Saturday 28 March 2015

ಚಚ್ಚಿ ಲೈನು
ಅಲ್ಲಿ ನಡೆಯುತ್ತಿತ್ತು
ಜೋರು ದನಿಯ ವಾಗ್ಯುದ್ಧ
ಕೆಲವರು ಹೇಳುತಿದ್ದರು
"ಸಂಕ್ರಾತಿ ನಮ್ಮ ಧರ್ಮದ ಮೊದಲ ಹಬ್ಬ"
ಅದಕ್ಕೆ ತಕರಾರೆತ್ತಿದ್ದವರ ಪ್ರಕಾರ
"ನಮ್ಮ ಸಂಕ್ರಾಂತಿ, ವರ್ಷದ ಕೊನೆಯ ಹಬ್ಬ"
ಯುದ್ಧ ಭೀಕರವಾಯ್ತು,
ಅವಾಚ್ಯಗಳು ಹೊರಹೊಮ್ಮಿತು
ಮಾತು ಹೊಡೆದಾಟದಲ್ಲಿ ಕೊನೆಗೊಂಡಿತು,
ಹಬ್ಬದಲ್ಲಿ ಬಲಿ ಬಿದ್ದಿತ್ತು,
ನರರ ನಡುವೆ ವೈಷಮ್ಯ ತುಂಬಿತು
ಕೂಡಿಬೆರೆತ ಎಳ್ಳು ಬೆಲ್ಲ
ಧರ್ಮಾಂಧರಿಂದ ನಲುಗಿತ್ತು!


ಚಚ್ಚಿ ಮಟಾಷ್
ಆ ಹುಡುಗಿಯ
ಕಣ್ಣೇಟಿಗೆ
ಮೈಮಾಟಕೆ ಸಿಲುಕಿ,
ನಾನೀಗ ಬಂಧಿ-
ನಿಮಾನ್ಸಿನ ರೂಮೊಳಗೆ!


ಚಚ್ಚಿ ರೊಮ್ಯಾನ್ಸ್
ಅವಳ ಸುಂದರತೆಯ
ನೆನಪಿನಂಗಳದಲಿ,
ಚಂದ್ರನ ಬೆಳದಿಂಗಳೂ
ಮಂಕಾಗಿದೆ!


ಚಚ್ಚಿ ಲೈನು
ಅವನೊಬ್ಬ ಪಕ್ಕಾ ಸಸ್ಯಾಹಾರಿ
ಮೊಬೈಲಲ್ಲಿದ್ದದ್ದು
-ಪ್ಯೂರ್ ನಾನ್ ವೆಜ್


ಚಚ್ಚಿ ಲೈನು
ಮಿಡತೆ ತಿನ್ನುವ ದೇಶದಲ್ಲಿ,
ಮಿಡತೆ ತಪ್ಪಿಸಿಕೊಂಡರೆ FLY!
ಸಿಕ್ಕಾಕೊಂಡ್ರೆ FRY!!


ಚಚ್ಚಿ ಲೈನು
ಕಾಡು ಹರಟೆಯೂ
ಮಾಡುತಿದೆ..
ಜನರಿಲ್ಲದೇ-
ಅರಣ್ಯರೋಧನ


ಚಚ್ಚಿ ಲೈನು
ನನ್ನ ಬಾಲೀಶ
ಬರಹಗಳಿಗೂ
ಓದುಗರೇ ಮಾಲೀಷು
ಮಾಡಬೇಕು..!


ಚಚ್ಚಿ ರೊಮ್ಯಾನ್ಸ್
ಆವರಿಸಿದ ನೀರವ
ಮೌನವನೂ ಬಡಿದು
ಕೊಲ್ಲುವ ಶಕ್ತಿಯಿದೆ
-ನನ್ನವಳ ಆಲಿಂಗನಕೆ!


ಚಚ್ಚಿ ಲೈನು
ಸಿಟ್ಟಲ್ಲಿ ಕುಟ್ಟಿಸಿಕೊಂಡ
ಆ ಸೌಟಿಗೂ
ಶೆಪೌಟಾದ ಚಿಂತೆ!


ಚಚ್ಚಿ ಲೈನು

ಮುಳುಗುತಿರುವ ನೇಸರನ
ಕಿರಣವೂ ನೆನಪಿಸುತಿದೆ
ನನ್ನವಳ ಆ ಮುಂಗುರುಳು


ಚಚ್ಚಿ ಲೈನು

ಸಂಜೆಯ ಸೂರ್ಯಾಸ್ತದ ಬೆಳಕಲ್ಲೂ
ಅವಳ ಕಣ್ಣಲ್ಲಿ ಹೊಳಪಿದೆ;
ಚಂದ್ರನ ತುಂಡವಳು


ಚಚ್ಚಿ ಲೈನು

ರಾತ್ರಿಯ ಎಣ್ಣೆಯೇಟಿಗೆ
ಸಿಕ್ಕು ಒಲಿದ ನಿದಿರೆಯ
ಮತ್ತು ಹಾಗೂ ಗಮ್ಮತ್ತು
ಕುಡಿವವರಿಗಷ್ಟೇ ಗೊತ್ತು..!


Self ಇ..
ಅಕ್ಷರಗಳ ಅಂದವಾಗಿ ಜೋಡಿಸಿ
ಸುಂದರ ಕಾವ್ಯ ಚಿತ್ತಾರ ರಚಿಸಲು
ನಾನೇನು ಕವಿಯಲ್ಲ..
ಬಂದ ಅನಿಸಿಕೆಗಳ ಯಥಾವತ್ತಾಗಿ
ಬರೆದಿಡುವ ಸಾಮಾನ್ಯ ಅಕ್ಷರಸ್ಥ ನಾನು..!
ಕೆಲವರು ಮೆಚ್ಚಿದಿರಿ
ಹಲವರು ನಿರ್ಲಕ್ಷಿಸಿದಿರಿ
ಅದರ ಬಗ್ಗೆ ಯೋಚಿಸುತ,
ಬಂದ ಲೈಕು, ಕಾಮೆಂಟುಗಳನೆಣಿಸುತ
ಕೂರುವ ಶಕ್ತಿಯು ನನಗಿಲ್ಲ
ಮಾಡುವ ಕೆಲಸಗಳಲಿ ಶ್ರದ್ಧೆ
ಕಡಿಮೆಯಾಗದಂತೆ ಮಾಡು
ಓ ಭಗವಂತಾ..!


SELF ಇ..
ಶಿಕ್ಷಣಕ್ಕೆ ಹಣವಿಲ್ಲದೆ
ಪರದಾಡುತಿದ್ದಾಗ
ಆಲಿಂಗಿಸಿದ ಗ್ಯಾರೇಜು ಕೆಲಸ..
ಅದೇ ಸರ್ವಸ್ವ ಎಂದುಕೊಂಡಿದ್ದಾಗ,
ಧರ್ಮ ದಳ್ಳುರಿಗೆ ಸಿಲುಕಿ
ಬೆಂಕಿಗಾಹುತಿಗಾದಾಗ,
ಮತ್ತೆ ಹೊಸತನದತ್ತ ಬೆಳೆಸಿ
ಕಲಿಸಿದ ಈ ಜೀವನಕ್ಕೆ
ಪ್ರೀತಿಯಾ ನಮನ..!


SELF ಇ..
ಪ್ರೀತಿಸಿ ಮದುವೆಯಾದ ಹೊಸತರಲ್ಲಿ
ಅವರಿಬ್ಬರೂ ಅನುಭವಿಸಿದ ಕಷ್ಟಗಳೆಷ್ಟೋ..
ಪೈಸೆ ಪೈಸೆಯೂ ಕೂಡಿಡುವಾಗ
ಸಾಲಕ್ಕಾದ ಬಡ್ಡಿಗಳೆಷ್ಟೋ..
ಅವುಡುಗಚ್ಚಿ ಸಹಿಸಿದ ಮೇಲೆ
ಕಷ್ಟಕ್ಕೂ ಒಂದು ಕೊನೆಯುಂಟು..
ಆತ್ಮವಿಶ್ವಾಸದಿ ಬದುಕುತಿರುವವರಿಗೆ
ಜಗದೆಲ್ಲೆಡೆ ನೆಲೆಯುಂಟು!


SELF ಇ..
ಆಟವಾಡಿದರು ಅವರು
ಹೆಣ್ಣಿನ ಭಾವನೆಗಳೊಂದಿಗೆ..
ಚೆಲ್ಲಾಟವಾಡಿದರು ಅವರು
ಅವಳ ಪರಿಸ್ಥಿತಿಯೊಂದಿಗೆ..
ತಡೆಗೋಡೆಯ ಕಟ್ಟಿದರು
ಆಕೆಯ ಜೀವನದಲ್ಲಿ..
ದುಃಖವ ತರಿಸಿದರು
ಅವಳ ತನು ಮನದಲ್ಲಿ..
ಆದರೂ,
ಎಲ್ಲವನು ಮೀರಿ
ಎಲ್ಲೆಯನು ದಾಟಿ
ನಗುತ ಹೊರಟವಳಿಗೀಗ
ಜಗವೇ ತಲೆಬಾಗಿದೆ..
ಅಂತಹ ನೂರಾರು ಮಹಿಳೆಯರು
ನಮ್ಮ ನಡುವಿದ್ದಾರೆ..
ಕಣ್ತೆರೆದು ಒಮ್ಮೆ
ನೋಡುವ ಮನಸಾಗಿದೆ..!



No comments:

Post a Comment