Saturday 28 March 2015

Some ಮಾತು
ಸುಮ್ಸುಮ್ನೆ ಖಾಲಿ ವೇದಾಂತ
ಮೊದಲೇ ಹೇಳ್ತಿದೀನಿ ಈ ಬರಹದಲ್ಲಿ ನಿಮಗೆ ಹೊಸ ವಿಷಯಗಳ್ಯಾವುದನ್ನೂ ನಾನು ಹಂಚಿಕೊಳ್ಳಲ್ಲ. ಗಹನವಾದ ವಿಚಾರಗಳ ಕುರಿತು ಬರೆಯೊಲ್ಲ. ರಾಜಕೀಯ, ವರ್ತಮಾನ, ದೇಶ, ಭವಿಷ್ಯ ಇತ್ಯಾದಿಗಳಾಗಲಿ, ಪ್ರಸಕ್ತ ವಿದ್ಯಮಾನಗಳ 'ಇಸಂ' ಗಳ ಬಗ್ಗೆಯಾಗಲಿ ಏನೇನೂ ಮಾತಾಡೊಲ್ಲ. ಎಲ್ಲವನ್ನೂ ಮರೆತು ಮುಂದಿನದನ್ನು ಓದಿದ್ರೆ ಒಂಥರಾ ಫೀಲ್ ಸಿಗತ್ತೆ. ಆಗದಿದ್ರೆ ಮಾಡ್ಕೊಳಿ.. ಇಲ್ಲಿ ಅಕ್ಷರಗಳ ಓದುತ್ತಾ ಮೈಂಡಲ್ಲಿ ಅದರ ಕಲ್ಪನೆ ಮಾಡ್ಕೊಳ್ತಾ ಹೋಗಿ ಸಖತ್ ಮಜಾ ಸಿಗತ್ತೆ. ಹಾಗಂತ ಇದು ಎಲ್ರಿಂದಲೂ ಸಾಧ್ಯವಾಗೊಲ್ಲ. ಯಾಕಂದ್ರೆ ಯಾರಿಗೆ ಮೈಂಡ್ ಪವರ್ ಹೆಚ್ಚಾಗಿದೆಯೋ, ಏಕಾಗ್ರತೆ ಸಾಧಿಸಕ್ಕಾಗ್ತದೆಯೋ, ತಾಳ್ಮೆ, ಸಹನೆ ಇದೆಯೋ, ಒಂದೇ ಗುಟುಕಿಗೆ ಕೊನೆಯವರೆಗೆ ಓದಿಕೊಂಡು ಹೋಗುವ ಶಕ್ತಿ ಇದೆಯೋ ಅಂತವರು ಮಾತ್ರ ಟ್ರೈ ಮಾಡಿ. ಯಾರಿಗೆ ಇದು ಚೆನ್ನಾಗಿಲ್ಲ ಅನ್ಸತ್ತೋ ಅಂತವರು ದಿನಕ್ಕೆ ಅರ್ಧಗಂಟೆಯಾದರೂ ಧ್ಯಾನ ಮಾಡಿದರೆ ಅವರಿಗೇ ಒಳ್ಳೆಯದು!
ಕಲ್ಪಮೆ ಮಾಡಿಕೊಳ್ತಾ ಹೋಗಿ- ಚಿಟ್ಟೆಯೊಂದು ಹಾರಿಬಂದು ನಿಮ್ಮ ಮುಖದ ಬಳಿ ಹಾದು ಹೋಯಿತು. ಏನಾಶ್ಚರ್ಯ! ನೀವೀಗ ನಿಮ್ಮ ಮನೆ, ದೇಶ, ಜನ ಎಲ್ಲವನ್ನೂ ಬಿಟ್ಟು ಹೊಸ ಪ್ರಪಂಚಕ್ಕೆ ಬಂದು ಬಿಟ್ಟಿದ್ದಿರ! ಎಲ್ಲಿದೀನಿ, ಏನಿದು ಅಂತಾ ಯಾವುದೂ ಗೊತ್ತಾಗ್ತಿಲ್ಲ. ಜೀವನದ ಯಾವುದೂ ಚಿಂತೆಯಿಲ್ಲ. ನೀವೊಂದು ಸುಂದರ ಪ್ರಪಂಚದಲ್ಲಿದ್ದಿರಿ. ಏಕಾಂತದ ಖುಷಿಯನ್ನು ಅನುಭವಿಸುತ್ತಿದ್ದಿರಿ. ಯಾರೂ ನೋಡ್ತಾ ಇಲ್ಲ ಅನ್ನೋತರ ಖುಷಿಯಿಂದ ಕುಣಿತಾ ಇದ್ದಿರಿ. ಹಾಡು ಹೇಳ್ತಾ ಇದ್ದೀರಿ. ಸಖತ್ ಎಂಜಾಯ್ ಮಾಡ್ತಾ ಇದ್ದಿರಿ. ಆಗ ನಿಮಗೆ ಒಂದು ವಿಷಯ ಗೊತ್ತಾಗ್ತಿದೆ ಜೀವನವನ್ನು ಅನುಭವಿಸಬೇಕು ಅನ್ನೋ ಸಮಯದಲ್ಲೆಲ್ಲಾ ನೀವು ನಿಮ್ಮದೇ ಯೋಜನೆಗಳನ್ನು ಹಾಕಿಕೊಂಡು ನಿಮ್ಮ ಸಂತೊಷವನ್ನು ನೀವೇ ಕಳೆದುಕೊಳ್ತಾ ಇದ್ರಿ. ಈ ಜೀವನವೇ ಒಂದು ಅನುಭವ ಶಾಲೆ, ಅನುಭವಿಸ್ತಾನೆ ಪಕ್ವವಾಗ್ತಾ ಇದೀರ ಅಂತ! ಆ ಪ್ರದೇಶದಲ್ಲಿ ನೀವು ನಡೆದುಕೊಂಡು ಹೋಗ್ತಾ ಇದೀರ. ನಿಮ್ಮ ಜೀವನದ ಸುಂದರತೆಗಳೇ ಅಲ್ಲಿ ಕಾಣಿಸ್ತಿವೆ, ಇರೋದು ಒಂದೇ ಜೀವನ ಅಂತ ಒಮ್ಮೊಮ್ಮೆ ಬೇಸರವಾಗಬಹುದು ಆದರೆ, ಆ ಒಂದು ಜೀವನವನ್ನೇ ಸರಿಯಾಗಿ ಉಪಯೋಗಿಸಿಕೊಂಡು ಹೋಗ್ತೀನಿ ಅನ್ನೋ ಆತ್ಮವಿಶ್ವಾಸದಲ್ಲಿ ಮುಂದುವರಿತಾ ಇದ್ದೀರ. ಜೀವನದಲ್ಲಿ ಎಷ್ಟೋಂದು ಬದಲಾವಣೆ ಮಾಡಿಕೊಂಡಿದ್ದಿರ ಅಲ್ವಾ? ಕೆಲವೊಂದು ಅನಿವಾರ್ಯತೆ, ಕೆಲವೊಂದು ಸ್ವಾರ್ಥ, ಆದರೆ ಹಲವಾರು ಖುಷಿಗೆ ಅನ್ನೋ ಖುಷಿ ನಿಮಗಾಗ್ತಿದೆ. ಈ ಬರಹ ಓದ್ತಾ ಓದ್ತಾ ನಿಮ್ಮ ಸುತ್ತಮುತ್ತಲಿನ ವಿಷಯ ಯಾವುದೂ ತಿಳಿತಿಲ್ಲಾ ಅಂದ್ರೆ ನೀವೀಗ ಉನ್ನತ ಕಲ್ಪನಾ ಸ್ಥಿತಿಯಲ್ಲಿದ್ದಿರಿ. ನಿಮ್ಮ ಮೈಂಡ್ ಇಲ್ಲಿ ಕೇಂದ್ರೀಕೃತವಾಗಿದೆ ಹಾಗೂ ಅದು ಬಲಾಢ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಅಂತಾಯ್ತು! ಹೆಚ್ಚು ಕಲಿಬೇಕು, ಹೆಚ್ಚು ಮಾಡಬೇಕು, ಹೆಚ್ಚು ಬೆಳೆಯಬೇಕು, ನಾನೊಬ್ಬ ನಾಯಕ ಅನ್ನುವ ಒಂದು ಸಕಾರಾತ್ಮಕ ತರಂಗ ನಿಮ್ಮ ಮೆದುಳನ್ನು ಪ್ರವೇಶಿಸುತ್ತಿದೆ. ಎಲ್ಲರೂ ಪ್ರಪಂಚ ಬದಲಾಗಬೇಕೇಂದೇ ಬಯಸುತ್ತಾರೆ ವಿನಃ ನಾನು ಬದಲಾಗಬೇಕೆಂದು ಯಾರೂ ಯೋಚಿಸೊಲ್ಲ. ಆದರೆ ನಿಮಗೀಗ ಬದಲಾಗಬೇಕು ಅಂತ ಅನ್ನಿಸುತ್ತಿದ್ದರೆ ಖಂಡಿತ ಇದೊಂದು ಸಕಾರಾತ್ಮಕ ಬೆಳವಣಿಗೆ.
ಕೆಲವೊಂದು ಅಧ್ಬುತ ಕ್ಷಣಗಳು ಹುಟ್ಟೋದೆ ಅದ್ಭುತ ಅವಕಾಶಗಳಿಂದ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡ್ರೆ ನಾನು ಸಾಧಿಸಿದೆ, ಅಂತಾ ಒಂದು ದಿನ ಖಂಡಿತಾಗಿಯೂ ಹೇಳ್ತೀರಿ. ಇವತ್ತಿನ ಕೆಲಸ ಇವತ್ತೇ ಮಾಡುವೆ, ನಾಳೆ ಅನ್ನೋದಕ್ಕೆ ಗೊಲಿ ಹೊಡಿತೀನಿ ಅಂತಾ ನಿಮ್ ಮೈಂಡಲ್ಲಿ ಬಂದ್ರೆ ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತಿರೋದಕ್ಕೆ ಸೂಚನೆ ಅದು. ಕಷ್ಟಗಳು ಒಂದರ ಹಿಂದೊಂದು ಬರ್ತಾನೆ ಇರ್ತವೆ, ಓಡಿದರೆ ಓಡಿಸಿಕೊಂಡು ಬರುತ್ವೆ. ಎದುರಿಸಿ ನಿಂತ್ರೆ ಅವೇ ಓಡೋಗುತ್ತವೆ. ನಿಮ್ಮ ಕಲ್ಪನಾ ಲೋಕದಲ್ಲಿ ಈಗ ಇದ್ದಕ್ಕಿದ್ದಂತೆ ಎದುರಾದ ಸಮಸ್ಯೆಗೆ ಸಿಲುಕಿ ನೀವೊಂದು ಕೊಳದಲ್ಲಿ ಬಿದ್ದಿದ್ದೀರ ಅಂದ್ಕೊಳಿ. ದೂರದಲ್ಲೊಂದು ದೊಣಿ ಕಾಣಿಸ್ತಿದೆ. ಅದೇ ಬರಲಿ ಅಂತಾ ಕಾಯುತ್ತಾ ಇದ್ರೆ ಮುಳುಗಿ ಹೋಗ್ತೀರ. ಅಥವಾ ಈಜು ಬರೊಲ್ಲ ಅಂತ ಹೆದರಿದರೆ ಆಗಲೂ ಮುಳುಗ್ತೀರ! ಆದ್ರೂ ನಿಮ್ಮ ವೃದ್ಧಿಯಾದ ಆತ್ಮವಿಶ್ವಾಸದದಿಂದ ದೋಣಿಯೆಡೆ ಹೋಗ್ತೀರ ಹಾಗೆಯೇ ಅದನ್ನೆರಲು ಯಶಸ್ವಿನೂ ಆಗುತ್ತೀರ.
ನೀವು ನಿಜಕ್ಕೂ ಸರಿಯಾಗಿ ಕಲ್ಪನೆ ಮಾಡಿಕೊಂಡ್ರೆ ಸಾಧಿಸ್ತೀರ. ಆ ಬಗ್ಗೆ ಕನಸು ಇಟ್ಕೊಂಡು ಮುನ್ನುಗ್ಗಿದರೆ ಖಂಡಿತ ಸಾಧಕರಾಗ್ತೀರ. ದೊಡ್ಡ ದೊಡ್ಡ ಕಾರ್ಯಗಳು ಆಗಿರೋದು ಶಕ್ತಿಯಿಂದಲ್ಲ, ಸತತ ಪರಿಶ್ರಮ ಹಾಗೂ ಏಕತಾನತೆಯಿಂದ ಅನ್ನೋದು ನಿಮಗೆ ಫೀಲ್ ಆಗ್ತಿದೆ. ಜೀವನದಲ್ಲಿ ಎದುರಾಗುವ ಗೊಂದಲಗಳಲ್ಲಿ ಎರಡು ತರ. ಒಂದು ಜೀವನದಲ್ಲಿ ಪವಾಡವೇ ಇಲ್ಲ ಅನ್ನೋದು, ಇನ್ನೊಂದು ಎಲ್ಲವೂ ಪವಾಡ ಅನ್ನೋದು! ನಿಮಗೆ ಅಸಾಧ್ಯ ಅಂತ ಜನರೆಲ್ಲರೂ ಹೇಳುವಾಗ ಅದನ್ನು ಸಾಧಿಸಿದಾಗ ಆಗುವ ಸಂತೊಷ ಇದೆಯಲ್ಲ ಅದರ ಮುಂದೆ ಯಾವ ಖುಷಿಯೂ ಇಲ್ಲ. ಯಾರಾದ್ರೂ ಆಗಿರ್ಲಿ, ಹೇಗಾದ್ರೂ ಇರಲಿ ಆದರೆ ಇಮ್ಯಾಜಿನೇಶನ್ನಲ್ಲಿ ಯಾರ್ ಏನೆ ಬೇಕಾದ್ರೂ ಮಾಡಬಹುದು. ನಿರಾಶಾವಾದಿಗೆ ಎಲ್ಲವೂ ಕಷ್ಟ, ಆಶಾವಾದಿಗೆ ಎಲ್ಲವೂ ಸುಲಭ. ಕತ್ತಲೆ ಜಾಸ್ತಿ ಇದೆ ಅಂತ ಸುಮ್ನೆ ಭಯಪಟ್ಟು ಕೂರೂದಕ್ಕಿಂತ ಒಂದು ಚಿಕ್ಕ ಕ್ಯಾಂಡಲನ್ನಾದರೂ ಹಚ್ಚಿ ಅದೇ ಸಾಕಾಗತ್ತೆ ಆ ಸಮಯಕ್ಕೆ ಧೈರ್ಯಕೊಡೋಕೆ! ಖಾಲಿ ಜೇಬುಗಳು ಯಾವತ್ತೂ ಸಾವಿನತ್ತ ಹೋಗು ಅನ್ನೊಲ್ಲ. ಖಾಲಿ ತಲೆ ಮತ್ತು ಕೆಲಸಕ್ಕೆ ಬಾರದ ಹೃದಯ ಆ ಕೆಲಸ ಮಾಡಿಸ್ತವೆ. ನೀವು ಯಶಸ್ವೀ ವ್ಯಕ್ತಿ ಆಗ್ತೀನಿ ಅಂತ ಹೋಗಬೇಡಿ. ನಾನೊಬ್ಬ ಮೌಲ್ಯಯುತ ಮನುಷ್ಯನಾಗ್ತೀನಿ ಅಂತ ಮುಂದುವರೆಯಿರಿ. ಮೊದಲು ಒಂದು ಹೆಜ್ಜೆ ಇಡಿ ಆಮೇಲೆ ಸಾವಿರ ಮೈಲಾದ್ರೂ ನಡೀತೀರ! ನಿಜಕ್ಕೂ ನಮಗ್ಯಾರಿಗೂ ದೊಡ್ಡ ಪ್ರಾಬ್ಲಮ್ ಅಂತ ಏನೂ ಇಲ್ಲ. ಸಣ್ಣ ಸಣ್ಣ ಅನೇಕ ಸಮಸ್ಯೆಗಳೆಲ್ಲಾ ಸೇರಿ ದೊಡ್ಡದು ಅನ್ನಿಸಿಕೊಂಡಿದೆ ಅಷ್ಟೆ. ಕೂಲಾಗಿ ಯೋಚಿಸಿ ದಾರಿ ಇರತ್ತೆ. ನೀವೀಗ ನಿಜಕ್ಕೂ ಆಹ್ಲಾದ ಸ್ಥಿತೀಲಿ ಇದೀರಿ ಅಂದ್ರೆ ನಿಮ್ಮ ಮೆದುಳಿನ ಸಕಾರಾತ್ಮಕ ನರ ಭಾಗ ಮಿಡಿತಾ ಇದೆ ಅಂತಾಯ್ತು. ನಿಧಾನಕ್ಕೆ ನೀವೀಗ ಕಲ್ಪನಾ ಲೋಕದಿಂದ ಹೊರಬಂದು ಹೊಸ ದೃಷ್ಟಿಕೋನದಿಂದ ನೋಡೊಕೆ ಪ್ರಯತ್ಸಿಸುತ್ತೀರ.. ಆದ್ರೂ ನಿಮಗೆ ಇನ್ನೂ ಧ್ಯಾನದ ಅವಶ್ಯಕತೆ ಇದ್ದು ದಿನಕ್ಕೊಮ್ಮೆಯಾದರೂ ಮಾಡಿದರೆ ಒಳ್ಳೆಯದು. ಜೀವನ ಒಂಧರಾ ಸೈಲಕ್ ಓಡಿಸಿದಂಗೆ. ಬ್ಯಾಲೆನ್ಸ್ ಇದ್ದಷ್ಟು ಹೊತ್ತು ಮುಂದುವರಿಬಹುದು. ಯಾವಾಗಲೂ ಬದುಕಿತರ್ೀವಿ ಅಂತಾ ಕನಸು ಕಾಣಬೇಕು. ಇವತ್ತೇ ಸಾಯ್ತೀವಿ ಅನ್ನೋ ರೀತಿಲಿ ಬದುಕ್ಬೇಕು. ನಮಗೆ ಯಾವುದು ಮಾಡೋಕೆ ಭಯಾನೋ ಅದನ್ನೆ ಹುಡುಕಿ ಮಾಡ್ಬೇಕು. ಆದ್ರಲ್ಲಿರೋ ಮಜಾನೇ ಬೇರೆ. ನಂಗೆ ಮೊದಲಿಂದಲೂ ಬರೆಯೋದಂದ್ರೆ ಭಯಾ ಇತ್ತು. ಆದ್ರೆ ಈಗ ಹೆಂಗೆ? ಡಿಫರೆಂಟ್ ಡಿಫರೆಂಟಾಗೆಲ್ಲಾ ಟ್ರೈ ಮಾಡ್ತೀನಿ. ಯಾಕೆಂದ್ರೆ ತೊಂಭತ್ತೊಂಭತ್ತು ಶೇಕಡಾ ಬುದ್ಧಿವಂತಿಕೆ, ಶ್ರಮ, ಅದೃಷ್ಟ, ವಿದ್ಯೆ, ಕಲಿಕೆ ಎಲ್ಲಾ ಇದ್ದೂ ಶೇಕಡ ಒಂದು ಪಸರ್ೆಂಟ್ ಆತ್ಮವಿಶ್ವಾಸ ಇಲ್ಲ ಅಂದ್ರೂ ಮಾಡೋ ಕೆಲಸ ಎಲ್ಲಾ ಹೊಗೇನೇ! ನೀವೂ ನೋಡಿ ಯೋಚ್ನೆ ಮಾಡಿ ನಿಮ್ ಲೈಫು, ನೀವೇ ಲೀಡ್ ಮಾಡ್ಬೇಕು.
ಇತಿ ಖಾಲಿ ವೇದಾಂತ ಸಮಾಪ್ತಯಾಮಿ..!

No comments:

Post a Comment