Saturday 28 March 2015

Self ಇ..
ನಾ ಬರಹಗಾರ'ನಲ್ಲ'..
ಅದ್ಭುತ ಕವಿಯೂ ನಾ'ನಲ್ಲ',,
ಆಗಬೇಕಿದೆ ಇನ್ನಾದರೂ
ಕೆಲವರಿಗೆ ಮಾತ್ರ 'ನಲ್ಲ' !


Self ಇ..
ಇಂದು ನನ್ನ ಅವಮಾನಿಸಿ
ನಕ್ಕ ಪ್ರತಿಯೊಬ್ಬರಿಗೂ
ನಾಳೆ ನಾ ದುಸ್ವಪ್ನವಾಗಿ
ಕಾಡಿದರೆ ಅದಕ್ಕೆ ನಾ ಹೊಣೆಯಲ್ಲ!


Self ಇ..
ದುಃಖಗಳು ಒತ್ತರಿಸಿ ಬಂದಾಗ
ಕತ್ತರಿಸಿ ಹಾಕುವ
ಕಲೆಯನ್ನು ಕಲಿಯಬೇಕಿದೆ
ನಾನಿನ್ನೂ ವಿದ್ಯಾರ್ಥಿ !


Self ಇ..
ನನ್ನ ಬಾಡಿದ ಮುಖ
ನಿದ್ದೆಯಿಲ್ಲದ ಕಣ್ಣುಗಳೂ
ಸಹಾ ದುಡಿಯುತಿವೆ..
ನಾಳಿನ ಗುರಿಸಾಧನೆಗೆ!


ಚಚ್ಚಿ ಲೈನು
ಅಂದು ಪ್ರೀತಿಯ ಅಮಲಿನಲ್ಲಿ
ಮಂತಾಂತರಗೊಂಡು ಕಾಣೆಯಾದವಳು
ಇಂದು ಬೆಂಗಳೂರಿನಲ್ಲಿ
ಹೈಟೆಕ್ ವೇಶ್ಯೆ !


Self ಇ..
ಈಗ ನನ್ನಲ್ಲೇನೂ ಇಲ್ಲ
ಮತ್ತೆ ಎದ್ದು ಬರುವೆನೆಂಬ
ದೃಢವಿಶ್ವಾಸದ ಹೊರತಾಗಿ! 


Self ಇ..
ಕೈಯಲ್ಲಿ ಕಾಸಿಲ್ಲ
ತಲೆಯಲ್ಲಿ
ನೂರೆಂಟು ಐಡಿಯಾ..!


Self ಇ..
ಅವಮಾನದ ಪರಾಕಾಷ್ಠೆ;
ಹೊಸ ಸಾಧನೆಯ
ಅನಾವರಣ


Self ಇ..
ಇಲ್ಲೆಲ್ಲವೂ ಚಿರಪರಿಚಿತ
ಆದರೂ..
ನಿತ್ಯ ನೂತನ..!


Self ಇ..
ಆ ಸುಂದರಿಯ ಚೆಲುವೀಗ
ಕುಂದಿದೆ; ಅವಳ
ಮಗಳಿಗೀಗ ಹೆಸರು ಬಂದಿದೆ !


Self ಇ..
ಅಮ್ಮನ ನರಳಾಟದ ಮಧ್ಯೆಯೇ
ಜನಿಸಿದ ಮಗು ಅತ್ತಿತು;
ಅಮ್ಮ ನಕ್ಕಳು !


Self ಇ..
ಒಲೆಯಲ್ಲಿ ಸುಡುತ್ತಿತ್ತು
ಕಟ್ಟಿಗೆ;
ಆಹಾ ಹಿತವಾಗಿದೆ
ಬಿಸಿನೀರು- ಬೆಚ್ಚಗೆ


Self ಇ..
ಕರಗುತ್ತಿತ್ತು ಮಂಜಿನ
ಹನಿಗಳು;
ಹೊಸ ದಿನದ ಆರಂಭ


Self ಇ..
ಕಳೆದು ಹೋಯಿತೆನ್ನ
ಹತಾಷೆ;
ಅವಳ ನೆನಪಿಗೆ



No comments:

Post a Comment