Saturday 28 March 2015

ಗೊಂದಲ
ಮೈಮರೆತು ನೋಡುತಾ ನಿಂತೆ ಅವಳನ್ನು..
ಅವಳ ನಗುವನ್ನು..
ಆ ತುಂಟ ಕಣ್ಣನ್ನು..
ಆ ಪುಟಾಣಿ ಸ್ಕರ್ಟನ್ನು..
ಸ್ಕರ್ಟ್ ಮೇಲಿದ್ದ ಹೂವನ್ನು..
ಮುದ್ದು ಮಾಡಬೇಕೆನಿಸಿತು..
ಕೆನ್ನೆಗೆ ಮುತ್ತು ಇಡಬೇಕೆನಿಸಿತು..
ಅಪ್ಪಿ ಎತ್ತಿಕೊಳ್ಳಬೇಕೆನಿಸಿತು..
ಆದರೂ ನೋಡುತ್ತಲೇ ನಿಂತಿದ್ದೆ ಅವಳನ್ನು..
ಆದರವಳು ಮಿಸುಕಾಡಲೇ ಇಲ್ಲ..
ನಗು ನಿಲ್ಲಿಸಲೂ ಇಲ್ಲ..
ಆ ಮೇಲೆ ಗೊತ್ತಾತು,
ನಾ ನೋಡುತಾ ನಿಂತದ್ದು,
ಬಾಲೆಯಲ್ಲವದು,
ಬಟ್ಟೆ ಅಂಗಡಿಯ ಬೊಂಬೆಯೆಂದು..!!
ಅಂದಿನಿಂದ ಇಂದಿನವರೆಗೂ
ಯೋಚಿಸುತ್ತಿರುವೆ
ನಾ ಮುಗ್ದನೋ
ಪೆದ್ದನೋ
ಭಾವಜೀವಿಯೋ ಎಂದು...!!


ಚಚ್ಚಿ ಚುಟುಕ..
ಅಖಂಡ ಆಂಧ್ರವ ಒಡೆದು
ಮಾಡಿದರು ಎರಡು ಹೋಳು..!!
ಆದರೂ ಯಾಕೆ ನಿಲ್ಲುತಿಲ್ಲ
ಅಲ್ಲಿಯ ಜನರ ಗೋಳು??


ಫ್ಲಾಪಿ ಕಥೆ smile emoticon
ಏನೋ ಸಾಧಿಸಬೇಕೆಂದು ಎಡೆಬಿಡದೇ ಹೋರಾಡುತ್ತಿದ್ದ..!
ಹೋರಾಡುತ್ತಾ ಹೋರಾಡುತ್ತಾ
ಏನು ಸಾಧಿಸಬೇಕೆಂಬುದನ್ನೇ ಮರೆತಿದ್ದ...!!


ಹೆಣ್ಮನಸು
ಆನ್ ಲೈನ್ ನಲ್ಲೇ ಇದ್ದರೂ
ಇನ್ ಬಾಕ್ಸ್ ಗೆ ಬರುತಿಲ್ಲ...
ಹೇಳಲು ನೂರ್ ಮಾತು ಇದ್ದರೂ
ತುಟಿ ಬಿಚ್ಚಿ ಹೇಳುತಿಲ್ಲ..
ಬರೀ ಮೌನ..
ಬರೇ ದುಃಖ..
ಒಳಗೊಳಗೇ ಅಳುತ್ತಾ
ಕೊರಗುತಿಹಳು ನನ ನಲ್ಲೆ..!!


ಚಚ್ಚಿ ಚುಟುಕ
ಹೂಗಳ ಮುಂದೆ ನಿಂತು
ನಾನೇ ಸುಂದರಿ ಎಂದಳಾ
ಕಾಲೇಜು ಕನ್ಯೆ..!
ಪಕಳೆಗಳಲ್ಲೇ
ಪಕಪಕನೆ ನಕ್ಕು
ಸೈಲೆಂಟಾದ
ಈ ಹೂಗಳೇ ಧನ್ಯೆ..!!


ಚಚ್ಚಿ ಲೈನು
ಅವಳ ಕೈ ಸ್ಪರ್ಷದಲೇ
ನೂರೊಂದು ಮಿಂಚು...
ಅವಳ ಅಪ್ಪುಗೆಯಲಿ ನಾ
ಕರಗಿದೆ ಇಂಚಿಂಚೂ....!!


ಫ್ಲಾಪಿ ಕಥೆ
ಆತನಿಗಿವತ್ತು ಐವತ್ತರ ಸಂಭ್ರಮ..
ಆದರೆ ಸಂತೋಷಕ್ಕಿಂತಲೂ, ತಾನು 'ಮುದುಕನಾಗುತ್ತಿದ್ದೇನೆ'
ಅನ್ನೋ ವಿಚಾರವೇ ಹೆಚ್ಚು ಕೊರೆಯುತ್ತಿತ್ತು..!!


ರೋಗಿ ಬಯಸಿದ್ದೂ ನರ್ಸನ್ನ..
ಡಾಕ್ಟರು ಕಳಿಸಿದ್ದೂ ನರ್ಸನ್ನ...
ಆದ್ರೆ, ರೋಗಿ ರಸಿಕನಾಗಿದ್ದ..
ನರ್ಸು ಮುದುಕಿಯಾಗಿದ್ಲು..!!


ಮಗ ಮೈನರ್ ಆಗಿದ್ದಾಗ, ಅಪ್ಪ ಉಳಿತಾಯ ಖಾತೆ ಓಪನ್ ಮಾಡಿ ಅದರಲ್ಲಿ ಹಣ ಹಾಕುತಿದ್ದ...
ಮಗ ಮೇಜರ್ ಆದ, ಮೇಲೆ ಹಣವೆಲ್ಲ ತೆಗೆದು ಅಕೌಂಟ್ ಕ್ಲೋಜ್ ಮಾಡಿ ಬಿಟ್ಟ..!!

ಚಚ್ಚಿ ಲೈನು

ಏಕೆ ಹೋದೆ ಗೆಳತಿ ನೀ,,
ಮದುವೆ ಮಾಡಿಕೊಂಡು..?
ಹಳೆಯ ಒಡಾಟ,
ಸಿಡುಕು ಕಿತ್ತಾಟ,
ಆ ಹುಸಿ ಮುನಿಸು,
ಲಜ್ಜೆಯಾ ಕಣ್ಣಗಳ ಸೊಗಸು,
ಕೈ ಕೈಯ ಹಿಡಿದು,
ಜೊತೆಯಾಗಿ ನಡೆದು,
ಮಾತಾಡಿದ ಮಾತುಗಳೆಷ್ಟೋ..
ನಿದ್ದೆಗೆಟ್ಟ ದಿನಗಳೆಷ್ಟೋ..
ಎಲ್ಲಕ್ಕೂ ಸಾಕ್ಷಿ ನನ್ನ ಒಲವೊಂದೆ..
ಮೆದುಳಿನ ಬಲಹೀನ ನರವೊಂದೇ..!
ನಾಳೆ ಆರಂಭ ನಿನ್ನ ಹೊಸ ಜೀವನ..
ಬಾಳಿಗೆ ಬರುವ ಹೊಸ ಯಜಮಾನ..
ನಿನ್ನ ಲೈಫು ಸೆಟ್ಲು..
ನನ್ನ ಕೈಲಿ ಬಾಟ್ಲು..
ನನ್ನೊಲವ ನೀ ಕಳಕೊಂಡೆ..
ಅದಕ್ಕೆ ನನ್ನಲ್ಲುಳಿದದ್ದು ಅನುಕಂಪವೊಂದೆ..
ನಿನ್ನ ಜೀವನ ನಿನಗೆ..
ನನ್ನದು ನನಗೆ..
ಹಳೆ ಹುಡುಗಿ ಹೋದಳೆಂದು
ಅಳುವುದರಲ್ಲಿ ಸುಖವೇನಿದೆ??
ಅವಳಿಗಾಗಿ ಕಳಕೊಂಡ ಹಣ,
ಸಮಯ ಮರಳಿ ಬರುವುದೆ??
ನನ್ನ ಬಾಳಲ್ಲೂ ಹೊಸ ಹುಡುಗಿ ಬರುತಾಳೆ
ಹೊಸಗನಸ ತರುತಾಳೆ
ನನ್ನೆಲ್ಲಾ ಪ್ರೀತಿಯು ಅವಳಿಗೇ ಮೀಸಲು..!!
(ನಾನು ಭಗ್ನ ಪ್ರೇಮಿ ಎಂದು ಹೇಳಿಕೊಳ್ಳುವ ಸ್ವಯಂಘೋಷಿತ ಕವಿಗೆ ಇದು ಅರ್ಪಣೆ)

ಫ್ಲಾಪಿ ಕಥೆ ... frown emoticon
ಶಾಲಾ ಕಾಲೇಜಿನ ಪಾಠಗಳನ್ನು ಓದಿ ಅರಗಿಸಿಕೊಂಡಿದ್ದ ಆತನಿಗೆ,
ಜೀವನ ಪಾಠ ಅರ್ಥವಾಗಲೇ ಇಲ್ಲ..!!


own emoticon
ಸಂದರ್ಶಕ ಕೇಳಿದ "ಮೇಡಮ್ ನೀವ್ಯಾಕೆ ಡಬ್ಬಿಂಗ್ ವಿರೋಧಿ?"
"ನೋಡಿ ಇವ್ರೆ ಇಫ್ ಡಬ್ಬಿಂಗ್ ಕೇಮ್ ಅವರ್ ಲಾಂಗ್ವೇಜ್ ವಿಲ್ ಸ್ಪಾಯಿಲ್ ಅಂಡ್ ಮೋರೋವರ್ ಅವರ್ ಕಲ್ಚರ್ ಹಾಳಾಗತ್ತೆ, ಸೋ ಐ ಅಪೋಸ್ ಡಬ್ಬಿಂಗ್" ಎಂದು ಕಾಲ ಮೇಲೆ ಕಾಲು ಹಾಕಿ ಕುಂತಳು ಆ ಮಿನಿ ಸ್ಕರ್ಟ್ ನ ನಟಿ..!!


ಲರ್ನಿಂಗ್ ಲೈನು

ಬಸ್ ಸ್ಟಾಪಲ್ ನಿಂತಾಗ
ಅವಳನ್ನು ಕಂಡಾಗ
ಹೊಡಕೊಂತು ನನ್ನೆದೆಯ ಮೀಟ್ರು...
ಅವಳದೋ ಸೂಪರ್ರು ಸ್ಟ್ರಕ್ಚರ್ರು
ಆದರೂ ನಂಗಿಡಿಸಿದ್ದು ಮುಂಗುರುಳು..
ಕಣ್ಗಳ ಸುತ್ತ ಗಾಗಲ್ಸು ಫಿಟ್ಟು
ನನಗಾಕರ್ಷಿಸಿದ್ದು ಅವಳಣೆಯ ಬೊಟ್ಟು..
ಫೋನಲ್ಲಿ ಕಂಗ್ಲೀಷು
ಕಾಲಲ್ಲಿ ಲೆಗ್ಗಿನ್ಸು
ನೋಡುತ್ತ ನಿಂತಾಗ ಮಿಸ್ಸಾಯ್ತು ಬಸ್ಸು..


ಚಚ್ಚಿ ಲೈನು

ಮುನಿಸಿಕೊಂಡಿರುವಳು ನನ್ನ ನಲ್ಲೆ..!
ತುರ್ತಾಗಿ ಕೊಡಬೇಕಿದೆ ಚುಂಬನದ ಜಲ್ಲೆ..!
ಆಗೊಮ್ಮೆ ಈಗೊಮ್ಮೆ ಕೆಣಕುವಾ ನೋಟ..!
ಇಬ್ಬರಿಗೂ ಈ ರಾತ್ರಿ ಬೆಳದಿಂಗಳೂಟ...!!


ಫ್ಲಾಪಿ ಕಥೆ.. frown emotico
ಹೆಸರಾಂತ ವ್ಯಕ್ತಿಯ ಅಂತಿಮ ದರ್ಶನಕ್ಕೆಂದು ದೂರದ ಊರಿಂದ ಬಂದಿದ್ದ ಆತ,
ಜನಜಂಗುಳಿಯ ಕಾಲ್ತುಳಿತಕ್ಕೆ ಸಿಲುಕಿ ಶವವಾದ..!!


ಆತ ಕನಸುಗಳನ್ನು ಬಹಳವಾಗಿ ಕಟ್ಟಿದ್ದ..
ನನಸಾಗಿಸಿಕೊಳ್ಳಲು ಪರಿಶ್ರಮ ಪಡೋದನ್ನೇ ಬಿಟ್ಟಿದ್ದ...!!



No comments:

Post a Comment