Saturday 28 March 2015

ಎಲ್ಲಿದೆ ನಮ್ಮ ಶಿರಸಿಯ ಯುವಜನತೆ..!?
ಯುವಕರೇ ನಮ್ಮ ದೇಶದ ಬೆನ್ನೆಲುಬು, ಸ್ಪೈನಲ್ ಕಾರ್ಡು, ಪವರ್ಫುಲ್ ವೆಪನ್ನು ಅಂತೆಲ್ಲಾ ಅಂತಾರೆ! ನಮ್ಮ ದೇಶದ ಅರ್ಧದಷ್ಟು ಯುವಜನತೆಯೇ ತುಂಬಿದ್ದಾರೆ. ಶಕ್ತಿ ಮತ್ತು ಚೈತನ್ಯದ ಸಂಕೇತ ಆಗಬೇಕಿದ್ದ ಯುವಜನತೆ ಹತಾಷೆಯ ಮಡುವಿನಲ್ಲೇ ಮಲಗಿದ್ದಂತೆ ತೋರುತ್ತಿದೆ. ಅಲ್ಲದೆ ಮಾನಸಿಕ ಒತ್ತಡದಲ್ಲಿ ಬಂಧಿಯಾದಂತಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೂ ಕಿರಿಕ್ಕು, ಸಿಟ್ಟು ಕಾಮನ್ನಾಗಿದೆ! ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಯುವಜನರ ಸಂಖ್ಯೆಯೂ ಅಧಿಕವಾಗಿವೆ. ಕಳೆದ ವಾರವಷ್ಟೇ ಶಿರಸಿಯ ಕಾಲೇಜಿನ ಯುವಕ-ಯುವತಿ ಹುಬ್ಬಳ್ಳಿಯಲ್ಲಿ ಉರುಳು ಹಾಕಿಕೊಂಡದ್ದು ಗೊತ್ತೇ ಇದೆ. ಅವರೇನೋ ಸತ್ತು ಅಮರ ಪ್ರೇಮಿಗಳಾದೆವು ಅಂತ ಅಂದುಕೊಂಡಿರಬಹುದು! ಆದರೆ ಅವರಿಂದ ನೋವನ್ನು ಅನುಭವಿಸುತ್ತಿರುವ ಅವರ ಪಾಲಕರಿಗೆ, ಗೆಳೆಯರಿಗೆ ಮತ್ತು ಹಿತೈಷಿಗಳಿಗೆ ನಮ್ಮದೊಂದು ಸಂತಾಪ!
ಈ ಪ್ರೀತಿ, ಪ್ರೇಮದ ಬಗ್ಗೆ ಬರೆಯೋಕೆ ಹಿಡಿಯಷ್ಟು ಜಾಗವಿದ್ದರೂ ಪುಟಗಟ್ಟಲೆ ಕೊರೆಯಬಹುದು. ಆದರೆ ಎದ್ದು ನಿಲ್ಲಿ, ದಿಟ್ಟವಾಗಿರಿ, ದೃಢವಾಗಿರಿ, ಸಮಸ್ತ ಜವಾಬ್ದಾರಿಯನ್ನೂ ನಿಮ್ಮ ಹೆಗಲಿನ ಮೇಲೆ ಹೊತ್ತುಕೊಳ್ಳಿ, ನಿಮ್ಮ ಹಣೆಬರಹದ ಸೃಷ್ಟಿಕರ್ತರು ನೀವೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಎಲ್ಲಾ ಸಾಮಥ್ರ್ಯ ಮತ್ತು ಸಹಾಯ ನಿಮ್ಮಲ್ಲೇ ಅಡಗಿದೆ. ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ.. ಎಂದ ವಿವೇಕಾನಂದರ ಮಾತು ಕೇವಲ ಭಾಷಣ ಮತ್ತು ಬರವಣಿಗೆಗೆ ಮಾತ್ರಾ ಸೀಮಿತವಾದಂತಿರೋದು ದುರಂತವಲ್ವೇ? ಹಾಗಿದ್ರೆ ಯುವಜನತೆಗೆ ಅವರ ಭವಿಷ್ಯವನ್ನು ಅವರೇ ನಿಮರ್ಿಸಿಕೊಳ್ಳೋಕೆ ನಮ್ಮ ಸಮಾಜ ಬಿಡುತ್ತಾ ಅನ್ನೋ ಪ್ರಶ್ನೆ ಎದುರಾಗತ್ತೆ! ದೇಶದ, ರಾಜ್ಯದ ಕೊನೆ ಪಕ್ಷ ಗ್ರಾಮ ಪಂಚಾಯತಿ ಲೆವೆಲ್ನ ರಾಜಕೀಯದಲ್ಲಿ ಕೂಡಾ ಎಷ್ಟು ಯುವಜನತೆ ಇದೆ ಹೇಳಿ? ಹಣದ ಆಸೆ ತೊರಿಸಿ ಯುವಜನತೆಯನ್ನು ವಿಧವಿಧದ ದಂಧೆಗೆ ಇಳಿಸುವ ವ್ಯವಸ್ಥೆ ಹಂತಹಂತವಾಗಿ ಆಗ್ತಾ ಇದೆ. ಇಷ್ಟೆಲ್ಲಾ ನಕಾರಾತ್ಮಕ ಅಂಶಗಳಿದ್ರೂ, ದಿನಂಪ್ರತಿ ಯುವಜನರ ಆತ್ಮಹತ್ಯಾ ಪ್ರಕರಣಗಳು ಹೆಚ್ಚುತ್ತಿದ್ದರೂ ಪದೇ ಪದೇ ಅದದನ್ನೇ ಓದೋಕೆ ನಿಮಗೂ ಬೇಸರ. ಬರೆಯೋಕೆ ನನಗೂ ಖೇಧ..!
ಕರ್ನಾಟಕ ಸರಕಾರವು ಯುವಜನರ ಸಮಗ್ರ ಸಬಲೀಕರಣಕ್ಕೊಸ್ಕರ ತಲುಪುವುದು, ತೊಡಗಿಸುವುದು, ಸಬಲೀಕರಿಸುವುದು, ಕೊಡುಗೆ ನೀಡುವುದು ಮತ್ತು ಅಭಿವೃದ್ಧಿ ಎಂಬ ಐದು ಹಂತದ ಕಾರ್ಯತಂತ್ರವನ್ನು ರಾಜ್ಯ ಯುವನೀತಿಯ ಮೂಲಕ ರೂಪಿಸಿದೆ. ರಾಜ್ಯ ಯುವನಿತಿಯ ಕಾರ್ಯಕ್ರಮಗಳು ಕರ್ನಾಟಕ ರಾಜ್ಯಾದ್ಯಂತ ಬಹುಹಂತದ ಅವಕಾಶಗಳ ಸೃಷ್ಟಿಗೆ ಒತ್ತು ನೀಡಲು ಉದ್ದೇಶಿಸಿದೆ. ಆದರೆ ಇವೆಲ್ಲಾ ಕೇವಲ ವೋಟ್ ಬ್ಯಾಂಕ್ ಸೆಂಟರುಗಳಾಗದೆ ಎಲ್ಲಾ ಯುವಜನತೆಗೂ ಈ ಬಗ್ಗೆ ತಿಳಿಸಬೇಕಾದ ಮತ್ತು ಸಾದರಪಡಿಸಬೇಕಾದ ಜರೂರಿದೆ. ಕರ್ನಾಟಕದ ಒಟ್ಟೂ ಜನತೆಯ ಶೇಕಡಾ 66ರಷ್ಟು 20-29 ವಷಸ್ಸಿನವರು. ಅಂದ್ಮೇಲೆ ನಮ್ಮ ರಾಜ್ಯದ ಪವರ್ ಎಷ್ಟಿರಬೇಕು? ಆದರೆ ಉಪಯೋಗಿಸಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಇನ್ನು ನಮ್ಮ ಶಿರಸಿಯ ವಿಷಯವನ್ನೇ ತೆಗೆದುಕೊಂಡರೆ ಶಿರಸಿಯಲ್ಲಿ ಕಾಲೇಜು ಮುಗಿಸಿದಂತಹ ಯುವ ಜನತೆ ಪ್ರಮಾಣ ಎಷ್ಟಿದೆ? ಎಲ್ಲರೂ ಕೆಲಸವನ್ನು ಅರಸಿ ಬೇರೆಡೆಗೆ ಹೊರಟರೆ ಇಲ್ಲಿರುವುದು ಯಾರು? ಹೀಗೆ ಮುಂದುವರೆದರೆ ಮುಂದೊಂದು ದಿನ ಶಿರಸಿ ಮುದುಕರ ಊರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇರೊದೆ ಅರ್ಧದಷ್ಟು ಯುವಕರು, ಅದರಲ್ಲೂ ಆತ್ಮಹತ್ಯೆ, ಹೊಡೆದಾಟ, ಮತ್ತೊಂದು ಇನ್ನೊಂದು ಕೇಸ್ ಮಾಡಿಕೊಳ್ಳುವುದ ಬಿಟ್ಟು ಸಕಾರಾತ್ಮಕವಾಗಿ ಹೆಸರು ಮಾಡಿಕೊಂಡ ಯುವಕರು ಎಷ್ಟಿದ್ದಾರೆ ಹೇಳಿ? ಬೇರೆಡೆಗೆ ಮಾಡುವ ಕೆಲಸ ಇಲ್ಲೇ ಯಾಕೆ ಆಗೋತರ ಕೆಲಸವನ್ನು ಕ್ರಿಯೇಟ್ ಮಾಡ್ಬಾದರ್ು? ಇಲ್ಲಿನ ಪ್ರತಿಭೆಗಳ ಯಶಸ್ಸು ನಮ್ಮಲ್ಲೇ ಇರೋ ತರಾ ಯಾಕೆ ನೋಡಿಕೊಳ್ಳಬಾರದು? ಯೂಥ್ ಪವರ್ ಒಂತರಾ ಸೈಲೆಂಟ್ ನ್ಯೂಕ್ಲಿಯರದ ಬಾಂಬ್ ತರ!. ಎಕ್ಸಪ್ಲೋಡ್ ಆದ್ರೆ ಹೆವೀ ಡೆಂಜರ್, ಅದನ್ನೇ ಉಪಯೋಗಿಸಿ ಪಾಸಿಟಿವ್ ಆಗಿ ಕೂಡಾ ವಕರ್ೌಟ್ ಮಾಡಿಕೊಳ್ಳಬೇಕಿದೆ! ಶಿರಸಿಯಲ್ಲೇ ಹೊಸ ಹೊಸ ಕೆಲಸಗಳನ್ನು ಹುಟ್ಟಿಸಬೇಕಿದೆ. ಆ ಮೂಲಕ ನಮ್ಮಲ್ಲಿನ ಯುವ ಜನತೆ ಇಲ್ಲೇ ಇರುವಂತೆ ನೋಡಿಕೊಳ್ಳುವುದೂ ಕೂಡಾ ಮುಖ್ಯವಾಗಿದೆ.
ನಮ್ಮಲ್ಲಿ ಕಾರ್ಖಾನೆಗಳನ್ನ ಮಾಡೋಹಾಗಿಲ್ಲ, ಸಂರಕ್ಷಿತ ಅರಣ್ಯ ಪ್ರದೇಶಗಳ ಊರಿದು. ಐಟಿಬಿಟಿ ತರೋಕೆ ನಮ್ಮಲ್ಲಾಗಲ್ಲ, ಹಳ್ಳಿಗಳೇ ತುಂಬಿರೋದ್ರಿಂದ ಬೇರೆ ಕೆಲಸ ಇಲ್ಲಿಲ್ಲ. ಹೀಗೆ ಇಲ್ಲಗಳ ಪಟ್ಟಿ ಹೇಳುತ್ತಾ ಹೋದ್ರೆ ಶಿರಸಿಯೂ ಇಂಪ್ರೂವ್ ಆಗೊಲ್ಲ. ಮುಂದೊಂದು ದಿನ ಮುದುಕರ ಊರಾಗಬಹುದೆನ್ನುವ ಮಾತೂ ಕೂಡಾ ಸುಳ್ಳಾಗಲ್ಲ! ಇಲ್ಲಿನ ಯುವಕರಿಗೆ ಪ್ರೋತ್ಸಾಹಿಸಿ ಇಲ್ಲಿಯೇ ಅವಕಾಶಗಳ ಸೃಷ್ಟಿಸಿ ಆ ಮೂಲಕ ಇಲ್ಲಿನವರು ಇಲ್ಲಿಯೇ ಇರುವಂತೆ ಮಾಡುವ ಕೆಲಸ ಕೂಡಾ ಯುವಕರೇ ಮಾಡಲಿ ಎಂದೆನ್ನುತ್ತಾ ಕುಂತ್ರೆ ಮುಂದಾಗುವ ಎಲ್ಲಾ ಅನಾಹುತಕ್ಕೆ ಈಗ ನಾವೇ ಅಡಿಪಾಯ ಹಾಕಿದಂತೆ ಅಲ್ವೇ?
Sirsi Siri - ಶಿರಸಿ ಸಿರಿ ಮತ್ತು sirsi.info ಸಹಯೋಗದಲ್ಲಿ ಯುವಜನತೆಗೋಸ್ಕರವೇ ಹೊಸತೊಂದು ಏನನ್ನೋ ಆರಂಭಿಸುತ್ತಿದ್ದೇವೆ. ಅದು ಏನು ಅನ್ನೋದು ಮುಂದಿನ ದಿನಗಳಲ್ಲಿ ರಿವೀಲ್ ಮಾಡ್ತೀವಿ. ಆದರೆ ಅದು ಕೇವಲ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ ಮಾಡೋ ಯೋಚನೆಯಿದೆ. ಕಾಲೇಜಿನಲ್ಲಿರುವ ಯುವ ಜನತೆಗೆಯ ಎಲ್ಲಾ ರೀತಿಯ ಕಷ್ಟಸುಖಗಳಿಗೆ ಸ್ಪಂದಿಸೋ ಇರಾದೆ ನಮ್ಮದು..! ನೋಡ್ತಾ ಇರಿ ಇನ್ನೂ ಏನೇನ್ ಮಾಡ್ತೀವಿ ಅಂತಾ!! ನಮ್ಮ ಜೊತೆ ನೀವೂ ಇರ್ತಿರಲ್ವಾ?

No comments:

Post a Comment