ್ಡಿ ಕರಡಿ ಗೊಂಬೆ ಇನ್ನು ಏನೇನೋ ಹಾಳು ಮೂಳು ಎಲ್ಲ ತೊಗೊಂಡು ಅವಳ ಮನೆಗೆ ಹೋಗಿ ಅವರ ಅಪ್ಪನ್ನ ಕೇಳಿದ್ರೆ ರೂಮಲ್ಲಿ ಇರ್ಬೇಕು.. ಅಂದ್ರು.. ಹೋದ್ರೆ ಅವಳು ಇಲ್ಲ.. ಬದಲು ಒಂದು ಲೆಟರ್ .. ನೋಡಿದಮೇಲೆ ಗೊತ್ತಾಯ್ತು ಅವ್ಳು ಪಿ ಟಿ ಉಷಾ ಆಗಬೇಕಂತ ಓದಿ ಹೋಗಿದ್ಲು ಆದ್ರೆ ಯಾವ್ದೋ ಹುಡುಗನ ಜೊತೆ.. !!
ಅವರಪ್ಪ ಎದೆ ಎದೆ ಹೊಡ್ಕೊಂದ್ರು..ನಂಗಂತೂ ಎಲ್ಲಿ ಏನು ತಗೊಂಡು ಹೊಡ್ಕೊಬೇಕು ಅಂತ ಗೊತ್ತಾಗದೆ ಸುಮ್ನೆ ನಿಂತಿದ್ದೆ.. !!
ಅವತ್ತೇ ಗೊತ್ತಾಗಿದ್ದು ಹುಡುಗಿಯರು ಅಮಾಯಕರಲ್ಲ ಅಂತ.. ನಮ್ ದೇಶದಲ್ಲಿ gayism ಗೆ ಯಾಕೆ ಮಾನ್ಯತೆ ಸಿಕ್ತು ಅಂತಾ..!! ಆದರು ಬಿಟ್ಟಿಲ್ಲಾ ಹುಡುಕಿದ್ವಿ ಹುಡುಕಿದ್ವಿ ವರ್ಷಾನುಗಟ್ಟಲೆ ಹುದುಕಿದ್ವಿ ಕೊನೆಗೂ ಒಂದು ದಿನ ಸಿಕ್ಕೆ ಬಿಟ್ಟಳು ಶವವಾಗಿ..! ಪೇಪರ್ ಅಲ್ಲಿ ಇತ್ತು ದೊಡ್ದಕ್ಷರದಲ್ಲಿ "ಕೈ ಕೊಟ್ಟ ಪ್ರೇಮಿ, ಜೀವ ಬಿಟ್ಟ ಪ್ರೇಯಸಿ" ಅಂತ..!!
ಅವಳು ಪ್ರಾಣ ಬಿಟ್ಲು ನಾನು ಗಡ್ಡ ಬಿಟ್ಟೆ..!! ಅವಳು ಬರದ ನಾಡಿಗೆ ಹೋದಳು ನಾನು ಈಗಲೂ ಬಾರ್ ಗೆ ಹೋಗಿ ಬಂದು ಮಾಡ್ತೀನಿ..!! ನಾನು ಭಗ್ನ ಪ್ರೇಮಿಯಲ್ಲ ನಗ್ನ ಕರ್ಮಿ..!!

(ಕಥೆ ಯಾರ್ದೋ ಗೊತ್ತಿಲ್ಲ ಬರೆದಿದ್ದು ಮಾತ್ರ  "ನಾನು" ತಪ್ಪಿದರೆ ಬುದ್ದಿ ಹೇಳಿ.. )

ನಾನು ಮತ್ತು ಗಾಡು ...!!

ಥೂ 
ಓ ಮೈ ಗ್ವಾಡ್ ನನ್ನ ಯಾಕೆ ಹಿಂಗೆ ಮಾಡಿದೆ?? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು..?? ಉತ್ತರ ಯಾಕೆ ಯಾರು ಕೊಡ್ತಾ ಇಲ್ಲ?? 
ಏನಾದರಾಗಲಿ ದೇವರನ್ನೇ ಕೇಳೋಣ ಅಂತ ಘೋರ ತಪಸ್ಸನ್ನ ಮಾಡಕ್ಕೆ ಅಂತ ನಮ್ ಓನರ್ ಮನೆ ಟೆರೆಸ್ ಅಲ್ಲಿ ವಾಟರ್ ಟ್ಯಾಂಕ್ ಪಕ್ಕ ಕುಂತೇ ಬಿಟ್ಟೆ..!! ಎಷ್ಟೊತ್ತಾಗಿತ್ತೋ ಏನೋ ಯಾರೋ ಕರೆದಂತಾಗಿ ಕಣ್ಬಿಟ್ಟು ನೋಡಿದ್ರೆ ಎದ್ರಿಗೆ ಸಾಕ್ಷಾತ್ ಪರಮಾತ್ಮ ಭಗವಂತ ..!!
" ಭಕ್ತ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಸುಮ್ಮನೆ ಅರೆಕ್ಷಣವು ಕೂರಲಾರದ ನೀನು ಇಂದು ಬರೋಬ್ಬರಿ ಇಪ್ಪತ್ತೆರಡು ನಿಮಿಷ ತಪಸ್ಸು ಮಾಡಿದ್ರಿಂತ ಸ್ವಯಂ ನಾನೇ ಪ್ರತ್ಯಕ್ಷನಾಗಿದ್ದೇನೆ. ನನ್ನ ಕರೆದ ಕಾರಣ ತಿಲಿಸುವನ್ತವನಗು " ಎನ್ನಲು ನಾನು
" ಓ ಮೈ ಡಿಯರ್ ಲವ್ಲೀ ಗ್ವಾಡ್ ಹೆಂಗಿದೀಯ??" ಅಂದೇ ಆಗ " ಮಗಾ ಡೈರೆಕ್ಟ್ ಆಗಿ ಮ್ಯಾಟರ್ಗೆ ಬಾ ಜಾಸ್ತಿ ಕೊರಿಬ್ಯಾಡ" ಅಂದ.
"ಷೇರಿ ನನ್ನ ಕೆಲವು ಸಂದೇಹಗಳಿಗೆ ನಿವಾರಣೆ ಉಪಾಯ ತಿಳಿಸು" ಎಂದು ಶ್ರುರು ಹಚ್ಹ್ಕಂಡೆ....
" ಗ್ವಾಡ್ ನಾವೆಲ್ಲಾ ಈ ಪ್ರಪಂಚದಲ್ಲಿ ಯಾಕಿದೀವಿ? ಇಲ್ಲಿ ಇರ್ಲಿಲ್ಲಾ ಅಂದ್ರೆ ಎಲ್ಲಿರ್ತಿದ್ವಿ?" ಆಗ ದೇವ್ರು ಹೇಳಿದ "ಇವಲ್ಲೇ ನಮ್ಮ ರಹಸ್ಯ ಇಂತ ಪ್ರಶ್ನೆ ಕೇಳಿ ಶಾಪಗ್ರಸ್ತ ಆಗಬ್ಯಾದ ಬೇರೆ ಏನಾರ ಇದ್ರೆ ಕೇಳು" ಯಾಕೋ ಗ್ವಾಡ್ ಸಿರಿಯಸ್ ಆಗವ್ನೆ ಅಂತ "ಸರಿ ಅದು ಬ್ಯಾಡ ನಂಗೆ ಬಾಲವಾಡಿ ಇದ್ದಗಿಂದ್ಲು ಒಂದು ಡವಟು, ನಮ್ ಬಾಯಮ್ಮ ಹಲಗೆ ಮೇಲೆ ಬರೆದ ಅಕ್ಷರ ವರಸಿದ ಕೂಡಲೇ ಆ ಅಕ್ಷರಗಳೆಲ್ಲ ಎಲ್ಲಿ ಹೋಗ್ತಾ ಇದ್ವು?"
ಗ್ವಾಡ್ ಸಿಟ್ಟಿನಿಂದ " ಮಗಾ ಚೈಲ್ದು ಪ್ರಶ್ನೆ ಬೇಡ "
ನಾನು " ಓಕೆ ಓಕೆ ಅದು ಬೇಡ.. ಗ್ವಾಡ್ ನಾವ್ ಹಾಕ್ಕೊಳೋ ಪ್ಯಾಂಟು ಶರ್ಟು ಹುಡ್ಗೀರ್ ಹಕ್ಕೊಂದ್ರೆ ಸೂಪರ್ ಆಗಿ ಕಾಣಿಸ್ತಾರೆ , ಆದ್ರೆ ಅವ್ರು ಹಾಕಿಕೊಳ್ಳೋ ಚೂಡಿ ಸಾರಿ ನೈಟಿ ಹುಡುಗ್ರು ಹಾಕಿಕೊಂಡರೆ ಯಾಕೆ ಚೆನ್ನಾಗಿ ಕಾಣಲ್ಲ??" ಗ್ವಾಡ್ ಈಗ ತಲೆ ಮೇಲಿರೋ ಕಿರೀಟ ತೆಗೆದು ಒಂದ್ಸಲ ತಲೆ ಕೆರೆದುಕೊಂಡ ಹಾಗೆ ಅನ್ನಿಸ್ತು ,
"ದೇವ್ರೇ ಕೋಲ್ಡ್ ಕಾಪಿ ಸಿಗತ್ತೆ ಬಿಸಿ ಬಿಸಿ ಐಸ್ ಕ್ರೀಂ ಯಾಕೆ ಸಿಗಲ್ಲ?? ಯಾವಾಗ್ಲೂ like poles ಯಾಕೆ attract ಆಗೋಲ್ಲ ?? ಕರೆಂಟು ಯಾಕೆ ಕಣ್ಣಿಗೆ ಕಾಣಲ್ಲ ?? ನಮ್ಮ ರಾಜಕಾರಣಿ ಗಳು ದುಡ್ಡು ತಿನ್ನಬೇಕಾದ್ರೆ ಯಾಕೆ ಕಣಿ ಕೇಳಲ್ಲ?? ಸಾಯೋರಿಗ್ಯಾಕೆ ಲೈಸೆನ್ಸ ಕೊಡಲ್ಲ?? " ಹೀಗೆ ಕೇಳ್ತಾ ಹೋದೆ ಗ್ವಾಡ್ ಯಾಕೋ ಗುರಾಯಿಸ್ತ ಇದ್ದ ಯಾಕೋ ಕೆಲಸ ಕೆಡ್ತಾ ಇದೆ ಅಂದ್ಕೊಂಡು " ಗ್ವಾಡ್ ಜನ ಷೇರಿ ಇಲ್ವಾ ನಾನು ಷೇರಿ ಇಲ್ವಾ?? ಇದೊಂದಕ್ಕಾದ್ರು ಅನ್ಸ್ವೆರ್ ಮಾಡಪ್ಪ..!! ದೇವ್ರು ಪ್ರಸನ್ನ ವದನದಿಂದ "ಮಗಾ ಇಂಥ ಪ್ರಶ್ನೆಗಳಿಗೊಸ್ಕರ ನನ್ನ ಅಷ್ಟು ದೂರದಿಂದ ಕರೆದೆಯ?? ಆದರು ನಾನು ದೇವ್ರು ನೀನು ಹುಲುಮಾನವ ಅದ್ದರಿಂದ ಕ್ಷಮಿಸಿದ್ದೀನಿ. ನಿನಗೆ ಒಳ್ಳೆಯದಾಗಲಿ ನಂಗೆ ಸ್ವಲ್ಪ ಕ್ಯಾಮೆ ಇದೆ ಬರ್ಲಾ" ಅಂದ. " ಮತ್ತೆ ನನ್ನ ಪ್ರಶ್ನೆಗಳಿಗೆ ಉತ್ತರ ????" ಅಂದಾಗ " ನಿನ್ನ ಪ್ರಶ್ನೆಗಳಿಗೂ ಉತ್ತರ ತಿಳಿಯುವ ಕಾಲ ಇನ್ನು ಬಂದಿಲ್ಲ" " ನಂಗೆ ಮಾತ್ರ ಯಾಕೆ ಇಂತ ದವತು ಅಂದಾಗ " ನೀನು 'god s special edition ' ಹೋಗಿ ಬಾ ಒಳ್ಳೆದಾಗಲಿ " ಅನ್ನುತ್ತಾ ಇರುವಾಗಲೇ ನಾನು " ಗ್ವಾಡ್ ಗ್ವಾಡ್ ಲಾಸ್ಟ್ ಒನ್ ಮಿನಿಟ್ " ಅನ್ನುವಷ್ಟರಲ್ಲಿ ನಮ್ಮಕ್ಕ " ಏಯ್ಯ್ ಸಾಕು ಏಳೋ ಬೇಗ ಆಪಿಸ್ ಗೆ ಹೋಗಲ್ವ ಅಂದಾಗಲೇ ನಿಜ ಸ್ತಿತಿ ಅರಿವಾಗಿ ಯಪ್ಪಾ ಇವತ್ತು ಬಾಸ್ ಹತ್ರ ಬೇರೆ ಬೈಯಿಸ್ಕೊಬೇಕು ಅಂತ ಗೊಣಗುತ್ತ ಬಾತ್ ರೂಂ ಒಳಗೆ ಹೋದೆ..!!

ನಮ್ ಲೈಫು ಹಿಂಗೇನೆ...!!

ಸ್ವಲ್ಪ ನಗು ಜಾಸ್ತಿನೇ ಅಳು.. ಸ್ವಲ್ಪ ದುಖ ಸ್ವಲ್ಪ ನಲಿವು.. ಅನಿರೀಕ್ಷಿತ ತಿರುವುಗಳು.. ದಿನದಿನ ಕಲಿಯೋ ಪಾಠಗಳು .. ಜೀವನ ತೋರಿಸೋ ದಾರಿಗಳು .. ಜಾಸ್ತಿನೇ ಅನ್ನಿಸುವ ತೊಂದರೆಗಳು .. ಜೊತೆಗೆ ಒಂದಷ್ಟು ಗೆಳೆಯರು ಹೀಗಳೆದರೂ ಕೈ ಹಿಡಿಯುವ ಗೆಳತಿಯರು.. ಮರೆಯಲಾರದ ನೆನಪುಗಳು.. ಕಹಿ ನೆನಪುಗಳು.. ಯಾರಿಗೂ ಕಾಯದ.. ಹಾಳಾದ ಟೈಮುಗಳು .. ಸಿಗದ ಕೆಲಸಗಳು.. ಆಗದ ಕೆಲಸಗಳು.. ಇಲ್ಲದ ಮನಸುಗಳು.. ಸಾಕಪ್ಪಾ ಸಾಕು ಅನ್ನಿಸುವ ಪ್ರಸಂಗಗಳು .. ಆದರು ಸಾಯದೆ ಬದುಕಿರುವ ನಾವುಗಳು ನೀವುಗಳು..
ಇದನ್ನೆಲ್ಲಾ ನಾನ್ಯಾಕೆ ಬರಿತಿದಿನಿ ನೀವ್ಯಾಕೆ ಓದಬೇಕು ಏನು ಗೊತ್ತಿಲ್ಲಾ.. ಆದರು ಬರೆದೆ ನೀವು ನೋಡಿದಿರಿ..
ಥೂ ಹೋಗ್ರಪ್ಪಾ.. ನಂಗೆ ಬೇಜಾರಾಗಿಲ್ದೆ ಇದ್ರೂ ಏನೋ ಒಂಥರಾ .. ಹಾಗಂತ ಲವ್ವು ಗಿವ್ವು ಲೊಟ್ಟೆ ಪುಷ್ಕಿ ಅಂತೆಲ್ಲ ಥಿಂಕ್ ಮಾಡ್ಬ್ಯಾಡಿ.. ಹುಚ್ಚ ಅನ್ನಿ.. ನಿಮ್ ಮಕಾ ಕುಟ್ಟುತೀನಿ..
ತುಂಬಾನೇ ಕೆಲಸ ಇದೆ ಮಾಡಕ್ಕೆ ಮನಸ್ಸಿಲ್ಲಾ.. ಕೊರೆಯಕ್ಕೆ ಆಸೆ ಇದೆ ಕೊರೆಸಿ'ಕೊಲ್ಲೋರು' ಯಾರು ಸಿಕ್ತಿಲ್ಲಾ..
ಈ ಹಾಳಾದ ಜಿಂದಗಿನೆ ಷೇರಿ ಇಲ್ಲಾ..!! ಒಂದು ಕಡೆ ಸುನಾಮಿ..ಇನ್ನೊಂದ್ಕಡೆ ಬರಗಾಲ.... ಒಂದು ಕಡೆ ಬಿಳಿಜನ.. ಇನ್ನೊಂದ್ಕಡೆ ಕರಿಜನ .. ಹೆಣ್ಣನ್ನ ಭೋಗದ ವಸ್ತು ತರ ನೋಡೋ ಕೆಲವು ಜನಗಳು.. ಬರಿ ಚರ್ಮದ ಹೊದಿಕೆ ಅಂತ ಭಾವಿಸೋ ಸಂತರು .. ಮಾಂಸದ ತುಂಡಿನಂತೆ ಕಾಣೋ ನಾಯಿಗಳು.... ಬಾಯಿಗೆ ಬರ್ತಾವೆ ಮಾತುಗಳೆಲ್ಲಾ ..ಯಾಕೋ ಏನೋ ಗೊತ್ತಿಲ್ಲಾ.. ನಾವು ದುಡ್ಡು ಅಂತ ಪೂಜಿಸೋ ಪೇಪರುಗಳು ಇನ್ನುವರೆಗೂ ಕಸದಡಬ್ಬಿನ ನೋಡೇ ಇಲ್ವಂತೆ...
ಇನ್ನೂ ತುಂಬಾ ಇದೆ ಹೇಳಕ್ಕೆ ನಂಗೆ ನಾಚ್ಕೆ ಆಯ್ತದೆ.. ಹೇಳಿದ್ರು ನಿಮಗೆ ಅರ್ಥ ಆಗಲ್ಲಾ ಬಿಡಿ..ಸಾಕು ಇನ್ನು ಬರೆಯಲ್ಲಾ.. ಅನ್ಯಾಯವಾಗಿ ಏನೇನೋ ಆಗ್ಬಿಡ್ತೀನಿ.. ಎಲ್ಲಾ ಚೆನ್ನಗಿರ್ರಪ್ಪಾ..ಹಾಳಾಗೋಗಿ... ಸರಿ ಇದ್ದೇನು ಪ್ರಯೋಜನ ಇಲ್ಲಾ..


( ಮೇಲೆ ಬರೆದಿರಕ್ಕು ನಾನು ಹೇಳೋದಕ್ಕೂ ಇಲ್ಲಿರೋ ಚಿತ್ರಕ್ಕೂ ನೇರ ಸಂಬಂದ ಇಲ್ಲಾ.. ಜಾಸ್ತಿ ತಲೆ ಕೆಡಿಸ್ಕೋಬೇಡಿ.. ನಿಮ್ಮ ಕ್ಯಾಮೆ ನೀವೇ ನೋಡ್ಕಳಿ..!! )

ಈ ನನ್ನ ಲೇಖನ Dedicated ಟು ದೊಡ್ಡ ಜನ..!!

Usually ನಾವೆಲ್ಲಾ ದೊಡ್ಡ ದೊಡ್ಡದೇ ನೋಡ್ತೀವಿ... ದೊಡ್ಡ ದೊಡ್ಡದೇ ಮಾಡ್ತೀವಿ...ದೊಡ್ಡ ದೊಡ್ಡದೇ ಬಯಸುತ್ತೀವಿ.... 
ಆದರೂ ನಮಗೆ ಈ ನಮ್ಮ ದೇಹ ಬ್ಹೊಜ್ಜು ತುಂಬಿಸ್ಕೊಂದು ದೊಡ್ಡ ಆದ್ರೆ ಮಾತ್ರ ಒಂಥರಾ ಬೇಜಾರು... ದೊಡ್ಡ ದೇಹ ನೋಡಿ ಎಲ್ಲಾರು ಹಿಂದೆ ಬಯ್ಯೋರೆ ಅನ್ನಿಸಿ ಬಿಡ್ತಾವೆ.. ಯಾಕೋ ಅಡ್ಕೋಳೋರ ಬಗ್ಗೆ ತುಂಬಾನೇ ಬೇಜಾರಾಗಿ. ಕೊನೆಕೊನೆಗೆ ನಮ್ಮ ಮೇಲೆ ನಮಗೆ ಕೀಳರಿಮೆ ಶುರುವಾಗಿ.. ಥೂ ಯಾರು ಏನಾದ್ರು ಹೇಳ್ಕೊಳ್ಳಿ ನಾನಂತೂ ಸಣ್ಣ ಆಗೋದೇ ಇಲ್ಲಾ ಅಂತ ಮನಸ್ಸು ಕೂಡ ಮೊಂಡು ಬಿದ್ದಿರುತ್ತೆ..!!
ಶಾಪಿಂಗ್ ಹೋದ್ರೆ ಬಟ್ಟೆ ಹುಡ್ಕೋದೆ ಒಂದು ಪ್ರಾಬ್ಲಮ್ಮು.. ನಡಿಯೋದಂತೂ ಸಾಧ್ಯಾನೆ ಇಲ್ಲ ಅನ್ನೋ ಪ್ರಾಬ್ಲಮ್ಮು..ಕಮ್ಮಿ ತಿಂದರೂ ಎಲ್ಲಾ ನಾನೊಬ್ನೇ ತಿಂದಿದ್ದು ಅನ್ನೋ ತರ ನೋಡೋ ಗೂಬೆ ಕಣ್ಣಿನ ಜನಗಳು.. ದನಗಳ ಜೊತೆ compare ಮಾಡೋ ಪ್ರಾಣಿಗಳು.. ನಮ್ ಬಾಡಿನೇ ನಮಗೆ ಕಷ್ಟ ಅಂಥದ್ರಲ್ಲಿ ಶಕ್ತಿ ಜಾಸ್ತಿ ಅಂತ ತಿಳ್ಕೊಂಡು ಜಾಸ್ತಿ ಕೆಲಸ ಕೊಡೊ ಗುಬಾಲ್ಗಳು... ಯಾರಿಗೆ ಹೇಳೋಣ ನಮ್ಮ ಇಂಥ ತಾಪತ್ರಯಗಳು..!!
ಈ ಮನಸ್ಸು ಹೇಳಿದ ಮಾತು ಕೇಳಲ್ಲ... ನಾಲಿಗೆ ಸಿಕ್ಸಿಕ್ಕಿದ್ದು ತಿನ್ನೋದು ಬಿಡೋಲ್ಲಾ.. ಕೆಲವು ಮಾತ್ರ ಹೆರಿಡಿಟಿ.. ಉಳಿದವು ಜಾಸ್ತಿ ಒಬೆಸಿಟಿ...!!
ದಪ್ಪ ದೇಹನ ಕರಗಿಸೋದು ಸುಲಭ ಅಲ್ಲ ಹಾಗಿದ್ದೂ ಅಸಾಧ್ಯವೂ ಅಲ್ಲಾ.. ದಪ್ಪ ಇರೋರಿಗೂ ಒಂದೇ ಹಾರ್ಟು ಎರಡೇ ಕಿಡ್ನಿ.. ಆದರೂ ಎಲ್ಲರಿಂದಲೂ ಡುಮ್ಮ ಡುಮ್ಮಿ ದಡಿಯ ಆನೆ ಅಂತೆಲ್ಲಾ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿ..!! ನನ್ನ ಸುತ್ತಲೂ ತುಂಬಾನೇ ಜನ ಇದ್ದಾರೆ ದೊಡ್ಡ ಮನಸ್ಸಿನ ದೊಡ್ಡ ದೆಹಿಗಳು..ನಾನು ಸಣ್ಣ ಕಾಣಿಸಿಕೊಳ್ಳೋಕೆ ಅವರೇ ಕಾರಣ..!! ಅವರ ದೈತ್ಯ ದೇಹದ ಬಗ್ಗೆ ಎಷ್ಟೇ ಹೀಯಾಳಿಸಿ ಕಾಲೆಳೆದರೂ ಬೀಳದ ಅವರ ಮನವೇ ಒಂದು ಸುಂದರ ತಾಣ..!! ಅದ್ಕೆ ಬಹಳಷ್ಟು ಜನರಿಗೆ ದಪ್ಪ ಇರೋರನ್ನ ಕಂಡರೆ ಸ್ವಲ್ಪ ♥ ಜಾಸ್ತಿ..!! I TOO ♥ FAT PEOPLE ..!! ಆದ್ರೆ ಲೈನ್ ಹೊಡೆಯೋ ಹುಡುಗಿ ಮಾತ್ರ ದಪ್ಪ ಇರೋದು ಬೇಡಾ ಅನ್ನೋದು ನಮ್ಮ ತುಂಡು ಹೈಕಳ ಅಭಿಪ್ರಾಯ..ಯಾಕ್ರಲಾ ಅಂತ ಕೇಳಿದ್ರೆ ಮದ್ವೆ ಆಗಿ ಆಂಟಿ ಆದ್ಮೇಲೆ ದಪ್ಪ ಆಗೇ ಆಗ್ತಾರೆ ಅನ್ನೋದು ಅವರ ಅನಿಸಿಕೆ..!!
ಏನಾದ್ರು ಇರಲಿ ದಪ್ಪ ಇದ್ರೂ ಕುಶಿಪಡಿ.. ಸಣ್ಣ ಆದ್ರೂ ಹ್ಯಾಪಿ ಆಗಿರಿ..
HEALTH AND HAPPINESS ಅದೇ ಮುಖ್ಯ ಅಲ್ವ.....ನಮ್ ದುನಿಯಾದಲ್ಲಿ..!!

Be Lazy... Go Crazy.....!!

ದೀಪ..!!


ಕತ್ತಲೆಯ ಬಾಳಲ್ಲಿ ನೀನಾಗುವೆಯ ದೀಪ..
ಅರಸುತಿದೆ ಮನವು ಮುಗ್ದತೆಯ ಪಾಪಾ..
ಹಳೆಯ ನೋವೆಲ್ಲವು ಘನಘೋರ ಪಾಪ..
ಬೇಡ ನನಗಾವುದೇ ಅನುಕಂಪದ ತಾಪ...
ದೀಪದ ಬುಡದಲ್ಲಿ ಕತ್ತಲೆ.. ಕತ್ತಲೆಯ ಮೇಲೊಂದು ದೀಪ..
ನನ್ನ ಬಾಳಿನ ಕತ್ತಲೆಗೆ ನೀನಾಗುವೆಯ ದೀಪ.. ನಂದದಾ ದೀಪ..
ಹುಡುಕುತಿದೆ ಮನವು ಬೆಳಕು ಕರೆದ ಎಡೆಗೆ..
ಕಿಡಿಗೇಡಿ ಬುದ್ದಿಗೆ ನನಬಾಳು ಒಡೆದ ಗಡಿಗೆ..
ದುಡುಕಿದ ಮನಕೆ ಬೇಕೊಂದು ಭಾವ
ಮಡಿದ ಮನಸಿಗೆ ಕೊಡುವೆಯಾ ಜೀವ..!!

ಹಾಳಾದ ಮನಸು ಈ ಲೆವೆಲ್ ಗೆ ಕವನ ಗೀಚ್ಕೊಂಡು, ಬದಬಡಾಯಿಸಿಕೊಂಡು ಬಿದ್ದಿದೆ ಅಂದ್ರೆ ಯಾವ್ ರೇಂಜ್ ಅಲ್ಲಿ ದು:ಖ ಆಗಿರಬಹುದು ಅಂತ ನಿಮಗ್ಯಾರಿಗೂ ಊಹೆಗೂ ಮೀರದ ಅಂಶ ಅದರಲ್ಲಿ ಅಡಕವಾಗಿದೆ..!! ಹೀಗೆ ಬೀದೀಲಿ ಬಿದ್ದಿದ್ದು ಯಾವುದೋ ಲವ್ ಫೇಲ್ಯೂರ್ ಯುವಕನಲ್ಲ.. ಜಿಗುಪ್ಸೆಗೊಂಡ ಕುಡುಕನೂ ಅಲ್ಲಾ.. ಹುಚ್ಚನೂ ಅಲ್ಲ... ಗ್ರಾಜುಯೇಟ್ ಭಿಕ್ಷುಕನೂ ಅಲ್ಲ...!!
ಸಮಾಜದಿಂದ ತಿರಸ್ಕೃತಗೊಂಡ ಒಂದು ಹೆಣ್ಣು ಮಗಳು ಅಂದ್ರೆ ನಂಬೋದು ತುಸು ಕಷ್ಟವೇ..!! ಆಕೆ ಹುಚ್ಚಿಯಲ್ಲ.. ಆದರೆ ಸಮಾಜದ ಕೆಲವು ಕಾಮುಕರಿಂದ ಸಾಮೂಹಿಕ ಅತ್ಯಾಚಾರಗೊಂಡು, ಮರ್ಯಾದೆಗೆ ಹೆದರಿ ಮನೆಯವರ ಸಾಮೂಹಿಕ ಆತ್ಮಹತ್ಯೆ ಕಂಡು, ಅತ್ತ ಸಾಯಲು ಆಗದ ಬದುಕಲು ಬಾರದ ಪರಿಸ್ಥಿತಿಯಲ್ಲಿರುವ ಒಬ್ಬ ಅಮಾಯಕಳ ಕೂಗು ಯಾರಿಗೂ ಕೆಳದಿದ್ದದ್ದು, ಸಮಾಜದ ದುರಂತ..!!
ಹುಚ್ಚಿ-ಅರೆಹುಚ್ಚಿ ಎಂದು ನಾಮಪಟ್ಟಿ ಅಂಟಿಸಿಕೊಂಡು ನಿರಂತರ ಶೋಷಣೆಗೆ ಒಳಗಾಗುತ್ತಿರುವ ಅವಳ ಬಾಳಿನಲ್ಲಿ ದೀಪ ಹಚ್ಚೋರು ಬಂದೆ ಇಲ್ಲಾ... ಬಂದೋರೆಲ್ಲ ಬೆಂಕಿ ಇಟ್ಟು ಹೊಂಟೋದರು.. ಮಾಧ್ಯಮದವರಿಂದ ಹಿಡಿದು ರಾಜಕಾರಣಿಗಳ ವರೆಗೂ ಎಲ್ಲರೂ ಅವಳ ಹೆಸರಿಡಿದು ತಮ್ಮ ಬೆಲೆ ಹೆಚ್ಚಿಸಿಕೊಂಡರು ಅಷ್ಟೇ..!! ಯಾವೊಬ್ಬನ ಅನುಕಂಪದ ಅಲೆಯು ಅವಳ ಬಾಳಲ್ಲಿ ನವಿರಾಗಿ ಬರಲಿಲ್ಲ..ಮುಂದೊಂದು ದಿನ ಡಾಕ್ಟರ್ ಆಗಬೇಕೆನ್ನುವ ಅವಳ ಹಂಬಲ ಬರಿ ಡೈರಿಯಲ್ಲೇ ಉಳಿದಿತ್ತು... !!
ಹೀಗೆ ನಿರಂತರ ಶೋಷಣೆಗೆ ಒಳಗಾದ ಅವಳ ಜೀವ ಕೂಡ ಅವಳಿದ್ದ ಹುಚ್ಚಾಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಕೊನೆಯಾದದ್ದು ಮಾತ್ರ ಸಮಾಜದ ವ್ಯಂಗ್ಯಕ್ಕೆ ಹಿಡಿದ ಕತ್ತಲೆ..!!
ಅತ್ತ ಪ್ರತಿಭಟನೆಯ ಕಾವು ಜೋರಾಗಿತ್ತು ಇತ್ತ ಅವಳ ಶವವು ನಗುತಿತ್ತು..!! ಸತ್ತವಳಿಗಾಗಿ ಕೈಯಲ್ಲಿ ಮೊಂಬತ್ತಿ ಹಿಡಿದು ಸಾಗುತಿತ್ತು ಜನರ ಮೆರವಣಿಗೆ.. ಮೋಂಬತ್ತಿಯ ದೀಪದ ಕಾವಿಗೆ ಕರಗುತ್ತಿತ್ತು ಮೇಣದ ಹಣತೆ..!! ದೀಪದ ಬುಡದಲ್ಲಿ ಕತ್ತಲೆ... ಸಾಬೀತಾಯಿತು ಮತ್ತದೇ ಮತ್ತಲ್ಲೇ ..!! ಇದ್ದಾಗ ನಕ್ಕರು.. ಸತ್ತಾಗ ಅತ್ತರು.. ಅವರಿಗೆ ಕಾಣಲೇ ಇಲ್ಲ ಸುರಿಯುತಿದ್ದ ಅವಳ ಕೆಂಪು ನೆತ್ತರು.. !!
 

ಚುಮ್ಚುಮ್ನೆ ಒಂದು ಖಾಲಿ ವೇದಾಂತ...!!


ಒಂದೊಂದ್ಸಲ ಸುಮ್ನೆ ಕೂತಿರ್ತೀವಿ..ಏಕಾಂಗಿತನವೇ ಬೆಷ್ಟು ಅನ್ಸತ್ತೆ..!!
ಎದ್ದೆಳಕ್ಕೂ ಬೇಜಾರು..
ಜೀವನಾನೆ ಬೋರು...
ಎಲ್ಲಾ ಇರತ್ತೆ ಏನು ಇರಲ್ಲ.. ಏನೆಲ್ಲಾ ಕಳ್ಕೊಂದ್ರು ಎಸ್ಟೆಲ್ಲ ಇರತ್ತೆ..!!
ಮನಸು ಯೋಚಿಸತ್ತೆ ದುನಿಯಾ ಇಷ್ಟೇ.. ಇನ್ನೊಂದ್ಸಲ ಅನ್ಸತ್ತೆ ಇದು ಇಷ್ಟಲ್ಲ.. ಎಷ್ಟೆಷ್ಟೋ.. ಸ್ವಲ್ಪ ಅರ್ಥ ಆಗತ್ತೆ.. ಆದಂಗೆ ಅನ್ಸತ್ತೆ.. ಅರ್ಥ ಆಗಿರಲ್ಲ ತಿಳ್ಕೋಳೋಕೆ ಮನಸಿರಲ್ಲ.. ತಲೆ ಕೆರಿಯತ್ತೆ.. ಕೆರ್ಕೊತೀವಿ.. ಬಟ್ಟೆ ಹರಿಯತ್ತೆ ಹರ್ಕೊಳಲ್ಲ.. ಹೋಲಿದುಕೊಳ್ತೀವಿ..
ಹಾರ್ಟ್ ಅಂತೆ ಫೀಲಿಂಗ್ ಅಂತೆ ಲವ್ ಅಂತೆ ಲಫಡಾ ಅಂತೆ.. ಒಂದಕ್ಕೊಂದು ಇರೋದು ಕನೆಕ್ಷನ್ನು ಅಥವಾ ಲೂಸು ಕನೆಕ್ಷನ್ನು..!!
ಕಲೆ ಅಂತೆ ಅರ್ಥ ಆದ್ರೆ ಚಿತ್ರ ಕಲೆ ಅಂತೆ ಅರ್ಥ ಆಗದೆ ಇದ್ರೆ ನವ್ಯ ಕಲೆ ಅಂತೆ.. ಯಾರೋ ಹೇಳಿದ್ದು... ಬರೀ ಅಂತೆ ಕಂತೆಗಳ ಸಂತೆ.. ಚಿಂತನೆಗೆ ಅವಕಾಶ ಉಂಟೆ?
ತಲೆ ನೋಯ್ತಿದೆ.. ಆ ನೋವಲ್ಲೂ ಎಂಥದೋ ಕುಷಿ.. ತಲೆ ಇದೆ ಅಂತ ಕುಷಿಪಡೋದೋ ಅಥವಾ ನೋಯ್ತ ಇದೆ ಅಂತ ಅಳ್ತಾ ಕೂರೋದೋ ಗೊತ್ತಾಗಲ್ಲ.!!
ಒಂದು ಡಾಟ್ ಇಟ್ರೆ ಅಂತ್ಯ.
ಅದೇ ಎಲ್ಡು ಇಟ್ರೆ ಅನಂತ ಇಲ್ಲವೇ ಇಲ್ಲ ಅಂತ್ಯ..
ಇಷ್ಟೆಯ ಅನ್ಸೋ ಲೈಫು, ಎಲ್ಲ ಇದ್ರೂ ಒಂದು ದಿನ ಹೋಗಲೇ ಬೇಕು... ಹೋಗೆ ಆಗಲೇ ಬೇಕು..
ಸುಮ್ನೆ ಕ್ಯಾಮೆ ಇಲ್ದಾಗ ಗೀಚಿದ್ದು.. ನೀವು ಓದೋದು ವೇಸ್ಟು.. ಜೀವನವು ಇಷ್ಟೇ ಅನ್ಸತ್ತೆ.. ನೋ ಮೆಸೇಜ್ ನಥಿಂಗ್... ಈ ಕಿತ್ತೋದ ಲೇಖನದ ಹಾಗೆ..!!
ಇದೊಂದು ಖಾಲಿ ವೇದಾಂತ.. ಮನಸಿಗೆ ಹಚ್ಕೊಂಡು.. ಯೋಚನೆ ಮಾಡ್ಕೊಂಡು ಕಾಮೆಂಟ್ ಹಾಕೋ ವ್ಯರ್ಥ ಪ್ರಯತ್ನ ಬಿಟ್ಟು .. ಇರೋದ್ರಲ್ಲೇ ನೆಮ್ಮದಿ ಕಾಣಿ..
ಬೇಜಾರು ಮಾಡ್ಕೊಳಕ್ಕೆ ಜಾಸ್ತಿ ವಿಷಯ ಇದೆ...!!
ಆದರೆ ಹೇಳೋಕೆ ಮತ್ತದೇ ಬೇಜಾರು... ಬೋರು..!!

ಇದ್ಯಾಕೆ ಹಿಂಗೆ???

ನೆನ್ನೆ ಇವಿನಿಂಗ್ ಫ್ರೆಂಡ್ಸ್ ಫೋನ್ ಮಾಡಿ 
"ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲ ಅಡ್ಡ ಹತ್ರ ಬಂದು ಬಿಡು ಫುಲ್ಲು ಕುಡಿದು ಕುಣಿದು ಕ್ರಾಂತಿ ಮಾಡಣ, ಹೊಸವರ್ಷದಲ್ಲಿ ಭಾರೀ ಬದಲಾವಣೆ ತರೋಣ.. 2013 ನ್ಯೂ ಇಯರ್ ಸೆಲೆಬ್ರೇಶನ್ ಗ್ರಾಂಡ್ ಆಗಿ ಮಾಡೋಣ" ಅಂದ್ರು 
"ಸರಿ ಕಣ್ರೋ, ಹಂಗೆ ಮಾಡಣ" 
ಅಂತ ಹೇಳಿ ಫೋನ್ ಕಾಲ್ ಕಟ್ ಮಾಡಿದೆ..
ರಾತ್ರಿ ಹನ್ನೊಂದು ಮೂವತ್ತು ಆಯಿತು.. ಹೋಗೋಕೆ ಭಾರಿ ಬೋರು.. ಯಾಕೋ ಮನದೊಳಗಿದ್ದ ನಾಗವಲ್ಲಿ ತರದ ಡ್ಯುಯಲ್ ಪರ್ಸನಾಲಿಟಿ ಮೈಂಡು...
"ಹೋಗಬೇಡ ಕಣೋ ಚಚೀನ" ಅಂದಂಗಾಯ್ತು.
ಏನೋ ಅಕೆಷನ್ನು, ಟೈಟ್ ಆಗಿ ಕುಡಿಯೋಣ, ಲೈಟ್ ಆಗಿ ಕುಣಿಯೋಣ ಇರೋಬರೋ ಹುಡುಗ್ರು ಹುಡುಗೀರು ಎಲ್ಲಾರ್ನು ಸಮಾನ ರೀತೀಲಿ ತಬ್ಕಂಡು ವಿಶ್ ಮಾಡಿ ಜೀವನಾನ ಪಾವನ ಮಾಡ್ಕೊಂಡು ಬರೋಣಾ ಅಂದ್ಕೊಂಡೆ...!!
ಅಷ್ಟರಲ್ಲಿ ಅಶರೀರವಾಣಿಯೊಂದು ಕಿವೀಲಿ ನಿಂತು " ಲೋ ನೀನು ಜವಾಬುದಾರಿಯುತ ನಾಗರಿಕ ಆಗೋ, ಬೇರೆಯವರ ಚಿಂತೆ ಮಾಡಬೇಡಾ, ಎಲ್ಲೂ ಹೋಗಬೇಡಾ,ಸ್ವಾರ್ಥಿ ಆಗು, ಪಕ್ಕದ ಮನೇಲಿ ಬೆಂಕಿ ಬಿದ್ರೆ ಕಿಟಕಿಯಲ್ಲಿ ನೋಡು,, ಅದೇ ಬೆಂಕಿ ನಿಮ್ಮನೆಗೆ ಬಿದ್ರೆ ಬಾಯಿಬಾಯಿ ಬಡ್ಕೊಂಡು ಅಳು, ಯಾರೂ ಸಹಾಯಕ್ಕೆ ಬಂದಿಲ್ಲ ಅಂತ ದೂರು.. ಇದೆ ನಿನ್ನ ಹೊಸ ವರ್ಷದ ಅಜೆಂಡಾ ಆಗಿರಲಿ... ಎಲ್ರೂ ಹೇಗಿದಾರೋ ನೀನು ಹಾಗೇ ಬದುಕೋದ ಕಲಿ.. ಮತ್ತೇನು ಬದಲಾವಣೇ ಆಗೋಲ್ಲ " ಅಂತ ಹೇಳಿ ತಲೆ ಮೇಲೆ ಕುಟ್ಟಿ ಮಲಗಿಸಿ ಬಿಡ್ತು..
ಕಣ್ಣು ಬಿಟ್ಟಾಗ ಬೆಳಿಗ್ಗೆ ಆಗೋಗಿತ್ತು.... ಓ ಮೈ ಗ್ವಾಡ್.. ಅಂತ ಸೀದಾ ಬಾಗಿಲು ತೆಗೆದು ಹೊರಗೆ ಹೋಗಿ ಆಕಾಶ ನೋಡಿದೆ, ಏನು ಬದಲಾವಣೆ ಕಾಣಿಸಲಿಲ್ಲ, ಹಕ್ಕಿಯ ಚಿಲಿಪಿಲಿಲು ವ್ಯತ್ಯಾಸ ಇರಲಿಲ್ಲ.. ಮನೆ ಪಕ್ಕದ ದೇವಸ್ಥಾನದಲ್ಲಿ ಜನ ಇದ್ರೂ,,ಅಲ್ಲಿ ಮುಂದೆ ಹೂ ಮಾರುತಿದ್ದ ಅಜ್ಜಿ ಮುಕದಲ್ಲಿ ಬದಲಾವಣೆ ಇರಲಿಲ್ಲ.. ಯಾಕೋ ಬೇಜಾರಾಯ್ತು ನಮ್ ಹುಡುಗರ ಮೇಲೆ ನೆನ್ನೆ ಏನೂ ಬದಲಾವಣೆ ತರಲಿಲ್ಲಾ... ಅಂತ ಅಲ್ಲೇ ಪಕ್ಕದಲ್ಲಿ ಮಲಗಿದ್ದ ನಾಯಿಗೆ ಕಲ್ಲು ಹೊಡೆದೆ.. ಅದು ಕೂಡ ಕಚ್ಚೋಕೆ ಬಂದಿಲ್ಲ.. ಪಾಪಾ ಕುಯ್ಯ್ ಕುಯ್ಯ್... ಅಂತ ಓಡಿ ಹೋಯ್ತು..
ಪುಚ್.. ಇದು ಕೂಡ ಮಾಮೂಲಿ ದಿನ ಏನೂ ಪವಾಡ ನಡೀಲಿಲ್ಲ.. ಯಾಕೋ ಈ ಜಿಂದಗಿಲೇ ಮಜಾ ಇಲ್ಲಾ.. ನಾನಾದರೂ ಬದಲಾಗೋಣ ಅಂದ್ರೆ.. ಹೇಗೆ? ಅನ್ನೋ ಪ್ರಶ್ನೆ ಭೂತರೂಪದಲ್ಲಿ ಬೆಳೆಯತೊಡಗಿತು....
ಸುಮ್ನೆ ಮನೆ ಒಳಗೆ ಬಂದು ನೋಡಿದೆ... ಅಲ್ಲಿ ಗೋಡೆ ಮೇಲಿದ್ದ ಹೊಸ ಕ್ಯಾಲೆಂಡರ್ 'ನಾನು ಬದಲಾಗಿದೀನೋ' ಅಂತ ಅಣಕಿಸಿದಂತಾಯ್ತು..
ಹಳೇ ಕ್ಯಾಲೆಂಡರ್ ಎಲ್ಲೋಯ್ತು ಅಂತ ಹುಡುಕ್ತಾ ಇದ್ದೆ ಅಷ್ಟರಲ್ಲಿ ನಮ್ಮಜ್ಜಿ....
"ಹೊರಗೆ ತುಂಬಾ ಚಳಿ ಇದ್ದು ಮಗಾ,, ಬಿಸೀ ಬಿಸೀ ನೀರು ಕಾಜು.. ಸ್ನಾನ ಮಾಡಾ ತಮಾ..."
ಅಂತ ಹೇಳಿದ್ದು ಕೇಳಿಸಿತು!! ಅವರ ಕೈಯಲ್ಲಿ ಕೈಯಲ್ಲಿ ಅರ್ದ ಹರಿದ ಕ್ಯಾಲೆಂಡರ್ ಇತ್ತು..
ಇನ್ನರ್ಧ ನನ್ನ ಸ್ನಾನದ ಬಿಸೀ ನೀರಿಗೆ ಒಲೆಯಲ್ಲಿ ಸುಡ್ತಾ ಇತ್ತು...!!