Monday 21 January 2013

"ಅಭಿಯಂತರ ದಿನದ ಶುಭಾಶಯಗಳು.."

"ಅಭಿಯಂತರ ದಿನದ ಶುಭಾಶಯಗಳು.."
ಗೊತ್ತಾಗೋಯ್ತು ಬಿಡ್ರೀ.. ಅರ್ಥ ಆಗದೆ ಬಾಯ್ ಬಾಯ್ ಬಿಟ್ಟಿದ್ದು ಸಾಕು....!!
ಕನ್ನಡಿಗರೆಲ್ಲರಿಗೂ ಕನ್ನಡಲ್ಲೇ ಹೇಳಬೇಕಲ್ವಾ? 
"ಹ್ಯಾಪಿ ಇಂಜಿನಿಯರ್ಸ್ ಡೇ" ಇವಾಗ ಅರ್ಥ ಆಗಿರ್ಬೇಕಲ್ಲಾ.. ಈಗಲೂ ಅರ್ಥ ಆಗಿಲ್ಲ ಅಂದ್ರೆ ಯಾವ್ದಾದ್ರು ಬಾಳೇ ಗಿಡಕ್ಕೆ ನೇಣು ಹಾಕ್ಕೊಳ್ಳಿ..!!
ಇಂಜಿನಿಯರ್ ಅಂದ್ರೆ 'ಬುದ್ದಿವಂತ' 'ಅಸಾಮಾನ್ಯ' ಅಂತ ಅರ್ಥ.. ಲಾಟಿನ್ ಅಮೇರಿಕನ್ ಭಾಷೆ ಇಂದ ಸಾಲ ತೊಗೊಂಡಿದ್ದು ಇವತ್ತು ಎಲ್ಲಾರೂ ಅದಾಗಕ್ಕೆ ತಲೆ ತಲೆ ಕೆಡಿಸ್ಕೋತಿದಾರೆ..!!
ಇಂಥ ಬುದ್ದಿವಂತರ ಪ್ರೊಫೆಶನ್ ಬಗ್ಗೆ ಜಾಸ್ತಿ ಹೇಳೋದ್ರಲ್ಲೇನು ಮಜಾ ಇಲ್ಲ,, ಆದ್ರೆ ಕೆಲವು ವಿಷಯಗಳು ಬೇರೆಯವರು ಹೇಳಿದ್ದು, ನಾನು ನನ್ನ ಕಿವಿಯಿಂದ ಕೇಳಿದ್ದು, ನೋಡಿದ್ದು, ಮಾಡಿದ್ದು ಎಲ್ಲಾ ಇಲ್ಲಿ ಉದುರಿಸ್ತೀನಿ.. ಇಷ್ಟ ಇದ್ದವರು ಆಯಿಕೊಂಡು ಓದಿಕೊಳ್ಳಿ..!!
* ಟೀ ಶರ್ಟುಗಳು ಮತ್ತು ಜೀನ್ಸೆ ಅವರಿಗೆ ಫಾರ್ಮಲ್ಸು ಅಂತೆ..!
* ಇಂಜಿನಿಯರ್ಸು ಅವರ ಬೈಕು ಕಾರನ್ನ ಅವರ ಹುಡುಗಿಯರಿಗಿಂತ ಜಾಸ್ತಿ ಮುಟ್ಟುತ್ತಾರಂತೆ..!
* ಅವರಿಗೆ ಗಣಿತ ಅರ್ಥ ಆಗುತ್ತೋ ಬಿಡತ್ತೋ ಯುಸ್ ಅಂತು ಮಾಡೇ ಮಾಡ್ತಾರೆ..!
* ಪೆಟ್ರೋಲ್ ರೇಟ್ ಜಾಸ್ತಿ ಆದ್ರೂ ತಲೆ ಕೆದಿಸ್ಕೊಳ್ಳದೆ ಇರೋ ಅವರು ವೆಕ್ಟರ್ ಗ್ರಾಪ್ಹ್ ಸರಿ ಆಗಿಲ್ಲ ಅಂದ್ರೆ ತಲೆ ಕೆಟ್ಟು ಸಿಕ್ ಸಿಕ್ಕಿದವರಿಗೆಲ್ಲ ಕಚ್ಚುತ್ತಾರಂತೆ..!
* ಅವರಿಗೆ ಚಿತ್ರ ಬರಿಯಕ್ಕೆ ಬರದೇ ಇದ್ದರು ಸಹಾ ಫಿಗರ್ ಅಂದ್ರೆ ತುಂಬಾನೇ ಇಷ್ಟ ಅಂತೆ..!!
* ಇಂಜಿನಿಯರ್ಸ್ ಗೆ ಕಾರು ಬಸ್ಸು ಮನೆ ಕರೆಂಟು ಎಲ್ಲ ಮಾಡಕ್ಕೆ ಗೊತ್ತಿದ್ರೂ ರಿಲೇಶನ್ ಶಿಪ್ ಮೆಂಟೈನ್ ಮಾಡಕ್ಕೆ ಗೊತ್ತಿಲ್ಲ ಅನ್ನೋ ಅಪವಾದವಿದೆ.!!
* ಅವರನ್ನು ಆಧುನಿಕ ಸನ್ಯಾಸಿಗಳೇ ಎಂದೂ ಬಣ್ಣಿಸಲಾಗುತ್ತಿದೆ..!!
* ಮಜಾ ಅಂದ್ರೆ ಇಂಜಿನಿಯರ್ಸು ಡಾಕ್ಟಾರೆಟು ತೊಗೊಂಡು ಡಾಕ್ಟರ್ ಆಗಬಹುದು..ಡಾಕ್ಟರ್ ಗೆ ಇಂಜಿನಿಯರ್ ಆಗಕ್ಕಾಗಲ್ಲಾ..!!
* ಇಂಜಿನಿಯರ್ಸು ಪ್ರಾಬ್ಲೆಮ್ ನ ಸಾಲ್ವ್ ಮಾದೊದಿಕ್ಕಿಂತ ಜಾಸ್ತಿ ಹೊಸಾ ಪ್ರಾಬ್ಲಂನ ಕ್ರಿಯೇಟ್ ಮಾಡ್ತಾರಂತೆ..!!
* ಆದ್ರೂ ಇಂಜಿನಿಯರ್ಗೆ ಹೊಳಿಯುವಷ್ಟು ಬೇರೆ ಯಾರಿಗೂ ಹೊಳಿಯೋಕೆ ಸಾಧ್ಯಾನೆ ಇಲ್ಲ ಅಂಥ ವೈಜ್ಞಾನಿಕವಾಗಿ ಪ್ರೂವೆ ಆಗಿದೆ ದಯವಿಟ್ಟು ಏನು ಅದು ಅಂತ ಮಾತ್ರ ಕೇಳಬೇಡಿ..!!

ಸಾಕಪ್ಪಾ ಸಾಕು ಇಂಜಿನಿಯರ್ ಆಗಿ ನನ್ನದೊಂದು ಕೊನೆ ಮಾತು, ಇಂಜಿನಿಯರ್ ಹತ್ರ ಹೋಗಿ "ಇಂಜಿನ್ ರಿಪೇರಿ ಮಾಡ್ಕೋಡಿ" ಅಂತ ಆಗ್ಲಿ, ಲಾಸ್ಟ್ ಅಲ್ಲಿ "ನೀವ್ ಯಾರು ?" ಅಂತ ಕೇಳೋದಾಗ್ಲಿ ಮಾಡಬೇಡಿ ಯಾಕಂದ್ರೆ ಅವ್ರು ಯಾರು ಅಂತ ಅವ್ರಿಗೆ ಗೊತ್ತಿರಲ್ಲಾ..!! ಆದ್ರೂ ಅವರಿಂದಾನೆ ಈ ಪ್ರಪಂಚ ಇಷ್ಟು ಸುಂದರ ಅನ್ನೋದು ನನ್ನ ಭಾವನೆ..!!

Dedicated to All Engineers..
Engineers Rockz.. ♥ ♥

No comments:

Post a Comment