Monday 21 January 2013

ಇದು ನನ್ನ ಲವ್ ಸ್ಟೋರಿ..

ಇದು ನನ್ನ ಲವ್ ಸ್ಟೋರಿ.. 
ಇದು ಫೇಕ್ ಅಲ್ಲಾ ಆದ್ರೆ ಸ್ವಲ್ಪ ವೀಕ್ ಅಷ್ಟೇ..!!
ಎಲ್ಲರೂ ಅವರವರ ಲವ್ ಸ್ಟೋರಿಲಿ ಅವರೇ ನಾಯಕ.. ನಂದು ಸ್ವಲ್ಪ ಡಿಫರೆಂಟ್ ಇಲ್ಲಿ ನಾನೇ ಖಳ ನಾಯಕ..!!
ಥೂ ಏನ್ age ಅಪ್ಪಾ ಇದು.. ತಲೆ ಏನೇನೋ ಮಾಡತ್ತೆ, ಕಣ್ಣು ಎಲ್ಲೆಲ್ಲೋ ನೋಡತ್ತೆ, ಹಾರ್ಟು ಹೇಗೇಗೋ ಓಡತ್ತೆ.. !! ಅದು ಯಾವ ಕೆಟ್ಟ ಗಳಿಗೆನೋ ಏನೋ ನಮ್ ಹುಡುಗಿಗೆ ಅನ್ಯಾಯವಾಗಿ ನನ್ ಮೇಲೆ ಲವ್ವಾಗೊಯ್ತಂತೆ..!! "ಸರಿ ಓಕೆ ಅದ್ಕೆ ನಾನ್ ಏನ್ ಮಾಡ್ಲಿ??" ಅಂತಾ ನಾನ್ ಕೇಳಿದೆ.. ಪಾಪ answer ಇಲ್ದೆ "ಏನು ಇಲ್ಲ" ಅಂತ ಸುಮ್ನಾಗಿದ್ಲು..!!
ನಂದೂ ಅವಳದ್ದು ಸುಮಾರು ಮೂರುವರೆ ವರ್ಷಗಳ ಪರಿಚಯ.. ಬೇಕಿದ್ರೆ ಸ್ನೇಹ ಅಂತನಾದ್ರೂ ಅಂದ್ಕೊಳಿ.. ಅವಳಿಗೆ ನನ್ ಮೇಲೆ ಏನು ಆಗಬಾರದಿತ್ತೋ ಅದು ಆಗೋಯ್ತು.. "ಹೆಂಗೆ? ಏನು? ಯಾಕೆ ?" ನಾನೇ ಕೇಳಿದೆ ಅವಳಿಗೆ.. ಅವಳ ಉತ್ತರ ಗೊತ್ತಿಲ್ಲಾ..!!
ನನಗೆ ಗೊತ್ತು ಇಲ್ಲಿ ಬರೆದಿರೋದನ್ನ ಅವಳು ಓದೇ ಓದುತ್ತಾಳೆ..!! ಆದರೆ ಗೊತ್ತಿಲ್ದೆ ಇರುವವಳ ಹಾಗೆ ಇದ್ದು ಬಿಡ್ತಾಳೆ.. ನಿಜಾ ಹೇಳ್ತಿದೀನಿ.. ನಾನು ಬಹಳಷ್ಟು ಹುಡುಗೀರಿಗೆ ♥ symbol ಕಳ್ಸಿದಿನಿ.. Dear ಅಂದಿದೀನಿ..ಡಾರ್ಲಿಂಗ್ ಅಂತಾನೂ ಹೇಳಿದೀನಿ.. ಮುಂದೇನೂ ಹೇಳ್ತೀನಿ..!! ಆದರೆ ಅವಳಿಗೆ ಅದು ಹೆಂಗಾಯ್ತೋ ನನಗಂತೂ ಗೊತ್ತಾಗ್ತಿಲ್ಲಾ.. ಹಾಗಂತ ನಾನೇನು ಅವಳತ್ರ ಸಲುಗೆ ತಗೊಂಡಿಲ್ಲಾ.. ಜಾಸ್ತಿ Care ಕೂಡ ತೋರ್ಸಿಲ್ಲಾ..!! ಅವಳಾಗೇ ಫೋನ್ ಮಾಡೋಳು ಮೆಸೇಜು ಕಳಿಸೋಳು.. ನಾನ್ ಮಾಡದೆ ಇದ್ರೆ.. "ಪ್ಲೀಸ್ ದಿನಕ್ಕೆ ಒಂದಾದರು ಮೆಸೇಜು ಮಾಡು" ಅಂತ ಗೊಗರಿಯೋಳು..!! "ಯಪ್ಪಾ ಇವಳಿಗೆನಾಯ್ತು " ಅಂತಾ ನಾನು ಸರಿ ಅಂತ ನೆನಪಾದಾಗೆಲ್ಲ ಕಳಿಸ್ತಿದ್ದೆ..!! ಅವಳು ನನ್ನ ಮದುವೆ ಆಗ್ತಿಯಾ ಅಂತ ಕೇಳಿದಾಗಲೇ ನಂಗೆ ಗೊತ್ತಾಗಿದ್ದು ... ಇದು 'ಅದು' ಅಂತಾ.. ಆಮೇಲೆ ಮಲಕ್ಕೊಂಡ್ ಯೋಚನೆ ಮಾಡಿದೆ ಅವಳ ಮೆಸೇಜು ಅದರ ಅರ್ಥಗಳು.. ಅವಳ ಮಾತು..ಎಲ್ಲಾ ನೋಡಿ ಓದಿ Conform ಆಯ್ತು ಇದು Love ಕೇಸೇ ಅಂತಾ..ಆದರೆ ಏನು ಮಾಡೋದು ನನ್ ಮನಸ್ಸಲ್ಲಿ ಯಾವತ್ತು ಹಾಗೆ ಯೋಚನೇನೆ ಬಂದಿರಲಿಲ್ಲಾ.. ಅಷ್ಟರಲ್ಲಾಗಲೇ ಮೂರು ಸಲ ಮಾಲಲ್ಲಿ..,ಎಂಟು ಸಲ ಪಾರ್ಕಲ್ಲಿ.., ಎರಡು ಸಲ ಹೋಟೆಲಲ್ಲಿ.., ನಾಕು ಸಲ ಮೆಜೆಸ್ಟಿಕ್ಕಲ್ಲಿ.. ಒಂದು ಸಲ ಶಂಕರ ಮಠದಲ್ಲಿ ಇನ್ನು ಒಂದೆರಡು ಸಲ ನವರಂಗ್ ಸುತ್ತಮುತ್ತ ರಾಮಕೃಷ್ಣ ಆಶ್ರಮದ ಹತ್ರ ಮತ್ತೆ ಎಲ್ಲೆಲ್ಲೋ ಸುತ್ತಿಬಿಟ್ಟಿದ್ದೆ.. ಅವಳು ನನ್ನ Birthday ಗೆ ಕೊಟ್ಟಿದ್ದ Love -birds ನ ನಮ್ಮನೆ showcase ಒಳಗೆ ಇಟ್ಟಿದ್ರು ಗೊತ್ತಾಗಿರಲಿಲ್ಲ...!!
ಒಂದು ಮಾತಿದೆ 'ಹುಡುಗಿಯರ ಮೆಚ್ಚುಗೆ ಸ್ನೇಹ ಆಗಿರತ್ತೆ.. ಅದೇ ಹುಡುಗರಲ್ಲಿ ಪ್ರೇಮ ಆಗಿರುತ್ತೆ' ಅಂತ ನಂದಿಲ್ಲಿ Reverse -case ಆಗೋಯ್ತು.. ಅವಳು Direct ಆಗಿ ಹಿಂಗೆ ಕೇಳಿದಾಗ..
ಇರೋ ಬರೋರ್ದೆಲ್ಲ ಕಾಲು ಎಳ್ಕೊಂಡು.. ಅವರಿವರ್ನ ಉರಿಸ್ತಾ 'ಚುಮ್ಮಾ ಅದುರುದಿಲ್ಲಾ' ಅಂತ ತಮಿಳ್ ಡೈಲಾಗು ಹೊಡ್ಕಂಡು.. ಕೈಲಿ ಕಾಳು ಹಿಡ್ಕೊಂಡು.. ಏನೇನೋ ಹೇಳ್ಕೊಂಡು ಹೇಗೇಗೋ ಆಡ್ತಾ ಇದ್ದ ನನ್ ಹಾರ್ಟು ಕಪ್ಪೆ ತರ ಬಾಯಿಗೆ ಬಂದು.. ಎಮ್ಮೆ ತರ ಕೂಗಾಡ್ಕೊಂಡು.. ಎಲ್ಲೋ ಹೊಂಟೋಯ್ತು..!!
ನಾನು ಅವಳಿಗೆ ಹೇಳ್ದೆ ಆಗಲ್ಲ..!! ನನ್ನ ಮುಂದೆ ದೊಡ್ಡ ಗುರಿ ಇದೆ..ಆದರೆ ಹಾಳಾದ್ದು ತುಂಬಾನೇ ದೂರ ಇದೆ..!! ಹತ್ರ ಹೋಗಕ್ಕೆ ದಾರಿನು ಕಳ್ದೊಗಿದೆ..!! ಸಧ್ಯಕ್ಕೆ ಏಕಾಂಗಿ ಜೀವನಾನೆ ನಂಗೆ ಪಾವನ..!! ಇದೆಲ್ಲ ಹೇಳಿದ್ರೆ ಅವಳಿಗೆ ಅರ್ಥ ಆಗಿಲ್ಲ.. ಅನ್ಸತ್ತೆ.. ಕಾಯ್ತೀನಿ ಅಂತಾಳೆ.. ಏನಂತ ಹೇಳೋದು ಅವಳಿಗೆ..ನಾನ್ ಯಾವತ್ತು ಅವಳನ್ನ ಆ ತರ Treat ಮಾಡೇ ಇಲ್ಲಾ.. ಮಾಡೋದು ಇಲ್ಲಾ.. ಅವಳು ಒಳ್ಳೆ ಗೆಳತಿ.. ಆದ್ರೆ ನಂಗೆ ಅವಳ ಮೇಲೆ ಅಂತ Special ಭಾವನೆಗಳೇನು ಬಂದಿಲ್ಲ.. ನಾನು ಅವಳ Life ಅಲ್ಲಿ ಇರ್ತೀನಿ.. ಆದ್ರೆ partner ಆಗಿ ಸಾಧ್ಯ ಇಲ್ಲಾ..!! ಅವಳು ಮಾಡಿದ್ದು ತಪ್ಪು... ಹೇಳಿದ್ದು ತಪ್ಪು ಅಂತ ಅರ್ಥ ಅಲ್ಲಾ.. ಅವಳ Selection ಬೇಡಾ ಅಂದ್ರೂ ನಾನು Appreciate ಮಾಡಲೇ ಬೇಕಾದ ಅನಿವಾರ್ಯತೆ ಇದೆ ಈಗ..!! ಅವಳಿಗೆ ಪ್ರೀತಿ ಅಂದ್ರೆ ಗೊತ್ತು.. ನನಗೆ ಜೀವನ ಅಂದ್ರೆ ಗೊತ್ತು.. ಮೊದ್ಲೇ ನಂಗೆ Seriousness ಇಲ್ಲ.. ಬಚಾವಾಗಿಬಿಟ್ಟಳು...!!
ನಾನಿವತ್ತು ಅವಳ ಹೆಸರು ಹೇಳಲ್ಲಾ.. ಯಾಕಂದ್ರೆ ಇದು ನನ್ನ ಅವಳ ಮಧ್ಯೆ ಇದ್ದಿದ್ದನ್ನ ನಿಮ್ಮೆದುರು ಇಡ್ತಾ ಇದ್ದೀನಿ..ಅವಳಿಗೆ ನಾನು Friend ಆಗಿ ಬೇಡಾ ಅಂದ್ಲು..ಸರಿ ಅಂತ ದೂರ ಇದೀನಿ..!!
ದೂರ ಇದ್ರೂ ಚೆನ್ನಾಗಿರಲಿ.. ಅವಳ ಬಾಳಲ್ಲೂ ಇವತ್ತಲ್ಲ ನಾಳೆ.. ರಾಕೇಟು ಹಚ್ಚೋನು ಬಂದೆ ಬರ್ತಾನೆ.. ಈಗ ಅವಳ ಹೆಸರು ಹೇಳಿ ಬತ್ತಿ ಕೀಳೋ ಕೆಲಸ ನಾನ್ ಮಾಡಲ್ಲಾ..!! ನೂರು ಜನರನ್ನ ಒಂದೇ ತರ ಪ್ರೀತ್ಸೋದಕ್ಕಿಂತ ಒಬ್ಬೋಬ್ರನ್ನು ನೂರು ನೂರು ತರ ಪ್ರೀತ್ಸೋದು Better ಆಲ್ವಾ?? ನನ್ನಿಂದ ಅವಳಿಗೆ ನೋವಾಗಿದೆ.. ಬೇಜಾರಾಗಿದೆ.. ಹಾಗಂತ ಕನಿಕರ ತೋರ್ಸಿ ಲವ್ ಮಾಡೋಕಾಗಲ್ಲಾ.. ಅವಳ ಜೊತೆ ಆಟ ಆಡಿ ಸುತ್ತಾಡಿ ಮರೆತು ಬಿಡಕ್ಕೆ..ಅವಳ heart ಏನು playground ಕೂಡ ಅಲ್ಲಾ..!!
ಸಧ್ಯಕ್ಕೆ ನಮ್ಮಿಬ್ರ ಮಧ್ಯೆ ಒಂದು ಗ್ಯಾಪ್ ಇದೆ ಅಷ್ಟೇ ಈ ಗ್ಯಾಪ್ ನ ಹೇಗೆ ಮುಚ್ಚತ್ತೆ ಅಂತ ಕಾಲಾನೇ ಹೇಳ್ಬೇಕು..!!
ನಾನೇನಾದ್ರು ಈ ವಿಷಯದಲ್ಲಿ ತಪ್ಪು ಮಾಡಿದ್ನ?? ಅದ್ನ ನೀವು ಹೇಳ್ಬೇಕು..!!ನನಗನಿಸಿರೋ ಹಾಗೆ ನಾನು ನಡ್ಕೊಂಡಿದೀನಿ.. ತಪ್ಪಿದ್ದರೆ ತಿಳಿ ಹೇಳಿ..!!

3 comments:

  1. ELLA MANASU ONDHE TARA IRALA YELLA HERO HAGOKE HAGALLA NIMMA MANASU THUMABA SPEEDAGIDE NIMDENU THAPPILA ADHARE HA HUDIGIYA MANASANNA ARTHA MADKONDRALLA GREAT

    ReplyDelete