Saturday 28 March 2015

‪#‎ಪ್ರತಿಭಾವಂತ‬
ಆತ ಪಕ್ಷಿಗಳನ್ನು ತರಭೇತಿಗೊಳಿಸುವುದರಲ್ಲಿ ಹೆಸರಾಗಿದ್ದ. ಕಷ್ಟಪಟ್ಟು ನಿಷ್ಠೆಯಿಂದ ಅವುಗಳಿಗೆ ಟ್ರೈನ್ ಮಾಡುತ್ತಿದ್ದ. ಆದರೆ ಅವನ ಪರಿಶ್ರಮ ಹೊಟ್ಟೆ ತುಂಬಿಸುತ್ತಿರಲಿಲ್ಲ. ಅವನಿಗೆ ಪಕ್ಷಿತರಭೇತಿ ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ದಿನಕಳೆದಂತೆ ಬದುಕು ದುರ್ಬರವಾಗುತ್ತಿತ್ತು. ಕೆಲಸಕ್ಕಾಗಿ ಅಲೆದಾಡಿದ. ತನ್ನ ಪ್ರತಿಭೆ ಗುರುತಿಸಿ ಅದಕ್ಕೆ ತಕ್ಕದಾದಂತಹ ಕೆಲಸ ಕೊಡಿರೆಂದು ಕಂಡಕಂಡವರಲ್ಲಿ ಬೇಡಿದ. ಕೊನೆಗೆ ಸರಕಾರಕ್ಕೂ ಮೊರೆಹೋದ. ಸರಕಾರದಿಂದಾಗಲಿ, ಜನರಿಂದಾಗಲಿ ಆತನಿಗೆ ಸಿಕ್ಕಿದ್ದು " ಸರ್ಕಸ್ ಕಂಪನಿ ಕಾನೂನುಗಳೂ ಕಠಿಣವಾಗಿವೆ, ಇನ್ನು ನಿನ್ನ ವ್ಯರ್ಥಪ್ರತಿಭೆಗೆ ಯಾರೂ ಬೆಲೆಕೊಡರು!" ಇತ್ಯಾದಿ ಉತ್ತರಗಳು ಮಾತ್ರ.
ಆ ದಿನ ಒಬ್ಬ ಇವನನ್ನು ಹುಡುಕಿಕೊಂಡು ಬಂದ. ನೋಡಲು ಸ್ಪುರದ್ರೂಪಿ, ಮೇಲಾಗಿ ಎಜುಕೇಟೆಡ್. ನಿನ್ನ ಪ್ರತಿಭೆಗೆ ಕಂತೆಕಂತೆ ಹಣಕೊಡುವೆನೆಂದು ಅಡ್ವಾನ್ಸ್ ಕೂಡಾ ಕೊಟ್ಟ. ನನ್ನ ಜೊತೆ ನಮ್ಮ ದೇಶಕ್ಕೆ ಬಾ ಇನ್ನಷ್ಟು ಕೊಡುವೆನೆಂದು ಆಮೀಷವೊಡ್ಡಿದ. ಹಿಂದೆ ಮುಂದೆ ಯೋಚಿಸದೇ ನಮ್ಮ ದೇಶದಲ್ಲಿ ಇರದ ಬೆಲೆ ವಿದೇಶದಲ್ಲಿದೆಯೆಂದು ತಿಳಿದು ದೇಶವನ್ನು, ಜನರನ್ನು ಶಪಿಸುತ್ತಾ ಈತ ದೇಶಬಿಟ್ಟ.
ಆತನ ಪ್ರತಿಭೆ ಗುರುತಿಸಿ ಅವನನ್ನು ಉಪಯೋಗಿಸಿಕೊಂಡವರು ಅಪಘಾನಿಸ್ಥಾನದ ಆಲ್ ಖೈದಾ ಭಯೋತ್ಪಾದಕರು. ಈಗವನು ಭಯದಿಂದ ಅವರು ಹೇಳಿದಂತೆ ಪಕ್ಷಿಗಳಿಗೆ ತರಭೇತಿಕೊಳಿಸಿ ಅವುಗಳಿಗೆ ಬಾಂಬ್ ಕಟ್ಟಿ ವಿದ್ವಂಸಕ ಕೃತ್ಯ ಮಾಡುವಂತೆ ಅಣಿಗೊಳಿಸುತ್ತಿದ್ದಾನೆ.
‪#‎ಕೇವಲ_ಕಟ್ಟುಕತೆಯಲ್ಲ‬


------------------------------------------------------------------------------------------------------------

ಅವಳು 19ರ ತರುಣಿ. ಅಂದಚಂದದ ತಿದ್ದಿ ತೀಡಿದ ಮುಖದವಳು. ಯಾರೇ ಆದರೂ ವ್ಹಾವ್ ಎನ್ನುವಂತಿದ್ದಳು. ಆ ದಿನ ಅವಳ ಕಾಲೇಜಿನ ಮೊದಲ ದಿನ. ಬೆಳಿಗ್ಗೆಯೇ ಸ್ನಾನ ಮಾಡಿ ಚೆಂದದ ನೀಲಿ ಜೀನ್ಸು ಮತ್ತು ಗುಲಾಬಿ ಟೈಟ್ ಟೀ ಶರ್ಟ್ ತೊಟ್ಟು ಆಕರ್ಷಕವಾಗಿ ರೆಡಿಯಾಗುತ್ತಿದ್ದಳು. ಆದರೆ ಈಗ ಆ ಸುಂದರ ಹುಡುಗಿಯ ಮುಖದಲ್ಲಿ ಹತಾಷೆ ಮಡುಗಟ್ಟಿದೆ. ದುಃಖ ಮೇಳೈಸಿದೆ. ಒಂದೇ ಸಮನೆ ಹುಡುಕುತ್ತಿದ್ದಾಳೆ. ಕ್ಷಣಕ್ಷಣಕ್ಕೂ ಅವಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಒಮ್ಮೆ ತನ್ನ ಸುತ್ತಮುತ್ತ ನೋಡಿಕೊಂಡಳು, ಯಾರೂ ಕಾಣಿಸುತ್ತಿಲ್ಲ. ಮತ್ತಷ್ಟು ದಿಗಿಲುಗೊಂಡಳು. ನಂತರ ಒಮ್ಮೆ ಜೋರಾಗಿ ಕಿರುಚಿಕೊಂಡಳು,
.
.
.
.
.
.
"ಅಮ್ಮಾ.....
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ನನ್ ಮೇಕಪ್ ಕಿಟ್ ಎಲ್ಲಿ??!"

No comments:

Post a Comment