Wednesday 30 January 2013

ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು..
ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!!
ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!!
ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!!
ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು..
" ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",,
"ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!!
"ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!!
ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು..
ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು..
ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು...
.
.
.
.
.
.
.
.
.
.
.
.
.
.
.
" ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ"
ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!!

No comments:

Post a Comment