Monday 20 April 2015

ಮಿಸ್ಟರ್ ಎಕ್ಸ್ ಚಿತ್ರದ ಬಗ್ಗೆ ನನ್ನ ರಿವ್ಯೂನ ವ್ಯೂ ಮಾಡಲು http://sirsi.info/movies/mr-x-hindi-movie-review/ ಲಿಂಕ್ ಉಪಯೋಗಿಸಿ

ಖಾಲಿ ಪೀಲಿ ಲೈನು
ಸುಂದರ ಹಲ್ಲುಗಳ
ತರುಣಿಯ ನೋಡಿ
ಫಿದಾ ಆಯ್ತು ನನ್ನ ಮನ..
ದಾಳಿಂಬೆ ಸಾಲುಗಳಂತ ಅವಳ
ಬಿಳಿ ದಂತಪಂಕ್ತಿಯ ನೋಡುತ,
ಮರೆತೇ ಹೋದೆ ನಾ ಈ ಜಗವ..
ಹಲ್ಲು ನೋಡಿ ಮರುಳಾದೆ..
ಹಾರ್ಟು ಕೊಟ್ಟು ಕಳೆದೋದೆ..
ಜೀವನವೆಲ್ಲಾ ಅವಳ ಜೊತೆಯೇ ಕಳೆಯಬೇಕು,
ಅನ್ನುವಷ್ಟರಲ್ಲಿ ಗೊತ್ತಾಯ್ತು...
ಅವಳದು ಕಟ್ಟಿಸಿದಾ ಹಲ್ಲು..
ಹುಳುಕು ಹಲ್ಲುಗಳ ಮುಚ್ಚಿಟ್ಟ ಸೊಲ್ಲು..
ಹೃದಯ ಒಡೆದೋಯ್ತು..
ಆಸೆ ಕಮರೋಯ್ತು..
ಸುಂದರ ಹಲ್ಲಿನವರಿಗಿಂತ
ಹಲ್ಮುರುಕಿಯರೇ ಬೆಟರೆಂಬ
ಸತ್ಯ ಅಂದೇ ನನಗೆ ಅರಿವಾಯ್ತು..
ಅಂದಿನಿಂದ ಇಂದಿಗೂ
ಹಲ್ಮುರುಕಿಯರೇ ಚೆಂದ,
ಹೃದಯ ಮುರುಕಿಯರಿಗಿಂತ..!

ಚಚ್ಚಿ ರೋದನೆ
ಕನಸಿನಲ್ಲಿ ಕಂಡ ಸುಂದರ
ಚೈನೀಸ್ ಚೆಲುವೆಗಾಗಿ
ದಾಲಿ ಪಟ್ಟಣಕ್ಕೆ ದಾಳಿಯಿಟ್ಟೆ..
ಊರ ತುಂಬೆಲ್ಲಾ ಹುಡುಕಿದೆ..
ಗಲ್ಲಿಗಲ್ಲಿಯಲೂ ತಡಕಿದೆ..
ಕೊನೆಗೂ ಸಿಕ್ಕಳು ಆ ಚೆಲುವೆ,
ಕಾರ್ನರ್ ಅಂಗಡಿಯಲಿ ಜಿರಳೆ ತಿನ್ನುತ್ತಿದ್ದಳು..
ಇನ್ನೇನು ಆಲಿಂಗನವೊಂದೇ ಬಾಕಿ,
ಕಣ್ಣು ಕಣ್ಣು ಬೆರೆತಾಯ್ತು..
ಮೈ ಮನಗಳು ಸೇರಾಯ್ತು..
ಅಷ್ಟರಲ್ಲೊಂದು ಆಘಾತ..
ಆ ನನ್ನ ಚೆಲುವೆಗೆ ಹುಬ್ಬುಗಳೇ ಗೋತ..
ಹುಬ್ಬಿಲ್ಲದ ಹುಡುಗಿಯ
ಹಗ್ ಮಾಡಬೇಡೆಂದು
ಅಶರೀರವಾಣಿ ಕೂಗ್ತಿತ್ತು..
ಯಾಕೆ? ಏನೆಂದು ಕೇಳುವಷ್ಟರಲ್ಲಿ
ಮಂಚದಿಂದ ಬಿದ್ದಾಯ್ತು..
ಕನಸು ಎಲ್ಲಾ ಮರೆತೋಯ್ತು..!

1 comment:

  1. ಮಿಸ್ಟರ್ ಎಕ್ಸ್ ಚಿತ್ರದ ಬಗ್ಗೆ ನನ್ನ ರಿವ್ಯೂನ ವ್ಯೂ ಖಂಡಿತ ಓದುವೆ.

    ಅಕಟಕಟಾಗಳ ಪಟ್ಟಿ:

    ಹಲ್ಮುರುಕಿಯರೇ ಚೆಂದ,
    ಹೃದಯ ಮುರುಕಿಯರಿಗಿಂತ

    ಆ ನನ್ನ ಚೆಲುವೆಗೆ ಹುಬ್ಬುಗಳೇ ಗೋತ

    ReplyDelete