Saturday 28 March 2015

ಫ್ಲಾಪಿ ಕಥೆಗಳು

ಸಿನಿಮಾದಲ್ಲಿ ಯಾವಾಗಲೂ ವಿಲನ್ ಪಾತ್ರವನ್ನೇ ಮಾಡುತ್ತಿದ್ದ ಆತನ ಎಷ್ಟೋ ಒಳ್ಳೆಯ ಕೆಲಸಗಳನ್ನು ಜನರು ನಿಜ ಜೀವನದಲ್ಲಿ ಗುರುತಿಸಲೇ ಇಲ್ಲ..!


ಅಪಾಯಕಾರಿ ವೈರಸ್ ಗಳಿಗೆಲ್ಲಾ ಲಸಿಕೆ ಕಂಡು ಹಿಡಿಯುತ್ತೇನೆಂದು ಹೊರಟ ಆತನಿಗೆ ಆಲಸ್ಯ ಎಂಬ ವೈರಸ್ ಆವರಿಸಿಕೊಂಡು ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಂಡ..!!


ಹೆಣ್ಣು ಮಕ್ಕಳಿಗೆ ನಮ್ಮಲ್ಲಿ ಸಮಾನ ಹಕ್ಕುಗಳಿವೆ, ಮಹಿಳಾ ಶೋಷಣೆಯನ್ನು ವಿರೋಧಿಸುತ್ತೇವೆ ಎನ್ನುತ್ತಾ ಮಹಿಳೆಯೊಬ್ಬಳಿಗೆ ನಡುಬೀದಿಯಲ್ಲಿ ಕೊಳ ತೊಡಿಸಿ ಅಭಿವೃದ್ಧಿಶೀಲತೆಯನ್ನೇ ಹರಾಜಿಗಿಟ್ಟರು..!


ಕಾವಿ ತೊಟ್ಟಿದ್ದ ಆತ ಬಾಯಲ್ಲೆಲ್ಲಾ ಸ್ವಾಮಿ ಸ್ವಾಮಿ ಎಂದು ಧ್ಯಾನಿಸುತ್ತಿದ್ದ..!
ಆದರೆ ಮನದಲ್ಲಿ ಮಾತ್ರ ಆತ ಕಾಮಿಯಾಗಿದ್ದ..!!


ಮದುವೆಯಾಗಬೇಕೆಂದು ಬಹಳ ತವಕದಲ್ಲಿದ್ದ ಆತ ಚಳಿಗಾಲದಲ್ಲಿ ಮದುವೆಯಾದ..!
ಬೇಸಿಗೆಯಲ್ಲಿ ಡೈವೊರ್ಸ್ ಪಡೆದ..!!


ಮೊದಲೆಲ್ಲಾ ಮದುವೆ ಮದುವೆ ಎಂದು ಹಾತೊರೆಯುತ್ತಿದ್ದ ಆತ,
ಈಗೀಗ  ಮದುವೆಯೇ ದುಃಖಕ್ಕೆ ಕಾರಣವೆಂದು ಆಪ್ತರ ಬಳಿ
ಹೇಳಿಕೊಂಡು ಗೋಳಾಡುತ್ತಿದ್ದಾನೆ..!


ಪ್ರಖ್ಯಾತ ಚಿತ್ರನಟಿಯೊಬ್ಬಳ ಹುಟ್ಟುಹಬ್ಬವನ್ನಾಚರಿಸಲು ಬೆಳಿಗ್ಗೆಯಿಂದ ಸಂಜೆಯವರೆಗೂ ಅವಳ ಮನೆ ಮುಂದೆ
ಅವಳಿಗೋಸ್ಕರ ಕಾದೂ ಕಾದೂ, ಅವಳು ಸಿಗದೇ ನಿರಾಶೆಯಿಂದ ಮನೆಗೆ ಹೋದಾಗಲೇ ಆತನಿಗೆ ಗೊತ್ತಾಗಿದ್ದು,
ತನ್ನ ತಾಯಿಯ 'ಬರ್ಥ್ ಡೇ' ಕೂಡಾ ಅಂದೇ ಇತ್ತೆಂದು..!


ನೀರು ನೀರು ಎಂದು ಯಾವಾಗಲೂ ಹೋರಾಡುತ್ತಿದ್ದ ಆತ, ನೀರಿನಲ್ಲಿಯೇ ಮುಳುಗಿ ಸಾವನ್ನಪ್ಪಿದ್ದು ಮಾತ್ರ ದುರಂತ..!!


ಮೊದಲೆಲ್ಲಾ ಅವಳ ಅಪ್ಪನೇ ಅವಳನ್ನು ಮುಂಜಾನೆಯೇ ಎಬ್ಬಿಸಿ ಮೈದಾನದ ತುಂಬೆಲ್ಲಾ ಓಡಿಸುತ್ತಿದ್ದ..! ಮುಂದೊಂದು ದಿನ ಅವಳು ಮಧ್ಯರಾತ್ರಿಯೇ ಎದ್ದು ಯಾರೊಂದಿಗೋ ಓಡಿ ಹೋಗುವಾಗ ಮಾತ್ರ ಅವಳಪ್ಪನಿಗೆ ಅದು ತಿಳಿಯಲೇ ಇಲ್ಲ..!!


ಕತ್ತರಿಸುವುದರಿಂದಲೇ ಮಾತ್ರ ಪರಿಹಾರ ಸಾಧ್ಯವೆಂದು ಸಾಧಿಸುತ್ತಿದ್ದ ಆ ಕ್ರಾಂತಿಕಾರಿಗೆ ಒಮ್ಮೆ ವಿಪರೀತ ಹಲ್ಲು ನೋವಿತ್ತು .. ಹಲ್ಲನ್ನೇ ಕೀಳಿಸಿದ್ದ..!
ಮಗದೊಮ್ಮೆ ಆತನಿಗೆ ಉರಿಮೂತ್ರ ಶುರುವಾಗಿತ್ತು.. ತನ್ನ ಧೋರಣೆಯನ್ನೇ  ಬದಲಿಸಿಕೊಂಡ..!


ಪ್ರೀತಿಯನ್ನು ಅರಸಿಕೊಂಡು ಆತ ಪ್ರಪಂಚವನ್ನೆಲ್ಲಾ ಸುತ್ತುತ್ತಿದ್ದ,,! ವೃದ್ಧಾಶ್ರಮದಲ್ಲಿದ್ದ ಆತನ ತಂದೆ ತಾಯಿ ಪ್ರೀತಿ ಅವನನ್ನು ಹುಡುಕುತ್ತಾ ದಿನಂಪ್ರತಿ ಕೊರಗುತ್ತಿತ್ತು..!


ಪ್ರಾಯದಲ್ಲಿದ್ದಾಗ ಹೆಣ್ಣುಮಕ್ಕಳೆಂದರೆ  ವಿಶೇಷ ಪ್ರೀತಿ, ಕಾಳಜಿ.. ಹೊಂದಿದ್ದ ಆತ ಮದುವೆಯಾಗಿ ಎರಡು ಹೆಣ್ಣು ಮಕ್ಕಳಾದ ಮೇಲೆ ಅಸಡ್ಡೆ ತಾಳಲಾರಂಭಿಸಿದ..!


ಮೊದಲೆಲ್ಲಾ ಆತನಿಗೆ ತನ್ನ ಸೊಂಪಾದ ಕೂದಲ ಮೇಲೆ ತೀವ್ರ ಅನಾಸಕ್ತಿ ಇತ್ತು..! ಈಗೀಗ ಬಕ್ಕ ತಲೆ ಆಗುತ್ತಿದ್ದಂತೆ ಕೂದಲ ಮೇಲೆ ಬಹಳ ಕಾಳಜಿ ಬಂತು..!


ಮಕ್ಕಳಾಗಲಿಲ್ಲವೆಂದು ಆಕೆ ಕಂಡಕಂಡ ದೇವರಿಗೆಲ್ಲ ಹರಕೆ ಹೊತ್ತಳು.. ಹುಟ್ಟಿದ ಮಗ ಅಡ್ಡದಾರಿ ಹಿಡಿದಾಗ "ಇಂತಾ ಮಗನನ್ನು ಏಕೆ ಕೊಟ್ಟೆ?" ಎಂದು ದೇವರಿಗೇ ಹಿಡಿಶಾಪ ಹಾಕಿದಳು..!


ರಸ್ತೆ ಬದಿಯಲ್ಲಿ ಪಾನೀಪೂರಿ ಮಾರಿಯೇ ಶ್ರೀಮಂತನಾದ ಆತನ ಮಕ್ಕಳು ಮಾತ್ರ ಸ್ಟಾರ್ ಹೋಟೆಲಿನಲ್ಲಿಯೇ ಚಾಟ್ಸ್ ತಿನ್ನುತ್ತಿದ್ದರು..!


ಅವನು ಅವಳಿಗಾಗಿ ಕಾದೇ ಕಾದ.. ಕೊನೆಗೂ ಅವಳು ಬರಲೇ ಇಲ್ಲ..! ವಾಸ್ತವಿಕತೆಯಲ್ಲಿ ಅವಳು ಬರಲೇ ಇಲ್ಲ..!


ಹೊಸತಾಗಿ ಮದುವೆಯಾದ ಆತ ಮೊದಲರಾತ್ರಿಯಂದು ತನ್ನ ಪತ್ನಿಯನ್ನು ಹಳ್ಳಿ ಮುಗ್ದೆಯೆಂದು ತಿಳಿದು, ಧೀರ್ಘವಾಗಿ ಚುಂಬಿಸಿ ಹೇಳಿದ.. "ಪ್ರಿಯೇ ಹೇಗಿತ್ತು ನನ್ನ ಮುತ್ತಿನ ಗಮ್ಮತ್ತು?"
ಆಕೆಯೆಂದಳು- "ನಿನಗಿಂತ ಆ ಮುತ್ತನೇ ಚೆನ್ನಾಗಿ ಕೊಡ್ತಿದ್ದ..!!"


ಕಣ್ಣಾಸ್ಪತ್ರೆಗೆ ಹೋಗಿ, ತಾನು ಸತ್ತ ಮೇಲೆ ಕಣ್ಣನ್ನು ದಾನ ಮಾಡುವಂತೆ ಪತ್ರಕ್ಕೆ ಸಹಿ ಹಾಕಿ,
ಮನೆಗೆ ಬರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ತನ್ನ ಕಣ್ಣನ್ನೇ ಕಳೆದುಕೊಂಡ..!


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಆತ ಭಾರತೀಯ ಸಂಸ್ಕೃತಿ, ಉಡುಗೆ-ತೊಡುಗೆ, ನಮ್ಮ ಭಾಷೆ, ಆಚಾರ-ವಿಚಾರಗಳ ಬಗ್ಗೆ ಸುಧೀರ್ಘ ಉಪನ್ಯಾಸ ನೀಡಿ, ವಿಶೇಷವಾಗಿ ಈಗಿನ ಹೆಣ್ಣುಮಕ್ಕಳ ಆಧುನಿಕ ದಿರಿಸಿನ ಬಗ್ಗೆ ಹಾಗೂ ಅವರ ನಡಾವಳಿಕೆಗಳ ಬಗ್ಗೆ ಹಿಗ್ಗಾಮುಗ್ಗವಾಗಿ ಖಂಡಿಸಿ ಮನೆಗೆ ಬಂದನು. 
ಎದುರಿಗೆ ಅವನ ಮಗಳು ಲೋವರ್ ಜೀನ್ಸ್ ನಲ್ಲಿ, ಟ್ಯಾಟೂ ಹಾಕಿಸಿಕೊಂಡ ಸ್ಲೀವ್ ಲೆಸ್ ಟೀ ಶರ್ಟಿನ ಬಳೆಗಳೇ ಕಾಣದ ಕೈಯಲ್ಲಿ ಮೊಬೈಲ್ ಫೋನಿಡಿದು ಯಾರೊಂದಿಗೋ ಸ್ಪಾನಿಷ್ ನಲ್ಲಿ ಹರಟುತ್ತಿದ್ದಳು.



ಆತ ಜೀವನದಲ್ಲಿ ತುಂಬಾ ಸಂತೋಷದಿಂದಿದ್ದ. ಯಾರ ಮಾತೂ ಕೇಳುತ್ತಿರಲಿಲ್ಲ..!! ಎಲ್ಲರ ಕಾಲು ಎಳೆದುಕೊಂಡು, ರೇಗಿಸುತ್ತಾ... ಜಾಲಿಯಾಗಿದ್ದ..!! ನೋಡುಗರ ಕಣ್ಣಲ್ಲಿ ಆತನದು ಸೂಪರ್ ಪರ್ಸನಾಲಿಟಿ..!! 
ಆದರೆ ಸಮಯ ಅನ್ನೋದು ಅವನ ಜೀವನದಲ್ಲೂ ತನ್ನ ಪ್ರಭಾವ ಬೀರಿತ್ತು..! 
ಅವನ ಮನೆಯವರು, ಸ್ನೇಹಿತರೆಲ್ಲರೂ ಸೇರಿ ಅವನಿಗೂ ಮದುವೆ ಮಾಡಿಸಿಯೇ ಬಿಟ್ಟರು..!!
ಈಗ ಆತನೂ ಒಬ್ಬ ಸಾಮಾನ್ಯ ನಾಗರಿಕನಾಗಿದ್ದಾನೆ..!!



ಮಹಾನಗರದಲ್ಲಿ ಬರೀ ಜೀನ್ಸು, ಮಿಡ್ಡಿ ನೋಡಿ ಬೇಸತ್ತಿದ್ದ ಆತ ಲಂಗದಾವಣಿ ನೋಡಬೇಕೆಂದ ನಗರ ಬಿಟ್ಟು ಹಳ್ಳಿ ಸೇರಿದ..!!
ಅಲ್ಲಿಯೂ ಬರೀ ಚೂಡಿ, ನೈಟಿಯ ಹಾವಳಿ ಕಂಡು ಬೇಸರದಿಂದ ತಲೆ ಕೆರೆದುಕೊಂಡ..!!



ಆಕೆಯ ಮನೆಯಲ್ಲಿ ಪ್ರೀತಿ ಪ್ರೇಮದ ವಿಷಯದಲ್ಲಿ ಅವಳ ಅಪ್ಪನ ಕಡೆಯಿಂದ ಬಹಳೇ ಕಟ್ಟುಪಾಡು, ರಿಸ್ಟ್ರಿಕ್ಷನ್ನುಗಳು. ಆದರೂ ಹೇಗೋ ಪ್ರೀತಿಯ ಬಲೆಗೆ ಸಿಲುಕಿದ ಅವಳು ಮನೆಯವರಿಗೆ ಯಾರಿಗೂ ತಿಳಿಯದಂತೆ ಪ್ರೇಮಿಯೊಡನೆ ಸುತ್ತಾಡುತ್ತಿದ್ದಳು. ಒಮ್ಮೆ ಪ್ರಿಯಕರನೊಂದಿಗೆ ಸಿನೇಮಾಗೆ ಹೋದಾಗ ಅವಳ ಪಕ್ಕದ ಸೀಟಿನಲ್ಲಿ......,
ಅವಳ ಅಪ್ಪನೇ ಯಾವುದೋ ಸೆಟಪ್ ಜೊತೆ ಕುಳಿತಿದ್ದ..!!




ಹೊಸದಾಗಿ ಮದುವೆಯಾಗಿದ್ದ ಆತನು ಹನಿಮೂನಿನ ಬಗ್ಗೆ ಬಹಳೇ ಕುತೂಹಲಿ ಹಾಗೂ ಕಾತುರನಾಗಿದ್ದ..!!
ಅದಕ್ಕಾಗಿ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡ.. ನೆನಪಿನಿಂದ ಎಲ್ಲಾ ಪರಿಕರಗಳನ್ನು ತೆಗೆದುಕೊಂಡ..
ಕೊನೆಯದಾಗಿ ಹನಿಮೂನಿಗೆ ಹೋಗುವಾಗ ಬ್ಯಾಚುಲರ್ ಲೈಫ್ ಅಭ್ಯಾಸಬಲದಿಂದ ಹೆಂಡತಿಯನ್ನೇ ಮರೆತು ಬಿಟ್ಟು, ಒಬ್ಬನೇ ಹೋಗಿದ್ದ..!!



ಅದೊಂದು ಸಂದರ್ಶನ..,
ಹುಡುಗ ರಿಜೆಕ್ಟ್- ಕಾರಣ: ಹುಡುಗನ ಶರ್ಟಿನ ಮೇಲಿನ ಬಟನ್ ಬಿಚ್ಚಿತ್ತು...!!
ಹುಡುಗಿ ಸೆಲೆಕ್ಟ್- ಕಾರಣ: ಹುಡುಗಿಯ ಶರ್ಟಿನ ಮೇಲಿನ ಬಟನ್ ಬಿಚ್ಚಿತ್ತು...!!












ಫ್ಲಾಪಿ ಕಥೆಗಳು

ಚಿಕ್ಕಂದಿನಿಂದಲೂ ಕಾಂನ್ವೆಂಟ್ ಸ್ಕೂಲಲ್ಲಿ ಕಲಿತಿದ್ದ
ಅವನಿಗೆ ಮೂಟೆ ಹೊರುವುದು ಲೀಲಾಜಾಲ ಕೆಲಸವಾಗಿತ್ತು..!


ಅತ್ತ ಅಪ್ಪ ಅಮ್ಮ ಮಗಳಿಗೆ ಮದುವೆ ಮಾಡಲು
ಗಂಟುಗಳ ಪಟ ನೋಡುತ್ತಿದ್ದರು,
ಇತ್ತ ಮಗಳ ಪ್ರಿಯಕರನ ಜೊತೆ
ಮಾಲ್  ಗಳಲ್ಲಿ ಸುತ್ತುತ್ತಿದ್ದಳು..!


ಕನ್ನಡ ಭಾಷೆ, ಅಭಿಮಾನ ಅಂತೆಲ್ಲಾ ಭಾಷಣ ಮಾಡಿ ಮನೆಗೆ ಬಂದು,
ಮಗಳಿಗೆ ಫ್ರೆಂಚ್, ಜರ್ಮನ್ ಭಾಷೆ ಕಲಿಕೆಯ ಕೋರ್ಸ್
ಸೇರೋಕೆ ದುಡ್ಡು ಕೊಟ್ಟ


ಇತ್ತ ಅತ್ಯಾಚಾರದಿಂದ ಹತ್ಯೆಯಾಗುತ್ತಿತ್ತು
ಅತ್ತ ಸಂತಾಪ ಸಭೆಯಲ್ಲಿ ಮೇಣದ ಬತ್ತಿ
ಕರಗುತ್ತಿತ್ತು


ಬೆಳೆದು ನಿಂತ ಮಗಳ ಮೇಲೆ ಯಾರಾದರೂ ಕಣ್ಣುಹಾಕಿಯಾರೆಂದು
ಯಾವಾಗಲೂ ಮಗಳ ಸುತ್ತಲೇ ಇರುತ್ತಿದ್ದಳು
ಆದರೆ ಪಡ್ಡೆ ಹುಡುಗರ ಕಣ್ಣು ಮಾತ್ರ
ಆಂಟಿಯ ಮೈಮಾಟದ ಮೇಲೆಯೇ ಇತ್ತು


ಹೊಸ ಚಪ್ಪಲಿಯೇ ಬೇಕೆಮದು ಹಠ ಮಾಡುತ್ತಿದ್ದ ಮಗು
ಕಾಲಿಲ್ಲದವನ ನೋಡಿ ಅಳು ನಿಲ್ಲಿಸಿತು


ದೇವಸ್ಥಾನದ ನಾಲ್ಕು ಗೋಡೆಯ ಮಧ್ಯೆ
ಸಿಕ್ಕಿಹಾಕಿಕೊಂಡ ದೇವರು,
ಮಂದಿರದ ಕದ ತೆಗೆಯುವುದೇ ಕಾಯುತ್ತಿದ್ದ!


ಕಾಣದ ನಲ್ಲೆ ಇವತ್ತಲ್ಲ ನಾಳೆ ಬಂದೇ ಬರುವಳೆಂದು ಅವಾ ಕಾದ..!
ಆ ಒಂದು ದಿನ ಗಂಡನೊಂದಿಗೆ ಬರುತ್ತಿರುವ ತನ್ನ ನಲ್ಲೆಯ ಕಂಡು 'ಅವಾಕ್ಕಾದ'..!!


ಆತನೆಂದ, "ನಾಳೆಯಿಂದ ಮೂರು ದಿನ ಆಫೀಸಿಗೆ ರಜಾ.. ನನಗಂತೂ ಮಸ್ತ್ ಮಜಾ.!"
ಆಕೆಯೆಂದಳು, "ನನಗೂ ಇಂದಿನಿಂದಲೇ 'ರಜಾ', ಸಂಪ್ರದಾಯಸ್ಥ ಈ ಮನೆಯಲ್ಲಿ ಹೊರಗೆ ಕೂರುವ ಸಜಾ..!!"


ಹೋರಾಟದ ಜೀವನ ತನ್ನ ಕೈಲಿ ಅಸಾದ್ಯವೆಂದು ಆತ್ಮಹತ್ಯೆ ಮಾಡಿಕೊಂಡ.!
ಲಕ್ಷಾಂತರ ಸ್ಪರ್ಮ್ ಗಳ ಜೊತೆ ಹೋರಾಡಿಯೇ ಹುಟ್ಟಿದ್ದೇನೆ ಅನ್ನುವುದನ್ನ ನೆನೆಯಲೇ ಇಲ್ಲ..!!

ಕೆಟ್ಟದ್ದನ್ನೆಲ್ಲಾ ಸುಡಬೇಕು ಎನ್ನುತ್ತಾ ಆತ ಸಿಗರೇಟು ಬಾಯಲ್ಲಿಟ್ಟು ಸುಟ್ಟ..!
ಅವನು ಸುಟ್ಟ ಸಿಗರೇಟು ಅವನನ್ನೇ ಸುಡುತ್ತೆ ಅನ್ನೋದನ್ನ ಮರೆತಿದ್ದ..!!

ಪ್ರತಿಭಟನೆಯ ಸಂದರ್ಭದಲ್ಲಿ ಹತಾಷೆಗೊಂಡಿದ್ದ ಆತ ವಿಷ ಸೇವಿಸಿ ವಿಲವಿಲನೆ ಒದ್ದಾಡುತ್ತಿದ್ದ..!
ಮಾಧ್ಯಮದವರು ಬ್ರೇಕಿಂಗ್ ನ್ಯೂಸ್ ಗಾಗಿ ಪಟಪಟನೆ ವಿಡಿಯೋ ಮಾಡುತ್ತಿದ್ದರು..!!


ಬೇರೆಯವರನ್ನು ಹಿಡಿದು ಹಾಕಲೆಂದು ಅವನು ತೋಡಿದ್ದ ಖೆಡ್ಡಾದಲ್ಲಿ ಅವನಿಗರಿವಿಲ್ಲದೇ ಅವನೇ ಬಿದ್ದ..!!




ಗೊಂದಲ
ಮೈಮರೆತು ನೋಡುತಾ ನಿಂತೆ ಅವಳನ್ನು..
ಅವಳ ನಗುವನ್ನು..
ಆ ತುಂಟ ಕಣ್ಣನ್ನು..
ಆ ಪುಟಾಣಿ ಸ್ಕರ್ಟನ್ನು..
ಸ್ಕರ್ಟ್ ಮೇಲಿದ್ದ ಹೂವನ್ನು..
ಮುದ್ದು ಮಾಡಬೇಕೆನಿಸಿತು..
ಕೆನ್ನೆಗೆ ಮುತ್ತು ಇಡಬೇಕೆನಿಸಿತು..
ಅಪ್ಪಿ ಎತ್ತಿಕೊಳ್ಳಬೇಕೆನಿಸಿತು..
ಆದರೂ ನೋಡುತ್ತಲೇ ನಿಂತಿದ್ದೆ ಅವಳನ್ನು..
ಆದರವಳು ಮಿಸುಕಾಡಲೇ ಇಲ್ಲ..
ನಗು ನಿಲ್ಲಿಸಲೂ ಇಲ್ಲ..
ಆ ಮೇಲೆ ಗೊತ್ತಾತು,
ನಾ ನೋಡುತಾ ನಿಂತದ್ದು,
ಬಾಲೆಯಲ್ಲವದು,
ಬಟ್ಟೆ ಅಂಗಡಿಯ ಬೊಂಬೆಯೆಂದು..!!
ಅಂದಿನಿಂದ ಇಂದಿನವರೆಗೂ
ಯೋಚಿಸುತ್ತಿರುವೆ
ನಾ ಮುಗ್ದನೋ
ಪೆದ್ದನೋ
ಭಾವಜೀವಿಯೋ ಎಂದು...!!


ಚಚ್ಚಿ ಚುಟುಕ..
ಅಖಂಡ ಆಂಧ್ರವ ಒಡೆದು
ಮಾಡಿದರು ಎರಡು ಹೋಳು..!!
ಆದರೂ ಯಾಕೆ ನಿಲ್ಲುತಿಲ್ಲ
ಅಲ್ಲಿಯ ಜನರ ಗೋಳು??


ಫ್ಲಾಪಿ ಕಥೆ smile emoticon
ಏನೋ ಸಾಧಿಸಬೇಕೆಂದು ಎಡೆಬಿಡದೇ ಹೋರಾಡುತ್ತಿದ್ದ..!
ಹೋರಾಡುತ್ತಾ ಹೋರಾಡುತ್ತಾ
ಏನು ಸಾಧಿಸಬೇಕೆಂಬುದನ್ನೇ ಮರೆತಿದ್ದ...!!


ಹೆಣ್ಮನಸು
ಆನ್ ಲೈನ್ ನಲ್ಲೇ ಇದ್ದರೂ
ಇನ್ ಬಾಕ್ಸ್ ಗೆ ಬರುತಿಲ್ಲ...
ಹೇಳಲು ನೂರ್ ಮಾತು ಇದ್ದರೂ
ತುಟಿ ಬಿಚ್ಚಿ ಹೇಳುತಿಲ್ಲ..
ಬರೀ ಮೌನ..
ಬರೇ ದುಃಖ..
ಒಳಗೊಳಗೇ ಅಳುತ್ತಾ
ಕೊರಗುತಿಹಳು ನನ ನಲ್ಲೆ..!!


ಚಚ್ಚಿ ಚುಟುಕ
ಹೂಗಳ ಮುಂದೆ ನಿಂತು
ನಾನೇ ಸುಂದರಿ ಎಂದಳಾ
ಕಾಲೇಜು ಕನ್ಯೆ..!
ಪಕಳೆಗಳಲ್ಲೇ
ಪಕಪಕನೆ ನಕ್ಕು
ಸೈಲೆಂಟಾದ
ಈ ಹೂಗಳೇ ಧನ್ಯೆ..!!


ಚಚ್ಚಿ ಲೈನು
ಅವಳ ಕೈ ಸ್ಪರ್ಷದಲೇ
ನೂರೊಂದು ಮಿಂಚು...
ಅವಳ ಅಪ್ಪುಗೆಯಲಿ ನಾ
ಕರಗಿದೆ ಇಂಚಿಂಚೂ....!!


ಫ್ಲಾಪಿ ಕಥೆ
ಆತನಿಗಿವತ್ತು ಐವತ್ತರ ಸಂಭ್ರಮ..
ಆದರೆ ಸಂತೋಷಕ್ಕಿಂತಲೂ, ತಾನು 'ಮುದುಕನಾಗುತ್ತಿದ್ದೇನೆ'
ಅನ್ನೋ ವಿಚಾರವೇ ಹೆಚ್ಚು ಕೊರೆಯುತ್ತಿತ್ತು..!!


ರೋಗಿ ಬಯಸಿದ್ದೂ ನರ್ಸನ್ನ..
ಡಾಕ್ಟರು ಕಳಿಸಿದ್ದೂ ನರ್ಸನ್ನ...
ಆದ್ರೆ, ರೋಗಿ ರಸಿಕನಾಗಿದ್ದ..
ನರ್ಸು ಮುದುಕಿಯಾಗಿದ್ಲು..!!


ಮಗ ಮೈನರ್ ಆಗಿದ್ದಾಗ, ಅಪ್ಪ ಉಳಿತಾಯ ಖಾತೆ ಓಪನ್ ಮಾಡಿ ಅದರಲ್ಲಿ ಹಣ ಹಾಕುತಿದ್ದ...
ಮಗ ಮೇಜರ್ ಆದ, ಮೇಲೆ ಹಣವೆಲ್ಲ ತೆಗೆದು ಅಕೌಂಟ್ ಕ್ಲೋಜ್ ಮಾಡಿ ಬಿಟ್ಟ..!!

ಚಚ್ಚಿ ಲೈನು

ಏಕೆ ಹೋದೆ ಗೆಳತಿ ನೀ,,
ಮದುವೆ ಮಾಡಿಕೊಂಡು..?
ಹಳೆಯ ಒಡಾಟ,
ಸಿಡುಕು ಕಿತ್ತಾಟ,
ಆ ಹುಸಿ ಮುನಿಸು,
ಲಜ್ಜೆಯಾ ಕಣ್ಣಗಳ ಸೊಗಸು,
ಕೈ ಕೈಯ ಹಿಡಿದು,
ಜೊತೆಯಾಗಿ ನಡೆದು,
ಮಾತಾಡಿದ ಮಾತುಗಳೆಷ್ಟೋ..
ನಿದ್ದೆಗೆಟ್ಟ ದಿನಗಳೆಷ್ಟೋ..
ಎಲ್ಲಕ್ಕೂ ಸಾಕ್ಷಿ ನನ್ನ ಒಲವೊಂದೆ..
ಮೆದುಳಿನ ಬಲಹೀನ ನರವೊಂದೇ..!
ನಾಳೆ ಆರಂಭ ನಿನ್ನ ಹೊಸ ಜೀವನ..
ಬಾಳಿಗೆ ಬರುವ ಹೊಸ ಯಜಮಾನ..
ನಿನ್ನ ಲೈಫು ಸೆಟ್ಲು..
ನನ್ನ ಕೈಲಿ ಬಾಟ್ಲು..
ನನ್ನೊಲವ ನೀ ಕಳಕೊಂಡೆ..
ಅದಕ್ಕೆ ನನ್ನಲ್ಲುಳಿದದ್ದು ಅನುಕಂಪವೊಂದೆ..
ನಿನ್ನ ಜೀವನ ನಿನಗೆ..
ನನ್ನದು ನನಗೆ..
ಹಳೆ ಹುಡುಗಿ ಹೋದಳೆಂದು
ಅಳುವುದರಲ್ಲಿ ಸುಖವೇನಿದೆ??
ಅವಳಿಗಾಗಿ ಕಳಕೊಂಡ ಹಣ,
ಸಮಯ ಮರಳಿ ಬರುವುದೆ??
ನನ್ನ ಬಾಳಲ್ಲೂ ಹೊಸ ಹುಡುಗಿ ಬರುತಾಳೆ
ಹೊಸಗನಸ ತರುತಾಳೆ
ನನ್ನೆಲ್ಲಾ ಪ್ರೀತಿಯು ಅವಳಿಗೇ ಮೀಸಲು..!!
(ನಾನು ಭಗ್ನ ಪ್ರೇಮಿ ಎಂದು ಹೇಳಿಕೊಳ್ಳುವ ಸ್ವಯಂಘೋಷಿತ ಕವಿಗೆ ಇದು ಅರ್ಪಣೆ)

ಫ್ಲಾಪಿ ಕಥೆ ... frown emoticon
ಶಾಲಾ ಕಾಲೇಜಿನ ಪಾಠಗಳನ್ನು ಓದಿ ಅರಗಿಸಿಕೊಂಡಿದ್ದ ಆತನಿಗೆ,
ಜೀವನ ಪಾಠ ಅರ್ಥವಾಗಲೇ ಇಲ್ಲ..!!


own emoticon
ಸಂದರ್ಶಕ ಕೇಳಿದ "ಮೇಡಮ್ ನೀವ್ಯಾಕೆ ಡಬ್ಬಿಂಗ್ ವಿರೋಧಿ?"
"ನೋಡಿ ಇವ್ರೆ ಇಫ್ ಡಬ್ಬಿಂಗ್ ಕೇಮ್ ಅವರ್ ಲಾಂಗ್ವೇಜ್ ವಿಲ್ ಸ್ಪಾಯಿಲ್ ಅಂಡ್ ಮೋರೋವರ್ ಅವರ್ ಕಲ್ಚರ್ ಹಾಳಾಗತ್ತೆ, ಸೋ ಐ ಅಪೋಸ್ ಡಬ್ಬಿಂಗ್" ಎಂದು ಕಾಲ ಮೇಲೆ ಕಾಲು ಹಾಕಿ ಕುಂತಳು ಆ ಮಿನಿ ಸ್ಕರ್ಟ್ ನ ನಟಿ..!!


ಲರ್ನಿಂಗ್ ಲೈನು

ಬಸ್ ಸ್ಟಾಪಲ್ ನಿಂತಾಗ
ಅವಳನ್ನು ಕಂಡಾಗ
ಹೊಡಕೊಂತು ನನ್ನೆದೆಯ ಮೀಟ್ರು...
ಅವಳದೋ ಸೂಪರ್ರು ಸ್ಟ್ರಕ್ಚರ್ರು
ಆದರೂ ನಂಗಿಡಿಸಿದ್ದು ಮುಂಗುರುಳು..
ಕಣ್ಗಳ ಸುತ್ತ ಗಾಗಲ್ಸು ಫಿಟ್ಟು
ನನಗಾಕರ್ಷಿಸಿದ್ದು ಅವಳಣೆಯ ಬೊಟ್ಟು..
ಫೋನಲ್ಲಿ ಕಂಗ್ಲೀಷು
ಕಾಲಲ್ಲಿ ಲೆಗ್ಗಿನ್ಸು
ನೋಡುತ್ತ ನಿಂತಾಗ ಮಿಸ್ಸಾಯ್ತು ಬಸ್ಸು..


ಚಚ್ಚಿ ಲೈನು

ಮುನಿಸಿಕೊಂಡಿರುವಳು ನನ್ನ ನಲ್ಲೆ..!
ತುರ್ತಾಗಿ ಕೊಡಬೇಕಿದೆ ಚುಂಬನದ ಜಲ್ಲೆ..!
ಆಗೊಮ್ಮೆ ಈಗೊಮ್ಮೆ ಕೆಣಕುವಾ ನೋಟ..!
ಇಬ್ಬರಿಗೂ ಈ ರಾತ್ರಿ ಬೆಳದಿಂಗಳೂಟ...!!


ಫ್ಲಾಪಿ ಕಥೆ.. frown emotico
ಹೆಸರಾಂತ ವ್ಯಕ್ತಿಯ ಅಂತಿಮ ದರ್ಶನಕ್ಕೆಂದು ದೂರದ ಊರಿಂದ ಬಂದಿದ್ದ ಆತ,
ಜನಜಂಗುಳಿಯ ಕಾಲ್ತುಳಿತಕ್ಕೆ ಸಿಲುಕಿ ಶವವಾದ..!!


ಆತ ಕನಸುಗಳನ್ನು ಬಹಳವಾಗಿ ಕಟ್ಟಿದ್ದ..
ನನಸಾಗಿಸಿಕೊಳ್ಳಲು ಪರಿಶ್ರಮ ಪಡೋದನ್ನೇ ಬಿಟ್ಟಿದ್ದ...!!



ಫ್ಲಾಪಿ ಕಥೆಗಳು

ಇದ್ದಾಗ "ಹೋಗ್ ಸಾಯಿ" ಅಂತ
ಛೇಡಿಸಿದವನೇ
ಸತ್ತಾಗ "ಮತ್ತೊಮ್ಮೆ ಹುಟ್ಟಿ ಬಾ" ಎಂದು
ಊರ ತುಂಬಾ ಪೋಸ್ಟರ್ ಅಂಟಿಸುತ್ತಿದ್ದಾನೆ..!!



ತನ್ನ ವಿನೂತನ ಯೋಜನೆಗಳನ್ನ ಜನರ ಮುಂದಿಟ್ಟಾಗ
ಹುಚ್ಚ ಎಂದು ನಕ್ಕಿದ್ದರು...
ಆತ ಸಾಧಿಸಿ ತೋರಿಸಿದಾಗ ಮಾತ್ರ ನಕ್ಕವರೆಲ್ಲಾ ಪೆಚ್ಚಾದರು..!!



ಮನೆಕೆಲಸದವರ ಮೇಲೆ ಬಹಳೇ
ಅನುಮಾನ ಹೊಂದಿದ್ದ ಆ ಶ್ರೀಮಂತೆ
ಹಣವನ್ನು ಯಾವಾಗಲೂ ಜೋಪಾನವಾಗಿ ಎತ್ತಿಡುತ್ತಿದ್ದಳು..
ಆದರೆ ಅವಳ ಮಗುವನ್ನು ಮಾತ್ರ ಆ ಕೆಲಸದವರ ಬಳಿಯೇ ಬಿಡುತ್ತಿದ್ದಳು..!!



ನಾನೊಬ್ಬ ಪಾಪಿ,
ಅವಳ ಮನ ನೋಯಿಸಿದ್ದಕ್ಕೆ
ಜೀವನದಿಂದ ತ್ಯಜಿಸಿದ್ದಕ್ಕೆ..!
ನಾನೊಬ್ಬ ಪಾಪಿ,
ಅವಳ ಮೂದಲಿಕೆಗೆ ಅತ್ತಿದ್ದಕ್ಕೆ
ಅವಳನ್ನು ಆಗ ಪ್ರೀತಿಸಿದ್ದಕ್ಕೆ..!!



ಆತನಿಗೆ ಏನೆನ್ನುವುದೋ ತಿಳಿಯುತ್ತಿಲ್ಲ,
ಕನಸಲ್ಲೂ ಕನಸನ್ನು ಕಳೆದುಕೊಂಡು
ಬೆಳಗೆದ್ದು ಗೋಳಾಡುತ್ತಿದ್ದಾನೆ..!!


ಉತ್ತಮ ಓಟಗಾರನಾಗಬೇಕೆಂದುಕೊಂಡು
ಮುಂಜಾನೆಯೇ ಜಾಗಿಂಗ್ ಹೊರಟ ಆತ
ಎಡವಿ ಬಿದ್ದು ಕಾಲು ಮುರಿದುಕೊಂಡ..!!




ಶಿವರಾತ್ರಿಯ ಪ್ರಯುಕ್ತ ಜಾಗರಣೆ ಮಾಡುವೆನೆಂದು ಹೇಳಿ ಸ್ನೇಹಿತನ ಮನೆಗೆ ಹೋದ ಆತ ಬೆಳಗಿನವರೆಗೂ ಪಾರ್ಟಿ ಮಾಡಿದ..!!



ಚಚ್ಚಿ ಚುಟುಕ

ಅವನುಂಡ ಎಂಜಲೆಲೆಯ ಊಟವೇ
ಅವಳಿಗೆ ಪರಮಾನ್ನ..
ಉಂಡಾದ ಮೇಲೆ ಬಾಳೆಯು
ಅವನಿಗೆ ಕೇವಲ ಕಸಕ್ಕೆ ಸಮಾನ..!!


ಚಚ್ಚಿ ಚುಟುಕ
ಕೋಮುಗಲಭೆಗೆ ತುತ್ತಾಗಿ
ಊರಿಗೂರೇ ಇಬ್ಬಾಗವಾಗಿತ್ತು..
ಆದರೂ ನಾವೆಲ್ಲ ಒಂದೇ
ಎಂದು ಸಾರುತಿತ್ತು
ಅಲ್ಲಿನವರ ಚೀತ್ಕಾರ ಮತ್ತು ನೆತ್ತರ..!!


ಫ್ಲಾಪಿ ಕಥೆ

ಅವೆರಡರ ಕಣ್ಣುಗಳೂ ಪರಸ್ಪರ
ಕಲೆತಿತ್ತು..
ಒಂದರ ಕಣ್ಗಳಲ್ಲಿ ಊಟ ಸಿಕ್ಕಿದ ಖುಷಿ.
ಇನ್ನೊಂದರಲ್ಲಿ ಜೀವ ಹೋಗುವ ಭಯ..!!


ಚಚ್ಚಿ ಚುಟುಕ
ಭಿಕ್ಷೆ ಬೇಡುತ್ತಿದ್ದ ಮುದುಕಿಯ
ಕಣ್ಣಲ್ಲಿ ಬದುಕಬೇಕೆಂಬ
ಛಲವಿತ್ತು..!!
ಆತ್ಮಹತ್ಯೆ ಮಾಡಿಕೊಂಡ
ಆ ಪದವೀಧರ ಶ್ರೀಮಂತನ ಬಳಿ
ಹಣವಿತ್ತು..!!


ಚಚ್ಚಿ ಚುಟುಕ
ಅವಳೆಂದಳು
"ಚಚ್ಚಿ...
ನನಗೋಸ್ಕರ ಚುಟುಕ ಬರಿ.."
ಅವಳಿಗೇನು ಗೊತ್ತು
ನನ್ನಲ್ಲುಳಿದದ್ದು ಈಗ
ಬರೇ ಹಾಯ್ಕುಗಳೆಂದು..!!

ಫ್ಲಾಪಿ ಕಥೆ 


ಅವಳ ಸಂತೋಷಕ್ಕಾಗಿ
ತನ್ನೆಲ್ಲಾ ಸುಖವನ್ನು
ಧಾರೆ ಎರೆದ...!
ಅವಳೀಗ ಸಂತೋಷವಾಗಿದ್ದಾಳೆ..
ಬೇರೆಯವನ ಜೊತೆಯಲ್ಲಿ..!!



ನಮ್ಮ ಸಮಾಜದ ವ್ಯವಸ್ಥೆಯನ್ನೇ ಬದಲಾಯಿಸುತ್ತೇನೆ,
ಎಂದು ಹೇಳಿ ಹೋಗಿದ್ದ ಆತ
ತಾನೇ ಬದಲಾಗಿ ಹಿಂತಿರುಗಿದ..!!








ಫ್ಲಾಪೀ ಕಥೆಗಳು

ಆತ Flop Stories ಪಟ್ಟಿ ಮಾಡುತಿದ್ದ,
ಅದು ಕೆಲವರಿಗೆ ಇಷ್ಟವಾದರೆ
ಹಲವರಿಗೆ ಅರ್ಥವಾಗುತ್ತಿರಲಿಲ್ಲ..!
ಇವತ್ತೇ ಕೊನೆ, ಇನ್ಮುಂದೆ ಫ್ಲಾಪೀ ಕಥೆ ಬರೆಯೊಲ್ಲವೆಂದು ನಿರ್ಧರಿಸುವಷ್ಟರಲ್ಲಿ ಸಂಖ್ಯೆ Century ಹೊಡೆದಿತ್ತು..,
ಈಗ ಆ ಶತಕವನ್ನು ಸಂಭ್ರಮಿಸಬೇಕೋ ಅಥವಾ ಅಷ್ಟೊಂದು ಫ್ಲಾಪಿಗೆ ದುಃಖ ಪಡಬೇಕೋ ಗೊತ್ತಾಗದಿದ್ದರೂ ಹೊಸ ಸಾಹಸಕ್ಕೆ ಅಣಿಯಾದ..!!
ಬದಲಾವಣೆ ಶಾಶ್ವತ.....


ಬಾಸ್ ಹಣ ಕೊಡುತ್ತಾರೆಂದು ಆತ ಕಾದೇ ಕಾದ,
ಆದರೆ ಬಾಸ್ ಹಣದ ಜೊತೆ ಆತನ
ನಂಬಿಕೆಯನ್ನೂ ಕಸಿದಿದ್ದ


ರಾಮನವಮಿ ಪ್ರಯುಕ್ತ ಊರ ತುಂಬಾ ಪಾನಕ, ಕೋಸಂಬರಿಗಳ
ಭರ್ಜರಿ ವಿತರಣೆ ನಡೆಯುತ್ತಿತ್ತು..!
ಆದರೆ ಆ ಪೆಂಡಾಲ್ ಕೆಳಗಣ ಅಸಲಿಯತ್ ವಿಚಾರ ಮಾತ್ರ ಎಲೆಕ್ಷನ್ ಪ್ರಯುಕ್ತ ಪುಢಾರಿಗಳ ಮತಭೇಟೆಯಾಗಿತ್ತು..!!


ಮಾರ್ವಾಡಿ ಮಹಿಳೆಯೋರ್ವಳು ಮುಖ, ತಲೆ ಮೇಲೆಲ್ಲ ಸೆರಗು ಮುಚ್ಚಿ,
ಹೊಟ್ಟೆ, ಸೊಂಟವ ತೋರಿಸುತ್ತಾ
ಬೀದೀಲಿ ಹೋಗುತಿದ್ದಳು..!
ಇದನ್ನು ನೋಡುತಿದ್ದ ಯುವಕನೋರ್ವ,
ಸಿಗರೇಟು ಸುಡುತ್ತಾ,
ಕಾಸುಕೊಟ್ಟು ಮೃತ್ಯುವಿಗೆ ಆಹ್ವಾನಿಸುತ್ತಿದ್ದ..!!


ಆಕೆಗೋ ಅವನೆಂದರೆ ಪ್ರಾಣ,
ಅವನಿಗೆ ಅವಳೊಂದು ಇರಿಟೇಟಿಂಗ್ ಹುಡುಗಿ..!
ಬದಲಾದ ಕಾಲಘಟ್ಟದಲ್ಲಿ,
ಅವನಿಗೆ ಅವಳ ಮೇಲೆ ಒಲವಾಗಿದೆ,
ಆದರೆ ಈಗವಳಿಗೆ ಅವನೆಂದರೆ ಅಷ್ಟಕ್ಕಷ್ಟೆ..!!


ವೃದ್ಧಾಪ್ಯದಲ್ಲಿ ಒಳರೋಗಿಗಳಾಗಿದ್ದ
ತಂದೆ-ತಾಯಿಯ ಕಂಡು ಮೂದಲಿಸುತ್ತಿದ್ದ
ಮಕ್ಕಳು,
ತಾರುಣ್ಯದಲ್ಲಿಯೇ ಮಾನಸಿಕವಾಗಿ
ರೋಗಿಗಳಾಗಿದ್ದರು..!
ಮುಂದೊಂದು ದಿನ ತಮಗೂ
ಇದೇ ಪರಿಸ್ಥಿತಿ ಬರುತ್ತದೆ ಎನ್ನುವ
ಪರಿಕಲ್ಪನೆ ಇಲ್ಲದೇ ಮೆರೆಯುತ್ತಿದ್ದರು..!!


ಕತ್ತಲು ಕವಿದಿತ್ತು..
ಜಗವು ಮಲಗಿತ್ತು..
ಕಾಮನಾಟ ಭುಗಿಲೆದ್ದಿತ್ತು..
ಹೊಸ ಪ್ರಪಂಚ ಹುಟ್ಟಿತ್ತು..!!


೫೦ಕೆಜಿ ತೂಕದ ತರುಣಿಯನ್ನು ಅನಾಯಾಸವಾಗಿ ಎತ್ತುತ್ತಿದ್ದವಗೆ,
೧೫ ಕೆಜಿ ಸಿಲಿಂಡರ್ ಭಾರವಾಗಿತ್ತು..!
ಪ್ರೇಯಸಿಯ ಮಾತೇ ವೇದವಾಗಿದ್ದ ಅವನಿಗೆ
ತಾಯಿಯ ಕಣ್ಣೀರೂ ಗೌಣವಾಗಿತ್ತು..!!


ಭೂಗ್ರಹದ ವಿಜ್ಞಾನಿಗಳ ತಂಡವೊಂದು
ಏಲಿಯನ್ ಗಳ ಬಗ್ಗೆ ರಿಸರ್ಚ್ ನಡೆಸಲು
ಅನ್ಯಗ್ರಹಕ್ಕೆ ತೆರಳಿತು..!
ಮಾನವರನ್ನು ನೋಡಿದ
ಅನ್ಯಗ್ರಹ ಜೀವಿಗಳು,
ಯಾವುದೋ ಏಲಿಯನ್ ಗಳು
ಬಂದವೆಂದು
ಬೆರಗುಗಣ್ಣಿಂದ ನೋಡಿದವು..!!


ಕಾವಿ ತೊಟ್ಟವ ಕುಣಿಯುತ್ತಿದ್ದ..
ಖಾದಿ ತೊಟ್ಟವ ಅಳಿಸುತ್ತಿದ್ದ..
ಜನ ಸಾಮಾನ್ಯ ಬಳಲುತ್ತಿದ್ದ..
ಹುಚ್ಚನಾದವ ಮಾತ್ರ ಸುಖವಾಗಿದ್ದ..!!


ಅವಳ ಬಾಹ್ಯ ಸೌಂದರ್ಯಕ್ಕೆ
ಮನಸೋತವ ಡೈವೊರ್ಸ್ ಮಾಡಿದ..!
ಹೃದಯ ಶ್ರೀಮಂತಿಕೆಗೆ ಬೆಲೆಕೊಟ್ಟವ
ಸುಖವಾಗಿ ಬಾಳಿದ..!!


ತೆರೆಯ ಮೇಲೆ ಕಲರ್ಫುಲ್ ಆಗಿದ್ದ ಆ ನಾಟಕದವರ ಜೀವನ,
ತೆರೆಯ ಹಿಂದೆ ಬಣ್ಣ ಕಳೆದುಕೊಂಡು ನೋವಿನ ಲೇಪನದಿಂದ ಆವೃತವಾಗಿತ್ತು..!!


ಜಾತ್ರೆ ಪೇಟೆಯ ಖರೀದಿಯಲ್ಲಿದ್ದಾಗ,
ಮೋಜು-ಮಸ್ತಿಯ ಭರದಲ್ಲಿದ್ದಾಗ,
ಆ ಐನೂರರ ನೋಟೂ ಚಿಕ್ಕ ಹುಳುವಿನಂತೆ ತೋರುತ್ತಿತ್ತು..!
ಚಿಕ್ಕ ಹುಡುಗಿ ಮಗು ಹಿಡಿದುಕೊಂಡು ಭಿಕ್ಷೆ ಬೇಡುವಾಗ,
ತಳ್ಳೋಗಾಡಿಲಿ ಕುಂತ ಅಂಗವಿಕಲ ದೀನನಾಗಿ ಕೈ ಚಾಚುವಾಗ,
ಹತ್ತು ರೂಪಾಯಿ ಕೂಡಾ ದೈತ್ಯ ಜೀವಿಯಂತೆ ಫೀಲಾಗಿತ್ತು..!!


ಹಡಗು ತುಂಬಲು ಹೋದವ
ಬಂದ..!
ಹೊಟ್ಟೆ ತುಂಬಲು ಹೋದವ
ಇನ್ನೂ ತುಂಬಿಸುತ್ತಲೇ ಇದ್ದಾನೆ..!!
(ಅಜ್ಜಿ ಹೇಳಿದ್ದು)



ಪೂಜಾಚರಣೆಯಲ್ಲೇ ದೇವರನ್ನು
ಕಾಣುತ್ತಿದ್ದವ ದೀನನಾದ, ಸಂಕೊಲೆಗಳಲ್ಲಿ ಅಧೀನನಾದ..!
ಕೆಲಸವನ್ನೇ ದೇವರೆಂದು
ಅದರಲ್ಲೇ ತೊಡಗಿಸಿಕೊಂಡವ
ಸಾಧುವಾದ, ಸಾಧನೆಗೈದ..!!


ಆತನಿಗೆ ಬೆಂಕಿಯ ಜೊತೆ ಸರಸವಾಡುವುದು ಹುಟ್ಟುಗುಣ..
ಅದಕ್ಕೇ ಆಗಾಗ ಹೆಣ್ಣುಮಕ್ಕಳ
ಸಂಗ ಮಾಡಿ,
ಅವರ ಕೋಪಕ್ಕೆ ಬಲಿಯಾಗಿ,
ಜೀವನವನ್ನೇ ಸುಟ್ಟುಕೊಳ್ಳುತ್ತಿದ್ದಾನೆ..!!


ಬಿಸಿಲಲ್ಲಿ ಬೀದಿ ಬೀದಿ ಅಲೆದು 
ತರಕಾರಿ ಮಾರುತ್ತಿದ್ದವ ಖುಷಿಯಾಗಿದ್ದ,
ನೆಮ್ಮದಿಯಾಗಿದ್ದ...!
ಆಫೀಸಿನ ಎಸಿ ರೂಮಲ್ಲಿ ಕುಂತು
ಕಂತೆ ಕಂತೆ ನೋಟು
ಎಣಿಸುತ್ತಿದ್ದವ ಭಯದಲ್ಲಿದ್ದ, ನೆಮ್ಮದಿಯನ್ನೇ ಕಳಕೊಂಡಿದ್ದ..!!


ತಾರುಣ್ಯದಿಂದಲೂ ಆಕೆಗೆ ಕನ್ನಡಿಯೆಂದರೆ ಪಂಚಪ್ರಾಣ...
ಆದರೆ ಇತ್ತೀಚೆಗೆ ಯಾಕೋ ಕನ್ನಡಿಯನ್ನ ತುಂಬಾ ದ್ವೇಷಿಸುತ್ತಿದ್ದಾಳೆ..!!


ಆತ ಸುಮ್ಮನಿದ್ದ; ಈತ ಬೈದ,,! 
ಆತ ಸುಮ್ಮನಿದ್ದ; ಈತ ಹೊಡೆದ..! 
ಆತ ತಿರುಗಿಬಿದ್ದ; ಈತ ಮುದುರಿಕೊಂಡ..!!


'ಕಳ್ಳರಿದ್ದಾರೆ ಎಚ್ಚರಿಕೆ' ಎಂದು ಪೊಲೀಸರು ಹಾಕಿದ್ದ ನಾಮಫಲಕವನ್ನೇ ಕಳ್ಳರು ಕದ್ದೊಯ್ದಿದ್ದರು... !!


ಲೈಫ್ ಅಲ್ಲಿ ಸೆಟಲ್ ಆದಮೇಲೆ ಮದುವೆ ಆಗುತ್ತೇನೆ, ಅಂದುಕೊಂಡವನಿಗೆ ಈಗ ೪೫ ವರ್ಷ.. 
ಅತ್ಲಾಗೆ ಲೈಫೂ ಸೆಟಲ್ ಇಲ್ಲ..!
ಇತ್ಲಾಗೆ ಹೆಣ್ಣೂ ಸಿಕ್ತಿಲ್ಲ...!!


ಎಲ್ಲಾ ದಿನಗಳಂತೆ ಸಾಧಾರಣ ದಿನವಾಗಿದ್ದ ಆತನಿಗೆ
ಹಲವರು ಅವನ ದಿನವನ್ನು ವಿಶೇಷವಾಗಿಸಿದರು...
ಅವನ ನೆನಪನ್ನು ಶೇಷವಾಗಿಸಿದರು..!!


ಚಚ್ಚಿ ಚುಟುಕ ಅಲ್ಲ ಚಚ್ಚಿ ರೋಧನೆ
ಬಸ್ಸಲ್ಲೆ ಕಾಣಿಸಿದೆ..
ಪಕ್ಕದಲ್ಲೆ ಪವಡಿಸಿದೆ..
ಮಾತಿಲ್ಲ ಕತೆಯಿಲ್ಲ..
ನೀನ್ಯಾರೊ ಗೊತ್ತಿಲ್ಲ..
ಆ ನಿನ್ನ ಸೌಂದರ್ಯವೂ
ಡಿಯೋಡ್ರೆಂಟ್ ನ ಆ ಘಮವೂ
ಎರಡೂ ಸೇರಿ ತೇಲಾಡಿತು ನನ ಮನವು..
ನಿದ್ದೆಗಣ್ಣಲ್ಲಿ ನೀ ನನ್ನ ಹೆಗಲಿಗೊರಗಿ,
ನನ್ನ ನಿದ್ದೆಯೆಲ್ಲ ಹೊಗೆಯಾಗಿ,
ಬೆಳಗಿನವರೆಗೂ ತೂಕಡಿಸಿದೆ ರೋಮಾಂಚನದಲಿ..
ಅರ್ಧ ನಿದ್ದೆಲಿ...
ನಿದಿರೆ ಯಾವಾಗಲೋ ಬಂದಿತ್ತು..
ಬಸ್ ಊರು ತಲುಪಿತ್ತು..
ಕಂಡಕ್ಟರ್ ಎಬ್ಬಿಸಿದ...
ಪಕ್ಕದಲಿ ಅವಳಿಲ್ಲ..
ಮಿಂಚಂತೆ ಬಂದವಳು
ಸವಿಗನಸ ತಂದವಳು
ಹೇಳದೇ ಮರೆಯಾದವಳು
ಯಾರವಳು ಯಾರವಳು??