Saturday 28 March 2015

Never Give Up
ಅಬ್ಬಾ..! ಅದ್ಧೂರಿ ಶಿರಸಿ ಉತ್ಸವ ಮುಗೀತು ಅನ್ನುತ್ತಿದ್ದಂತೆ ಶುರುವಾಗಿದೆ ಕದಂಬೋತ್ಸವ. ನಮ್ಮ ರಾಜ್ಯ ಸರ್ಕಾರವು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸುತ್ತಿರುವ ಉತ್ಸವಗಳಲ್ಲಿ ಇದೂ ಒಂದು. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುವುದು ನಮಗೆಲ್ಲಾ ಗೊತ್ತೇ ಇದೆ. ಕದಂಬ ವಂಶ ಕನ್ನಡದ ಮೊಟ್ಟಮೊದಲ ರಾಜವಂಶ. ಇದರ ಸ್ಥಾಪಕ ಮಯೂರವರ್ಮ. ಮೂಲತಃ ಬ್ರಾಹ್ಮಣನಾಗಿದ್ದ ಮಯೂರಶರ್ಮ ಪಲ್ಲವರ ಮೇಲಿನ ಸೇಡಿನಿಂದ ಕ್ಷತ್ರೀಯನಾಗಿ ಮಯೂರವರ್ಮನಾಗಿ ಕದಂಬ ರಾಜ್ಯ ಕಟ್ಟಿದ ಅನ್ನೋದು ಇತಿಹಾಸ. ಕದಂಬರು ನಂತರ ಬೆಳೆದ ಬಗೆ, ಆಡಳಿತದ ಬಗ್ಗೆ, ಕಲೆ, ಧರ್ಮ, ಶಿಲ್ಪಕಲೆ ಇತ್ಯಾದಿಗಳ ಬಗ್ಗೆ ನಮ್ಮ ಆದಿ ಕವಿಯೂ ಹಾಡಿ ಹೊಗಳಿದ್ದೂ ನಮಗೆಲ್ಲಾ ಗೊತ್ತಿದೆ. ಆದರೆ ಇಲ್ಲಿ ಹಲವರು ಗಮನಿಸದ ಒಂದು ಅಚ್ಚರಿದಾಯಕ ಸಂಗತಿಯಿದೆ. ಅಂದು ಮಯೂರಶರ್ಮ ರೊಚ್ಚಿಗೇಳದೇ ಇದ್ದಲ್ಲಿ, ಕಷ್ಟಪಡದೇ ಇದ್ದಲ್ಲಿ ನಮಗಿಂದು ಕದಂಬೋತ್ಸವದ ಸಂತೋಷ ಸಿಕ್ತಾ ಇತ್ತಾ? ಹೀಗೇ ಎಲ್ಲಾ ಸುಖದ ಹಿಂದೆಯೂ ಒಂದೊಂದು ರೋಚಕ ಕಷ್ಟಪ್ರದಾನ ಜೀವನ ಅಥವಾ ಸನ್ನಿವೇಶ ಇದ್ದೇ ಇರತ್ತೆ. ಆದ್ರೆ ಅದರ ಬಗ್ಗೆ ಲಕ್ಷ್ಯಕೊಡುವಲ್ಲಿ ನಾವು ಎಡವುತ್ತಿದ್ದೇವೆಯಾ ಅನ್ನುವ ಸಣ್ಣ ಗುಮಾನಿ ಸಹಾ ಇದೆ. ಏಕೆಂದ್ರೆ ನಮ್ಮ ನಡುವಿನ ಹಲವಾರು ಜನ ಮಾನಸಿಕವಾಗಿ ಹೈರಾಣಾದಂತೆ ತೋರುತ್ತಾರೆ. ನಿರುತ್ಸಾಹದಲ್ಲಿದ್ದಂತೆ ಬದುಕುತ್ತಿದ್ದಾರೆ.
ನಮ್ಮಲ್ಲಿ ಹಲವರಿಗೆ ಕನಸುಗಳಿವೆ, ಆದರೆ ಅದನ್ನು ನನಸಾಗಿಸಿಕೊಳ್ಳಲಾಗ್ತಿಲ್ಲ. ಸಾದರಪಡಿಸಲಾಗ್ತಿಲ್ಲ ಅಸಲಿಗೆ ಧೈರ್ಯಮಾಡಲಿಕ್ಕೆಯೇ ಮನಸ್ಸಿಲ್ಲ. ಒಮ್ಮೆ ಸ್ವಲ್ಪ ಧೈರ್ಯದಿಮದ ಆದದ್ದಾಗಲಿ ಬಿಡದೇ ಮಾಡ್ತೇನೆ ಅಂತ ಪಣತೊಟ್ಟರೆ ಖಂಡಿತಾ ಸಾಧಿಸಬಹುದು. ಕಷ್ಟಗಳು ಎದುರಾಗ್ತವೆ, ಆಗಲಿ. ಚಿಂತೆಗಳು ಬೆನ್ನುಬೀಳ್ತವೆ, ಬೀಳಲಿ. ಸಮಸ್ಯೆಗಳು ಎಡೆಬಿಡದೇ ಕಾಡ್ತವೆ, ಕಾಡಲಿ..! ಸಮಸ್ಯೆಗಳು ಜೀವನದಲ್ಲಿ ಇದ್ರೇನೆ ಒಂಥರಾ ಚೆಂದ. ಅದರ ಜೊತೆ ಗುದ್ದಾಡುತ್ತಾ, ಗೆಲುವು ಸಾಧಿಸಿದಾಗ ಸಿಗೋ ಮಜಾ ಸಮಸ್ಯೆಯೇ ಇಲ್ಲದ ನೀರಸ ಜೀವನದಲ್ಲಿ ಖಂಡಿತಾ ಸಿಗಲ್ಲ ಬಿಡಿ. ಸಮಸ್ಯೆಗಳು ಬೇಕು ಹಾಗಂತ ಅದರ ಜೊತೆಗೇ ಜೀವನ ಸಾಗಿಸೋಕೆ ಹೋಗಬಾರದು. ಯಾಕಂದ್ರೆ ನಮ್ ಲೈಫು ನಿಂತ ನೀರಲ್ಲ. ನಮಗಿಲ್ಲಿ ಯಾವ ಇಂಗುಗುಂಡಿಗಳೂ ಬೇಕಾಗಿಲ್ಲ. ಮುಂದುವರೀತಾ ಇರಬೇಕು ಅಷ್ಟೆ!
ಬಿಟ್ಟುಕೊಡಬಾರ್ದು! ಜೀವನದಲ್ಲಿ ಯಾವುದನ್ನೂ ಸುಲಭವಾಗಿ ಬಿಟ್ಟುಕೊಡಬೇಡಿ. ಕಾಡಿ, ಬೇಡಿ, ತಡಕಾಡಿ, ಹುಡುಕಾಡಿ. ಗೆಲುವಿಗಾಗಿಯೇ ಹಂಬಲಿಸಿ. ಕೆಲವೊಮ್ಮೆ ಹಿನ್ನಡೆಗಳು, ಸೋಲುಗಳು, ಅವಮಾನಗಳು ಆಗುತ್ವೆ. ಆಗಲಿ. ನಾವು ಕೆಳಬಿದ್ರೆ ಅದು ಸೋಲಲ್ಲ. ಆದ್ರೆ ಎದ್ದು ನಿಲ್ಲಲು ನಾವು ಪ್ರಯತ್ನಿಸದಿದ್ರೆ ಮಾತ್ರ ಅದು ನಮ್ಮ ಸೋಲು. ಎಷ್ಟು ಸ್ಲೋ ಹೋಗ್ತೀರ ಅನ್ನೋದು ಮುಖ್ಯವಲ್ಲ. ಎಷ್ಟು ಸ್ಟಡಿಯಾಗಿ ಇದೀರ ಅನ್ನೋದಿಲ್ಲಿ ಮ್ಯಾಟರು. ಛೀ! ಹುಳು ಅಂತ ಅಸಹ್ಯ ಪಡೋರಿಗೇನು ಗೊತ್ತಿರತ್ತೆ ಮುಂದೊಂದು ದಿನ ಅವುಗಳೇ ಸುಂದರ ಪಾತರಗಿತ್ತಿಗಳಾಗಬಹುದು. ಕೆಲವರಿರ್ತಾರೆ ಸತತ ಹೋರಾಟದ ಜೀವನ ಅವರದ್ದು ಅದರೆ ಜನರ ಕಣ್ಣಿಗೆ ಕಾಣೋದೇ ಇಲ್ಲ. ಅವರನ್ಯಾರು ಗುರುತಿಸೋದೆ ಇಲ್ಲ. ಹಾಗಂತ ಅವರ ಜೀವನವೂ ಸುಧಾರಿಸೊಲ್ಲ, ಸುಧಾರಣೆ ಮಾಡಿಕೊಳ್ಳುವ ಮನಸ್ಸೂ ಅವರಿಗಿರಲ್ಲ. ಯಾಕಂದ್ರೆ ಅವರಿಗೆ ಕನಸುಗಳೇ ಇರಲ್ಲ. ತಮ್ಮನ್ನು ತಾವು ಯಾಂತ್ರಿಕ ಜೀವನಕ್ಕೆ ಹೊಂದಿಸಿಟ್ಟುಕೊಂಡಿರುತ್ತಾರೆ. ದೇವರು ನಮಗೆ ಏನಾದ್ರೂ ಕೊಟ್ಟಿದಾನೆ ಅಂತಂದ್ರೆ ಅದರಲ್ಲಿ ನಮ್ಮ ಸುಧಾರಣೆ ಮಾತ್ರ ನೋಡ್ಕೋತಾರೆ. ಅದರ ಬದಲು ಬೇರೆಯವರ ಬೆಳೆಸುವುದರಲ್ಲಿಯೂ ಸ್ವಲ್ಪ ಆಸ್ಥೆ ವಹಿಸಿದರೆ ಅವರ ಜೊತೆಗೆ ನೀವು ಬೆಳಿತೀರ, ಅದೂ ಎಲ್ಲರಿಗಿಂತ ಹೆಚ್ಚಾಗಿ!
ಅಯ್ಯೋ ಇಂತಾವೆಲ್ಲಾ ಯಾಕೆ ಬರೀತೀರ, ವೆರಿ ಬೊರಿಂಗ್ ಅಂತೀರ.? ಹೌದು ಇವೆಲ್ಲಾ ಬೋರಿಂಗ್ ವಿಷಯಗಳೇ! ಆದರೆ ಪಾಸಿಟಿವ್ ಮಾತುಗಳು ಒಂಥರಾ ಲಾಟರಿ ತರಾ, ಯಾವಾಗ ಬೇಕಾದ್ರೂ, ಯಾರಿಗೆ ಬೇಕಾದ್ರೂ ತಾಗಬಹುದು. ಲೈಫ್ ಇನ್ಸಪಿರೇಶನ್ ಸಿಗಬಹುದು. ಜೀವನ ಬದಲಿಸಿಕೊಳ್ಳಲು ಮಾರ್ಗದರ್ಶಕವಾಗಬಹುದು. ಕುರಿ ಕಾಯುವ ಮನೆತನದ ಪರಿಸ್ಥಿತಿಲಿ ಹುಟ್ಟಿದ್ರೂ ಮುಖ್ಯಮಂತ್ರಿಯಾಗಬಹುದು. ಚಾಯ್ವಾಲಾ ಆಗಿದ್ರೂ ಪ್ರಧಾನಿ ಹುದ್ದೆಗೇರಬಹುದು. ಜೀವನ, ಸಮಯ, ಭೂಮಿ ಇವೆಲ್ಲಾ ಅದರ ಕೆಲಸ ಮಾಡ್ತಾ ಇರೋ ಹಾಗೆ ನಾವೂ ನಮ್ಮ ಕೆಲಸ ಮಾಡ್ತಾ ಇರಬೇಕು ಅಷ್ಟೆ. ಆದರೆ ಹೇಗೆ ಮಾಡ್ತಿವಿ ಅನ್ನೋದು ಇಲ್ಲಿ ಗಣನೆಗೆ ಬರುತ್ತೆ. ಅದಕ್ಕಾಗಿ ನಾವೇನು ಕಿಷ್ಟಕರ ಅಧ್ಯಯನ ಮಾಡಬೇಕಿಲ್ಲ. ಗನಹನವಾದ ವಿಚಾರಗಳ ಅಭ್ಯಸಿಸಬೇಕಿಲ್ಲ. ಚಿಕ್ಕಪುಟ್ಟ ವಿಷಯಗಳು, ಸಣ್ಣಸಣ್ಣ ಘಟನೆಗಳನ್ನೇ ಅರ್ಥ ಮಾಡಿಕೊಂಡ್ರೆ ಅದೂ ಒಂದು ಸಾಧನೆಯೆ!
ಏನ್ ಮಾಡ್ತೀರೋ ಬಿಡ್ತಿರೋ ಗೊತ್ತಿಲ್ಲ But Never Give UP ಅಷ್ಟೆ! ಯಾಕಂದ್ರೆ “No matter what happens, or how bad it seems today, life does go on, and it will be better tomorrow.”

No comments:

Post a Comment