Saturday 28 March 2015

ಚಚ್ಚಿ 3ಪದಿ... 
ಪ್ರೀತಿಯಾ ಹೆಸರಲ್ಲಿ, ಫ್ಲರ್ಟುಮಾಡುವಾ ಗೂಳಿ
ಕೆಲಸಮುಗಿದಂದಿನಿಂದ ಗೋವಾಗುವ ಮಳ್ಳಿ
ಯಾಕಿಂತವರಿರುವರೋ ಜಗದಲಿ ತಿಳಿಯದಾಗಿದೆ ಚಚ್ಚೀನ |


ಚಚ್ಚಿ 3ಪದಿ...
ದುಂದುವೆಚ್ಚದಲೇ ಧೂಳ್ ಎಬ್ಬಿಸುವವರು,
ದಾನಕೊಡಬೇಕಾಗಿ ಬಂದಾಗ ಮಾತ್ರ
ದೀನನಾಗುವುದೇಕೆಂದು ತಿಳಿಯದಾಗಿದೆ ಚಚ್ಚೀನ |


ಚಚ್ಚಿ 3ಪದಿ... 
ತಾವಾಧುನಿಕ ಪ್ರೇಮಿಗಳೆಂದ್ ಬಣ್ಣಿಸಿ
ಕೊಂಡು, ಪಾರ್ಕ್ ನ ಮರದ ಮರೆಯಲಿರ್ಪರು
ಸಮಾಜದಲಿ ಕಪ್ಪೆಂದ ಚಚ್ಚೀನ |


ಚಚ್ಚಿ 3ಪದಿ..
ಅವನ ಕಾರನು ಕಂಡು, ಮತ್ಸರದಿ
ಇವನೂ ಕಾರನು ಕೊಂಡು„ ಲೋನಲಿ 
ಮುಳುಗಿಪ್ಪವ ಅಜ್ಞಾನಿಯೆಂದ ಚಚ್ಚೀನ |


ಚಚ್ಚಿ ತ್ರಿಪದಿ..
ಮೇನ್ ರೋಡಲ್ಲಿ ಮನೆಯ ಮಾಡಿ
ವಾಹನಗಳ ಸದ್ದಿಗೆ ಬೈಯು
ವುದ ತರವಲ್ಲವೆಂದ ಚಚ್ಚಿನ |

No comments:

Post a Comment