Monday 21 January 2013

ಮೊಡವೆ ರಾದ್ದಾಂತ..!!

ತುಂಬಾ ಬೇಜಾರಲ್ಲಿದೀನಿ..
ಜಾಸ್ತಿ ಬರಿಯಲ್ಲ ಹೆಚ್ಚಿಗೆ ಕೊರಿಯಲ್ಲಾ..!!
ಅದು ಕಾರಣ ಏನಪ್ಪಾ ಅಂತಂತಂತಂತಂತಂತ್......ದರೆ, ಇವತ್ತು ಬಸ್ಸಲ್ಲಿ ಒಂದು ಸುಂದರ ಹುಡುಗಿನ ನೋಡಿದೆ.!!
ಅವಳದ್ದು ಎಲ್ಲಾನು ಸೂಪರಾಗಿತ್ತು ( ಮುಕದ ಬಗ್ಗೆ ಹೇಳ್ತಾ ಇದ್ದೀನಿ )..! ಆದ್ರೆ ಅವಳ ಸುಂದರ ಮುಕದ ಮೇಲಿನ ಮೂಗಿನ ಮೇಲೆ ಒಂದೇ ಒಂದು ದಪ್ಪ ಮೊಡವೆ ಆಗೋಗಿತ್ತು..!! ಅದನ್ನ ನೋಡಿದಾಗಿಂದಾ ಇನ್ನೂ ಕೂಡ ನನ್ ಹಾರ್ಟು ಗೊಳೋ ಗೊಳೋ ಅಂತ ಅಳ್ತಾ ಇದೆ ಕಣ್ರೀ..!!
ಹುಡುಗಿಯರಿಗೆ ಮೊಡವೆ ಆದ್ರೆ ಎಷ್ಟು ನೊಂದುಕೊಳ್ತಾರೆ ಅಂತ ಹುಡುಗರಿಗೆ ತಾನೇ ಜಾಸ್ತಿ ಗೊತ್ತಾಗೋದು..!! ಮುಕದ ಮೇಲೆ ಗುಳ್ಳೆ ಆದ್ರೆ... ಮೊಡವೆ ಅಂತೆ ಅದೇ ಬೇರೆ ಕಡೆ ಆದ್ರೆ ಅದನ್ನೇ ಕಜ್ಜಿ ಅಂತಾರೆ.. ಈ ತರ ಮೊಡವೆಗಳಿಗೂ ಬೇಧ-ಭಾವ..!! ಆದರೂ ಮೊಡವೆಗಳನ್ನ ಕೀಳೋದ್ರಲ್ಲಿ ಏನೋ ಒಂಥರಾ ಮಜಾ.. ಅದನ್ನ ಮುಕದ ಮೇಲೆ ಕಲೆ ಮಾಡ್ಕೊಂಡವರ ಹತ್ರಾನೆ ಕೇಳಬೇಕು..!! ಪ್ರಾಯದಲ್ಲಿರೋ ಎಲ್ಲಾ ಮುದುಕ ಮುದುಕಿ ಆಂಟಿ ಅಂಕಲ್ಲು ಇನ್ನು ಯಾರ್ಯಾರು ಇದ್ದಾರೋ ಏಲ್ಲರಿಗೂ ಇದು ಕಾಮನ್ನು..!! ಅದು ಬಂದ್ರೇನೆ ದೊಡ್ಡೋರು ಆದಂಗೆ ಅಂತ ನಮ್ಮಜ್ಜಿ ಹೇಳ್ತಾ ಇದ್ರು..!!
ಪ್ರಪಂಚದ 80 % ಟೀನೆಜರ್ಸು ಮೊಡವೆ ಇಂದ ಮೆಂಟಲ್ ತರ ಅಡ್ತಾರಂತೆ..!! ಮೊಡವೆನೇ ಆಗದೆ ಇರೋ ಮುದುಕೀಗೆ ಮುತ್ತು ಕೊಟ್ರೆ ಸಾವೇ ಬರಲ್ಲ ಅಂತ ನಮ್ ಸ್ವಾಮಿಗಳು ಹೇಳ್ತಾ ಇದ್ರು..!! ಎಷ್ಟೊಂದು ಜನ ಮೊಡವೆನೇ ಒಡವೆ ಮಾಡ್ಕೊಂಡು ನಮ್ಮ ನಡುವೆ ಇದಾರೆ,, ಅವರ ಗೊಡವೆ ನಮಗೀಗ ಬೇಡವೇ ಬೇಡ..!!
ನಮ್ಮಮ್ಮ ಹೇಳ್ತಿದ್ರು ಯಾರಾದ್ರೂ ಹುಡುಗಿ ಕಣ್ಣು ಹಾಕಿದ್ರೆ ನಮ್ಮಂತ ಒಳ್ಳೆ ಹುಡುಗರಿಗೆ ಮೊಡವೆ ಆಗತ್ತಂತೆ.. ನನಗೂ ನಾಲ್ಕೈದು ಮೊಡವೆ ಆಗಿದೆ... ಯಪ್ಪಾ ಅದಿಕ್ಕೆ ಮೊದ್ಲು ಮನೆಗೋಗಿ ನಮ್ಮಜ್ಜಿ ಹತ್ರ ದೃಷ್ಟಿ ತೆಗಿಸ್ಕೋಬೇಕು..!! bye..!!

No comments:

Post a Comment