Monday 21 January 2013

ಹುಳಾ ಬಿಡೋ ಲೇಖನ..

ಮೊನ್ನೆ ಮಾಡಕ್ಕೆ ಕ್ಯಾಮೆ ಇಲ್ದೆ - ನಾನು ನಮ್ ಹುಡುಗ ಸಾಯಂಕಾಲದ ಟೈಮ್ ಅಲ್ಲಿ ಮರಿಯಪ್ಪನ್ ಪಾಳ್ಯದ ಪಾರ್ಕ್ ಅಲ್ಲಿ ವಾಕಿಂಗ್ ಮಾಡ್ತಾ ಇದ್ವಿ..!! ಯಪ್ಪಾ ಯಪ್ಪಾ ನನ್ನ ಎರಡೂ ಕಣ್ಣುಗಳು ಅಂಥದ್ದೇನೂ ಅಲ್ಲಿ ನೋಡಿ ನಾವು ಹುತಾತ್ಮರಾಗುತ್ತೀವಿ " ನಮ್ಮನ್ನ ಬಿಟ್ಟು ಬಿಡಿ ಬಾಸ್ಸ್ " ಅಂತ ಸಾಯೋಕೆ ಹೊಂಟ್ ಬಿಟ್ಟಿದ್ವು....!! ಆಮೇಲೆ ಹೆಂಗೋ ಕಷ್ಟ ಪಟ್ಟು ನಮ್ ಅತೃಪ್ತ ಶಾಸಕರ ಮನ ಒಲಿಸೋ ತರ ಅದ್ಕೆ ಸಮಾಧಾನ ಮಾಡಿ ನನ್ನತ್ರನೆ ಇನ್ನೂ ಇಟ್ಟುಕೊಳ್ಳುವಲ್ಲಿ ಯಶಸ್ಹ್ವಿಯಾದೆ....!! 
ಅಂಥದ್ದು ಏನು ನೋಡಿದವು ನನ್ನ ಕಣ್ಣುಗಳು ಅಂತ ಕೇಳಿದ್ರೆ ನನ್ನ ಬಾಯಿ ಕೂಡ ಹೇಳಲ್ಲ ಅಂತ ಪ್ರೊಟೆಸ್ಟ್ ಮಾಡ್ತಾ ಇದೆ.. ಅದರ ಬಾಯಿಗೆ ರಸಗುಲ್ಲ ಹಾಕಾ..!!
ಹೋಗ್ಲಿ ಬಿಡಿ.. ನಮಗ್ಯಾಕೆ ಅದರ ವಿಷ್ಯ ಅಲ್ವ? ಕತ್ತಲೆಯಲ್ಲಿ ಪೊದೆಗಳು ಅಲ್ಲಾಡುತ್ತವೆ.. ಗಿಡಮರದ ಶಬ್ದಗಳು ತಂಗಾಳಿಲಿ ತೇಲಿ ಬರುತ್ತವೆ.. ಎಲ್ಲೋ ನಾಯಿಗಳು ನರಿಗಳ ತರ ಕೂಗುತ್ತವೆ.. ಚಿತ್ರ ವಿಚಿತ್ರ ಶಬ್ದಗಳು... ಗಿಜಾ ಪಿರಮಿಡ್ ನೆರಳುಗಳು.. ಐಫೆಲ್ ಟವರ್ ನ ಪ್ರತಿಬಿಂಬಗಳು..!! ಮಂಗಳ ಗ್ರಹದಲ್ಲಿ ಉಪಗ್ರಹವೂ ಗುರುತಿಸಲಾಗದ ನೀರಿನ ಕಣಗಳು.. ವ್ಯೂಮ ಯಾನಿಗಳ ಭಾಹ್ಯಾಕಾಶ ನಡಿಗೆಯೂ... ಕಿಲಿಪಿಲಿ ಚಿವಚಿವ ಅನ್ನುವ ಚಿಟ್ಟೆಯೋ..ಅಥವಾ ಹಾವುರಾಣಿ ಮೊಟ್ಟೆಯೋ ಏನು ಗೊತ್ತಾಗದ ದಟ್ಟ ಕತ್ತಲು...!!
ನಮ್ಮದು ಮುಕ್ತ ಪ್ರಪಂಚ..!! ಇಲ್ಲಿ ಎಲ್ಲವೂ ದುಡ್ಡು ಅನ್ನೋ ಪೇಪರ್ ಕೊಟ್ರೆ ಸಿಗುತ್ತಂತೆ... ಯಾರ್ ಬೇಕಿದ್ರೂ ಏನ್ ಬೇಕಾದರು ತೊಗೊಬಹುದಂತೆ.. ಅದರೂ ಜನರಿಗೆ ಜಿಗುಪ್ಸೆ ಯಾಕಾಗತ್ತೆ ಅಂತ ಕಾರಣ ಹುಡುಕುತ್ತ ಹುಡುಕುತ್ತ ಹುಚ್ಚರಾದ ಪ್ರೊಫೆಸರ್ ಏಕೋ ಇತ್ತೀಚಿಗೆ ಕಾಣಿಸ್ತಿಲ್ಲ..!! ಹುಡುಕೋಕೆ ನಮಗೆ ನಿಮಗೆ ಸಮಯವಾದರೂ ಎಲ್ಲಿದೆ ಸ್ವಾಮಿ.. ಎಲ್ಲರೂ ಅವರವರ ಅದು-ಇದು ಮಾಡೋದರಲ್ಲಿ ಬ್ಯುಸಿ ಅಲ್ವ? ಈ ಹಾಳಾದ ತಲೆಲ್ಲಿ ಯೋಚನೆ ಏಕೆ ಬರುತ್ತೋ? ಓಪನ್ ದುನಿಯಾ.. ಹಾಗಂತ ಎಲ್ಲಾನು ಎಲ್ಲ ಕಡೆ ಓಪನ್ ಮಾಡಬಾರದು ಅಂತ ಗೊತ್ತಾಗಲ್ವ ನಮ್ ಜನ'ಗೋಳಿ'ಗೆ ? ಇಂಥ ಪ್ರಶ್ನೆ ಕೇಳೋ ಅಮಾಯಕ ಮುಗ್ದ ಬಾಲಕನಿಗೆ ಯಾರಾದ್ರೂ ಹಿರಿಯರು ಬುದ್ದಿ ಜೀವಿಗಳು ಉತ್ತರ ಕೊಟ್ಟು ಪುಣ್ಯ ಕಟ್ಗಲ್ರಪ್ಪಾ..!!

No comments:

Post a Comment