Saturday, 28 March 2015

ಚಚ್ಚಿ ರಿವೆಂಜ್
ಅಂದು ನಾ ಮೊದಲಬಾರಿ ಕಣ್ಬಿಟ್ಟಾಗ,
ಜಗ ನಗುತಿತ್ತು.. ನಾ ಅಳುತಿದ್ದೆ..!
ಮುಂದೆ ನಾ ಕೊನೆಯಬಾರಿ ಕಣ್ಮುಚ್ಚುವಾಗ,
ಜಗವು ಅಳುತಿರಲಿ, ನಾ ನಗುತಿರುವೆ..!!


ಚಚ್ಚಿ 3ಪದಿ... 

ತತ್ವವನು ಹೇಳಿದರೆ ವೇದಾಂತಿಯೆನ್ನುವರು| ಸತ್ವ
ವನು ಬೋಧಿಸಿದರೆ ಡವ್ ರಾಜ ಎನ್ನುವರು| ಸತ್ವ
ತತ್ವವ ಬಿಟ್ಟು ಮುಕ್ತಜೀವಿಯಾಗೆಲೋ ನೀ ಚಚ್ಚೀನ |


ಚಚ್ಚಿ 3ಪದಿ

ತೋರಿಕೆಯ ನಗುವೇಕೆ, ಡಾಂಬಿಕತೆಯ
ಸೋಗೇಕೆ, ಕಿತ್ತೋದ ಮನಸುಗಳಿ
ಗಿಂತ- ಸತ್ತ ಹೃದಯವೇ ಮೇಲೆಂದ ಚಚ್ಚೀನ |

ಹುಡುಕಾಟ, ತಡಕಾಟ, ಕುಲುಕಾಟ
ಕವನ ಕಟ್ಟಬೇಕಿದೆ ನಾನು
ಪ್ರತಿ ಘೋರಿಯೊಳಗೂ..
ಜೀವನ ಹುಡುಕಬೇಕಿದೆ ನಾನು
ಅಘೋರಿಯೊಳಗೂ..!
ಪ್ರೀತಿ ಬಿತ್ತಬೇಕಿದೆ ನಾನು
ಒಲವು ಮಿಡಿವವರೆಗೂ..
ಬದುಕಿ ಉಳಿಯಬೇಕಿದೆ ನಾನು
ಹೃದಯ ಸಿಗುವವರೆಗೂ..!
ಕೆಲಸ ಹಿಡಿಯಬೇಕಿದೆ ನಾನು
ಬಿಡುವು ಮುಗಿವವರೆಗೂ..
ನಿದಿರೆ ಮಾಡಬೇಕಿದೆ ನಾನು
ಜಗವು ಅಳಿವವರೆಗೂ..!!



ಚಚ್ಚಿ 3ಪದಿ... 
ಅರ್ಥಮಾಡಿಕೊಳ್ಳದಿರ್ ನೀ ಜನಮನವ,
ಅದರಿಂದೆನೂಪಯೋಗಿಲ್ಲಾ- ಐಸ್ ಕ್ಯೂಬ್
ನಂತಿಹುದದು ಕಾಣೋ ಚಚ್ಚೀನ |


ಬದಲಾಗಬೇಕಿದೆ ನಾನು
ಬದಲಾಗಬೇಕಿದೆ ನಾನು
ಎಲ್ಲಾ ಗುರುತಿಸುವಂತೆ..
ಬದಲಾಗಬೇಕಿದೆ ನಾನು
ಎಲ್ಲೆ ಗುರುತಿಸದಂತೆ..
ಹೃದಯದೊಳೆದ್ದಿದೆ
ನೂರು ಕಾಮನ ಬಿಲ್ಲು..
ಮೈಮೇಲೆ ಬಿದ್ದಿದೆ
ನೂರಾರು common ಬಿಲ್ಲು..
ತಲೆಯಲ್ಲಿ ಮಿಂಚಿದುದು
ಚಿನ್ನದಂತಾ ಹೊಳಹು..
ತಲೆತುಂಬಾ ತುಂಬಿದುದು
ಚಿಂತೆಯೆಂಬಾ ಹುಳವು..
ಎಲ್ಲವನೂ ಬೇಧಿಸುತಾ
ನುಗ್ಗುವೆನು ಇಂದು..
ಎಲ್ಲೆಯನು ಮೀರಿ ನಾ
ಬದಲಾಗುತಿರುವೆನು ಎಂದೆಂದೂ...
ಬದಲಾವಣೆಗೆ ನೋ ಎಂಡು..


ಚಚ್ಚಿ ಚೈನು
ಬೇರೆಯವರಿಗೆ ನಾನೇನು ಬರಹಗಾರನಲ್ಲ..!
ಆದರೆ ಎಂದಿಗೂ ನಾನವಳಿಗೆ ಬರಹಗಾರ 'ನಲ್ಲ'..!!


ಚಚ್ಚಿ 3ಪದಿ...
ನನ ಕೈಲಿ ಆಗೊಲ್ಲ, ದಿನವೀಗ ಸರಿ
ಯಿಲ್ಲ, ನಾಳೆ ನಾ ಮಾಡುವೆ ಎಂದೆಣಿಸಿ ನೀ
ಕುಂತ್ರೆ ಕ್ರಿಯಾಶೂನ್ಯನಾಗುವೆ ಚಚ್ಚೀನ |


ಚಚ್ಚಿ 3ಪದಿ... 
ಕನಸುಗಳು ನೂರಾರಿದ್ದು, ಛಲ
ವು ನಿನ್ನಲಿರದಿರೆ, ನಿನ್ನಾಸೆ
ಗಳೆಲ್ಲಾ ಹುದಿಲಲಿ ಹುದುಗಿಸೋ ಚಚ್ಚೀನ |


ಚಚ್ಚಿ 3ಪದಿ... 
ಆಪತ್ತಿಗಾಗದ ಜನ ವೇಸ್ಟು, ಕೆಲಸ
ಕ್ಕೊದಗದ ಹಣ ಬೂಷ್ಟು, ಅವು ರಾಶಿ ರಾಶಿ
ಇದ್ದರೂ, ಬೇಚರಾಕಿಗೆ ಸಮ ತಿಳಿಯೋ ಚಚ್ಚೀನ |


ಚಚ್ಚಿ 3ಪದಿ... 
ಭೂ ಗರ್ಭದಲೂ ಕತ್ತಲೆಯುಂಟು, ಅಂತರಿಕ್ಷ
ದಲೂ ಕತ್ತಲೆಯುಂಟು, ಆದರೂ ನೀನಿಲ್ಲಿ
ಬೆಳಕನ್ನರಸೋ ಮಗನೇ ಚಚ್ಚೀನ |



No comments:

Post a Comment