Saturday 28 March 2015

SOME ಮಾತು
ನಮ್ಮೊಳಗಿನ ಹೀರೋ- ನಾವೇ!
ಜಗತ್ತೇ ಒಂದು ಟೈಮ್ ಮೆಷಿನ್. ಅದ್ರಲ್ಲೂ ಮನುಷ್ಯರ ತಲೆ ಒಂಥರಾ ಪ್ರೆಷರ್ ಕುಕ್ಕರ್. ಯಾವಾಗ್ಲೂ ಚಿಂತೆ, ನೋವು, ಒತ್ತಡ ತೊಳಲಾಟದಲ್ಲೇ ತೋಪಾಗ್ತಾ ಇರ್ತೀವಿ. ಕೆಲವರು ಎದೆಕೊಟ್ಟು ಎದುರಿಸ್ತಾರೆ. ಇನ್ನು ಕೆಲವರು ಮಕಾಡೆ ಮಲ್ಕೊತಾರೆ. ಜೀವನ ಅನ್ನೋ ಆಟದಲ್ಲೂ ಸೋಲೋದು ಗೆಲ್ಲೋದು ಇದ್ದೇ ಇರತ್ತೆ. ಇವತ್ತು ನಾವು ಸೋತಿದೀವಿ ಅಂತಾ ಕೊರಗ್ತಾ ಕೂರೋದ್ರಲ್ಲಿ ಅರ್ಥ ಇದ್ಯಾ? ಅದೇ ರೀತಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಗೆಲ್ಲುವ ಅವಕಾಶ ಇದ್ದೇ ಇದೆ. ಕೆಲವೊಮ್ಮೆ ಅನ್ಸತ್ತೆ ನಮ್ಮ ಕೆಲಸ ತುಂಬಾನೆ ಸಣ್ಣದು ಮತ್ತೆ ನಿರರ್ಥಕ. ಆದ್ರೆ ನೆನಪಿಡಿ ಸಣ್ಣ ಸಣ್ಣ ನೀರಿನ ಹನಿಗಳಿಂದಲೇ ಸಮುದ್ರವಾಗಿದ್ದು. ಮೊದಲೊಂದು ಹೆಜ್ಜೆ ಇಡಿ. ನಮ್ಮೆದುರಿಗೆ ಯಾರೇ ಇರಲಿ. ನಿಮ್ಮದೇ ದಾರಿಯಲ್ಲಿ ಸಾಗಿ. ಮೊದಲು ನಗ್ತಾರೆ. ಸೋ ವ್ಹಾಟ್? ನಮ್ಮ ಹಿಂದೆ ಅನೇಕರು ಇರ್ತಾರೆ! ಎಷ್ಟೇ ಕಷ್ಟ ಆಗ್ಲಿ, ಬಿಟ್ಟುಕೊಡಬೇಡಿ. ಯಶಸ್ಸು ಅನ್ನೋದು ಹುಡುಕಿಕೊಂಡು ಬರತ್ತೆ. ಭಯ ಅನ್ನೋದು ಮನುಷ್ಯನನ್ನು ಸಣ್ಣವನನ್ನಾಗಿಸುತ್ತೆ. ಭಯವನ್ನು ಬೆನ್ನಟ್ಟಿ ಓಡಿ. ಅದೇ ಹೆದರಿಕೊಂಡು ಓಡತ್ತೆ! ಮತ್ತೊಂದು ಬದಿಯಲ್ಲಿ ಆ ಭಯವೇ ನಿಮ್ಮನ್ನು ಉತ್ತಮ ಜೀವನಕ್ಕೆ ಕಾರಣವಾಗಬಹುದು. ಕಟ್ಟಳೆಗಳನ್ನು ಕುಟ್ಟಿ ಪುಡಿಮಾಡಿ, ಕಟ್ಟುಪಾಡುಗಳ ಮೂಟೆ ಕಟ್ಟಿ ಜೀವನದ ಆಟವನ್ನು ಆಡಿ. ಲೈಫಲ್ಲಿ ರಿಸ್ಕ್ ಬೇಕು. ಬೀ.. ಪಾಸಿಟಿವ್.. ನೀವೆನಾಗ ಬಯಸ್ತೀರೋ ಅದು ನಿಮ್ಮಲ್ಲೇ ಇರತ್ತೆ. ಕನಸನ್ನೂ ಫೀಲ್ ಮಾಡಿ. ಸಾಧನೆಗಳನ್ನು ಫುಲ್ಫಿಲ್ ಮಾಡಿ. ನಿಮ್ಮ ಕನಸು ಏನೇ ಇರ್ಲಿ ನುಗ್ತಾ ಇರಿ. ಬೇರೆಯವರಿಗೆ ಆದರ್ಶವಾಗಿ. ನಿಮಗೆ ನಿಮಗಿಂತ ರೋಲ್ ಮಾಡೆಲ್ ಮತ್ಯಾರು ಇಲ್ಲ.
ಅಡೆತಡೆಗಳು ಜೀವನದಲ್ಲಿ ಸಾಮಾನ್ಯ. ಅವುಗಳಿಲ್ಲದೆ ಮಾಡಿದ ಯಾವುದೇ ದಾಖಲೆಗಳೂ ರೆಕಾರ್ಡ್ ಆಗೊಲ್ಲ. ಮುಟ್ಟಿದ ಗುರಿಯಲ್ಲೂ ಖುಷಿ ಇರಲ್ಲ. ನಂಬಿಕೆ, ದೃಢವಿಶ್ವಾಸ ನಿಜಕ್ಕೂ ನಮ್ಮನ್ನು ಉನ್ನತಿಯೆಡೆಗೆ ಒಯ್ಯತ್ವೆ. ಒಂದು ಕಾಲದಲ್ಲಿ ರೋಡ್ ಪಕ್ಕ ಕುಂತ್ಕಂಡು ಕೈಯಲ್ಲಿ ಬ್ರಷ್ ಹಿಡ್ಕಂಡು ಪಾಲಿಷ್ ಮಾಡುತಿದ್ದ ಹುಡುಗ ಮುಂದೊಂದು ದಿನ ವಿಶ್ವದ ಶೇಷ್ಠ ಅಧ್ಯಕ್ಷನಾದ ಅಬ್ರಹಾಂ ಲಿಂಕನ್ ಬಗ್ಗೆ ಹಲವರಿಗೆ ಗೊತ್ತಿದೆ. ಶಾಲೆಯಲ್ಲಿ ದಡ್ಡ ಹುಡುಗನೆಂದು, ಕಲಿಕೆಯಲ್ಲಿ ನಾಲಾಯಕ್ ಅನ್ನಿಸಿಕೊಂಡಿದ್ದ ಐನ್ಸ್ಟೈನ್ ಬಗ್ಗೆನೇ ನಾವು ನೀವು ಪಾಠದಲ್ಲಿ ಓದುವಂತಾಗಿದ್ದು ಹೇಗೆ? ಕೆಲವೇ ಜನರ ತಂಡ ಕಟ್ಟಿದ್ದ ಮಾವೋ ಮುಂದೊಂದು ದಿನ ಬಲಾಡ್ಯ ದೇಶವನ್ನೇ ನಿಮರ್ಿಸಿದ್ದ! ಬಡ ಕುಟುಂಬದಲ್ಲಿ ಏಳನೇ ಮಗುವಾಗಿ ಹುಟ್ಟಿದ್ದ ಮೈಕೆಲ್ ಜಾಕ್ಸನ್ ವಿಶ್ವದ ಸೂಪರ್ ಸ್ಟಾರ್ ಆಗಿ ಬದಲಾಗಿದ್ದ! ಸ್ಲಮ್ ಅಲ್ಲಿ ಹುಟ್ಟಿದ್ದ ಪೀಲೆ ಫುಟ್ ಬಾಲ್ ಪ್ರಪಂಚದ ರಾಜನಾಗಿ ಮೆರೆದಿದ್ದ! 1987ರಲ್ಲಿ ಬಾಲ್ ಬಾಯ್ ಆಗಿದ್ದ ಸಚಿನ್ ತೆಂಡೂಲ್ಕರ್ ನಂತರ ಕ್ರಿಕೇಟ್ನ ದೇವರಾಗಿ ಬದಲಾದ! ಬಿಳಿಯರ ಆರ್ಭಟ ಹೆಚ್ಚಿದ್ದ ಕಾಲದಲ್ಲಿ ಮಹಮದ್ ಅಲಿ ಚಾಂಪಿಯನ್ನರ ಚಾಂಪಿಯನ್ ಆಗಿ ಹೊರಹೊಮ್ಮಿದ. ಕೆಫೆಯಲ್ಲಿ ಕೆಲಸಮಾಡುತ್ತಿದ್ದ ಮಹಿಳೆ ಜೆ.ಕೆ.ರೌಲಿಂಗ್ ಹ್ಯಾರಿ ಪಾಟರ್ ಬರೆದ್ಲು! ರೆಡ್ ಕ್ರಾಸ್ಗಾಗಿ ಅಂಬುಲೆನ್ಸ್ ಓಡಿಸುತ್ತಿದ್ದ ವಾಲ್ಟ್ ಡಿಸ್ನಿ ಮಿಕ್ಕಿಮೌಸ್ ನಿಮರ್ಾಣ ಮಾಡಿದ. ನಡೆಯಕ್ಕೇ ಆಗದಂತಹ ಸ್ಟಿಫನ್ ಹಾಕಿಂಗ್ ಆಕಾಶಕ್ಕೆ ಹಾರಲು ರೆಡಿಯಾದ. ಯಾರೂ ಮುಟ್ಟಿಸಿಕೊಳ್ಳಬಾರದೆಂದು ಬಹಿಷ್ಕಾರಕ್ಕೆ ಒಳಗಾಗಿದ್ದ ಭೀಮ, ಡಾ. ಅಂಬೇಡ್ಕರ್ ಆಗಿ ನೂರಾರು ಜನರ ಹೃದಯವನ್ನೇ ಮುಟ್ಟಿದ. ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಗಾಂಧಿ, ಮಹಾತ್ಮನಾಗಿ ರಾಷ್ಟ್ರಪಿತನಾಗಿ ಬದಲಾದ. ಒಂದು ಕಾಲಕ್ಕೆ ಏನೂ ಇಲ್ಲದಿದ್ದ ಧೀರೂಬಾಯಿ ಅಂಬಾನಿ ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿದ್ರು! ಜೇಮ್ಸ್ ಕ್ಯಾಮರೂನ್ ಅನ್ನುವ ಟ್ರಕ್ ಡ್ರೈವರ್ ಅವತಾರ್ ಅನ್ನುವ ಸೂಪರ್ ಸಿನೆಮಾವನ್ನು ನಮಗೆಲ್ಲಾ ತೋರಿಸಿದ. ಪ್ಲೋರೆನ್ಸ್ ನೈಟಿಂಗೆಲ್ ಎನ್ನುವ ನರ್ಸ್ ಎಲ್ಲರಿಗೂ ತಾಯಿಯಾಗಿ ಮದರ್ ತೆರೆಸಾ ಆಗಿ ಬದಲಾದ್ರು! ಕ್ಯಾನ್ಸರ್ ಪೀಡಿತನಾಗಿದ್ದ ಆರ್ಮಸ್ಟ್ರಾಂಗ್, ಯುವರಾಜ್ ಸಿಂಗ್ ಸಾವನ್ನೇ ಜಯಿಸಿ ಬಂದ್ರು! ಬಿಲ್ ಗೇಟ್ಸ್ ಎನ್ನುವ ಪ್ರೋಗ್ರಾಮರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ! ಬುಡಕಟ್ಟು ಜನಾಂಗದ ಮಂಡೆಲಾ ವಿಶ್ವವಿಖ್ಯಾತನಾದ! ಸಾಮಾನ್ಯ ಸೈನಿಕನಾಗಿದ್ದ ನೆಪೋಲಿಯನ್ ಚಕ್ರರ್ತಿಯಾದ! ಹೀಗೆ ಭೂತ, ವರ್ತಮಾನ ಎಲ್ಲೆಡೆ ಇಂತಹ ಸಾಧಕರ ಅಸಂಖ್ಯಾತ ಉದಾಹರಣೆಗಳು ದಂಡಿದಂಡಿಯಾಗಿ ಸಿಗ್ತವೆ. ಅವರೇನೂ ದೇವರಿಂದ ವರ ಪಡೆದಂತಹ ಸಂತರಲ್ಲ. ಅವರು ಪವಾಡವನ್ನೂ ನಿರೀಕ್ಷಿಸಿದವರಲ್ಲ. ಅವರೂ ನನ್ನಂತೆ-ನಿಮ್ಮಂತೆ ಸಾದಾ ಸೀದಾ ಮನುಷ್ಯರಾಗಿದ್ದಂತವರೆ! ಅವರೂ ನಮ್ಮಂತೆ ಕನಸನ್ನ ಕಂಡವರು. ಆದರೆ ಆ ಕನಸನ್ನು ಅರಸುತ್ತಾ ಬೆನ್ನಟ್ಟಿದವರು ಅವರು! ನಮಗ್ಯಾಕೆ ಆಗಲ್ಲ? ಕನಸನ್ನು ಕಾಣಿ. ಧೈರ್ಯದಿಂದ ನನಸಾಗಿಸಿಕೊಳ್ಳುವತ್ತ ಮುನ್ನುಗ್ಗಿ! ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಪ್ರಯತ್ನ ಮಾಡಿ! ನಮಗೆ ಇರೋದೆ ಒಂದು ಜೀವನ.
ಚಿಕ್ಕ ಚಿಕ್ಕ ವಿಷಯಕ್ಕೂ ಬೇಸರ ಮಾಡಿಕೊಂಡು ಕುಂತ್ರೆ ಗೆಲ್ಲಕ್ಕಾಗಲ್ಲ. ಓಡಕ್ಕಾಗಲ್ವಾ ನಡೆಯಿರಿ, ನಡೆಯಕ್ಕಾಗದಿದ್ರೂ ತೆವಳಿಕೊಂಡು ಸಾಗಿ. ಆದ್ರೆ ನಿಮ್ಮ ನಡೆ ನಿಮ್ಮ ಗುರಿಯತ್ತಲೇ ಇರಲಿ. ಅಡಚಣೆ ಬರ್ತಾವೆ. ಆಟಾಡ್ಕಂಡು ಹೋಗಿ, ಅಡಗಿ ಮಾತ್ರ ಕೂರ್ಬೇಡಿ! ಒಮ್ಮೆ ನಿಮ್ಮ ಟಾಗರ್ೆಟ್ ರೀಚ್ ಮಾಡಿ. ಕಷ್ಟಗಳೆಲ್ಲಾ ಮತರ್ೊಗತ್ವೆ! ಆದ್ರೆ ಕೆಲವರು ನನ್ನ ಜೀವನದಲ್ಲಿ ಗುರಿ ಅನ್ನೋದೆ ಇಲ್ಲ ಅಂತಾರೆ. ಅವರಿಗೂ ಗುರಿ ಇದ್ದಿರತ್ತೆ, ಆದ್ರೆ ಗುರುತಿಸೋದ್ರಲ್ಲಿ ಎಡವಿರ್ತಾರೆ. ಕೂಲ್ ಆಗಿ ಕುಂತು ಆಲೋಚಿಸಿ, ಏಕಾಂತಕ್ಕಿಂತ ಒಳ್ಳೆಯ ಸ್ನೇಹಿತನಿಲ್ಲ, ಅವನೇ ಹೇಳ್ತಾನೆ ನಿಮಗೆ ನಿಮ್ಮ ಗುರಿಯ ಬಗ್ಗೆ. ಹಾಗಂತ ಏಕಾಂಗಿಯಾಗಿರದೆ ನಡಿತಾ ಇರಿ. ಜೊತೆಗೆ ಸಮಾನ ಮನಸ್ಕ ಜನ ಇದ್ದೇ ಇತರ್ಾರೆ. ಒಬ್ಬೊಬ್ಬರೇ ಬಂದು ಕೂಡ್ಕೊತಾರೆ! ಬೇಕಿದ್ರೆ ಟ್ರೈ ಮಾಡಿ ನೋಡಿ!
ನಾನೂ ಅವತ್ತು ನನ್ನ ಕೈಲಿ ಪೇಪರ್ ಮಾಡೋಕಾಗಲ್ಲ. ನಾನು ಜರ್ನಲೀಸಂ ಮಾಡಿಲ್ಲ ಅಂತಾ ಕೂತಿದ್ರೆ Sirsi Siri - ಶಿರಸಿ ಸಿರಿ ಅನ್ನೋ ಪೇಪರ್ ಹುಟ್ಟುತಾನೇ ಇರ್ಲಿಲ್ಲ! ಎದ್ದು ನಿಂತ್ರೆ ದಾರಿ ಸಿಕ್ಕೇ ಸಿಗತ್ತೆ. ಜೊತೆಗಾರರೂ ಸಹಾ!

No comments:

Post a Comment