Monday 21 January 2013

ಹುಮ್ಮ್...

ನಾವು ಬೆಳೆಯಲೇಬಾರದು.. ಮಕ್ಕಳಾಗೆ ಇರಬೇಕಿತ್ತು..!! ಕೊನೆಪಕ್ಷ ಮಾನಸಿಕವಾಗಿ ಆದರೂ ..!!
ತೋರಿಕೆಯ ಪ್ರಪಂಚ ಆಡಂಬರದ ಜೀವನ.., ನಮ್ಮೋ ಳಗೆ ನಾವೇ ನಾಶವಾಗಿ ಬಿಟ್ಟಿದಿವೇನೋ ಅನ್ನಿಸುವಷ್ಟು ಬದಲಾವಣೆ..!! 
ಈ ಹಾಸ್ಯ ಪ್ರಪಂಚದಲ್ಲೂ ಕೂಡ ಭಾವುಕತೆಯ ಬೇಡಿ... ಕಣ್ಣೀರ ಕೊಡಿ..!! ಒಂದು ಸಣ್ಣ ಖುಷಿಗಾಗಿ ಹುದುಕುತ್ತಿರುತ್ತೀವಿ ಮೊಟುದ್ದದ ಹಳೆ ಬ್ರಾಂಡ್ ಗಣೇಶ ಬೀಡಿ..!!
ಈ ಕಾಲದಲ್ಲಿ.. ನಮ್ಮ ಭಾವಿ ವೈದ್ಯರು ಕೂಡ ಕಾಪಿ ಮಾಡಿ ಪರೀಕ್ಷೆ ಬರಿತಾರೆ.. ದುಡ್ಡಿನ ಮೇಲೆ ರೋಗಾನ ಅಳಿತಾರೆ..
ನಾನು ನೋಡಿರೋ ಹಾಗೆ ಬನಶಂಕರಿ ಬಿ ಡಿ ಎ ಕಾಂಪ್ಲೆಕ್ಷ್ ಹತ್ರ ಬಿಳೀಕೋಟನ್ನ ಹಾಕ್ಕೊಂಡು ರೋಡಲ್ಲಿ ಅಲಿಯೋ ಇವರಿಗೆ ಕಾಫಿ ಡೇ ಕ್ಲಬ್ಬು ಪಬ್ಬು ತಿರುಗೋ ಇವರಿಗೆ ಅಲ್ಲೇ ಅದೇ ಬೀದಿಯಲ್ಲಿ ಹಸಿವಿನಿಂದ ನರಳುತ್ತಿರುವ ಬಡ ಮಕ್ಕಳು ಕಾಣಿಸೋದೆ ಇಲ್ವಾ?? ಇದ್ಕೆ ನಾವು ನೀವು ಏನು ಮಾಡಕ್ಕಗೊಲ್ಲಾ ಅಂತ ಸುಮ್ನೆ ಇರಬೇಕಾ? ofcourse ನಮಗೆ ಎಲ್ಲಾನು ಸರಿ ಮಾಡೋಕೆ ಆಗೋಲ್ಲಾ ಆದ್ರೆ ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿದೆ..!!

ನಂಗು ಒಂದು ಆಸೆ ಇದೆ..
" Atleast ಒಂದು ಚಿಕ್ಕ ಅನಾಥ ಹುಡುಗಿನ ದೇಶವೇ ಹೆಮ್ಮೆ ಪಡುವತರ
ಬೆಳೆಸಬೇಕು...!! "

ಬದಲಾವಣೆ ಮಾಡಕ್ಕೆ ಆಗೋಲ್ಲಾ ಅಂತ ಸುಮ್ನಿರೋದಕ್ಕಿಂತ ನಾವೇ ಬದಲಾಗೋದು ಒಳ್ಳೇದಲ್ವೆ?
ಸುಡಾನ್ , ಉಗಾಂಡ ದಂಥ ದೇಶದಲ್ಲೂ ಸುಖವಿದೆ.. ಅಮೇರಿಕಾ ಇಂಗ್ಲೆಂಡ್ ಅಲ್ಲೂ ಕಷ್ಟ ಇದೆ..!! ಹಾಗಂತ ಅದರ ಬಗ್ಗೆ ಯೋಚಿಸೋದಕ್ಕಿಂಥ ನಾವೆಷ್ಟು ಕುಷೀಯಾಗಿದಿವಿ ನಮ್ಮಿಂದ ಎಷ್ಟು ಜನ ಸುಖದಿಂದ ಇದ್ದಾರೆ ಅಂತ ಒಮ್ಮೆ ಯೋಚಿಸಿದರೆ,, ನಮ್ಮ ಪ್ರಪಂಚ ಸುನಾಮಿ ಇಂದ ಮುಳುಗುತಾ ಇದ್ರೂ ಇಜು ಹೊಡ್ಕೊಂಡು, ಅಲ್ಲೇ ಕಾಲು ಎಳ್ಕೊಂಡು ನೆಮ್ಮದಿಯಿಂದ ಸಾಯೋದು ಮೇಲಲ್ಲವೇ??


No comments:

Post a Comment