Saturday 28 March 2015

ಫ್ಲಾಪಿ ಕಥೆಗಳು

ಇದ್ದಾಗ "ಹೋಗ್ ಸಾಯಿ" ಅಂತ
ಛೇಡಿಸಿದವನೇ
ಸತ್ತಾಗ "ಮತ್ತೊಮ್ಮೆ ಹುಟ್ಟಿ ಬಾ" ಎಂದು
ಊರ ತುಂಬಾ ಪೋಸ್ಟರ್ ಅಂಟಿಸುತ್ತಿದ್ದಾನೆ..!!



ತನ್ನ ವಿನೂತನ ಯೋಜನೆಗಳನ್ನ ಜನರ ಮುಂದಿಟ್ಟಾಗ
ಹುಚ್ಚ ಎಂದು ನಕ್ಕಿದ್ದರು...
ಆತ ಸಾಧಿಸಿ ತೋರಿಸಿದಾಗ ಮಾತ್ರ ನಕ್ಕವರೆಲ್ಲಾ ಪೆಚ್ಚಾದರು..!!



ಮನೆಕೆಲಸದವರ ಮೇಲೆ ಬಹಳೇ
ಅನುಮಾನ ಹೊಂದಿದ್ದ ಆ ಶ್ರೀಮಂತೆ
ಹಣವನ್ನು ಯಾವಾಗಲೂ ಜೋಪಾನವಾಗಿ ಎತ್ತಿಡುತ್ತಿದ್ದಳು..
ಆದರೆ ಅವಳ ಮಗುವನ್ನು ಮಾತ್ರ ಆ ಕೆಲಸದವರ ಬಳಿಯೇ ಬಿಡುತ್ತಿದ್ದಳು..!!



ನಾನೊಬ್ಬ ಪಾಪಿ,
ಅವಳ ಮನ ನೋಯಿಸಿದ್ದಕ್ಕೆ
ಜೀವನದಿಂದ ತ್ಯಜಿಸಿದ್ದಕ್ಕೆ..!
ನಾನೊಬ್ಬ ಪಾಪಿ,
ಅವಳ ಮೂದಲಿಕೆಗೆ ಅತ್ತಿದ್ದಕ್ಕೆ
ಅವಳನ್ನು ಆಗ ಪ್ರೀತಿಸಿದ್ದಕ್ಕೆ..!!



ಆತನಿಗೆ ಏನೆನ್ನುವುದೋ ತಿಳಿಯುತ್ತಿಲ್ಲ,
ಕನಸಲ್ಲೂ ಕನಸನ್ನು ಕಳೆದುಕೊಂಡು
ಬೆಳಗೆದ್ದು ಗೋಳಾಡುತ್ತಿದ್ದಾನೆ..!!


ಉತ್ತಮ ಓಟಗಾರನಾಗಬೇಕೆಂದುಕೊಂಡು
ಮುಂಜಾನೆಯೇ ಜಾಗಿಂಗ್ ಹೊರಟ ಆತ
ಎಡವಿ ಬಿದ್ದು ಕಾಲು ಮುರಿದುಕೊಂಡ..!!




ಶಿವರಾತ್ರಿಯ ಪ್ರಯುಕ್ತ ಜಾಗರಣೆ ಮಾಡುವೆನೆಂದು ಹೇಳಿ ಸ್ನೇಹಿತನ ಮನೆಗೆ ಹೋದ ಆತ ಬೆಳಗಿನವರೆಗೂ ಪಾರ್ಟಿ ಮಾಡಿದ..!!



ಚಚ್ಚಿ ಚುಟುಕ

ಅವನುಂಡ ಎಂಜಲೆಲೆಯ ಊಟವೇ
ಅವಳಿಗೆ ಪರಮಾನ್ನ..
ಉಂಡಾದ ಮೇಲೆ ಬಾಳೆಯು
ಅವನಿಗೆ ಕೇವಲ ಕಸಕ್ಕೆ ಸಮಾನ..!!


ಚಚ್ಚಿ ಚುಟುಕ
ಕೋಮುಗಲಭೆಗೆ ತುತ್ತಾಗಿ
ಊರಿಗೂರೇ ಇಬ್ಬಾಗವಾಗಿತ್ತು..
ಆದರೂ ನಾವೆಲ್ಲ ಒಂದೇ
ಎಂದು ಸಾರುತಿತ್ತು
ಅಲ್ಲಿನವರ ಚೀತ್ಕಾರ ಮತ್ತು ನೆತ್ತರ..!!


ಫ್ಲಾಪಿ ಕಥೆ

ಅವೆರಡರ ಕಣ್ಣುಗಳೂ ಪರಸ್ಪರ
ಕಲೆತಿತ್ತು..
ಒಂದರ ಕಣ್ಗಳಲ್ಲಿ ಊಟ ಸಿಕ್ಕಿದ ಖುಷಿ.
ಇನ್ನೊಂದರಲ್ಲಿ ಜೀವ ಹೋಗುವ ಭಯ..!!


ಚಚ್ಚಿ ಚುಟುಕ
ಭಿಕ್ಷೆ ಬೇಡುತ್ತಿದ್ದ ಮುದುಕಿಯ
ಕಣ್ಣಲ್ಲಿ ಬದುಕಬೇಕೆಂಬ
ಛಲವಿತ್ತು..!!
ಆತ್ಮಹತ್ಯೆ ಮಾಡಿಕೊಂಡ
ಆ ಪದವೀಧರ ಶ್ರೀಮಂತನ ಬಳಿ
ಹಣವಿತ್ತು..!!


ಚಚ್ಚಿ ಚುಟುಕ
ಅವಳೆಂದಳು
"ಚಚ್ಚಿ...
ನನಗೋಸ್ಕರ ಚುಟುಕ ಬರಿ.."
ಅವಳಿಗೇನು ಗೊತ್ತು
ನನ್ನಲ್ಲುಳಿದದ್ದು ಈಗ
ಬರೇ ಹಾಯ್ಕುಗಳೆಂದು..!!

ಫ್ಲಾಪಿ ಕಥೆ 


ಅವಳ ಸಂತೋಷಕ್ಕಾಗಿ
ತನ್ನೆಲ್ಲಾ ಸುಖವನ್ನು
ಧಾರೆ ಎರೆದ...!
ಅವಳೀಗ ಸಂತೋಷವಾಗಿದ್ದಾಳೆ..
ಬೇರೆಯವನ ಜೊತೆಯಲ್ಲಿ..!!



ನಮ್ಮ ಸಮಾಜದ ವ್ಯವಸ್ಥೆಯನ್ನೇ ಬದಲಾಯಿಸುತ್ತೇನೆ,
ಎಂದು ಹೇಳಿ ಹೋಗಿದ್ದ ಆತ
ತಾನೇ ಬದಲಾಗಿ ಹಿಂತಿರುಗಿದ..!!








No comments:

Post a Comment