Saturday 28 March 2015

ಫ್ಲಾಪಿ ಕಥೆಗಳು

ಸಿನಿಮಾದಲ್ಲಿ ಯಾವಾಗಲೂ ವಿಲನ್ ಪಾತ್ರವನ್ನೇ ಮಾಡುತ್ತಿದ್ದ ಆತನ ಎಷ್ಟೋ ಒಳ್ಳೆಯ ಕೆಲಸಗಳನ್ನು ಜನರು ನಿಜ ಜೀವನದಲ್ಲಿ ಗುರುತಿಸಲೇ ಇಲ್ಲ..!


ಅಪಾಯಕಾರಿ ವೈರಸ್ ಗಳಿಗೆಲ್ಲಾ ಲಸಿಕೆ ಕಂಡು ಹಿಡಿಯುತ್ತೇನೆಂದು ಹೊರಟ ಆತನಿಗೆ ಆಲಸ್ಯ ಎಂಬ ವೈರಸ್ ಆವರಿಸಿಕೊಂಡು ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಂಡ..!!


ಹೆಣ್ಣು ಮಕ್ಕಳಿಗೆ ನಮ್ಮಲ್ಲಿ ಸಮಾನ ಹಕ್ಕುಗಳಿವೆ, ಮಹಿಳಾ ಶೋಷಣೆಯನ್ನು ವಿರೋಧಿಸುತ್ತೇವೆ ಎನ್ನುತ್ತಾ ಮಹಿಳೆಯೊಬ್ಬಳಿಗೆ ನಡುಬೀದಿಯಲ್ಲಿ ಕೊಳ ತೊಡಿಸಿ ಅಭಿವೃದ್ಧಿಶೀಲತೆಯನ್ನೇ ಹರಾಜಿಗಿಟ್ಟರು..!


ಕಾವಿ ತೊಟ್ಟಿದ್ದ ಆತ ಬಾಯಲ್ಲೆಲ್ಲಾ ಸ್ವಾಮಿ ಸ್ವಾಮಿ ಎಂದು ಧ್ಯಾನಿಸುತ್ತಿದ್ದ..!
ಆದರೆ ಮನದಲ್ಲಿ ಮಾತ್ರ ಆತ ಕಾಮಿಯಾಗಿದ್ದ..!!


ಮದುವೆಯಾಗಬೇಕೆಂದು ಬಹಳ ತವಕದಲ್ಲಿದ್ದ ಆತ ಚಳಿಗಾಲದಲ್ಲಿ ಮದುವೆಯಾದ..!
ಬೇಸಿಗೆಯಲ್ಲಿ ಡೈವೊರ್ಸ್ ಪಡೆದ..!!


ಮೊದಲೆಲ್ಲಾ ಮದುವೆ ಮದುವೆ ಎಂದು ಹಾತೊರೆಯುತ್ತಿದ್ದ ಆತ,
ಈಗೀಗ  ಮದುವೆಯೇ ದುಃಖಕ್ಕೆ ಕಾರಣವೆಂದು ಆಪ್ತರ ಬಳಿ
ಹೇಳಿಕೊಂಡು ಗೋಳಾಡುತ್ತಿದ್ದಾನೆ..!


ಪ್ರಖ್ಯಾತ ಚಿತ್ರನಟಿಯೊಬ್ಬಳ ಹುಟ್ಟುಹಬ್ಬವನ್ನಾಚರಿಸಲು ಬೆಳಿಗ್ಗೆಯಿಂದ ಸಂಜೆಯವರೆಗೂ ಅವಳ ಮನೆ ಮುಂದೆ
ಅವಳಿಗೋಸ್ಕರ ಕಾದೂ ಕಾದೂ, ಅವಳು ಸಿಗದೇ ನಿರಾಶೆಯಿಂದ ಮನೆಗೆ ಹೋದಾಗಲೇ ಆತನಿಗೆ ಗೊತ್ತಾಗಿದ್ದು,
ತನ್ನ ತಾಯಿಯ 'ಬರ್ಥ್ ಡೇ' ಕೂಡಾ ಅಂದೇ ಇತ್ತೆಂದು..!


ನೀರು ನೀರು ಎಂದು ಯಾವಾಗಲೂ ಹೋರಾಡುತ್ತಿದ್ದ ಆತ, ನೀರಿನಲ್ಲಿಯೇ ಮುಳುಗಿ ಸಾವನ್ನಪ್ಪಿದ್ದು ಮಾತ್ರ ದುರಂತ..!!


ಮೊದಲೆಲ್ಲಾ ಅವಳ ಅಪ್ಪನೇ ಅವಳನ್ನು ಮುಂಜಾನೆಯೇ ಎಬ್ಬಿಸಿ ಮೈದಾನದ ತುಂಬೆಲ್ಲಾ ಓಡಿಸುತ್ತಿದ್ದ..! ಮುಂದೊಂದು ದಿನ ಅವಳು ಮಧ್ಯರಾತ್ರಿಯೇ ಎದ್ದು ಯಾರೊಂದಿಗೋ ಓಡಿ ಹೋಗುವಾಗ ಮಾತ್ರ ಅವಳಪ್ಪನಿಗೆ ಅದು ತಿಳಿಯಲೇ ಇಲ್ಲ..!!


ಕತ್ತರಿಸುವುದರಿಂದಲೇ ಮಾತ್ರ ಪರಿಹಾರ ಸಾಧ್ಯವೆಂದು ಸಾಧಿಸುತ್ತಿದ್ದ ಆ ಕ್ರಾಂತಿಕಾರಿಗೆ ಒಮ್ಮೆ ವಿಪರೀತ ಹಲ್ಲು ನೋವಿತ್ತು .. ಹಲ್ಲನ್ನೇ ಕೀಳಿಸಿದ್ದ..!
ಮಗದೊಮ್ಮೆ ಆತನಿಗೆ ಉರಿಮೂತ್ರ ಶುರುವಾಗಿತ್ತು.. ತನ್ನ ಧೋರಣೆಯನ್ನೇ  ಬದಲಿಸಿಕೊಂಡ..!


ಪ್ರೀತಿಯನ್ನು ಅರಸಿಕೊಂಡು ಆತ ಪ್ರಪಂಚವನ್ನೆಲ್ಲಾ ಸುತ್ತುತ್ತಿದ್ದ,,! ವೃದ್ಧಾಶ್ರಮದಲ್ಲಿದ್ದ ಆತನ ತಂದೆ ತಾಯಿ ಪ್ರೀತಿ ಅವನನ್ನು ಹುಡುಕುತ್ತಾ ದಿನಂಪ್ರತಿ ಕೊರಗುತ್ತಿತ್ತು..!


ಪ್ರಾಯದಲ್ಲಿದ್ದಾಗ ಹೆಣ್ಣುಮಕ್ಕಳೆಂದರೆ  ವಿಶೇಷ ಪ್ರೀತಿ, ಕಾಳಜಿ.. ಹೊಂದಿದ್ದ ಆತ ಮದುವೆಯಾಗಿ ಎರಡು ಹೆಣ್ಣು ಮಕ್ಕಳಾದ ಮೇಲೆ ಅಸಡ್ಡೆ ತಾಳಲಾರಂಭಿಸಿದ..!


ಮೊದಲೆಲ್ಲಾ ಆತನಿಗೆ ತನ್ನ ಸೊಂಪಾದ ಕೂದಲ ಮೇಲೆ ತೀವ್ರ ಅನಾಸಕ್ತಿ ಇತ್ತು..! ಈಗೀಗ ಬಕ್ಕ ತಲೆ ಆಗುತ್ತಿದ್ದಂತೆ ಕೂದಲ ಮೇಲೆ ಬಹಳ ಕಾಳಜಿ ಬಂತು..!


ಮಕ್ಕಳಾಗಲಿಲ್ಲವೆಂದು ಆಕೆ ಕಂಡಕಂಡ ದೇವರಿಗೆಲ್ಲ ಹರಕೆ ಹೊತ್ತಳು.. ಹುಟ್ಟಿದ ಮಗ ಅಡ್ಡದಾರಿ ಹಿಡಿದಾಗ "ಇಂತಾ ಮಗನನ್ನು ಏಕೆ ಕೊಟ್ಟೆ?" ಎಂದು ದೇವರಿಗೇ ಹಿಡಿಶಾಪ ಹಾಕಿದಳು..!


ರಸ್ತೆ ಬದಿಯಲ್ಲಿ ಪಾನೀಪೂರಿ ಮಾರಿಯೇ ಶ್ರೀಮಂತನಾದ ಆತನ ಮಕ್ಕಳು ಮಾತ್ರ ಸ್ಟಾರ್ ಹೋಟೆಲಿನಲ್ಲಿಯೇ ಚಾಟ್ಸ್ ತಿನ್ನುತ್ತಿದ್ದರು..!


ಅವನು ಅವಳಿಗಾಗಿ ಕಾದೇ ಕಾದ.. ಕೊನೆಗೂ ಅವಳು ಬರಲೇ ಇಲ್ಲ..! ವಾಸ್ತವಿಕತೆಯಲ್ಲಿ ಅವಳು ಬರಲೇ ಇಲ್ಲ..!


ಹೊಸತಾಗಿ ಮದುವೆಯಾದ ಆತ ಮೊದಲರಾತ್ರಿಯಂದು ತನ್ನ ಪತ್ನಿಯನ್ನು ಹಳ್ಳಿ ಮುಗ್ದೆಯೆಂದು ತಿಳಿದು, ಧೀರ್ಘವಾಗಿ ಚುಂಬಿಸಿ ಹೇಳಿದ.. "ಪ್ರಿಯೇ ಹೇಗಿತ್ತು ನನ್ನ ಮುತ್ತಿನ ಗಮ್ಮತ್ತು?"
ಆಕೆಯೆಂದಳು- "ನಿನಗಿಂತ ಆ ಮುತ್ತನೇ ಚೆನ್ನಾಗಿ ಕೊಡ್ತಿದ್ದ..!!"


ಕಣ್ಣಾಸ್ಪತ್ರೆಗೆ ಹೋಗಿ, ತಾನು ಸತ್ತ ಮೇಲೆ ಕಣ್ಣನ್ನು ದಾನ ಮಾಡುವಂತೆ ಪತ್ರಕ್ಕೆ ಸಹಿ ಹಾಕಿ,
ಮನೆಗೆ ಬರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ತನ್ನ ಕಣ್ಣನ್ನೇ ಕಳೆದುಕೊಂಡ..!


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಆತ ಭಾರತೀಯ ಸಂಸ್ಕೃತಿ, ಉಡುಗೆ-ತೊಡುಗೆ, ನಮ್ಮ ಭಾಷೆ, ಆಚಾರ-ವಿಚಾರಗಳ ಬಗ್ಗೆ ಸುಧೀರ್ಘ ಉಪನ್ಯಾಸ ನೀಡಿ, ವಿಶೇಷವಾಗಿ ಈಗಿನ ಹೆಣ್ಣುಮಕ್ಕಳ ಆಧುನಿಕ ದಿರಿಸಿನ ಬಗ್ಗೆ ಹಾಗೂ ಅವರ ನಡಾವಳಿಕೆಗಳ ಬಗ್ಗೆ ಹಿಗ್ಗಾಮುಗ್ಗವಾಗಿ ಖಂಡಿಸಿ ಮನೆಗೆ ಬಂದನು. 
ಎದುರಿಗೆ ಅವನ ಮಗಳು ಲೋವರ್ ಜೀನ್ಸ್ ನಲ್ಲಿ, ಟ್ಯಾಟೂ ಹಾಕಿಸಿಕೊಂಡ ಸ್ಲೀವ್ ಲೆಸ್ ಟೀ ಶರ್ಟಿನ ಬಳೆಗಳೇ ಕಾಣದ ಕೈಯಲ್ಲಿ ಮೊಬೈಲ್ ಫೋನಿಡಿದು ಯಾರೊಂದಿಗೋ ಸ್ಪಾನಿಷ್ ನಲ್ಲಿ ಹರಟುತ್ತಿದ್ದಳು.



ಆತ ಜೀವನದಲ್ಲಿ ತುಂಬಾ ಸಂತೋಷದಿಂದಿದ್ದ. ಯಾರ ಮಾತೂ ಕೇಳುತ್ತಿರಲಿಲ್ಲ..!! ಎಲ್ಲರ ಕಾಲು ಎಳೆದುಕೊಂಡು, ರೇಗಿಸುತ್ತಾ... ಜಾಲಿಯಾಗಿದ್ದ..!! ನೋಡುಗರ ಕಣ್ಣಲ್ಲಿ ಆತನದು ಸೂಪರ್ ಪರ್ಸನಾಲಿಟಿ..!! 
ಆದರೆ ಸಮಯ ಅನ್ನೋದು ಅವನ ಜೀವನದಲ್ಲೂ ತನ್ನ ಪ್ರಭಾವ ಬೀರಿತ್ತು..! 
ಅವನ ಮನೆಯವರು, ಸ್ನೇಹಿತರೆಲ್ಲರೂ ಸೇರಿ ಅವನಿಗೂ ಮದುವೆ ಮಾಡಿಸಿಯೇ ಬಿಟ್ಟರು..!!
ಈಗ ಆತನೂ ಒಬ್ಬ ಸಾಮಾನ್ಯ ನಾಗರಿಕನಾಗಿದ್ದಾನೆ..!!



ಮಹಾನಗರದಲ್ಲಿ ಬರೀ ಜೀನ್ಸು, ಮಿಡ್ಡಿ ನೋಡಿ ಬೇಸತ್ತಿದ್ದ ಆತ ಲಂಗದಾವಣಿ ನೋಡಬೇಕೆಂದ ನಗರ ಬಿಟ್ಟು ಹಳ್ಳಿ ಸೇರಿದ..!!
ಅಲ್ಲಿಯೂ ಬರೀ ಚೂಡಿ, ನೈಟಿಯ ಹಾವಳಿ ಕಂಡು ಬೇಸರದಿಂದ ತಲೆ ಕೆರೆದುಕೊಂಡ..!!



ಆಕೆಯ ಮನೆಯಲ್ಲಿ ಪ್ರೀತಿ ಪ್ರೇಮದ ವಿಷಯದಲ್ಲಿ ಅವಳ ಅಪ್ಪನ ಕಡೆಯಿಂದ ಬಹಳೇ ಕಟ್ಟುಪಾಡು, ರಿಸ್ಟ್ರಿಕ್ಷನ್ನುಗಳು. ಆದರೂ ಹೇಗೋ ಪ್ರೀತಿಯ ಬಲೆಗೆ ಸಿಲುಕಿದ ಅವಳು ಮನೆಯವರಿಗೆ ಯಾರಿಗೂ ತಿಳಿಯದಂತೆ ಪ್ರೇಮಿಯೊಡನೆ ಸುತ್ತಾಡುತ್ತಿದ್ದಳು. ಒಮ್ಮೆ ಪ್ರಿಯಕರನೊಂದಿಗೆ ಸಿನೇಮಾಗೆ ಹೋದಾಗ ಅವಳ ಪಕ್ಕದ ಸೀಟಿನಲ್ಲಿ......,
ಅವಳ ಅಪ್ಪನೇ ಯಾವುದೋ ಸೆಟಪ್ ಜೊತೆ ಕುಳಿತಿದ್ದ..!!




ಹೊಸದಾಗಿ ಮದುವೆಯಾಗಿದ್ದ ಆತನು ಹನಿಮೂನಿನ ಬಗ್ಗೆ ಬಹಳೇ ಕುತೂಹಲಿ ಹಾಗೂ ಕಾತುರನಾಗಿದ್ದ..!!
ಅದಕ್ಕಾಗಿ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡ.. ನೆನಪಿನಿಂದ ಎಲ್ಲಾ ಪರಿಕರಗಳನ್ನು ತೆಗೆದುಕೊಂಡ..
ಕೊನೆಯದಾಗಿ ಹನಿಮೂನಿಗೆ ಹೋಗುವಾಗ ಬ್ಯಾಚುಲರ್ ಲೈಫ್ ಅಭ್ಯಾಸಬಲದಿಂದ ಹೆಂಡತಿಯನ್ನೇ ಮರೆತು ಬಿಟ್ಟು, ಒಬ್ಬನೇ ಹೋಗಿದ್ದ..!!



ಅದೊಂದು ಸಂದರ್ಶನ..,
ಹುಡುಗ ರಿಜೆಕ್ಟ್- ಕಾರಣ: ಹುಡುಗನ ಶರ್ಟಿನ ಮೇಲಿನ ಬಟನ್ ಬಿಚ್ಚಿತ್ತು...!!
ಹುಡುಗಿ ಸೆಲೆಕ್ಟ್- ಕಾರಣ: ಹುಡುಗಿಯ ಶರ್ಟಿನ ಮೇಲಿನ ಬಟನ್ ಬಿಚ್ಚಿತ್ತು...!!












4 comments:

  1. ಚಪ್ಪಾಳೆ... ಚಪ್ಪಾಳೆ...
    ಇಂತಹ ಒಂದು ವಿಶಿಷ್ಟ ಬ್ಲಾಗಿಗೆ!
    ಬ್ಲಾಗಿನ ಶೀರ್ಷಿಕೆಗೇ ಪೂರ್ಣ ಅಂಕಗಳು.

    ಎಲ್ಲ ಕಥೆಗಳು ಬದುಕನನ್ನು ಬಿಡಿಸಿಡುತ್ತಿವೆ!
    ಉದಾಹರಣೆ ಕೊಡಬೇಕೆಂಬ ಹಠದಲ್ಲೇ ಉದಾಹರೊಸುವುದಾದರೆ, ಭಾರತೀಯ ಸಂಸ್ಕೃತಿ ಉನ್ಯಾಸಗಾರನ ಕಥೆ ವಾಸ್ತವ ಚಿತ್ರಣ ತೆರೆದಿಡುತ್ತಿದೆ. ಪೊಳ್ಳು ಮಾತುಗಾರರಿಗೆ ಕಪಾಳ ಮೋಕ್ಷ ಮಾಡುವಂತೆ!

    ReplyDelete
    Replies
    1. :) ಥಾಂಕ್ಯೂ..
      ಬ್ಲಾಗೂ ಬೋರು ಅಂತಾ ಎರಡು ವರ್ಷದಿಂದ ಬರೆದಿರಲಿಲ್ಲ..
      ನನ್ನ ಬ್ಲಾಗ್ ಅಪ್ ಡೇಟಿಗೆ ಕಾರಣ ನೀವು.. ಕೇವಲ ನೀವು ಸರ್

      Delete
  2. ಆಹಾ..ಓಹೋ....ಛಂದದ ಬ್ಲಾಗು :) ..
    ಬರೆಯುತ್ತಿರಿ :)

    ReplyDelete