Saturday 28 March 2015

SOME ಮಾತು
ಉಡುಪು ಮತ್ತು ವಿವಾದ
"ಮಹಿಳೆಯರು ಜೀನ್ಸ್ ತೊಟ್ಟು ಬೇರೆಯವರಿಗೆ ತೊಂದರೆ ಕೊಡಬಾರದು. ಅದು ಭಾರತೀಯ ಸಂಸ್ಕೃತಿಗೆ ಒಗ್ಗುವುದಿಲ್ಲ, ಮುಚ್ಚಬೇಕಾದ್ದನ್ನು ಮುಚ್ಚಿಕೊಳ್ಳಲೇಬೇಕು"
ಹೀಗೆ ಖ್ಯಾತ ಸಂಗೀತಗಾರ ಯೇಸುದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಅವರ ಮೇಲೆ ಎಫ್.ಐ.ಆರ್ ಕೂಡಾ ದಾಖಲಾಗಿದೆ. ಹಾಗೆ ನೊಡಿದರೆ ಈ ವಿಷಯ ಇಂದಿಗೇ ಹೊಸತಲ್ಲ. ಮಹಿಳೆಯರ ಉಡುಪುಗಳ ಬಗ್ಗೆ ಆಗಾಗ್ಗೆ ತಗಾದೆಗಳು ಏಳುತ್ತಲೇ ಇರುತ್ತವೆ. ಕೇಸ್ಗಳು ಬೀಳುತ್ತಲೇ ಇರುತ್ತವೆ. ಇದೊಂತರ ಅತಿ ಸೂಕ್ಷ್ಮ ವಿಷಯವಾಗಿದ್ದು ನಾಲಿಗೆಗೂ ಮೆದುಳಿಗೂ ಸ್ವಲ್ಪ ಹೊಂದಾಣಿಕೆ ತಪ್ಪಿದರೂ ಎಡವಟ್ಟಾಗುವುದು ಖಂಡಿತ.
ಅಷ್ಟಕ್ಕೂ ಯೇಸುದಾಸ್ ಅವರು ಹೇಳಿದ್ದರಲ್ಲಿ ತಪ್ಪಿದೆಯಾ? ಸರಿ ಇದೆಯಾ? ಅನ್ನೋ ಪ್ರಶ್ನೆ ಮುಂದಿಟ್ಟಾಗ ಪರ-ವಿರೋಧ ಎರಡೂ ಸಿಗ್ತವೆ. ಈಗಿನ ದಿನಗಳಲ್ಲಿ ಹೆಣ್ಮಕ್ಕಳ ಬಗ್ಗೆ ಮಾತಾಡೋದೇ ಕಷ್ಟ, ಅಂಥದ್ದರಲ್ಲಿ ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಮಾತಾಡೋದು ಇನ್ನೂ ಅಪಾಯಕಾರಿ! ಈ ವಿಷಯದಲ್ಲಿ ಸ್ವತಃ ಹೆಣ್ಮಕ್ಕಳೇ ಹೇಳ್ತಾರೆ, ಹೌದು ಕಣ್ರೀ ನಮ್ಮಿಷ್ಟ, ನಮ್ ಡ್ರೆಸ್ಸು! ನಾವು ಹೇಗೆ ಬಟ್ಟೆ ಹಾಕ್ಕೊಂಡ್ರೆ ನಿಮಗೇನು? ಗಂಡಸರೇ ಬೇಕಾದ್ರೆ ಸೀರೆ ಉಟ್ಕೊಳ್ಳಳಿ, ನೈಟಿ ಹಾಕ್ಕೊಳ್ಳಿ, ಆದ್ರೆ ನಮ್ ವಿಷಯಕ್ಕೆ ಮಾತ್ರ ಬರಬೇಡಿ. ಹೆಣ್ಮಕ್ಕಳು ಹೇಗೆ ಬಟ್ಟೆ ಹಾಕೋತಾರೆ ಅನ್ನೊದನ್ನ ನೋಡೋದ ಬಿಟ್ಟು ನಿಮ್ಮ ಮನಸ್ಸನ್ನು ಹೇಗೆ ಕಂಟ್ರೋಲ್ ಮಾಡೋದು ಅನ್ನೋದನ್ನು ಕಲಿಯಿರಿ.. ಅವರು ಹೀಗೆ ಹೇಳ್ತಾ ಹೋದ್ರೆ ನಾವು ಮಾತಾಡುವ ಹಾಗೆ ಇಲ್ಲಾ. ಕೆಲವು ಹುಡುಗಿಯರ ಲೋವರ್ ಜೀಜ್ಸ್, ಡೀಪ್ ನೆಕ್, ಸ್ಲೀವ್ ಲೆಸ್ ಶರ್ಟು, ಓವರ್ ಮೇಕಪ್, ಬಾಡಿ ಸ್ಪ್ರೇ ಹೀಗೆ ಅವರು ಎಷ್ಟೇ ಟೆಂಪ್ಟ್ ಮಾಡುವ ಹಾಗೆ ನಡೆದುಕೊಂಡ್ರೂ ಹುಡುಗರು ಅಟೆಂಪ್ಟ್ ಮಾಡೋ ಹಾಗಿಲ್ಲ. ಯಾಕಂದ್ರೆ ಹುಡುಗರೂ ಕೂಡಾ ಜೀನ್ಸು, ಟೀ ಶರ್ಟು, ಡಿಯೋಡ್ರಂಟು ಎಲ್ಲಾ ಉಪಯೋಗಿಸ್ತಾರೆ. ಹೀಗಿದ್ದಾಗ, ಹುಡುಗರ ಮುಂದೆ ಹುಡುಗಿಯರು ಮಿಸ್ ಬಿಹೇವ್ ಮಾಡಿದ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಮತ್ಯಾಕೆ ಹುಡುಗರು ಮಾತ್ರಾ ಹಾಗೆ ಮಾಡೋದು? ಎಚ್ಚರ ತಪ್ಪೋದು?
ಮಡಿವಂತಿಕೆಯ ನಾವು ಜೀನ್ಸ್ ಹಾಕಬಾರದು ಅಂತೇವೆ! ಯಾಕೆ ಹಾಕಬಾರದು ಅಂದ್ರೆ ಕಾರಣ ಸರಿಯಾಗಿ ಎಲ್ಲರಿಗೂ ತಿಳಿದಿಲ್ಲ. ಬುಡಾನೇ ಗಟ್ಟಿ ಇಲ್ಲಾ ಅಂದ್ಮೇಲೆ ತುದಿ ಹೇಗ್ ತಾನೇ ಅಲ್ಲಾಡದೇ ನಿಲ್ಲತ್ತೆ? 'ಹೇಗೆ ದೇಶವೋ ಹಾಗೆ ವೇಷ' ಎಂಬ ನಾಣ್ಣುಡಿಯಿದೆ. ಭೌಗೋಳಿಕ ಮತ್ತು ಸಾಮಾಜಿಕ ಪ್ರದೇಶಗಳು, ಅಲ್ಲಿನ ಪರಿಸರ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಈ ಉಡುಪುಗಳು ಕೂಡಾ ಬದಲಾಗುತ್ತಿರುತ್ತವೆ. ಉಡುಪುಗಳು ಇರೋದೆ ಮಾನ ಮುಚ್ಚೋಕೆ, ಅಂತದ್ದರಲ್ಲಿ ಆ ಉಡುಪಿನ ಬಗ್ಗೆಯೂ ಯಾಕೆ ಬೇಕು ಗಲಾಟೆ? ಅಂದ್ರೆ ಮುಂದೊಂದು ದಿನ ಆ ನಿಮ್ಮ ಅನಿಸಿಕೆ ದುಬಾರಿಯಾಗಬಹುದು. ಭಾರತೀಯರು ಹೆಚ್ಚಾಗಿ ನೂಲಿನ ಖಾದಿ ಬಟ್ಟೆ, ದೊಗಳೆ ಪೈಜಾಮ ಆದಿ ಕಾಲದಿಂದಲೂ ಧರಿಸುತ್ತಿದ್ದಾರೆ. ಅದೇ ಪಾಶ್ಚಿಮಾತ್ಯರು ಸೂಟು-ಟೈ ಧರಿಸುವುದು ವಾಡಿಕೆ. ಈಗ ಸೂಟು ಟೈ ಹಾಕೋದೆ ಪ್ರತಿಷ್ಟೆಯ ಸಂಕೇತವಾಗಿದೆ. ಅದು ಯಾಕೆ ಅನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಶೀತ ಹವಾಮಾನವಿದ್ದು ಅಂತಹ ಪ್ರದೇಶಗಳಲ್ಲಿ ಬೆಚ್ಚನೆಯ ಸೂಟು-ಟೈಗಳು ಅನಿವಾರ್ಯವಾಗಿತ್ತು. ಆದರೆ ಈ ಅಂಧಾನುಕರಣೆಯಿಂದ ಕೆಲವರು ಸಹಾರಾ ಮರುಭೂಮಿಗೆ ಹೋದರೂ ಕೋಟು ಟೈ ಬಿಡಲ್ಲ ಅಂತಾರೆ.
ಒಂದು ವಿಷಯವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಸಾಂಸ್ಕೃತಿಕವಾಗಿ ಭಾರತೀಯತೆಯ ಅಧಃಪತನವಾಗಿದೆ. ನಮ್ಮಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಉಡುಪುಗಳ ಮಹತ್ವವನ್ನು ಸಾರುವ ಶಿಕ್ಷಣದ ಅಭಾವವಿದೆ. ನಮ್ಮ ಸಂಸ್ಕೃತಿಯಲ್ಲಿ ಸ್ಥೂಲದೊಂದಿಗೆ ಸೂಕ್ಷ್ಮದಲ್ಲಿನ ಕಾರಣಗಳನ್ನು ವಿವೇಚನೆ ಮಾಡಿ, ಆಧ್ಯಾತ್ಮಿಕ ಕಾರಣ ಮೀಮಾಂಸೆಗಳನ್ನು ತಿಳಿದುಕೊಂಡು ಮಡಿ-ಉಪವಸ್ತ್ರ, ಧೋತರ-ಅಂಗಿಯಂತಹ ಉಡುಪುಗಳನ್ನೇ ಯಾಕೆ ಧರಿಸಬೇಕು ಎಂಬ ಬಗ್ಗೆ ನಮ್ಮಲ್ಲಿ ಸರಿಯಾದ ಜಾಗೃತಿ ಕಾರ್ಯಕ್ರಮಗಳು ಬರಬೇಕಿದೆ. ಸೂಕ್ಷ್ಮದಲ್ಲಿ ನಮ್ಮ ಸುತ್ತಲೂ ಅನೇಕ ಲಹರಿಗಳು ಆವೃತವಾಗಿದ್ದು ಅವು ನಮ್ಮ ದೇಹದ ಮತ್ತು ಮನಸಿನ ಮೇಲೆ ಪರಿಣಾಮಗಳನ್ನು ಬೀರುತ್ತಿರುತ್ತವೆ. ಆ ಕಾಣದ ಲಹರಿಗಳಲ್ಲಿನ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳು ಉಡುಪುಗಳ ಮುಖಾಂತರ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಈ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮತ್ತು ಅಧ್ಯಯನಗಳನ್ನು ಕೂಡಾ ಮಾಡಲಾಗಿದ್ದು, ಪಾಶ್ಚಿಮಾತ್ಯ ಶೈಲಿಯ ಪ್ಯಾಂಟ್- ಶಟರ್್ ಮತ್ತು ಭಾರತೀಯ ಧೋತರ-ಅಂಗಿ ಧರಿಸಿದವರ ಶರೀರದಲ್ಲಿನ ಕುಂಡಲಿನಿ ಚಕ್ರಗಳ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನು 'ಇಲೆಕ್ಟ್ರೋಸೋಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್' (Electrosomatographic Scanning ಪದ್ದತಿಯ ಮೂಲಕ ಅಧ್ಯಯನ ನಡೆಸಿದಾಗ, ನಾವೆಲ್ಲಾ ಹೆಚ್ಚಾಗಿ ಹಾಕುವ ಜೀನ್ಸ್ ಪ್ಯಾಂಟ್- ಟೀ ಶರ್ಟುಗಳು ವ್ಯಕ್ತಿಯ ಷಟ್ ಚಕ್ರಗಳಲ್ಲಿ ರಜ-ತಮ ಲಹರಿಗಳ ಪ್ರಮಾಣವನ್ನು ಹೆಚ್ಚಿಸಿ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆ ಅನುಭವಿಸುವ ಬಗ್ಗೆ ತಿಳಿದುಬಂದಿದೆ. ಆ ಪ್ರಕಾರವಾಗಿ ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲೇ ಸಾತ್ತ್ವಿಕ ಪ್ರಮಾಣವು ಅಧಿಕವಾಗಿದೆ.
ಆದರೆ ನಮ್ಮ ದೈನಂದಿನ ಜೀವನದಲ್ಲಿ ಪ್ರತಿಬಾರಿಯೂ ಸಾತ್ತ್ವಿಕ ಉಡುಪುಗಳನ್ನು ಉಪಯೋಗಿಸಲು ಸಾಧ್ಯವಿಲ್ಲ. ಶಾಲೆಗಳಲ್ಲಿ ಮತ್ತು ಕಾಯರ್ಾಲಯಗಳಲ್ಲಿ ನಿಯಮಗಳಿಗನುಸಾರವಾಗಿಯೇ ಉಡುಪುಗಳನ್ನು ಧರಿಸುವುದು ಅನಿವಾರ್ಯ. ಆದರೆ ನಮ್ಮ ಮನೆಯಿಂದಲೇ ಇಂತಹ ಉಡುಪುಗಳನ್ನು ಧರಿಸುವುದನ್ನು ಅಭ್ಯಾಸ ಮಾಡಿದರೆ ಇದೇ ಮುಂದೆ ಇತರರಿಗೂ ಪ್ರೇರಣೆಯಾಗಬಹುದು. ಇದೇ ರೀತಿ ಸ್ತ್ರೀಯರು ಆಭರಣಗಳನ್ನು ಯಾಕೆ ಧರಿಸಬೇಕು. ಇದರಿಂದ ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ನಮ್ಮ ದೇಹ ಮತ್ತು ಮನಸ್ಸಿನ ಮೇಲಾಗುವ ಲಾಭಗಳೇನು? ಆಭರಣಗಳನ್ನು ಮಹಿಳೆಯರೇ ಜಾಸ್ತಿ ಉಪಯೋಗಿಸುವುದೇಕೆ ಮುಂತಾದವುಗಳ ಬಗ್ಗೆ ತಿಳಿದುಕೊಂಡರೆ ಮಹಿಳೆಯರ ಉಡುಪು, ಅವರ ಜೀವನ ಶೈಲಿ ಮುಂತಾದವುಗಳ ಬಗ್ಗೆ ನಡೆಯುತ್ತಿರುವ ಅನಗತ್ಯ ಚಚರ್ೆಗೆ ಪೂರ್ಣವಿರಾಮ ಹಾಕಬಹುದು. ಈ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಮಾರ್ಗದರ್ಶನ ಖಂಡಿತಾ ಲಭ್ಯವಿದೆ. ಆದರೆ ಆ ಬಗ್ಗೆ ಮನಸ್ಸು ಬೇಕಷ್ಟೆ! ಮಹಾನವಮಿ ದಿನ ಪೆನ್ನಿಗೆ ಪೂಜೆ ಮಾಡಿ ಅದೇ ಪೆನ್ನಿಂದ ವಿಜಯದಶಮಿ ದಿನವೇ ದೇವರಿಲ್ಲವೆಂದು ಲೇಖನ ಬರೆಯುವ ಮನಸ್ಥಿತಿಯಿದ್ದಲ್ಲಿ ಏನೂ ಮಾಡೋಕಾಗಲ್ಲ, ಕಾಲವೇ ಉತ್ತರ ಕೊಡಬೇಕು. ಯಾರ್ ಏನಾರಾ ಹೇಳ್ಕೊಳ್ಳಿ, 'ನಾವ್ ಇರೋದೆ ಹಿಂಗೆ' ಅಂತಾ ಜೀನ್ಸು ಸಿಗಿಸ್ಕೊಂಡು, ಶಟರ್್ ನೇತಾಕೊಂಡು ಹೋಗೋರಿಗೆ ನಾವು ಹಿಡ್ಕೊಂಡ್ ಬಂದು ನೀವ್ ಇದನ್ನೇ ಹಾಕಬೇಕು, ಅದನ್ನೇ ಮಾಡಬೇಕು ಅನ್ನೋ ಪರೀಸ್ಥಿತಿಲಂತೂ ಖಂಡಿತಾ ಯಾರೂ ಇಲ್ಲ. ಉಳಿದದ್ದು ಅವರವರಿಗೆ ಬಿಟ್ಟದ್ದು!

No comments:

Post a Comment