Monday 21 January 2013

ಇದ್ಯಾಕೆ ಹಿಂಗೆ???

ನೆನ್ನೆ ಇವಿನಿಂಗ್ ಫ್ರೆಂಡ್ಸ್ ಫೋನ್ ಮಾಡಿ 
"ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲ ಅಡ್ಡ ಹತ್ರ ಬಂದು ಬಿಡು ಫುಲ್ಲು ಕುಡಿದು ಕುಣಿದು ಕ್ರಾಂತಿ ಮಾಡಣ, ಹೊಸವರ್ಷದಲ್ಲಿ ಭಾರೀ ಬದಲಾವಣೆ ತರೋಣ.. 2013 ನ್ಯೂ ಇಯರ್ ಸೆಲೆಬ್ರೇಶನ್ ಗ್ರಾಂಡ್ ಆಗಿ ಮಾಡೋಣ" ಅಂದ್ರು 
"ಸರಿ ಕಣ್ರೋ, ಹಂಗೆ ಮಾಡಣ" 
ಅಂತ ಹೇಳಿ ಫೋನ್ ಕಾಲ್ ಕಟ್ ಮಾಡಿದೆ..
ರಾತ್ರಿ ಹನ್ನೊಂದು ಮೂವತ್ತು ಆಯಿತು.. ಹೋಗೋಕೆ ಭಾರಿ ಬೋರು.. ಯಾಕೋ ಮನದೊಳಗಿದ್ದ ನಾಗವಲ್ಲಿ ತರದ ಡ್ಯುಯಲ್ ಪರ್ಸನಾಲಿಟಿ ಮೈಂಡು...
"ಹೋಗಬೇಡ ಕಣೋ ಚಚೀನ" ಅಂದಂಗಾಯ್ತು.
ಏನೋ ಅಕೆಷನ್ನು, ಟೈಟ್ ಆಗಿ ಕುಡಿಯೋಣ, ಲೈಟ್ ಆಗಿ ಕುಣಿಯೋಣ ಇರೋಬರೋ ಹುಡುಗ್ರು ಹುಡುಗೀರು ಎಲ್ಲಾರ್ನು ಸಮಾನ ರೀತೀಲಿ ತಬ್ಕಂಡು ವಿಶ್ ಮಾಡಿ ಜೀವನಾನ ಪಾವನ ಮಾಡ್ಕೊಂಡು ಬರೋಣಾ ಅಂದ್ಕೊಂಡೆ...!!
ಅಷ್ಟರಲ್ಲಿ ಅಶರೀರವಾಣಿಯೊಂದು ಕಿವೀಲಿ ನಿಂತು " ಲೋ ನೀನು ಜವಾಬುದಾರಿಯುತ ನಾಗರಿಕ ಆಗೋ, ಬೇರೆಯವರ ಚಿಂತೆ ಮಾಡಬೇಡಾ, ಎಲ್ಲೂ ಹೋಗಬೇಡಾ,ಸ್ವಾರ್ಥಿ ಆಗು, ಪಕ್ಕದ ಮನೇಲಿ ಬೆಂಕಿ ಬಿದ್ರೆ ಕಿಟಕಿಯಲ್ಲಿ ನೋಡು,, ಅದೇ ಬೆಂಕಿ ನಿಮ್ಮನೆಗೆ ಬಿದ್ರೆ ಬಾಯಿಬಾಯಿ ಬಡ್ಕೊಂಡು ಅಳು, ಯಾರೂ ಸಹಾಯಕ್ಕೆ ಬಂದಿಲ್ಲ ಅಂತ ದೂರು.. ಇದೆ ನಿನ್ನ ಹೊಸ ವರ್ಷದ ಅಜೆಂಡಾ ಆಗಿರಲಿ... ಎಲ್ರೂ ಹೇಗಿದಾರೋ ನೀನು ಹಾಗೇ ಬದುಕೋದ ಕಲಿ.. ಮತ್ತೇನು ಬದಲಾವಣೇ ಆಗೋಲ್ಲ " ಅಂತ ಹೇಳಿ ತಲೆ ಮೇಲೆ ಕುಟ್ಟಿ ಮಲಗಿಸಿ ಬಿಡ್ತು..
ಕಣ್ಣು ಬಿಟ್ಟಾಗ ಬೆಳಿಗ್ಗೆ ಆಗೋಗಿತ್ತು.... ಓ ಮೈ ಗ್ವಾಡ್.. ಅಂತ ಸೀದಾ ಬಾಗಿಲು ತೆಗೆದು ಹೊರಗೆ ಹೋಗಿ ಆಕಾಶ ನೋಡಿದೆ, ಏನು ಬದಲಾವಣೆ ಕಾಣಿಸಲಿಲ್ಲ, ಹಕ್ಕಿಯ ಚಿಲಿಪಿಲಿಲು ವ್ಯತ್ಯಾಸ ಇರಲಿಲ್ಲ.. ಮನೆ ಪಕ್ಕದ ದೇವಸ್ಥಾನದಲ್ಲಿ ಜನ ಇದ್ರೂ,,ಅಲ್ಲಿ ಮುಂದೆ ಹೂ ಮಾರುತಿದ್ದ ಅಜ್ಜಿ ಮುಕದಲ್ಲಿ ಬದಲಾವಣೆ ಇರಲಿಲ್ಲ.. ಯಾಕೋ ಬೇಜಾರಾಯ್ತು ನಮ್ ಹುಡುಗರ ಮೇಲೆ ನೆನ್ನೆ ಏನೂ ಬದಲಾವಣೆ ತರಲಿಲ್ಲಾ... ಅಂತ ಅಲ್ಲೇ ಪಕ್ಕದಲ್ಲಿ ಮಲಗಿದ್ದ ನಾಯಿಗೆ ಕಲ್ಲು ಹೊಡೆದೆ.. ಅದು ಕೂಡ ಕಚ್ಚೋಕೆ ಬಂದಿಲ್ಲ.. ಪಾಪಾ ಕುಯ್ಯ್ ಕುಯ್ಯ್... ಅಂತ ಓಡಿ ಹೋಯ್ತು..
ಪುಚ್.. ಇದು ಕೂಡ ಮಾಮೂಲಿ ದಿನ ಏನೂ ಪವಾಡ ನಡೀಲಿಲ್ಲ.. ಯಾಕೋ ಈ ಜಿಂದಗಿಲೇ ಮಜಾ ಇಲ್ಲಾ.. ನಾನಾದರೂ ಬದಲಾಗೋಣ ಅಂದ್ರೆ.. ಹೇಗೆ? ಅನ್ನೋ ಪ್ರಶ್ನೆ ಭೂತರೂಪದಲ್ಲಿ ಬೆಳೆಯತೊಡಗಿತು....
ಸುಮ್ನೆ ಮನೆ ಒಳಗೆ ಬಂದು ನೋಡಿದೆ... ಅಲ್ಲಿ ಗೋಡೆ ಮೇಲಿದ್ದ ಹೊಸ ಕ್ಯಾಲೆಂಡರ್ 'ನಾನು ಬದಲಾಗಿದೀನೋ' ಅಂತ ಅಣಕಿಸಿದಂತಾಯ್ತು..
ಹಳೇ ಕ್ಯಾಲೆಂಡರ್ ಎಲ್ಲೋಯ್ತು ಅಂತ ಹುಡುಕ್ತಾ ಇದ್ದೆ ಅಷ್ಟರಲ್ಲಿ ನಮ್ಮಜ್ಜಿ....
"ಹೊರಗೆ ತುಂಬಾ ಚಳಿ ಇದ್ದು ಮಗಾ,, ಬಿಸೀ ಬಿಸೀ ನೀರು ಕಾಜು.. ಸ್ನಾನ ಮಾಡಾ ತಮಾ..."
ಅಂತ ಹೇಳಿದ್ದು ಕೇಳಿಸಿತು!! ಅವರ ಕೈಯಲ್ಲಿ ಕೈಯಲ್ಲಿ ಅರ್ದ ಹರಿದ ಕ್ಯಾಲೆಂಡರ್ ಇತ್ತು..
ಇನ್ನರ್ಧ ನನ್ನ ಸ್ನಾನದ ಬಿಸೀ ನೀರಿಗೆ ಒಲೆಯಲ್ಲಿ ಸುಡ್ತಾ ಇತ್ತು...!!

No comments:

Post a Comment