Saturday 28 March 2015

Self ಇ..
'ಇಲ್ಲ'ಗಳೊಂದಿಗೆ ಶುರುವಾಗಿದೆ
ನನ್ನ ಹೊಸ ವರ್ಷದ ಆರಂಭ..
ಸಾಧನೆಗಳ ಮೆಟ್ಟಿಲಿಗೆ
ಅಡೆತಡೆಗಳೇ ಈ 'ಇಲ್ಲ'..!
'ಇಲ್ಲ'ಗಳನ್ನು ಇಲ್ಲವಾಗಿಸೋ ಈ ಆಟ
ಕಲಿಸುವುದು ನನಗೆ ಜೀವನದ ಪಾಠ..!


ಕತ್ತಲೆ ಸತ್ಯ
ಎಲ್ಲರ ತರ ಬಣ್ಣಬಣ್ಣವಾಗಿ,
ಪದಗಳ ಜೋಡಿಸಿ
ಕಟ್ಟಲಾಗುತಿಲ್ಲ ಕವನ..
ಬಾಟಲಿಗಳ ಸದ್ದಿಗೆ
ಬಿಯರುಗಳ ವಾಸನೆಗೆ
ಸುಮ್ಮನಿಲ್ಲ ಹಲವು ಜನ..!
ಹೊಸ ವರ್ಷವೇ ಬಾ ಎಂದು
ಕರೆಯುತಿರುವರು ನಶೆಯಲಿ
ತಿಂದು- ಕುಡಿದು ಹಣವ ಕಳೆದು
ಮರಗುವರು ಹಗಲಲಿ..!
ಹೊಸ ವರುಷವೆಂದು
ಕುಣಿದಿದ್ದೊಂದೇ ಬಂತು,
ಬದಲಾಗಲಿಲ್ಲ ಈ ಜಗವು..
ಮತ್ತೆ ದಿನವೂ ಅದೇ ಗೋಳು
ಇದುವೆ ನಮ್ಮ ಜೀವನವು..!


Self ಇನ್ಪಿರೇಶನ್ ಅಲ್ಲ Self ಕಿಕ್
ಇನ್ನೇನು ಕೆಲವೇ ಗಂಟೆಗಳಲ್ಲಿ
ಅಸುನೀಗುವ ವರುಷವೂ
ಮಧುರ ನೆನಪನ್ನು ಉಳಿಸಿವೆ..
ಹಳೆಯ ನೋವ
ಮರೆಸಲೆಂದೇ
ಶರಾಬುಗಳು ಜೊತೆಗಿವೆ..!

Self ಇ..
ಇನ್ನಷ್ಟು ಸಮಸ್ಯೆ ಬರಲಿ
ಮತ್ತಷ್ಟು ಕಷ್ಟಗಳಿರಲಿ
ಪ್ರತಿಯೊಂದನ್ನೂ
ಹುಡುಕಿ ಬೇಟೆಯಾಡುವ
ಸ್ಥೈರ್ಯವನು ಕೊಡು
ಓ ಹೊಸವರ್ಷವೇ!


Self ಇ..
ನೂರಾರು ಚಿಂತೆ
ಸಾವಿರಾರು ಒತ್ತಡ
ಇದ್ದರೂ ಕೂಡಾ
ಒಂದಷ್ಟು ಶಿಸ್ತು, ಸ್ವಲ್ಪ ಯೋಚನೆ
ಕಣ್ತುಂಬಾ ನಿದ್ದೆ
ಬದಲಿಸುವುದು ಜೀವನ ಪಥ !


Self ಇ..
"ನಾನೊಬ್ಬ ಒಂಟಿ" ಎಂದು
ಹತಾಶೆಯ ಮಡುವಲ್ಲಿದ್ದಾಗಲೇ
ದೊರೆತ ಅತ್ಯುತ್ತಮ ಗೆಳೆಯ
ಏಕಾಂತ..!



No comments:

Post a Comment