Thursday 23 April 2015

ಫ್ಲಾಪಿ ಕಥೆ

ಮದುವೆಯ ಮನೆಯಲ್ಲಿ ದುಬಾರಿ ಪಟ್ಟೆಯನ್ನುಟ್ಟು ಚೆಂದವಾಗಿ ಕಾಣುತ್ತಿದ್ದ ಮಹಿಳೆಯರೆಲ್ಲಾ ತಮ್ಮ ಮನೆಯಲ್ಲಿ ಹಳೇ ನೈಟಿಯನ್ನುಟ್ಟು ಚಿಂದಿಯಾಗಿ ಇರುತ್ತಿದ್ದರು..!
ಆಡಂಬರದ ತೋರಿಕೆಯ ಜೀವನ ನಡೆಸುತ್ತಿದ್ದವರೆಲ್ಲಾ ಸರಳತೆಯನ್ನು ಕಡೆಗಣಿಸಿದ್ದರು..!
****

ಫ್ಲಾಪಿ ಕಥೆ
ಅಪ್ಪನೊಟ್ಟಿಗೆ ಹೋಗುವಾಗ ಬೈಕಿನ ಹಿಂದೆ ಮಾರುದ್ಧ ದೂರ ಕುಳಿತಿದ್ದ ಬಾಲಕಿ
ತಲೆ ತಗ್ಗಿಸಿ ಲೋಕದ ಪರಿವೆಯಿಲ್ಲದೆ ಮೊಬೈಲಿನಲ್ಲಿಯೇ ಮುಳುಗಿದ್ದಳು.!
ಇನಿಯನೊಟ್ಟಿಗೆ ಹೋಗುವಾಗ ಮಾತ್ರ ಅವನನಪ್ಪಿಕೊಂಡು ಮೊಬೈಲನ್ನೇ ಮರೆತಿದ್ದಳು..!!

****
Self ಇ
ನಾ ಮಾಡುವ
ಪ್ರತಿ ಹೊಸ
ಸಂಶೋಧನೆಗಳೂ,
ಅನ್ವೇಷಣೆಗಳೂ
ನನ್ನಾತ್ಮೀಯರಿಗೆ
ಹುಚ್ಚು ಸಾಹಸಗಳೇ!
ವಾದ ಮಾಡುವಂತಿಲ್ಲ..
ತಿಳಿಸಿ ಹೇಳುವಂತಿಲ್ಲ..
ನಾನೀಗ ಮೌನಿ..
ಕಾಲವೇ ಉತ್ತರಿಸಲಿ

*****

Self ಇ
ಕಲಿಕೆಯ ಜೀವನದಲಿ
ನೂರೆಂಟು ಪಾಠಗಳು
ಕಲಿಯುವ ಭರದಲ್ಲಿ
ಬರಗೆಟ್ಟ ಕನಸುಗಳು
ಕನಸುಗಳ ಬೆನ್ನತ್ತಿರುವಾಗ
ಸಾವಿರಾರು ಸಮಸ್ಯೆಗಳು
ಬಿಡಿಸುತಾ ಸಾಗುವುದೇ
ಜೀವನದ ಸತ್ಯಗಳು..!

*****
ಫ್ಲಾಪಿ ಕಥೆ
ಅಕ್ಷಯ ತೃತೀಯದ ದಿನದಂದು ಕೊಂಡಿದ್ದೆಲ್ಲಾ ಅಕ್ಷಯವಾಗುವುದೆಂದು ಆತ ಸಾಲ ಸೋಲ ಮಾಡಿ ಚಿನ್ನಗಳ ಕೊಂಡುಕೊಂಡ. ದಿನಗಳು ಉರುಳಿತು. ಸಾಲದ ಹೊರೆ ಹೆಚ್ಚಿ ಹೊಸ ಚಿನ್ನಗಳ ಜೊತೆ ಹಳೆ ಚಿನ್ನವೂ ಕ್ಷಯವಾಯ್ತು. ಅಕ್ಷಯವಾಗುತ್ತೆಂಬ ಸುಳ್ಳು ಸೃಷ್ಟಿ ಮಾಡಿದ ಮಾಡಿದ ವ್ಯಾಪಾರಿ ಮೀಸೆ ಅಡಿಯಲ್ಲಿ ನಗುತ್ತಿದ್ದ. ಅಕ್ಷಯ ತೃತೀಯ ದಿನದಂದು ದಾನ ಮಾಡಿ ಎಂಬ ಸಾರುತ್ತಿದ್ದ ವ್ಯಕ್ತಿ ನಿರ್ಲಕ್ಷಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ.


1 comment:

  1. ಅಕ್ಷಯ ತೃತೀಯದ ಕಥೆಯೇ ಕಟುವಾಸ್ತವ!

    ReplyDelete