Saturday, 28 March 2015

ಇಣಚಿಯ ಕಥೆ
ಅಳಿಲಿನಂತೆ
ಉಲ್ಲಾಸದಿ
ಓಡಾಡುತ್ತ,
ಮರಗಳ ಮೇಲೆ
ನಲಿದಾಡುತ್ತ,
ಕಂಬಗಳ ಮೇಲೆ
ವಿಹರಿಸುತ್ತಾ,
ಎಲ್ಲಾ ಬಂಧನಗಳಿಂದ
ಮುಕ್ತವಾಗಿ
ಬಾಳಬೇಕೆಂದು
ಯೋಚಿಸುತ್ತಿರುವಾಗಲೇ
ವಿಧಿ ಲಿಖಿತ
ಬೇರೆಯೇ ಇತ್ತು
ಮೆರೆದಾಡಿದವ
ಮಣ್ಣಾದ
ಶಾಕು ಬಡಿದು
ಹೆಣವಾದ
ಆಗಿದ್ದವ ಈಗಿಲ್ಲ
ಅಳಿದ ಅಳಿಲಿಗೊಂದು
ಅಶ್ರುತರ್ಪಣ..
ನಮ್ಮ ಅನುಕೂಲಕ್ಕೆ
ನೀ ಬಲಿಯಾದೆ
ನಿನ್ನಂತ ಕೊಟ್ಯಾಂತರ ಜೀವಿಗಳ
ಶಾಪ ನಮ್ಮ ಮೇಲಿದೆ..!
ಆದರೂ ಕಳಕಳಿಯ ಮನವಿ
ಮತ್ತೆ ಹುಟ್ಟಿ ಬಾ ಗೆಳೆಯ
ಆಗಾಗ ಸಾವನ್ನೂ ಮರೆತು..!!

No comments:

Post a Comment