Monday 21 January 2013

ದೇವೀ ಕಾಪಾದಮ್ಮಾ..!!

ನೆನ್ನೆ ಅಷ್ಟೇ ಭರ್ಜರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಯ್ತು..!! ನನ್ ಜೀವನದಲ್ಲೇ ಮೊದಲ ಸಲ ಇಷ್ಟು ಅದ್ದೂರಿಯಾಗಿ ಅದು ಬೆಂಗಳೂರಿನಲ್ಲಿ ಮಹಿಳೆಯರ ಹಬ್ಬ ಅಂತಾನೆ ನಾನು ತಿಳ್ಕೊಂಡಿದ್ದ ವರಮಹಾಲಕ್ಷ್ಮಿ ಪೂಜೆನೂ ಮಾಡ್ತಾರೆ ಅಂತ ಗೊತ್ತಾಗಿದ್ದು..!!!
ಯಾವಾಗ್ಲೂ ಜೀನ್ಸು ಟಿಶರ್ಟು ಹಾಕಿಕೊಲ್ಲೋ ನಮ್ ಬೆಂಗಳೂರು ಬಾಲೆಯರು ಸೀರೆ ಲಂಗ ಇತ್ಯಾದಿ ಇತ್ಯಾದಿ ಹಾಕಿಕೊಂಡು ನನ್ ಕಣ್ಣುಗಳನ್ನ ಪಾವನ ಮಾಡಿ ಬಿಟ್ರು ..!! ರೋಡಿನ ಎಲ್ಲಾ ಕಡೆ ಗಲಗಲ ಶಬ್ದಗಳು.. ಹೆಣ್ಣುಮಕ್ಕಳ ಗೆಜ್ಜೆ ಶಬ್ದ ಕಣ್ರೀ ಅದು.. ನನ್ನ ಕಿವಿಗಳಿಗೂ ಅಲ್ಪ ಸ್ವಲ್ಪ ಪುಣ್ಯ ಬಂತು ಅನ್ನಿ..!! ದಿನಾನು ಹೀಗೆ ಯಾವದಾದ್ರು ಮಹಿಳಾ ಪ್ರದಾನ ಹಬ್ಬನೋ ಪೂಜೇನೋ ಇದ್ರೆ ವರ್ಣಿಸಕ್ಕೆ ಆಗೋಲ್ಲ ಬಿಡಿ ಆ ವೈಭವಾನ..!! ಆದ್ರೂ ದಿನಾ ಒಂದೇ ತಾರಾ ಇದ್ರೆ ಮಜಾ ಇರೋಲ್ಲ ಅಲ್ವಾ??
ಇಷ್ಟೆಲ್ಲಾ ಪೂಜೆ - ದಾನ ಕೇವಲ ಒಂದೇ ದಿನಕ್ಕೆ ಸೀಮಿತಾನ?? ಸ್ವಾರ್ಥಕ್ಕೊಸ್ಕರನೆ ಪೂಜೆನಾ ಲಕ್ಷ್ಮಿ ಇನ್ನು ಜಾಸ್ತಿ ಜಾಸ್ತಿ ಕೊಡ್ಲಿ ಅಂತ? ಗೊತ್ತಿರೋ ಅಕ್ಕಪಕ್ಕದ ಮನೆ ಅವ್ರಿಗೆ ಕೊಡೊ ದವಸ ಧಾನ್ಯ, ಬ್ಲೌಸ್ ಪೀಸ್ , ಕೋಸಂಬರಿ ಇತ್ಯಾದಿ ಇತ್ಯಾದಿಗಳನ್ನ ನಮ್ಮ ದೇಶದ ಬಹುಸಂಖ್ಯಾತ ಬಡವರಿಗೆ ಯಾಕೆ ದಾನದ ಹೆಸರಲ್ಲಿ ಸೇರತಾ ಇಲ್ಲ?
ಪ್ರಪಂಚದ ಶ್ರೀಮಂತರು ಎಲ್ಲಾರು ಲಕ್ಷ್ಮಿ ಪೂಜೆ ಮಾಡಿನೇ ಕೊಟ್ಯಾಧಿಶರು ಆಗಿದ್ದ???? ಬೆಂಗಳೂರಿನ ಶಿರಸಿ ಸರ್ಕಲ್ ಹತ್ರ ಇರೋ ದೇವಸ್ಥಾನದ ಮುಂದೆ ೧೩ ವರ್ಷದಿಂದ ಭಿಕ್ಷೆ ಬೇಡ್ತಾ ಇರೋ ಲಕ್ಷ್ಮಿ ಅಜ್ಜಿ ಹತ್ರ ಯಾಕೆ ದುಡ್ಡಿಲ್ಲ? ೪೦ ವರ್ಷಗಳಿಂದ ದೇವಿಯ ಮೂರ್ತಿಗೆ ಹೂವಿನ ಹಾರ ಕಟ್ಟುತ್ತ ಇರುವ ಕಮಲಜ್ಜಿ ಯಾಕೆ ಚಿನ್ನದ ನೆಕ್ಲೇಸು ಡಾಬು ಹಾಕಿಕೊಲ್ಲೋಕೆ ಆಗಿಲ್ಲ?
ಏನೋ ಅನ್ನಿಸ್ತು ಕೇಳಿದೆ..!! ಜೀವನ ಯಾವಾಗ್ಲೂ ಒಂದೇ ತರ ಇರೋಲ್ಲ ಅಲ್ವಾ? ನಿಮಗೂ ಏನಾದ್ರು ಇದರ ಬಗ್ಗೆ ಹೇಳ್ಬೇಕು ಅನ್ನಿಸಿದ್ರೆ ನನ್ನ ಪ್ರಶ್ನೆಗಳಿಗೆಲ್ಲ ದಯವಿಟ್ಟು ತೋಚಿದ್ದನ್ನ ಇಲ್ಲಿ ಗೀಚಿ..!!

No comments:

Post a Comment