Monday 21 January 2013

ಬಂತಪ್ಪ ಬಂತು ರಾಖಿ ಹಬ್ಬ..!!

ಬಂತಪ್ಪ ಬಂತು ರಾಖಿ ಹಬ್ಬ..!! 
ಇದು ಸಹೋದರ ಸಹೋದರಿಯರ ಪ್ರೀತಿಯ ಸಂಕೇತ,, 
ಭಾಂದವ್ಯದ ಹಿಮಪಾತ.. 
ಶ್ರೀರಕ್ಷೆಯ ಧೂಮಕೆತಾ... 
ಹಿಂಗೆಲ್ಲ ಪ್ರಾಸಬದ್ದವಾಗಿ.. ನವಿರು ನಿರೂಪಣೆಯಿಂದ ಹೃನ್ಮನಗಳಿಗೆ ಆನಂದವಾಗಿ ಖುಷಿ ಪಡುವತರ ಬರಿಯಕ್ಕೆ ನಿಮ್ಮ ಉದುರುತ್ತಿರುವ ತಲೆ ಕೂದಲುಗಳ ಮೇಲೆ ಮತ್ತು ನಾಳಿನ ನಿಮ್ಮ ಬೊಚ್ಚು ಬಾಯಿಯಮೇಲೆ ಹಾಗೂ ಮೊಂಡು ಮೂಗಿನ ಮೇಲೆ ಆಣೆ ಮಾಡಿ ಹೇಳ್ತಾ ಇದ್ದೀನಿ ನಂಗಂತೂ ಬರಲ್ಲಾ..!! ತುಂಬಾ ಉದ್ದ ಬರಿದ್ರೆ ಯಾರು ಓದಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರಾನೆ ಅಲ್ವ?? ಆದ್ರೂ ನನ್ನತ್ರ ಸಮಯ ಇದೆ ಅದಕ್ಕೆ ಚಿತ್ರ ಹಿಂಸೆ ಕೊಟ್ಟು ಕೊಲ್ಲೋ ಮನಸಿದೆ.. ಹೆಚ್ಚಾಗಿ ನಿಮ್ ತಲೆ ತಿನ್ಬೇಕು ಅನ್ನಿಸ್ತಿದೆ ಅದಕ್ಕೆ ಈ ಪೋಸ್ಟು..!!
ದಯವಿಟ್ಟು ಸಹಿಸಿಕೊಳ್ಳಿ..!!
ನಾಳೆ ದಿನ ಹೇಗೋ ಏನೋ ಗೊತ್ತಿಲ್ಲಾ.. ಏನೋ ವಿಶೇಷತೆ ಇದೆ ಅಂತಾನು ನಂಗೆ ಅನ್ನಿಸ್ತಿಲ್ಲಾ..!! ಯಾಕಂದ್ರೆ ಇಂಥ ಹಬ್ಬದ ಆಚರಣೆ ಒಂದು ದಿನನೇ ಇರಬಹುದು ಆದ್ರೆ ಅದರ ಮಹತ್ವ ಒಂದು ದಿನಕ್ಕೆ ಸೀಮಿತಾನಾ?? ಕೇವಲ ಒಬ್ಬ ಹುಡುಗ ಕಾಡಿಸ್ತಾನೆ ಅವನ ನೋಟ ಸರಿ ಇಲ್ಲ ಅನ್ನೋ ಕಾರಣಕ್ಕೆ ರಾಖಿ ಕಟ್ಟೋ ಹುಡುಗಿಯರು ಎಷ್ಟು ಜನ ಇಲ್ಲ ನಮ್ಮಲ್ಲಿ..?? ಒಬ್ಬ ಹುಡುಗನಿಂದ ಏನಾದರು ಕೆಲಸ ಆಗುತ್ತೆ ಅನ್ನೋ ಸ್ವಾರ್ಥದಿಂದ ರಾಖಿ ಕಟ್ಟೋರೇನು ಕಡಿಮೆ ಇದಾರ ನಮ್ಮಲ್ಲಿ?? ಅದು ಏನೇ ಇದ್ರೂ ಅವರವರ ವಯಕ್ತಿಕ ವಿಚಾರ ನಾವು ನೀವು ಮಾತಾಡೋದು ತಪ್ಪಾಗತ್ತೆ ಬಿಡಿ..!!
ಅದ್ಕೆ ನಾನು ಇಂಥ ಗಂಬೀರ ವಿಚಾರದ ಬಗ್ಗೆ ಯೋಚನೆ ಕೂಡ ಮಾಡಲ್ಲ.. ! ಏನೇ ಇರಲಿ ನಾಳೆ ರಾಖಿ ಅಂತ ಇರೋ ಬರೋ ಹುಡುಗಿಯರೆಲ್ಲ ಇವತ್ತೇ ರಾಖಿ ತೊಗೊಳಕ್ಕೆ ಅಂಗಡಿ ಮುಂದೆ ಜಮಾಯಿಸಿ ಬಿಟ್ಟಿದಾರೆ..!! ಅದ್ಕೆ ನಮ್ಮ ಕೆಲವು ಹುಡುಗರು ಟ್ರಿಪ್ ಅಂತ ಕೆಲವರು ಕೆಲಸ ಅಂತ ಎಲ್ಲೆಲ್ಲೋ ಎಸ್ಕೇಪ್ ಆಗೊಗಿದಾರೆ..!! ಫೋನ್ ಮಾಡಿದ್ರೆ ಶನಿವಾರ ಬರ್ತೀನಿ ಮಗಾ ಫ್ರೆಂಡ್ ಶಿಪ್ ಡೇ ಗೆ ಅಂತಾರೆ..!! ಆ ಲೆವೆಲ್ ಗೆ ಭಯ ಪಟ್ಟಿದಾರೆ ಕೆಲವರು ನಾಳೆ ದಿನಕ್ಕೆ..!!
ಹೇಗೆ ಇರಲಿ ಹುಡುಗಿಯರು ಇಷ್ಟ ಬಂದವರಿಗೆ ರಾಖಿ ಕಟ್ಟಿ ಮಕ ಕುಟ್ಟಿ..!! ಹುಡುಗರು ಈಗಲೇ ಗಂಟು ಮೂಟೆ ಕಟ್ಟಿ ಇಲ್ಲಾ ನಾಳೆ ಮಕ ಮುಚ್ಕೊಂಡು ಓಡಾಡಿ..!! ಒಟ್ಟಿನಲ್ಲಿ 'ಹುಡುಗಿಯರಿಗೆ ಅಣ್ಣ ಆಗಿ ಬಿಟ್ಕೊಂಡೆ ರಮ್ಮು' ಅಂತ ಬಾರ್ ಗೆ ಹೋಗಿ ಬೀರ್ ಮಾತ್ರ ಕುಡಿಬೇಡಿ..!!
ನಾನು ನಾಳೆ ಫ್ರೀ ಇದ್ದೀನಿ ಹಾಗಂತ ಮಾರಾಟ ಮಾಡ್ಬೇಡಿ ಬೇಕಿದ್ರೆ ರಾಖಿ ಕಟ್ಟಿ..!! ಇಲ್ಲಾಂದ್ರೆ ಸಂಡೇ ನಮ್ಮದೇ ದಿನ ಮತ್ತೆ ಸಿಗೋಣಾ..!!

HAPPY RAKSHABHANDAN...!! TAKE CARE ♥ ♥

No comments:

Post a Comment