Wednesday 15 April 2015

Selfಇ
ಸುಟ್ಟ ಮರದಂತಾ ಮನಸ್ಸಿಗೂ,
ಒಲವು ಚಿಗುರುತ್ತದೆ..
ಕಳೆದುಕೊಂಡ ಪ್ರೀತಿಗೂ ಪರ್ಯಾಯವಿರುತ್ತದೆ.!

ಶಿಸ್ತು ಶಿಸ್ತೆಂದು ಜಪಿಸುತ್ತಿದ್ದವನಿಗೂ
ಕರಾಳ ದುಃಖ ತುಂಬಿತ್ತು..
ಕಾಲು ಕಿಸಿದು ಮಲಗಿಕೊಂಡ
ಬಿಕನಾಸಿಯ ಕಣ್ಣಲ್ಲೂ
ರಂಗುರಂಗಿನ ಕನಸಿತ್ತು..!

ಚಚ್ಚಿ ಲೈನು
ಮದುವೆಯಲಿ ಆತ ಮೂರು ಗಂಟು
ಬಿಗಿದು ಬೀಗಿದ, ಆಕೆಯ ಕತ್ತಿಗೆ..;
ಅಂದಿನಿಂದಲೂ ಪಾಪ ಮಂಕಾಗಿದ್ದಾನೆ,
ಹೆಂಡತಿ ಎಂಬ ಮಾರುದ್ದದ 'ಕತ್ತಿ'ಗೆ..!!

ಫ್ಲಾಪಿ ಕಥೆ
ಬಸ್ ಸ್ಟ್ಯಾಂಡಿನಲ್ಲಿ ಆತ ಚಡ್ಡಿ ಫಿಗರ್ಸ್ ಗಳ ನೋಡುತ್ತಿದ್ದ..!
ಕಳ್ಳನೋರ್ವ ಆತನ ಪ್ಯಾಂಟಿನಿಂದ ಪರ್ಸ್ ಎಗರಿಸಿದ್ದ..!!

ಫ್ಲಾಪಿ ಕಥೆ
ಪ್ರೀತಿಯಿಂದ ಆತ ಬದುಕಕಂಡ
ಪ್ರೀತಿಯಿಂದಲೇ ಈತ ಸಾವು ಕಂಡ
.
.
.
.
.
.
.
.
.
.
'ಪ್ರೀತಿ' ಈಗ ಕಾಣೆಯಾಗಿದ್ದಾಳೆ,
ಪೊಲೀಸರು ಹುಡುಕುತ್ತಿದ್ದಾರೆ..!

Selfಇ
ಟೈಮ್ ಪಾಸ್ ನೊಳಗೂ
ವಿಶೇಷವಿರಬೇಕು..
ವ್ಯರ್ಥ ಸಮಯದಲೂ
ಕಲಿಕೆ ಸಿಗಬೇಕು..!

ಫ್ಲಾಪಿ ಕಥೆ
ಮೈ ಚಾಯ್ಸ್, ಮೈ ಚಾಯ್ಸ್
ಎಂದಾಕೆ ಬಟ್ಟೆ ಬಿಚ್ಚಿದಳು
ಯೆಸ್, ನೋ ಎಂದೆನ್ನುತಾ
ನೋಡುವವರೇ ಬೆತ್ತಲಾದರು..!

Selfಇ
ಕಲ್ಲಿನ ಮಂಟಪದೊಳು
ಹಕ್ಕಿಗೊಂದು ಮನೆ ಬೇಕು,
ಕಲ್ಲು ಹೃದಯಗಳ
ತಡೆಗೋಡೆಯಿಲ್ಲದೆ
ಅದು ಖುಷಿಯಾಗಿರಬೇಕು..!
ಹಕ್ಕಿಗೂ ಹಕ್ಕುಗಳಿರಬೇಕು,
ಅದಕ್ಕೂ ಬದುಕಲು ಬಿಡಬೇಕು..!!

Selfಇ
ಕುರಿ-ಕೋಳಿಯ
ಪ್ರೀತಿಯ ಕಂಡು,
ತುಂಡು ತುಂಡಾಗಿ
ಕತ್ತರಿಸಿದರು..!
ಪಾಕಶಾಲೆಯಲ್ಲೀಯೇ
ಲೆಗ್ ಪೀಸಿಗೂ- ತಲೆಮಾಂಸಕ್ಕೂ
ಮತ್ತೆ ಲವ್ವಾಗಿದೆ..!!

ಫ್ಲಾಪಿ ಕಥೆ
ಅವಳನ್ನು ಮೂರ್ಖಳನ್ನಾಗಿಸಲು
ಅವನು ಪ್ರೀತಿಮಾಡಿದ,
ಅವನನ್ನು ಮೂರ್ಖನನ್ನಾಗಿಸಲು
ಅವಳು ಮದುವೆಯಾದಳು..!

Selfಇ
ಮಾತುಗಳೇ ಶಕ್ತಿಶಾಲಿಯೆಂದು
ಪ್ರತಿಪಾದಿಸುತ್ತಿದ್ದ- ವಿಜ್ಞಾನಿ,
ಮೌನವಾಗಿಯೇ ಇದ್ದು
ಸಾಬೀತುಪಡಿಸಿದ- ಜ್ಞಾನಿ..!


6 comments: