Monday 21 January 2013

ಗಡ್ಡ ಪುರಾಣ..!!

ಈ ಹಾಳಾದ ಗಡ್ಡ ನಮ್ಮಂಥ ಹುಡುಗರಿಗೆ ಯಾಕೆ ಬರ್ತದೋ? ಮೊದ್ಲೇ ನಾವು ಈ ವಯಸ್ಸಲ್ಲಿ ತುಂಬಾನೇ ಬ್ಯುಸಿ ಅಂಥದ್ರಲ್ಲಿ ಅದ್ನ ಬೇರೆ ಕೆರೆದು ಕೆರೆದು ಕಿತ್ತಾಕೋ ಎಕ್ಷ್ತ್ರಾ ಕ್ಯಾಮೆ ಬೇರೆ..!! ಕಿತ್ತಾಕಿದಷ್ಟು ಮತ್ತೆ ಮತ್ತೆ ಬೆಳಿತಾನೆ
ಇರತ್ತೆ ಅದರ ಮಕ ಕಿತ್ತ..!! ನಮ್ ಬದ್ಲು ಈಗಿನ ಕಾಲದ ಹುದುಗಿಯರಿಗದ್ರು ಇದ್ದಿದ್ರೆ ತುಂಬಾ ಕುಷೀ ಪಡ್ತಿದ್ರು ಅನ್ಸತ್ತೆ ಯಾಕಂದ್ರೆ ಅವರಿಗೇನು ಬ್ಯೂಟಿ ಪಾರ್ಲರ್ ಗೆ ಹೋಗಿ ಎಷ್ಟು ಕೆಲಸ ಮಾಡಿಸ್ಕೊಂದ್ರು ಸಾಕಾಗಲ್ಲ ಕೆಲವರಂತೂ ದಿನಾ ಹೋಗ್ತಾರೆ,, ಏನು ಸಿಕ್ಕಿಲ್ಲ ಅಂತ ಇರೋ ಬಾರೋ ಹುಬ್ಬು. ಕಣ್ಣು-ರೆಪ್ಪೆ ಏನೆಲ್ಲಾ ತೆಗಿಸ್ಕೊತಾರೆ ಕರುಮ ಕರುಮ..!!
ಅದೇ ಹುಡುಗರಿಗಾದ್ರೆ ಇಷ್ಟ ಇಲ್ಲ ಅಂದ್ರು ಕೆಲವು ಒತ್ತಡ ಗಳಿಂದ ತೆಗಿಯಲೇ ಬೇಕಾದ ಪರಿಸ್ಥಿತಿ..!! ಇಲ್ಲಾಂದ್ರೆ ಸುಮ್ಸುಮ್ನೆ ಕತೆ ಕಟ್ಟಿ ಮೃತ ಸಮುದ್ರದಲ್ಲೂ ಮುಳುಗೋ ಲೆವೆಲ್ ಗೆ ಕಷ್ಟ ಕೊಡ್ತಾರೆ..!!ಬುದ್ದಿಜೀವಿಗಳ ಬುದ್ದಿ ಗಡ್ಡದ ಒಳಗಿರುತ್ತೇನೋ ಅನ್ನೋ ಅನುಮಾನ ಇನ್ನು ಇದೆ ನಂಗೆ..ಯಾಕಂದ್ರೆ ಎಲ್ಲ ಬುದ್ದಿಜೀವಿಗಳು ಗಡ್ಡ ಬಿಟ್ಟಿದಾರಲ್ಲಾ..!! ಅದನ್ನ ಕೆರಕೊಂಡಾಗಲೇ ಏನೋ ಲಿಂಕ್ ಸಿಕ್ಕುತ್ತೇನೋ ಅವರಿಗೆ..!!
ಆದ್ರೂ ಎಲ್ಲ ಬುದ್ದಿ ಜೀವಿಗಳು ಚಿಂತಕರು ಮೇಧಾವಿಗಳು ಗಡ್ಡ ಬಿತ್ತಿಡ್ನ ನೋಡಿ ನಾನು ಬಿಡೋಣ ಆಗಳದ್ರು ಸ್ವಲ್ಪ ಹವಾ ಮೇನ್ ಟೆನ್ ಮಾಡಣ ಅಂತ ಟ್ರೈ ಮಾಡಿದ್ರೆ ಚೈನೀಸ್ ತೈಪೆಯ ಜಿರಳೆ ತಿನ್ನೋ ಗುಡ್ಡಗಾಡು ಜನರ ತರ ಒಂದೇ ಕಡೆ ಬೆಳಿಯಕ್ಕೆ ಶುರು ಆಯ್ತು ಹಾಳಾದ್ದು..!! ಅದ್ಕೆ ತೆಗೆದು ಬಿಟ್ಟೆ.. ಕೆಲವರ ಗಡ್ಡ ಬಿಟ್ಟು ಮೀಸೆ ತೆಗಿತಾರೆ ಒಂದು ತರಾ ಚೆಂಗೂಲಿ ತರ ಚೆನ್ನಾಗೆ ಕಾಣಿಸ್ತಾರೆ..!! ಕೆಲವರದು ಮೇಕೆ ಗಡ್ಡ ಆದ್ರೂ ಮೀಸೆ ಕಂಬಳಿ ಹುಳದ ತರ ಚೆನ್ನಾಗಿರತ್ತೆ..!! ಇನ್ನು ಕೆಲವರದು ಕಳೆ ಕಿತ್ತ ಹಾಕಿ ಗ್ರೌಂಡ್ ತರ ಇದ್ರೆ ಮತ್ತೆ ಕೆಲವರದು ತಲೆ ಎಲ್ಲಿ ಮಕ ಎಲ್ಲಿ ಅಂತಾನೆ ಅನುಮಾನ ಬರತ್ತೆ..!! ಅದರಲ್ಲೂ ಎಂಥೆಂತ ಡಿಜೈನು ಸ್ಟೈಲು ಇದೆ ಆದರೆ ಇದು ಕೇವಲ ಹುಡುಗರ ಆಸ್ತಿ.. ಹುಡುಗಿಯರು ಇದರಲ್ಲಿ ಕಾಂಪಿಟೇಷನ್ನು ಕೊಡೋಹಾಗಿಲ್ಲ..!!
ಆಯ್ಯೋ ಈಗ ನೆನಪಾಯ್ತು ನಾಳೆ ನನ್ನ ಗಡ್ಡ ತೆಗಿಲಿಲ್ಲ ಅಂದ್ರೆ ಬಾಸು ಉಗಿದು ಅಗಿದು ಹಾಕ್ತಾರೆ ಅದ್ಕೆ ನಾಳೆ ಶೇವಿಂಗ್ ಗೆ ಬ್ಲೇಡ್ ತರಬೇಕು ಈಗ..!! ಸಾಕಪ್ಪ ಸಾಕು ಈ ಗಡ್ಡದ ಕಿರಿಕಿರಿ..!!

No comments:

Post a Comment