Saturday 28 March 2015

ಚಚ್ಚಿ ಲೈನು
ಬದಲಾಗಬೇಕಿದೆ ನಾನು
ಹಲವು ತೆರನಾಗಿ
ಬದುಕಬೇಕಿದೆ ಇನ್ನೂ
ನಿಷ್ಕಲ್ಮಶ ಮಗುವಾಗಿ


ಚಚ್ಚಿ ಚುಟುಕ
ಕಲ್ಯಾಣಿಯ ಮೇಲೊಂದು
ನಾಗರನ ಪೊರೆ
ಅದರ ಸುತ್ತಲೂ ಇತ್ತು
ಇರುವೆಗಳ ಪಹರೆ..!


ಚಚ್ಚಿ ಹಾಯ್ಕು
ಸುನಾಮಿ ಬಂತು
ಕಡಲು ಕದಲಿತು
ನೀರವಮೌನ.


ಚಚ್ಚಾಕು
ಲೈನು ಬರೆದೆ..
ಹೈಕಾಗುವುದೋ ಎಂದು,
ಲೈಕಾಗಲಿಲ್ಲ..!


ಚಚ್ಚಿ ಲೈನು
ಬಸ್ಸು ಹೋಯಿತು
ಖಾಲಿ ಬಸ್ ನಿಲ್ದಾಣ
ಅನಾಥವಾಯ್ತು


ಫ್ಲಾಪಿ ಕಥೆ..!
ಅಪ್ಪನ ಜೊತೆ ಹಳೇ
ಲೂನಾದಲ್ಲಿ ಹೋಗುವಾಗ
ಅವಮಾನವೆಂದು ಭಾವಿಸುತ್ತಿದ್ದವ,
ಅಪ್ಪನಿಲ್ಲದವನ
ಮನದ ಕೊರತೆಯ
ಗಮನಿಸಲೇ ಇಲ್ಲ..!


ಫ್ಲಾಪಿ ಕಥೆ..!
ಮೊದಲು,
ಯಾವುದಾದರೂ ಹುಡುಗಿಯನ್ನು
ಪ್ರೀತಿಸಲೇಬೇಕೆಂದು ಕಷ್ಟಪಡುತ್ತಾ
ಕಾಲೇಜಿನ ಎದುರು
ಸಮಯ ಕಳೆಯುತಿದ್ದ..!
ಈಗ,
ಯಾಕಾದರೂ ಹುಡುಗಿಯನ್ನು
ಪ್ರೀತಿಸಿದೆನೋ ಎಂದು
ಬಾರಲ್ಲಿ ಎಣ್ಣೆ ಹೊಡೆಯುತಿದ್ದಾನೆ..!

Self ಇ..
ಹುಟ್ಟುತ್ತಲೆ ವೈಕಲ್ಯಕ್ಕೆ ತುತ್ತಾದ
ಮಗುವನ್ನು ನೋಡಿ
ರೋಧಿಸುತ್ತಿದ್ದ ತಾಯಿಗೆ,
ಯಾವುದೇ ಕಲ್ಮಶವಿಲ್ಲದ ಆ
ಮಗುವೇ ಬದುಕಿಗೆ ಆಸರೆಯಾದ..
ಸಂತೋಷವ ನೀಡಿದ..!


ಚಚ್ಚಿ 3ಪದಿ
ಇದ್ದಷ್ಟ್ ಹೊತ್ತು ಗಲಾಟೆ ಮಾಡು| ಉಳಿದದ್ದನ್ನು
ಗಾಳಿಗೆ ತೂರು| ಉರ್ಕೊಂಡವರಿಗೆ ಬರ್ನಾಲು
ಕೊಡು- ಇದೇ ನಿನ್ ಜೀವನ ಚಚ್ಚೀನ ||


ಹೀಗೊಂದು ಖರಾಬು ಥಾಟು..!
ಬದಲಾದ ಈ ದುನಿಯಾದಲ್ಲಿ
ಕಷ್ಟಪಟ್ಟವ ಪಡುತ್ತಲೇ ಇದ್ದ..!
ದುಃಖಿ ಮನುಜ
ರೋಧಿಸುತ್ತಲೇ ಇದ್ದ..!
ಬದಲಾವಣೆ ಬಯಸಿದವ
ಬದಲಾದ..!
ಬುದ್ಧಿ ಹೇಳುವವ ಹೀಗೆಯೇ
ಬುಡ್ಡನಾದ..!
ಇಷ್ಟಾದರೂ ಸಮಯ ಸಂಯಮದಿಂದ
ಕಾಲ ಸವೆಸುತ್ತಲೇ ಇತ್ತು ಸೈಲೆಂಟಾಗಿ!


Self ಇ..
ಚಿಂತೆ ಮಾಡುತ್ತಾ ಕುಂತವ
ಹಾಸಿಗೆ ಹಿಡಿದ..!
ಚಿಂತೆ ಬಿಟ್ಟವ
ಕಂತೆ ಹಿಡಿದ..!

ಚಚ್ಚಿ ರೋಧನೆ
ಹೈವೆಯಲ್ಲಿ ಹೊಗೆಯಾದ
ಮರಿ ನಾಯಿಯ ಹೊರ ಬಂದ
ಕರುಳು ಮಾಂಸವ ನೋಡಿ,
'ಛೀ' ಎಂದು ಅಸಹ್ಯಿಸುತ್ತಿದ್ದ
ಕೆಲ ನಾಗರೀಕ ಜನರು...
ನಾಯಿ ಮಾಂಸಕ್ಕೆ ಕಾಯುತ್ತಿದ್ದ
ಕರಿ ಕಾಗೆಗಳ ಹಿಂಡು
ಮತ್ತು
ದೂರದಲ್ಲೆಲ್ಲೋ ದುಃಖಿಸುತ್ತಿದ್ದ
ತಾಯಿ ನಾಯಿಯ ಮರೆತಿದ್ದರು..!




No comments:

Post a Comment