Saturday 28 March 2015

Some ಮಾತು
ನಮ್ ಲೈಫು ಹಿಂಗೇನೆ!(?)
ಈ 2014 ಕ್ಯಾಲೆಂಡರ್ ವರ್ಷದ ಕೊನೆಗಟ್ಟದಲ್ಲಿದ್ದೇವೆ. ನಾವೆಲ್ಲ ಅಂದುಕೊಂಡಿದ್ದಕ್ಕಿಂತ ಆಗದಿರುವ ಕೆಲಸಗಳೇ ಜಾಸ್ತಿ ಇದಾವೆ! ಹಲವರಿಗೆ ಈ ವರ್ಷದಲ್ಲಿ ಸ್ವಲ್ಪ ನಗು, ಜಾಸ್ತೀನೇ ಅಳು. ಸ್ವಲ್ಪ ದುಃಖ, ಸ್ವಲ್ಪ ನಲಿವು, ಅನಿರೀಕ್ಷಿತ ತಿರುವುಗಳು, ದಿನಕಲಿಯೋ ಪಾಠಗಳು, ಜೀವನ ತೋರಿಸೋ ದಾರಿಗಳು, ಜಾಸ್ತೀನೇ ಅನ್ನಿಸುವಂತಹ ತೊಂದರೆಗಳು! ಜೊತೆಗೆ ಹೊಸದಾಗಿ ಸಿಕ್ಕ ಒಂದಷ್ಟು ಗೆಳೆಯರು, ಹೀಗಳೆದರೂ ಕೈ ಹಿಡಿಯುವ ಹಳೇ ಗೆಳತಿಯರು. ಮರೆಯಲಾಗದ ನೆನಪುಗಳು, ಯಾರಿಗೂ ಕಾಯದ ಹಾಳಾದ ಟೈಮುಗಳು, ಆಗದ ಕೆಲಸಗಳು, ಇಲ್ಲದ ಮನಸ್ಸುಗಳು, ಸಾಕಪ್ಪಾ ಸಾಕು ಅನ್ನಿಸುವಂತಹ ಪ್ರಸಂಗಗಳು ಎಲ್ಲರ ಜಿಂದಗಿಯಲ್ಲೂ ಕಾಮನ್ನಾಗಿ ಇದ್ದೇ ಇರತ್ತೆ! ಆದರೂ ಇತ್ತೀಚೆಗೆ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರಕರಣಗಳ ನಡುವೆ ಜೀವಂತವಾಗಿರುವ ನಾವೆಲ್ಲಾ ಒಂಥರಾ ಗ್ರೇಟ್ ಅನ್ಸತ್ತೆ! ಅದೊಂದು ಕೆಟ್ಟಗಳಿಘೆ ಅಂತಾರಲ್ಲಾ ಅಂತಾ ಟೈಮಲ್ಲೂ ಸ್ವಲ್ಪ ಸ್ಥೈರ್ಯ ಬೆಳೆಸಿಕೊಂಡ್ರೆ ಲೈಫ್ ಅಲ್ಲಿ ಮತ್ತೆಂದೂ ನಿರಾಶಾವಾದಿಗಳಾಗಿರೊಲ್ಲ!
ಜೀವನಾ ಅಂದ್ರೆ ಹೈಫೈ ಇಂಗ್ಲಿಷ್ ಮಾತಾಡ್ತಾ, ವೈಫೈ ಮೊಬೈಲ್, ಲ್ಯಾಪ್ಟಾಪ್ ಇಟ್ಕೊಂಡು, ಬ್ರಾಂಡೆಡ್ ಬಟ್ಟೆ ಹಾಕ್ಕೊಂಡು, ಶ್ರೀಮಂತ ಜೀವನ ನಡೆಸೋದು ಅಂತಾನಾ? ಖಂಡಿತಾ ಅಲ್ಲ. ನಮ್ಮ ಹೆಸರು ಕೇಳುತ್ತಿದ್ದ ಹಾಗೆ ಎಷ್ಟು ಜನರ ಮುಖದಲ್ಲಿ ಒಂದು ಖುಷಿಯ ಸೆಳಹು ಮೂಡುತ್ತೋ, ಎಷ್ಟು ಜನರಿಗೆ ನಗೆಯರಳಿಸಲು ಆಗುತ್ತೋ ಅದರ ಮೇಲೆ ನಿಂತಿದೆ. ನಮಗೆ ಬೆಸರವಾಗಿಸೋ ಅಸಂಖ್ಯಾತ ಘಟನೆಗಳು ನಡಿತಾನೆ ಇರುತ್ವೆ. ಒಂದು ಕಡೆ ಸುನಾಮಿ, ಇನ್ನೊಂದೆಡೆ ಬರಗಾಲ. ಒಂದು ಕಡೆ ಸಿಕ್ಕಾಪಟ್ಟೆ ಸೆಕೆ, ಮತ್ತೊಂದು ಕಡೆ ಕೊರೆವ ಚಳಿ, ಒಂದು ಕಡೆ ಬಿಳಿಜನ, ಇನ್ನೊಂದು ಕಡೆ ಕರಿಜನ, ಹೆಣ್ಣನ್ನು ಭೋಗದ ವಸ್ತು ತರ ನೋಡೋ ಕೆಲವು ಜನಗಳು, ಬರೀ ಮಾಂಸದ ಹೊದಿಕೆ ಎಂದು ಭಾವಿಸೋ ಸಂತರು, ನಾವು ದುಡ್ಡು ಅಂತ ಪೂಜಿಸೋ ವಸ್ತು ಕೂಡಾ ಕೆಲವರಿಗೆ ಕೇವಲ ಕಾಗದ ಮಾತ್ರ! ಹೀಗೆ ಚಿತ್ರ ವಿಚಿತ್ರ ಪರಿಸರದಲ್ಲಿ ನಾವು ನೀವು ಇದ್ದೇವೆ. ಸುಮ್ಮನೆ ಹುಟ್ಟಿದೀವಿ ಅದಕ್ಕೆ ಬದುಕಬೇಕು, ಬದುಕೋಕೆ ಹಣಬೇಕು ಅದಕ್ಕೋಸ್ಕರ ದುಡಿಬೇಕು ಅನ್ನೋ ಮನಸ್ಥಿತಿಯಿಂದ ಸ್ವಲ್ಪ ಆಚೆ ಬಂದ್ರೆ ಯಾಂತ್ರಿಕ ಜೀವನದಲ್ಲೂ ನಾವು ಮನುಷ್ಯರು ಅನ್ನೋ ಖುಷಿ ಇರತ್ತೆ!
ಕ್ಯಾಲೆಂಡರ್ ಪ್ರತಿವರ್ಷ ಬದಲಾಗ್ತಾನೆ ಇರತ್ತೆ, ಆರಂಭದಲ್ಲಿ ಹೊಚ್ಚ ಹೊಸದಾಗಿ ಚೆನ್ನಾಗಿರತ್ತೆ, ವರ್ಷಾಂತ್ಯಕ್ಕೆ ಅದೂ ಹಳೆತೆ! ಆದ್ರೆ ನಮ್ಮ ಮನಸ್ಸು ವಷರ್ಾವರ್ಷ ಬದಲಾಯಿಸೋ ಕ್ಯಾಲೆಂಡರ್ ತರಾ ಅಲ್ಲ. ದಿನದಿನ ಅಪ್ ಡೇಟ್ ಆಗೋ ಸಾಫ್ಟ್ವೇರ್ ತರಾ. ಆಗಿದ್ದು ಆಗಿ ಹೋಗಿದೆ. ಭೂತವನ್ನು ಬದಿಗೊತ್ತಿ ಭವಿಷ್ಯದ ಬಗ್ಗೆ ಜಾಸ್ತಿ ಯೋಚಿಸದೆ ವರ್ತಮಾನದಲ್ಲಿ ಖುಷಿ ಇಂದ ಇದ್ರೆ ಪ್ರತಿದಿನವೂ ನಮಗೆ ಹೊಸವರ್ಷದ ಆರಂಭವೇ! ವರ್ತಮಾನವನ್ನ ಇಂಗ್ಲೀಶಲ್ಲಿ 'ಪ್ರೆಸೆಂಟ್' ಅಂತಾರೆ ಯಾಕೆ? ಕಾರಣ ಅದು ನಮಗೊಂದು ಗಿಫ್ಟ್ ಅದಿಕ್ಕೆ! ದಿನಾದಿನ ಕನಸು ಕಾಣಬೇಕ್ರೀ, ಹಾಗೆಯೇ ನಮ್ಮ ಕನಸಲ್ಲಿ ಇರೋ ಸೌಂದರ್ಯವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಕಲ್ಪನೆಯಲ್ಲಿ ಸಾಧ್ಯವಾಗೋದನ್ನ ಕಾರ್ಯರೂಪಕ್ಕೆ ತರಬೇಕು. ನಮಗೆ ಸಮುದ್ರದ ದಡ ಬಿಟ್ಟು ಬರೋಕೆ ಧೈರ್ಯವಿಲ್ಲದಿದ್ದರೆ ಸಮುದ್ರ ದಾಟೋಕೆ ಹೇಗಾಗತ್ತೆ? ನಾವೆಲ್ಲಾ ಓಂಥರಾ ಚರಂಡಿ ಒಳಗಿದೀವಿ. ಅದರಲ್ಲಿ ಕೆಲವರು ಮಾತ್ರಾ ತಲೆ ಎತ್ತಿ ನಕ್ಷತ್ರ ನೋಡ್ತಾರೆ. ಉಳಿದವರು ತಮ್ಮ ಸುತ್ತಮುತ್ತಾ ನೋಡ್ತಾ ಅಸಹ್ಯ ಪಟ್ಕೊಂಡು ಹಾಗೇ ಜೀವನ ತಳ್ಳಿಬಿಡ್ತಾರೆ! ಲೈಫಲ್ಲಿ ನಾವು ಎಷ್ಟೋ ಸಲ ಬೀಳ್ತೀವಿ. ಬೀಳೋದು ನಮ್ಮ ಸೋಲಲ್ಲ. ಆದ್ರೆ ಏಳಕ್ಕೆ ಪ್ರಯತ್ನ ಪಡದೇ ಇರೋದು ಮಾತ್ರ ದುರಂತ! ಜೀವನದಲ್ಲಿ ತಪ್ಪೇ ಮಾಡದವರು ಏನೂ ಸಾಧಿಸಲಾರರು. ಆದಷ್ಟೂ ಬೇರೆಯವರಿಗೆ ಒಳ್ಳೆಯದನ್ನೇ ಮಾಡೋಣ. ಅವರ ಸಂತೋಷದಲ್ಲಿ ಕಾಣೋ ಸುಖ ಬೇರೆ ಏನಿದೆ?
ನಾಲ್ಕು ಔನ್ಸ್ ಇರೋ ನಮ್ಮ ಮಿದುಳು ಏನೇನನ್ನೋ ಯೋಚಿಸ್ತಾನೆ ಇರತ್ತೆ. ಆದ್ರೆ ನಮ್ಮ ಬಗ್ಗೆ ಸ್ವಾರ್ಥದ ಹೊರತಾಗಿ ಎಷ್ಟು ಯೋಚಿಸಿದೆ? ದಿನಂಪ್ರತಿ ನಮ್ಮ ನಡುವೆ ಇರುವ ಎಷ್ಟೋ ಜನ ನಿರಾಶಾವಾದಿಗಳು ಅಂದ್ರೆ ನಿಜಕ್ಕೂ ಬೇಜಾರಾಗತ್ತೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ದುರ್ಬಲ ಮನಸ್ಸಿನವರು ಯುವಜನರಾಗುತ್ತಿರುವುದು ನಿಜಕ್ಕೂ ಕಳವಳಕಾರಿ. ಭವಿಷ್ಯ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿಯೇ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ನಾ ಕಂಡಂತೆ ನಮ್ಮ ಶಿರಸಿಯ ಕಾಲೇಜು ವಿದ್ಯಾಥರ್ಿಗಳಿಗೆ ನಿಜಕ್ಕೂ ಕೌನ್ಸಲಿಂಗ್ ಅಗತ್ಯವಿದೆ. ಇಡೀ ದಿನ ಫ್ಯಾಕ್ಟರಿ ಮಶೀನ್ ತರ ಇತರ್ಾರೆ. ಕೊಟ್ಟಷ್ಟೇ ಕೆಲಸ! ಶಿಕ್ಷಣ ಪದ್ದತಿಯ ಪ್ರಭಾವವೋ, ಅಥವಾ ಪರಿಸರದ ಹಿನ್ನೆಲೆಯೋ ಏನೋ ಅವರಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಇಂಟರ್ನೆಟ್ ಅಂದ್ರೆ ಕೇವಲ ಫೇಸ್ ಬುಕ್ಕು, ವಾಟ್ಸಾಪು ಬಿಟ್ರೆ ಬೇರೆಯದೂ ಇದೆ ಎನ್ನುವ ಕಲ್ಪನೆಯೂ ಇದ್ದಂತಿಲ್ಲ. ಪತ್ರಿಕೆ ಓದಲ್ಲ, ಸಾರ್ವಜನಿಕ ಲೈಬ್ರರಿಗೆ ಜಾಸ್ತಿ ಜನ ತಲೆ ಹಾಕಿಲ್ಲ. ಒಂದು ಆರ್ಟಿಕಲ್ ಸ್ವತಂತ್ರವಾಗಿ ಬರೆಯುವ ಕೆಪಾಸಿಟಿಯೂ ಇದ್ದಂತಿಲ್ಲ. ಜೀವನದ ಚಿಕ್ಕಚಿಕ್ಕ ಪ್ರಶ್ನೆಗಳಿಗೂ ಶಾಲಾ ಪುಸ್ತಕದ ಸಿದ್ಧ ಉತ್ತರಗಳನ್ನೇ ಹುಡುಕ್ತಾರೆ. ಇಂತವರಿಂದ ಮುಂದೆ ಬೇರೆನನ್ನು ತಾನೇ ನಿರೀಕ್ಷೆ ಮಾಡೋಕಾಗತ್ತೆ? ಪ್ರೀತಿ, ಪ್ರೇಮದ ಪರಿಧಿಯೆಂದಾಚೆಗೂ ಸುಂದರ ಜಗವಿದೆ. ಕವಿತೆ, ಬರಹಗಳು ಯಾವಾಗಲೂ ಅದರ ಸುತ್ತಲೇ ಸುತ್ತುತ್ತಿರಬೇಕೆಂದು ನಿಯಮವೇನಿಲ್ಲ. ಒತ್ತಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಯುವಜನತೆಗೆ ಹುಟ್ಟುವ ಮೊದಲೇ ನಾವು ಲಕ್ಷಾಂತರ ಸ್ಪರ್ಮುಗಳ ಜೊತೆ ಹೊಡೆದಾಡಿ ಹುಟ್ಟಿದಂತಹ ಹುಟ್ಟು ಹೋರಾಟಗಾರರು ಅನ್ನುವುದು ತಿಳಿದಿಲ್ಲ ಅನ್ಸತ್ತೆ. ಪ್ರತಿದಿನ ಕಣ್ಣಿಗೆ ಕಾಣುವ ನೂರಾರು ಸಮಸ್ಯೆಗಳ ಜೊತೆ ಕಣ್ಣಿಗೇ ಕಾಣದ ಅಸಂಖ್ಯಾತ ಸಮಸ್ಯೆಗಳ ಜೊತೆಗೆ ಹೊಡೆದಾಡುತ್ತಿದ್ದೇವೆ. ಸ್ಟಾರ್ಟಿಂಗ್ ಟ್ರಬಲ್ ಇರೋ ಈ ಯೂತ್ಗಳನ್ನ ಹೇಗಾದರೂ ಮಾಡಿ ಸರಿ ಮಾಡಬೇಕಿದೆ. ಅವರಿಂದ ಕ್ರಿಯೇಟಿವ್ ಆಗೊ ಕೆಲಸಗಳನ್ನು ಹೊರತರಬೇಕಿದೆ. ಮುಖ್ಯವಾಗಿ ಇಲ್ಲಿಂದ ಹೊರಗೋಗುವ ಹುಡುಗರನ್ನು ನಮ್ಮಲ್ಲಿಯೇ ಇರಿಸಿಕೊಳ್ಳುವಂತಹ ಕೆಲಸಕ್ಕೆ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಕಾಲೇಜು ಕುಡಿಗಳಿಗಾಗಿಯೇ ಹೊಸತೊಂದು ಆನ್ ಲೈನ್ ಪತ್ರಿಕೆ ಆರಂಭಿಸುತ್ತಿದ್ದೇವೆ. ತಮ್ಮ ಕ್ರಿಯೇಟಿವಿಟಿಗಳನ್ನು ತೋರಿಸಲು ಒಂದು ವೇದಿಕೆ ಕಲ್ಪಿಸುತ್ತಿದ್ದೇವೆ. ಬಗ್ಗೆ ನಮ್ಮ ಮುಂದಿನ ಯೋಜನೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇವೆ. ನಿರಾಶಾವಾದಿ ಕಾಲೇಜು ಹುಡುಗರೇ ನಿಮ್ಮ ಮೇಲೆ ನಮಗೆ ಆಶಾವಾದವಿದೆ. ಶಿರಸಿಯಲ್ಲಿ ಹೊಸತೊಂದು ಅಲೆ ಎಬ್ಬಿಸುತ್ತೇವೆ. ಹೊಸ ವರ್ಷ ಇನ್ನೂ ಏನೇನ್ ಮಾಡ್ತೀವಿ ಅಂತ ನೋಡ್ತಾ ಇರಿ!

No comments:

Post a Comment