Saturday 28 March 2015

Selfಇ
ಕವಿಯಾಗಬೇಕೆಂದುಕೊಂಡೆ
ಕವಿತೆ ಬರೆಯಲೆ ಇಲ್ಲ..,
ಪದವಿಧರನಾಗಬೇಕೆಂದುಕೊಂಡೆ
ಕಾಲೇಜು ಓದಲೆ ಇಲ್ಲ..,
ಪರರ ಖುಷಿಯಲ್ಲಿಯೇ ಬದುಕಕಂಡೆ
ನಾನು ಸಾಯಲೇ ಇಲ್ಲ...!


ಚಚ್ಚಿ ಲೈನು
ಬರೆದ ಸುಳ್ಳೆಲ್ಲ
ಕವನವಾಯ್ತು..
ಬರೆಯದ ಸತ್ಯವೆಲ್ಲಾ
ಭೂಗತವಾಯ್ತು..!


Selfಇ
ಕವನಗಳ ಹೊಸಿಬೇಕು
ಹುಸಿಯಾಗದಂತೆ
ಓದುವವ ಉಲಿಬೇಕು
ಖುಷಿಯಾಗುವಂತೆ


Selfಇ
ಬಡತನದಿ ದೂಡಿದರು
ಬಡಿಬಡಿದು ಹಾಕಿದರು
ಆದರೂ ತಡೆಯದಾದರು 
ಅವರು ಕಾಲವನ್ನು..!
ಮತ್ತೆಯೆದ್ದು ಬಂದಿಹೆವು
ಮಗದೊಮ್ಮೆ ಗೆದ್ದಿಹೆವು
ತಡೆಯಲಾರಿರಿ ಯಾರೂ
ಶ್ರಮದ ಫಲವನ್ನು..!


Selfಇ
ತಡೆಗೋಡೆಯಿರಬೇಕು
ಸಾಧನೆಯ ಹಾದಿಯಲಿ
ಅಡೆತಡೆಗಳು ಸಿಗಬೇಕು
ಮುನ್ನುಗ್ಗುವ ಬೀದಿಯಲಿ
ಎಲ್ಲವನೂ ಮೀರುತ
ಎಲ್ಲೆಯನು ಸೇರುತ
ಜೀವನದ ಸಾರವ
ಖುಷಿಯಿಂದ ಹೀರುವ..!



No comments:

Post a Comment